ಯೋಬ 8:1-22

  • ಬಿಲ್ದದನ ಮೊದಲ ಮಾತುಗಳು (1-22)

    • ಯೋಬನ ಮಕ್ಕಳು ಪಾಪ ಮಾಡಿದ್ದಾರೆ (4)

    • ನೀನು ತಪ್ಪು ಮಾಡದಿದ್ರೆ ದೇವರು ನಿನ್ನನ್ನ ಕಾಪಾಡ್ತಾನೆ (6)

    • ದೇವರನ್ನ ಯೋಬ ಬಿಟ್ಟುಬಿಟ್ಟಿದ್ದಾನೆ (13)

8  ಅದಕ್ಕೆ ಶೂಹ್ಯನಾದ+ ಬಿಲ್ದದ+ ಹೀಗಂದ:   “ಇನ್ನೆಷ್ಟು ಹೊತ್ತು ಹೀಗೆ ಮಾತಾಡ್ತಾ ಇರ್ತಿಯ?+ ನಿನ್ನ ಮಾತುಗಳು ಸುಂಟರಗಾಳಿ ತರ ಇದೆ!   ದೇವರು ಅನ್ಯಾಯ ಮಾಡ್ತಾನಾ? ಸರ್ವಶಕ್ತ ನೀತಿಯನ್ನ ಡೊಂಕು ಮಾಡ್ತಾನಾ?   ನಿನ್ನ ಮಕ್ಕಳು ಆತನ ವಿರುದ್ಧ ಪಾಪ ಮಾಡಿರಬೇಕು, ದಂಗೆ ಎದ್ದಿರಬೇಕು,ಅದಕ್ಕೇ ದೇವರು ಅವ್ರಿಗೆ ಶಿಕ್ಷೆ ಕೊಟ್ಟಿದ್ದಾನೆ.   ಆದ್ರೆ ನೀನು ದೇವರ ಮೇಲೆ ನಂಬಿಕೆ ಇಟ್ರೆ,+ಸರ್ವಶಕ್ತನ ದಯೆಗಾಗಿ ಅಂಗಲಾಚಿ ಬೇಡಿದ್ರೆ,   ನೀನು ನಿಜವಾಗಿ ತಪ್ಪು ಮಾಡದೆ ನೀತಿವಂತನಾಗಿದ್ರೆ+ ದೇವರು ನಿನಗೆ ಸಹಾಯ ಮಾಡ್ತಾನೆ,*ಮೊದಲಿನ ತರ ಒಳ್ಳೇ ಸ್ಥಿತಿಗೆ ತರ್ತಾನೆ.   ಈಗ ನಿನ್ನ ಸ್ಥಿತಿ ತುಂಬ ಕೆಟ್ಟದಾಗಿದ್ರೂಮುಂದೆ ನೀನು ತುಂಬ ಸುಖವಾಗಿ ಇರ್ತಿಯ.+   ದಯವಿಟ್ಟು ಪೂರ್ವಜರನ್ನ ಕೇಳು,ಅವ್ರ ತಂದೆಯಂದಿರು ಕಂಡುಹಿಡಿದ ವಿಷ್ಯಗಳಿಗೆ ಗಮನಕೊಡು.+   ನಾವು ನಿನ್ನೆಮೊನ್ನೆ ಹುಟ್ಟಿದವರು, ನಮಗೇನೂ ಗೊತ್ತಿಲ್ಲ,ಈ ಭೂಮಿಯಲ್ಲಿ ನಮ್ಮ ಜೀವನ ನೆರಳಿನ ತರ ಇದೆ. 10  ಆ ಪೂರ್ವಜರು ನಿನಗೆ ಕಲಿಸ್ತಾರೆ,ತಮಗೆ ಗೊತ್ತಿರೋದನ್ನ ಹೇಳ್ತಾರೆ. 11  ಜವುಗುನೆಲ ಇಲ್ಲದಿರೋ ಜಾಗದಲ್ಲಿ ಪಪೈರಸ್‌ ಗಿಡ ಎತ್ರ ಬೆಳೆಯುತ್ತಾ? ನೀರೇ ಇಲ್ಲದಿದ್ರೆ ಆಪುಹುಲ್ಲು ಎತ್ರ ಬೆಳೆಯುತ್ತಾ? 12  ಅದು ಮೊಗ್ಗು ಬಿಟ್ಟಿದ್ರೂ ಕೀಳದಿದ್ರೂ ಬೇರೆ ಗಿಡಗಳಿಗಿಂತ ಮೊದ್ಲು ಒಣಗಿ ಹೋಗುತ್ತೆ. 13  ದೇವರನ್ನ ಮರೆತಿರೋ ಜನ್ರಿಗೆಲ್ಲ ಇದೇ ಗತಿ,ದೇವರನ್ನ ಬಿಟ್ಟುಬಿಟ್ಟವನು* ಇಟ್ಟಿರೋ ನಿರೀಕ್ಷೆ ನುಚ್ಚುನೂರಾಗುತ್ತೆ. 14  ಅವನು ಯಾವುದ್ರ ಮೇಲೆ ನಂಬಿಕೆ ಇಟ್ಟಿದ್ದಾನೋ ಅದು ಜೇಡರ ಬಲೆ ತರ ದುರ್ಬಲ,ಹಾಗಾಗಿ ಅವನ ಭರವಸೆ ಸುಳ್ಳಾಗುತ್ತೆ. 15  ಅವನು ಅದಕ್ಕೆ ಒರಗಿಕೊಂಡ್ರೆ ಅದು ಹರಿದು ಹೋಗುತ್ತೆ,ಅದನ್ನ ಹಿಡ್ಕೊಳ್ಳೋಕೆ ಹೋದ್ರೆ ತುಂಡು ತುಂಡಾಗುತ್ತೆ. 16  ಅವನು ನೀರಲ್ಲಿ, ಸೂರ್ಯನ ಬೆಳಕಲ್ಲಿ ಬೆಳೆದ ಗಿಡದ ತರ ಇದ್ದಾನೆ,ತೋಟದಲ್ಲಿ ಅದ್ರ ರೆಂಬೆಕೊಂಬೆಗಳು ಹರಡಿರುತ್ತೆ.+ 17  ಕಲ್ಲುಗಳ ರಾಶಿ ಒಳಗೆ ಬೇರುಗಳನ್ನ ಹೆಣೆದ್ಕೊಂಡುಅದೇ ತನ್ನ ಮನೆ ಅಂದ್ಕೊಳ್ಳುತ್ತೆ. 18  ಆದ್ರೆ ಆ ಗಿಡವನ್ನ ಅಲ್ಲಿಂದ ಬೇರುಸಮೇತ ಕಿತ್ತುಹಾಕಿದಾಗಆ ಜಾಗ ಅದಕ್ಕೆ ‘ನೀನು ಯಾರೋ ನಂಗೊತ್ತಿಲ್ಲ’ ಅನ್ನುತ್ತೆ.+ 19  ಆ ಗಿಡದ ಹಾಗೆ ಅವನು ಕಣ್ಮರೆ ಆಗ್ತಾನೆ,+ಆ ಗಿಡವಿದ್ದ ಜಾಗದಲ್ಲಿ ಬೇರೆ ಗಿಡಗಳು ಹುಟ್ಟುತ್ತೆ. 20  ತಪ್ಪು ಮಾಡದವನನ್ನ ದೇವರು ಕೈಬಿಡಲ್ಲ,ದೇವರು ಕೆಟ್ಟವ್ರ ಕೈಹಿಡಿಯಲ್ಲ.* 21  ನೀನು ಮತ್ತೆ ನಗ್‌ನಗ್ತಾ ಇರೋ ಹಾಗೆ,ಖುಷಿಯಿಂದ ಇರೋ ಹಾಗೆ ಮಾಡ್ತಾನೆ. 22  ನಿನ್ನನ್ನ ದ್ವೇಷಿಸುವವರಿಗೆ ತುಂಬ ಅವಮಾನ ಆಗುತ್ತೆ,ಕೆಟ್ಟವ್ರ ಡೇರೆ ನಾಶವಾಗಿ ಹೋಗುತ್ತೆ.”

ಪಾದಟಿಪ್ಪಣಿ

ಅಕ್ಷ. “ಗಮನ ಕೊಡ್ತಾನೆ.”
ಅಥವಾ “ಧರ್ಮಭ್ರಷ್ಟ.”
ಅಥವಾ “ಸಹಾಯ ಮಾಡಲ್ಲ.”