ವಿಮೋಚನಕಾಂಡ 11:1-10

  • 10ನೇ ಶಿಕ್ಷೆ ಬಗ್ಗೆ ವಿವರ (1-10)

    • ಇಸ್ರಾಯೇಲ್ಯರು ಚಿನ್ನಬೆಳ್ಳಿ ಕೇಳಿದ್ರು (2)

11  ಯೆಹೋವ ಮೋಶೆಗೆ “ನಾನು ಫರೋಹನಿಗೆ ಈಜಿಪ್ಟಿಗೆ ಇನ್ನೊಂದು ಶಿಕ್ಷೆ ಕೊಡ್ತೀನಿ. ಆಗ ಅವನು ನಿಮ್ಮನ್ನ ಇಲ್ಲಿಂದ ಕಳಿಸಿಬಿಡ್ತಾನೆ,+ ನಿಮ್ಮನ್ನ ಓಡಿಸೇ ಬಿಡ್ತಾನೆ.+  ನೀನೀಗ ಇಸ್ರಾಯೇಲ್ಯರ ಎಲ್ಲ ಸ್ತ್ರೀಪುರುಷರಿಗೆ, ತಮ್ಮ ತಮ್ಮ ನೆರೆಯವರಿಂದ ಚಿನ್ನಬೆಳ್ಳಿಯ ಒಡವೆ-ವಸ್ತುಗಳನ್ನ ಕೇಳಿ ಅಂತ ಹೇಳು”+ ಅಂದನು.  ಈಜಿಪ್ಟ್‌ ಜನ್ರು ಇಸ್ರಾಯೇಲ್ಯರಿಗೆ ದಯೆ ತೋರಿಸೋ ತರ ಯೆಹೋವ ಮಾಡಿದನು. ಫರೋಹನ ಸೇವಕರು, ಈಜಿಪ್ಟ್‌ ಜನ್ರು ಮೋಶೆಗೆ ತುಂಬ ಗೌರವ ಕೊಡ್ತಿದ್ರು.  ಆಮೇಲೆ ಮೋಶೆ ಫರೋಹನಿಗೆ “ಯೆಹೋವ ನಿನಗೆ ಹೇಳೋದು ಏನಂದ್ರೆ: ನಾನು ಈಜಿಪ್ಟನ್ನ ಮಧ್ಯರಾತ್ರಿ ದಾಟಿ ಹೋಗ್ತೀನಿ.+  ಆಗ ಈಜಿಪ್ಟ್‌ ದೇಶದ ಪ್ರತಿಯೊಬ್ಬ ಮೊದಲ ಮಗ ಸಾಯ್ತಾನೆ.+ ಸಿಂಹಾಸನದ ಮೇಲೆ ಕೂತಿರೋ ಫರೋಹನಾದ ನಿನ್ನ ಮೊದಲನೇ ಮಗನಿಂದ ಹಿಡಿದು ಬೀಸೋ ಕಲ್ಲಲ್ಲಿ ಧಾನ್ಯ ಬೀಸ್ತಿರೋ ದಾಸಿಯ ಮೊದಲ ಮಗನ ತನಕ ಎಲ್ಲ ಮೊದಲ ಗಂಡು ಮಕ್ಕಳು ಸಾಯ್ತಾರೆ. ಅಷ್ಟೇ ಅಲ್ಲ ಪ್ರತಿಯೊಂದು ಪ್ರಾಣಿಯ ಮೊದಲನೇ ಮರಿ ಸಹ ಸಾಯುತ್ತೆ.+  ಆಗ ಈಜಿಪ್ಟ್‌ ದೇಶದಲ್ಲೆಲ್ಲ ದೊಡ್ಡ ಗೋಳಾಟ ಕೇಳಿಸುತ್ತೆ. ಅಂಥ ಗೋಳಾಟವನ್ನ ಯಾರೂ ಯಾವತ್ತೂ ಕೇಳಲಿಲ್ಲ, ಮುಂದೆನೂ ಕೇಳಲ್ಲ.+  ಆದ್ರೆ ಇಸ್ರಾಯೇಲ್ಯರಿಗೆ ಮೊದ್ಲು ಹುಟ್ಟಿದ ಮಕ್ಕಳಾಗಲಿ ಅವರ ಪ್ರಾಣಿಗಳಿಗೆ ಹುಟ್ಟಿದ ಮೊದಲ ಮರಿಗಳಾಗಲಿ ಸಾಯಲ್ಲ. ಅವರನ್ನ ನೋಡಿ ಒಂದು ನಾಯಿ ಸಹ ಬೊಗಳಲ್ಲ. ಇದ್ರಿಂದ ಈಜಿಪ್ಟ್‌ ಜನ್ರ ಮತ್ತು ಇಸ್ರಾಯೇಲ್ಯರ ಮಧ್ಯ ವ್ಯತ್ಯಾಸ ತೋರಿಸೋ ಸಾಮರ್ಥ್ಯ ಯೆಹೋವನಿಗಿದೆ ಅಂತ ನಿಮಗೆ ಗೊತ್ತಾಗುತ್ತೆ”+ ಅಂದನು.  ಮೋಶೆ ಫರೋಹನಿಗೆ “ಆಗ ಖಂಡಿತ ನಿನ್ನ ಎಲ್ಲ ಸೇವಕರು ನನ್ನ ಹತ್ರ ಬಂದು ನನ್ನ ಮುಂದೆ ಅಡ್ಡಬಿದ್ದು ‘ನೀನು, ನಿನ್ನ ಜನ್ರು ಇಲ್ಲಿಂದ ಹೋಗಿ’+ ಅಂತಾರೆ. ಆಮೇಲೆ ನಾನು ಈ ದೇಶ ಬಿಟ್ಟು ಹೋಗ್ತೀನಿ” ಅಂದ. ಮೋಶೆ ಹೀಗೆ ಹೇಳಿ ತುಂಬ ಕೋಪದಿಂದ ಫರೋಹನ ಹತ್ರದಿಂದ ಹೋದ.  ಆಮೇಲೆ ಯೆಹೋವ ಮೋಶೆಗೆ “ನಿಮ್ಮಿಬ್ರ ಮಾತನ್ನ ಫರೋಹ ಕೇಳಲ್ಲ.+ ಹಾಗಾಗಿ ನಾನು ಮಾಡೋ ಇನ್ನೂ ತುಂಬ ಅದ್ಭುತವನ್ನ ಈಜಿಪ್ಟಿನ ಜನ್ರಿಗೆ ನೋಡಕ್ಕಾಗುತ್ತೆ”+ ಅಂದನು. 10  ಮೋಶೆ ಆರೋನ ಫರೋಹನ ಮುಂದೆ ಈ ಎಲ್ಲ ಅದ್ಭುತ ಮಾಡಿದ್ರು.+ ಆದ್ರೂ ಫರೋಹ ತನ್ನ ಹೃದಯ ಕಲ್ಲು ಮಾಡ್ಕೊಂಡ. ಅವನು ಹಾಗೇ ಇರೋಕೆ ಯೆಹೋವ ಬಿಟ್ಟನು. ಫರೋಹ ಇಸ್ರಾಯೇಲ್ಯರನ್ನ ತನ್ನ ದೇಶದಿಂದ ಕಳಿಸಲಿಲ್ಲ.+

ಪಾದಟಿಪ್ಪಣಿ