ಯೋಬ 42:1-17

  • ಯೆಹೋವನಿಗೆ ಯೋಬ ಕೊಟ್ಟ ಉತ್ತರ (1-6)

  • ಮೂವರು ಸ್ನೇಹಿತರನ್ನ ದೇವರು ತಿದ್ದಿದ್ದು (7-9)

  • ಯೆಹೋವ ಯೋಬನಿಗೆ ಮತ್ತೆ ಸುಖಸಮೃದ್ಧಿ ಕೊಟ್ಟನು (10-17)

    • ಯೋಬನ ಮಕ್ಕಳು (13-15)

42  ಆಗ ಯೋಬ ಯೆಹೋವನಿಗೆ ಹೀಗಂದ:   “ನಿನ್ನಿಂದ ಮಾಡಕ್ಕಾಗದೇ ಇರೋದು ಯಾವುದೂ ಇಲ್ಲ,ನೀನು ಅಂದ್ಕೊಂಡಿದ್ದನ್ನ ಮಾಡ್ತೀಯ ಅಂತ ನನಗೀಗ ಗೊತ್ತಾಯ್ತು.+   ‘ಇವನು ಬುದ್ಧಿಯಿಲ್ಲದೆ ಮಾತಾಡ್ತಾ ಇದ್ದಾನಲ್ಲಾ. ನನ್ನ ರೀತಿನೀತಿಯನ್ನ ಪ್ರಶ್ನೆ ಮಾಡೋಕೆ ಇವನ್ಯಾರು?’ ಅಂತ ನೀನು ಕೇಳಿದೆ.+ ಹೌದು, ನಾನು ಯೋಚ್ನೆ ಮಾಡದೆ ಮಾತಾಡಿಬಿಟ್ಟೆ,ನನಗೆ ಗೊತ್ತಿಲ್ಲದ ಎಷ್ಟೋ ವಿಷ್ಯಗಳನ್ನ ಹೇಳ್ಕೊಟ್ಟೆ, ಅದ್ರ ಬಗ್ಗೆ ನನಗೆ ಗೊತ್ತಿರಲಿಲ್ಲ.+   ನೀನು ನನಗೆ ‘ನಾನು ಮಾತಾಡ್ತೀನಿ, ಚೆನ್ನಾಗಿ ಕೇಳು,ಪ್ರಶ್ನೆ ಕೇಳ್ತೀನಿ, ಉತ್ತರ ಕೊಡು’ ಅಂತ ಹೇಳ್ದೆ.+   ನಾನು ನಿನ್ನ ಬಗ್ಗೆ ಕಿವಿಯಾರೆ ಕೇಳಿಸ್ಕೊಂಡಿದ್ದೆ,ಆದ್ರೆ ಈಗ ಕಣ್ಣಾರೆ ನೋಡಿದ್ದೀನಿ.   ನಾ ಹೇಳಿದ ಮಾತನ್ನ ವಾಪಸ್‌ ತಗೋತೀನಿ,+ಮಣ್ಣಲ್ಲೂ ಬೂದಿಯಲ್ಲೂ ಕೂತು ಪಶ್ಚಾತ್ತಾಪಪಡ್ತೀನಿ.”+  ಯೋಬನ ಜೊತೆ ಯೆಹೋವ ಮಾತಾಡಿದ ಮೇಲೆ ತೇಮಾನ್ಯನಾದ ಎಲೀಫಜನಿಗೆ ಯೆಹೋವ ಹೀಗಂದನು: “ನಿನ್ನ ಮೇಲೂ ನಿನ್ನ ಇಬ್ರು ಸ್ನೇಹಿತರ ಮೇಲೂ+ ನನಗೆ ತುಂಬ ಕೋಪ ಬಂದಿದೆ. ನನ್ನ ಸೇವಕ ಯೋಬ ನನ್ನ ಬಗ್ಗೆ ಮಾತಾಡಿದ ಹಾಗೆ ನೀವು ನನ್ನ ಬಗ್ಗೆ ಸತ್ಯ ಹೇಳಲಿಲ್ಲ.+  ನೀವೀಗ ಏಳು ಹೋರಿ, ಏಳು ಟಗರು ತಗೊಂಡು ನನ್ನ ಸೇವಕ ಯೋಬನ ಹತ್ರ ಹೋಗಿ. ನೀವು ಮಾಡಿದ ಪಾಪಕ್ಕಾಗಿ ಸರ್ವಾಂಗಹೋಮ ಬಲಿ ಅರ್ಪಿಸಿ. ನನ್ನ ಸೇವಕ ಯೋಬ ನಿಮಗೋಸ್ಕರ ಪ್ರಾರ್ಥನೆ ಮಾಡ್ತಾನೆ.+ ಯಾಕಂದ್ರೆ ನನ್ನ ಸೇವಕ ಯೋಬ ನನ್ನ ಬಗ್ಗೆ ಸತ್ಯವನ್ನ ಮಾತಾಡಿದ ಹಾಗೆ ನೀವು ಮಾತಾಡಲಿಲ್ಲ. ನಿಮ್ಮ ಮೂರ್ಖತನಕ್ಕೆ ಶಿಕ್ಷೆ ಸಿಗಬಾರದು ಅಂತ ಅವನು ವಿನಂತಿ ಮಾಡಿದ್ರೆ ನಾನು ಶಿಕ್ಷೆ ಕೊಡಲ್ಲ.”  ಹಾಗಾಗಿ ತೇಮಾನ್ಯನಾದ ಎಲೀಫಜ, ಶೂಹ್ಯನಾದ ಬಿಲ್ದದ, ನಾಮಾಥ್ಯನಾದ ಚೋಫರ ಹೋಗಿ ಯೆಹೋವ ಹೇಳಿದ ಹಾಗೇ ಮಾಡಿದ್ರು. ಯೆಹೋವ ಯೋಬನ ಪ್ರಾರ್ಥನೆ ಕೇಳಿದನು. 10  ಯೋಬ ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥಿಸಿದ+ ಮೇಲೆ ಯೆಹೋವ ಅವನ ಕಷ್ಟವನ್ನೆಲ್ಲ ತೆಗೆದುಹಾಕಿ+ ಅವನಿಗೆ ಮತ್ತೆ ಸುಖಸಮೃದ್ಧಿ ಕೊಟ್ಟನು. ಯೆಹೋವ ಅವನಿಗೆ ಮುಂಚೆಗಿಂತ ಎರಡುಪಟ್ಟು ಆಸ್ತಿ ಕೊಟ್ಟನು.+ 11  ಅವನ ಎಲ್ಲ ಸಹೋದರ ಸಹೋದರಿಯರು, ಅವನ ಎಲ್ಲ ಹಳೇ ಸ್ನೇಹಿತರು+ ಅವನ ಮನೆಗೆ ಬಂದು ಅವನ ಜೊತೆ ಊಟ ಮಾಡಿದ್ರು. ಯೋಬನಿಗೆ ಏನೆಲ್ಲ ಕಷ್ಟ ಬರೋಕೆ ಯೆಹೋವ ಬಿಟ್ನೋ ಅದನ್ನೆಲ್ಲ ನೆನಸ್ಕೊಂಡು ಅವರು ದುಃಖಪಟ್ರು, ಯೋಬನನ್ನ ಸಮಾಧಾನ ಮಾಡಿದ್ರು. ಪ್ರತಿಯೊಬ್ರು ಅವನಿಗೆ ಒಂದೊಂದು ಬೆಳ್ಳಿ ತುಂಡು, ಒಂದೊಂದು ಚಿನ್ನದ ಉಂಗುರ ಕೊಟ್ರು. 12  ಯೆಹೋವ ಯೋಬನ ಬದುಕನ್ನ ಮುಂಚೆಗಿಂತ ಜಾಸ್ತಿ ಆಶೀರ್ವಾದ ಮಾಡಿದನು.+ ಅವನಿಗೆ 14,000 ಕುರಿ, 6,000 ಒಂಟೆ, 1,000 ಜೋಡಿ ದನ, 1,000 ಹೆಣ್ಣು ಕತ್ತೆ ಕೊಟ್ಟನು.+ 13  ಅವನಿಗೆ ಇನ್ನೂ ಏಳು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಹುಟ್ಟಿದ್ರು.+ 14  ಯೋಬ ಮೊದಲ್ನೇ ಮಗಳಿಗೆ ಯೆಮೀಮ, ಎರಡನೆಯವಳಿಗೆ ಕೆಚೀಯ, ಮೂರನೆಯವಳಿಗೆ ಕೆರೆನ್‌-ಹಪ್ಪೂಕ್‌ ಅಂತ ಹೆಸ್ರಿಟ್ಟ. 15  ಇಡೀ ದೇಶದಲ್ಲಿ ಯೋಬನ ಹೆಣ್ಣು ಮಕ್ಕಳಷ್ಟು ಸುಂದರಿಯರು ಯಾರೂ ಇರಲಿಲ್ಲ. ಯೋಬ ತನ್ನ ಗಂಡು ಮಕ್ಕಳಿಗೆ ಆಸ್ತಿಯನ್ನ ಕೊಟ್ಟ ಹಾಗೆ ತನ್ನ ಹೆಣ್ಣು ಮಕ್ಕಳಿಗೂ ಕೊಟ್ಟ. 16  ಯೋಬ ಇನ್ನೂ 140 ವರ್ಷ ಬದುಕಿದ. ಅವನು ತನ್ನ ಮಕ್ಕಳು, ಮೊಮ್ಮಕ್ಕಳು, ಹೀಗೆ ನಾಲ್ಕು ತಲೆಮಾರುಗಳನ್ನ ನೋಡಿದ. 17  ಯೋಬ ತುಂಬ ವರ್ಷ ಸಂತೋಷ ತೃಪ್ತಿಯಿಂದ ಬದುಕಿ ತೀರಿಹೋದ.

ಪಾದಟಿಪ್ಪಣಿ