ಯೋಬ 7:1-21

  • ಯೋಬನ ಉತ್ತರ ಮುಂದುವರಿಯುತ್ತೆ (1-21)

    • ಜೀವನ ಕಡ್ಡಾಯದ ದುಡಿಮೆ (1, 2)

    • ನನ್ನನ್ನ ಯಾಕೆ ಗುರಿಹಲಗೆ ಮಾಡಿದ್ದೀಯ? (20)

7  ಒಂದಲ್ಲ ಒಂದಿನ ಸಾಯೋ ಮನುಷ್ಯ ಜೀವನ ಪೂರ್ತಿ ಕತ್ತೆ ತರ ದುಡಿಲೇಬೇಕು,ಭೂಮಿ ಮೇಲೆ ಅವನ ಬದುಕು ಕೂಲಿ ಕೆಲಸದವನ ಬದುಕಿನ ತರ ಇದೆ.+   ಅವನು ದಾಸನ ಹಾಗೆ ನೆರಳಿಗಾಗಿ ಹಾತೊರಿತಾನೆ,ಕೂಲಿ ಕೆಲಸದವನ ಹಾಗೇ ಸಂಬಳಕ್ಕಾಗಿ ಕಾಯ್ತಾನೆ.+   ಹಾಗಾಗಿ ನನ್ನ ಜೀವನ ಎಷ್ಟೋ ತಿಂಗಳು ವ್ಯರ್ಥವಾಗಿ ಹೋಗ್ತಿದೆ,*ಎಷ್ಟೋ ರಾತ್ರಿ ನಾನು ದುಃಖದಲ್ಲೇ ಕಳೀತಾ ಇದ್ದೀನಿ.*+   ಮಲಗಿದಾಗ ‘ಯಾವಾಗ ಬೆಳಗಾಗುತ್ತೋ’ ಅಂತ ಕಾಯ್ತಾ ಇರ್ತಿನಿ,+ಒಂದೊಂದು ಕ್ಷಣ ಒಂದೊಂದು ಯುಗದ ಹಾಗೇ ಅನಿಸುತ್ತೆ,ಮುಂಜಾನೆ ತನಕ ಅತ್ತಿತ್ತ ಹೊರಳಾಡಿ ಸಾಕಾಗಿ ಹೋಗುತ್ತೆ.   ನನ್ನ ದೇಹವನ್ನೆಲ್ಲ ಹುಳಗಳು ಮುತ್ಕೊಂಡಿವೆ, ಎಲ್ಲ ಕಡೆ ಕೊಳಕು ಮೆತ್ಕೊಂಡಿದೆ,+ಮೈಯಲ್ಲೆಲ್ಲ ಗಾಯದ ಮೇಲೆ ಗಟ್ಟಿ ಚರ್ಮ ಕೀವು ತುಂಬ್ಕೊಂಡಿದೆ.+   ನನ್ನ ದಿನಗಳು ಮಗ್ಗಕ್ಕಿಂತ ವೇಗವಾಗಿ ಓಡ್ತಿದೆ,+ನಿರೀಕ್ಷೆಯಿಲ್ಲದೆ ಮುಗಿದು ಹೋಗ್ತಿದೆ.+   ನನ್ನ ಜೀವನ ಬರೀ ಗಾಳಿ ಅಂತ ನೆನಪಿಸ್ಕೊ,*+ನಾನಿನ್ನು ಬದುಕಲ್ಲಿ ಸಂತೋಷ ನೋಡೋದೇ ಇಲ್ಲ.   ಈಗ ನನ್ನನ್ನ ನೋಡ್ತಾ ಇರೋರು ಇನ್ಯಾವತ್ತೂ ನೋಡಲ್ಲ,ನಿನ್ನ ಕಣ್ಣುಗಳು ನನ್ನನ್ನ ಹುಡುಕುತ್ತೆ, ಆದ್ರೆ ನಾನು ಇರಲ್ಲ.+   ಮೋಡ ನಿಧಾನವಾಗಿ ಕಣ್ಮರೆ ಆಗೋ ತರಸಮಾಧಿ* ಸೇರೋನು ಕಣ್ಮರೆ ಆಗ್ತಾನೆ, ವಾಪಸ್‌ ಬರಲ್ಲ.+ 10  ಅವನು ಮತ್ತೆ ಮನೆಗೆ ಹೋಗಲ್ಲ,ಊರಿನ ಜನ್ರು ಅವನನ್ನ ಮರೆತು ಹೋಗ್ತಾರೆ.+ 11  ಹಾಗಾಗಿ ನಾನಂತೂ ಬಾಯಿ ಮುಚ್ಚಲ್ಲ. ಮನದಾಳದ ನೋವನ್ನ ಹೊರಹಾಕ್ತೀನಿ,ನೋವು ನರಳಾಟವನ್ನ ಹೇಳ್ಕೊಳ್ತೀನಿ.+ 12  ನೀನು ನನ್ನ ಮೇಲೆ ಕಾವಲುಗಾರರನ್ನ ಯಾಕೆ ಇಟ್ಟಿದ್ದೀಯಾ? ನಾನೇನು ಸಮುದ್ರನಾ? ಸಮುದ್ರದಲ್ಲಿರೋ ದೊಡ್ಡ ಜೀವಿನಾ? 13  ‘ಮಲಗಿದಾಗ ನನಗೆ ಸಮಾಧಾನ ಆಗುತ್ತೆ,ಹಾಸಿಗೆ ಮೇಲಿದ್ದಾಗ ನೋವು ಕಡಿಮೆ ಆಗುತ್ತೆ’ ಅಂದ್ಕೊಂಡೆ. 14  ಆದ್ರೆ ನೀನು ಕನಸುಗಳಿಂದ ನನ್ನನ್ನ ಬೆಚ್ಚಿ ಬೀಳಿಸ್ತೀಯ,ದರ್ಶನಗಳನ್ನ ಕೊಟ್ಟು ಗಾಬರಿ ಪಡಿಸ್ತೀಯ, 15  ಹಾಗಾಗಿ ನಾನು ಉಸಿರುಗಟ್ಟಿ ಸಾಯೋದೇ ಒಳ್ಳೇದು,ನನ್ನ ದೇಹ ಈ ರೀತಿ ಇರೋದಕ್ಕಿಂತ ಸತ್ತು ಹೋಗೋದೇ ಒಳ್ಳೇದು.+ 16  ನನಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿದೆ,+ ಬದುಕೋ ಆಸೆ ನನಗಿಲ್ಲ. ನನ್ನ ದಿನಗಳು ಉಸಿರಿನ ತರ ಇದೆ,+ ನನ್ನನ್ನ ಬಿಟ್ಟುಬಿಡು. 17  ಇವತ್ತು ಇದ್ದು ನಾಳೆ ಇಲ್ಲದೆ ಹೋಗೋ ಮನುಷ್ಯನ ಬಗ್ಗೆ ನೀನ್ಯಾಕೆ ಯೋಚಿಸಬೇಕು? ಅವನಿಗೆ ನೀನ್ಯಾಕೆ ಗಮನ ಕೊಡಬೇಕು?+ 18  ಅವನನ್ನ ಯಾಕೆ ಪ್ರತಿದಿನ ಪರೀಕ್ಷೆ ಮಾಡ್ತೀಯ? ಯಾಕೆ ಕ್ಷಣಕ್ಷಣ ಪರೀಕ್ಷೆ ಮಾಡ್ತೀಯ?+ 19  ನಿನ್ನ ದೃಷ್ಟಿಯನ್ನ ನನ್ನ ಕಡೆಯಿಂದ ತಿರುಗಿಸಬಾರದಾ? ಉಗುಳು ನುಂಗುವಷ್ಟು ಸಮಯವಾದ್ರೂ ನನ್ನನ್ನ ಬಿಟ್ಟುಬಿಡಬಾರದಾ?+ 20  ಮನುಷ್ಯರನ್ನ ಗಮನಿಸೋ ದೇವರೇ,+ ನಾನು ಪಾಪ ಮಾಡಿರೋದಾದ್ರೆ ಅದ್ರಿಂದ ನಿನಗೇನು ನಷ್ಟ ಆಗಿರುತ್ತೆ? ನನ್ನನ್ನ ಯಾಕೆ ನಿನ್ನ ಗುರಿಹಲಗೆ ಮಾಡಿದ್ದೀಯ? ನಾನು ನಿನಗೆ ಭಾರ ಆಗಿದ್ದೀನಾ? 21  ನನ್ನ ಅಪರಾಧವನ್ನ ಕ್ಷಮಿಸಿ ಬಿಡಬಾರದಾ? ನನ್ನ ತಪ್ಪನ್ನ ಮನ್ನಿಸಬಾರದಾ? ಹೇಗೂ ನಾನು ಬೇಗ ಮಣ್ಣಿಗೆ ಸೇರ್ತಿನಿ,+ನೀನು ಹುಡುಕಿದ್ರೂ ನಾನು ಸಿಗಲ್ಲ.”

ಪಾದಟಿಪ್ಪಣಿ

ಅಕ್ಷ. “ವ್ಯರ್ಥವಾದ ತಿಂಗಳುಗಳು ನನಗೆ ನೇಮಕವಾಗಿವೆ.”
ಅಕ್ಷ. “ದುರವಸ್ಥೆಯ ರಾತ್ರಿಗಳನ್ನ ನನಗೆ ಲೆಕ್ಕಮಾಡಿ ಕೊಡಲಾಗಿದೆ.”
ಯೋಬ ಬಹುಶಃ ದೇವ್ರ ಹತ್ರ ಹೇಳ್ತಿದ್ದಾನೆ.