ಯೋಬ 35:1-16
35 ಎಲೀಹು ಮತ್ತೆ ಹೀಗಂದ:
2 “ದೇವ್ರಿಗಿಂತ ನೀನೇ ನೀತಿವಂತ ಅಂತ ಹೇಳ್ತಿಯಲ್ಲಾ,ನೀನೇ ಸರಿ ಅಂತ ನಿನಗೆ ಅಷ್ಟೊಂದು ನಂಬಿಕೆನಾ?+
3 ‘ನಾನು ನೀತಿವಂತನಾಗಿ ಇರೋದ್ರಿಂದ ನಿನಗೇನು* ಪ್ರಯೋಜನ?
ನಾನು ಪಾಪ ಮಾಡದೆ ಇದ್ದದ್ರಿಂದ ಏನಾದ್ರೂ ಲಾಭ ಆಗಿದ್ಯಾ?’+
ಅಂತ ನೀನು ಕೇಳ್ತಿಯಲ್ಲಾ.
4 ಇದಕ್ಕೆ ನಾನು ನಿನಗೆ ಉತ್ತರ ಕೊಡ್ತೀನಿ,ನಿನ್ನ ಸ್ನೇಹಿತರಿಗೂ+ ಉತ್ತರ ಕೊಡ್ತೀನಿ.
5 ನೀನು ಸ್ವಲ್ಪ ತಲೆಯೆತ್ತಿ ಆಕಾಶ ನೋಡು,ಎತ್ತರದಲ್ಲಿ ಇರೋ ಮೋಡಗಳನ್ನ ನೋಡು.+
6 ನೀನು ಪಾಪ ಮಾಡಿದ್ರೆ ದೇವ್ರಿಗೆ ಏನಾದ್ರೂ ನಷ್ಟ ಆಗುತ್ತಾ?+
ನಿನ್ನ ಅಪರಾಧಗಳು ಹೆಚ್ಚಾದ್ರೆ ದೇವ್ರಿಗೆ ಏನಾದ್ರೂ ಕಡಿಮೆ ಆಗುತ್ತಾ?+
7 ನೀನು ನೀತಿವಂತನಾಗಿದ್ರೆ ಆತನಿಗೆ ನೀನೇನು ಕೊಟ್ಟ ಹಾಗಾಗುತ್ತೆ?
ನೀನು ಒಳ್ಳೆಯವನಾಗಿದ್ರೆ ಆತನಿಗೆ ನಿನ್ನಿಂದ ಏನು ಲಾಭ ಆಗುತ್ತೆ?+
8 ನೀನು ಕೆಟ್ಟವನಾಗಿದ್ರೆ ಅದ್ರಿಂದ ಕೆಟ್ಟದಾಗೋದು ನಿನ್ನಂಥ ಮನುಷ್ಯರಿಗೆ ಮಾತ್ರ,ನೀನು ನೀತಿವಂತನಾಗಿದ್ರೆ ಅದ್ರಿಂದ ಒಳ್ಳೇದಾಗೋದು ಮನುಷ್ಯರಿಗೆ ಮಾತ್ರ.
9 ಜನ್ರು ಕ್ರೂರ ದಬ್ಬಾಳಿಕೆ ಸಹಿಸ್ಕೊಳ್ಳೋಕೆ ಆಗದೆ ದೂರು ಹೇಳ್ತಾರೆ,ಶಕ್ತಿಶಾಲಿಗಳ ಕ್ರೂರ ಆಡಳಿತದಿಂದ ಮುಕ್ತಿ ಕೊಡಿ ಅಂತ ಬೇಡ್ಕೊಳ್ತಾರೆ.+
10 ಆದ್ರೆ ಒಬ್ರು ಕೂಡ ‘ನನ್ನನ್ನ ಸೃಷ್ಟಿ ಮಾಡಿದ ಮಹಾನ್ ದೇವರು ಎಲ್ಲಿ?+
ರಾತ್ರಿ ಗೀತೆಗಳನ್ನ ಹಾಡೋಕೆ ಪ್ರೇರಿಸುವವನು ಎಲ್ಲಿ?’ ಅಂತ ಕೇಳಲ್ಲ.+
11 ಆತನು ಪ್ರಾಣಿಗಳಿಗಿಂತ+ ನಮಗೆ ಹೆಚ್ಚು ವಿಷ್ಯ ಕಲಿಸ್ತಾನೆ,+ಪಕ್ಷಿಗಳಿಗಿಂತ ನಮ್ಮನ್ನ ಹೆಚ್ಚು ಬುದ್ಧಿವಂತರಾಗಿ ಮಾಡ್ತಾನೆ.
12 ಜನ್ರು ಕೂಗಿಕೊಳ್ತಾರೆ, ಆದ್ರೆ ಆತನು ಉತ್ತರ ಕೊಡಲ್ಲ,+ಯಾಕಂದ್ರೆ ಅವರು ಅಹಂಕಾರಿಗಳು, ಕೆಟ್ಟವರು.+
13 ಅವರು ಸುಮ್ನೆ ಕೂಗಿದ್ರೆ* ದೇವರು ಕೇಳಿಸ್ಕೊಳ್ಳಲ್ಲ,+ಸರ್ವಶಕ್ತ ಅದಕ್ಕೆ ಕಿವಿ ಕೊಡೋದೇ ಇಲ್ಲ.
14 ಹೀಗಿದ್ದ ಮೇಲೆ ‘ದೇವರೇನೂ ಮಾಡ್ತಿಲ್ಲ’ ಅಂತ ನೀನು ದೂರಿದ್ರೆ ಉತ್ತರ ಕೊಡ್ತಾನಾ?+
ನಿನ್ನ ದೂರು* ಆತನ ಮುಂದೆನೇ ಇದೆ, ಆತನ ತೀರ್ಪು ಸಿಗೋ ತನಕ ನೀನು ಕಾಯಬೇಕು.+
15 ಯಾಕಂದ್ರೆ ಆತನು ನಿನ್ನ ಮೇಲೆ ಕೋಪ ಮಾಡ್ಕೊಂಡು ಶಿಕ್ಷೆ ಕೊಡಲಿಲ್ಲ,ನೀನು ಹಿಂದೆಮುಂದೆ ಯೋಚಿಸದೆ ಏನೇನೋ ಮಾತಾಡಿದ್ರೂ ಲೆಕ್ಕಕ್ಕೆ ತಗೊಳ್ಳಲಿಲ್ಲ.+
16 ಯೋಬ, ನೀನು ಸುಮ್ನೆ ಬಾಯಿಗೆ ಬಂದ ಹಾಗೆ ಮಾತಾಡಿದೆ,ಬುದ್ಧಿಯಿಲ್ಲದೆ ಅತಿಯಾಗಿ ಮಾತಾಡಿದೆ.”+

