ಯೋಬ 37:1-24

  • ನೈಸರ್ಗಿಕ ಶಕ್ತಿಗಳು ದೇವರ ಮಹಿಮೆಯನ್ನ ತೋರಿಸುತ್ತೆ (1-24)

    • ಮನುಷ್ಯರ ಕೆಲಸಗಳನ್ನ ದೇವರು ನಿಲ್ಲಿಸಿಬಿಡ್ತಾನೆ (7)

    • ‘ದೇವರ ಅದ್ಭುತಗಳ ಬಗ್ಗೆ ಚೆನ್ನಾಗಿ ಯೋಚನೆ ಮಾಡು’ (14)

    • ದೇವರನ್ನ ಅರ್ಥ ಮಾಡ್ಕೊಳ್ಳೋದು ಮನುಷ್ಯರ ಸಾಮರ್ಥ್ಯಕ್ಕೆ ಮೀರಿದ್ದು (23)

    • ತಾವೇ ಬುದ್ಧಿವಂತರು ಅಂದ್ಕೊಳ್ಳಬಾರದು (24)

37  ಈಗ ನನ್ನ ಹೃದಯ ಜೋರಾಗಿ ಬಡ್ಕೊಳ್ತಾ ಇದೆ,ಎದೆ ನಡುಗ್ತಿದೆ.   ದೇವರ ಗುಡುಗೋ ಸದ್ದನ್ನ,ಆತನ ಬಾಯಿಂದ ಹೊರಡೋ ಗುಡುಗಿನ ಅಬ್ಬರವನ್ನ ಕಿವಿಗೊಟ್ಟು ಕೇಳಿ.   ಆ ಸದ್ದು ಇಡೀ ಭೂಮಿಗೆ ಕೇಳಿಬರುತ್ತೆ,ಆತನು ಮಿಂಚನ್ನ+ ಭೂಮಿಯ ಮೂಲೆ ಮೂಲೆಗೂ ಕಳಿಸ್ತಾನೆ.   ಆಮೇಲೆ ಗುಡುಗಿನ ಗರ್ಜನೆ ಕೇಳಿಸುತ್ತೆ,ಆತನು ಘನಗಾಂಭೀರ್ಯದ ಧ್ವನಿಯಿಂದ ಗುಡುಗ್ತಾನೆ,+ಆತನು ಮಾತಾಡುವಾಗ ಮಿಂಚು ಪಳಪಳಸ್ತಾ ಇರುತ್ತೆ.   ಗುಡುಗಿನ ಧ್ವನಿಗೆ+ ಜನ್ರನ್ನ ದೇವರು ಬೆಚ್ಚಿಬೆರಗಾಗೋ ತರ ಮಾಡ್ತಾನೆ,ಆತನು ಮಾಡೋ ಅದ್ಭುತಗಳನ್ನ ಅರ್ಥ ಮಾಡ್ಕೊಳ್ಳೋಕೆ ನಮ್ಮಿಂದಾಗಲ್ಲ.+   ಆತನು ಹಿಮಕ್ಕೆ ‘ಭೂಮಿ ಮೇಲೆ ಬೀಳು’ ಅಂತ ಅಪ್ಪಣೆ ಕೊಡ್ತಾನೆ+ಮಳೆಗೆ ‘ಧಾರಾಕಾರವಾಗಿ ಸುರಿ’ ಅಂತ ಆಜ್ಞೆ ಕೊಡ್ತಾನೆ.+   ಹೀಗೆ ಎಲ್ಲ ಮನುಷ್ಯರ ಕೆಲಸಗಳನ್ನ ದೇವರು ನಿಲ್ಲಿಸಿಬಿಡ್ತಾನೆ,ಇವತ್ತೊ ನಾಳೆನೊ ಸಾಯೋ ಮನುಷ್ಯ ತನ್ನ ಕೆಲಸಗಳನ್ನ ಅರ್ಥ ಮಾಡ್ಕೊಳ್ಳೋ ಹಾಗೆ ಮಾಡ್ತಾನೆ.   ಕಾಡು ಪ್ರಾಣಿಗಳು ಓಡೋಗಿ ಗುಹೆ ಸೇರ್ಕೊಳ್ಳುತ್ತೆ,ಅಲ್ಲಿಂದ ಹೊರಗೆ ಬರೋದೇ ಇಲ್ಲ.   ಬಿರುಗಾಳಿ ಹೊರಟು ಜೋರಾಗಿ ಬೀಸುತ್ತೆ,+ಉತ್ತರದ ಗಾಳಿ ಚಳಿ ಹೊತ್ತು ತರುತ್ತೆ.+ 10  ದೇವರ ಉಸಿರಿಂದ ನೀರು ಮಂಜುಗಡ್ಡೆ ಆಗುತ್ತೆ,+ದೂರ ದೂರದ ವರೆಗೆ ಹರಡಿರೋ ನೀರು ಹಿಮಗಡ್ಡೆ ಆಗುತ್ತೆ.+ 11  ಮೋಡಗಳನ್ನ ನೀರಿನ ಹನಿಗಳಿಂದ ತುಂಬಿಸ್ತಾನೆ,ಮಿಂಚನ್ನ+ ಮೋಡಗಳಲ್ಲಿ ಚದರಿಸ್ತಾನೆ, 12  ಆತನು ಹೇಳಿದ ಕಡೆಗೆ ಮೋಡಗಳು ಹೋಗುತ್ತೆ,ಭೂಮಿ ಮೇಲೆ ಅದರ ಕೆಲಸವನ್ನ ಪೂರೈಸುತ್ತೆ.+ 13  ಶಿಕ್ಷೆ ಕೊಡೋಕೆ,+ ಭೂಮಿಗೆ ನೀರು ಹಾಯಿಸೋಕೆ,ಶಾಶ್ವತ ಪ್ರೀತಿ ತೋರಿಸೋಕೆ, ಆತನು ಮೋಡಗಳನ್ನ ಬಳಸ್ತಾನೆ.+ 14  ಯೋಬ ಕೇಳು! ಮನಸ್ಸು ಕೊಟ್ಟು ದೇವರ ಅದ್ಭುತಗಳ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡು.+ 15  ದೇವರು ಮೋಡಗಳನ್ನ ಹೇಗೆ ನಿಯಂತ್ರಿಸ್ತಾನೆ* ಅಂತ ನಿನಗೆ ಗೊತ್ತಾ? ಆತನು ಹೇಗೆ ಮೋಡಗಳ ಒಳಗಿಂದ ಮಿಂಚು ಹೊಳೆಯೋ ತರ ಮಾಡ್ತಾನೆ ಅಂತ ನಿನಗೆ ಗೊತ್ತಾ? 16  ಮೋಡಗಳು ಹೇಗೆ ತೇಲಿಕೊಂಡು ಹೋಗುತ್ತೆ ಅಂತ ಗೊತ್ತಾ?+ ಇವೆಲ್ಲ ಪರಿಪೂರ್ಣ ಜ್ಞಾನ ಇರೋ ದೇವರು ಮಾಡಿರೋ ಅದ್ಭುತ.+ 17  ದಕ್ಷಿಣದ ಗಾಳಿಯಿಂದಾಗಿ ಭೂಮಿಯಲ್ಲಿ ಮೌನ ಆವರಿಸಿದಾಗನಿನ್ನ ಬಟ್ಟೆ ಬಿಸಿಯಾಗೋಕೆ ಕಾರಣ ಏನಂತ ನಿನಗೆ ಗೊತ್ತಾ?+ 18  ದೇವರ ತರ ಆಕಾಶವನ್ನ ಹರಡೋಕೆ+ ನಿನ್ನಿಂದ ಸಾಧ್ಯನಾ? ಅದನ್ನ ಲೋಹದ ಕನ್ನಡಿಯಷ್ಟು ಗಟ್ಟಿಯಾಗಿ ಮಾಡೋಕೆ ನಿನ್ನಿಂದ ಆಗುತ್ತಾ? 19  ನಾವು ಆತನಿಗೆ ಏನು ಹೇಳಬೇಕಂತ ನೀನೇ ಹೇಳು,ನಮಗೆ ಉತ್ತರ ಗೊತ್ತಿಲ್ಲ, ಯಾಕಂದ್ರೆ ನಾವು ಕತ್ತಲೆಯಲ್ಲಿ ಇದ್ದೀವಿ. 20  ನಾನು ದೇವ್ರಿಗೆ ‘ನಿನಗೆ ಏನೋ ಹೇಳಬೇಕಂತ ಇದ್ದೀನಿ’ ಅಂತ ಹೇಳಕ್ಕಾಗುತ್ತಾ? ದೇವರಿಗೆ ಹೇಳೋಕೆ ಯಾರ ಹತ್ರಾದ್ರೂ ಒಂದೇ ಒಂದು ಗುಟ್ಟಿನ ವಿಷ್ಯ ಇದ್ಯಾ?+ 21  ಗಾಳಿ ಬೀಸಿ ದೇವರು ಆಕಾಶದ ಮೋಡಗಳನ್ನ ಸರಿಸದೇ ಇದ್ರೆಸೂರ್ಯ ಎಷ್ಟೇ ಪ್ರಕಾಶಮಾನವಾಗಿದ್ರೂ ಅದ್ರ ಬೆಳಕನ್ನ ಕೂಡ ಮನುಷ್ಯನಿಂದ ನೋಡಕ್ಕಾಗಲ್ಲ. 22  ಉತ್ತರ ದಿಕ್ಕಿಂದ ಹೊಂಬೆಳಕು ಆಕಾಶ ತೂರಿಕೊಂಡು ಬರುತ್ತೆ,ದೇವರ ವೈಭವ+ ನೋಡಿ ಎಲ್ರಿಗೂ ಭಯವಿಸ್ಮಯ ಆಗುತ್ತೆ. 23  ಸರ್ವಶಕ್ತನನ್ನ ಅರ್ಥ ಮಾಡ್ಕೊಳ್ಳೋದು ನಮ್ಮ ಸಾಮರ್ಥ್ಯಕ್ಕೆ ಮೀರಿದ ವಿಷ್ಯ,+ಆತನಿಗೆ ತುಂಬಾ ಶಕ್ತಿ ಇದೆ,+ ಆತನು ಯಾವತ್ತೂ ಅನ್ಯಾಯ ಮಾಡಲ್ಲ,+ತನ್ನ ನೀತಿ-ನಿಯಮವನ್ನ ಯಾವತ್ತೂ ಮೀರಲ್ಲ.+ 24  ಹಾಗಾಗಿ ಜನ ಆತನಿಗೆ ಭಯಪಡಬೇಕು.+ ತಾವೇ ತುಂಬ ಬುದ್ಧಿವಂತರು ಅಂತ ಅಂದ್ಕೊಳ್ಳೋ ಜನ್ರನ್ನ ಆತನು ಮೆಚ್ಚಲ್ಲ.”+

ಪಾದಟಿಪ್ಪಣಿ

ಅಥವಾ “ಅಪ್ಪಣೆ ಕೊಡ್ತಾನೆ.”