ಯೋಬ 30:1-31

  • ಬದುಕು ಬದಲಾದ ವಿವರ (1-31)

    • ಅಯೋಗ್ಯರ ಅಪಹಾಸ್ಯ (1-15)

    • ದೇವರು ಸಹಾಯ ಮಾಡ್ತಿಲ್ಲ ಅನಿಸ್ತು (20, 21)

    • ‘ನನ್ನ ಚರ್ಮ ಕಪ್ಪಾಗಿದೆ’ (30)

30  ಆದ್ರೆ ಈಗ ನನಗಿಂತ ವಯಸ್ಸಲ್ಲಿ ಚಿಕ್ಕವರು ಕೂಡ ನನ್ನನ್ನ ನೋಡಿ ನಗ್ತಾರೆ,+ಅವ್ರ ಅಪ್ಪಂದಿರು ನನ್ನ ಕುರಿ ಕಾಯೋನಾಯಿಗಳ ಜೊತೆ ಇರಕ್ಕೂ ಲಾಯಕ್ಕಿಲ್ಲ,ಅಂಥವ್ರ ಮಕ್ಕಳು ನನ್ನನ್ನ ಗೇಲಿ ಮಾಡ್ತಾರೆ.   ಅವ್ರ ಕೈಯಲ್ಲಿರೋ ಶಕ್ತಿಯಿಂದ ನನಗೇನು ಪ್ರಯೋಜನ ಆಯ್ತು? ಅವ್ರ ಶಕ್ತಿಯೆಲ್ಲ ಬತ್ತಿಹೋಗಿದೆ.   ಊಟ ಇಲ್ಲದೆ ಸೊರಗಿ ಹೋಗಿದ್ದಾರೆ,ಪಾಳುಬಿದ್ದಿರೋ ಒಣನೆಲದಲ್ಲಿ ಅಲೆದಾಡಿ ಸಿಕ್ಕಿದ್ದನ್ನ ತಿಂತಾರೆ.   ಪೊದೆಗಳಿಂದ ಉಪ್ಪು ಗಿಡಗಳ ಎಲೆ ಕೂಡಿಸ್ತಾರೆ,ಕುರುಚಲು ಪೊದೆಗಳ ಬೇರು ತಿಂತಾರೆ.   ಜನ್ರು ಕಳ್ಳನನ್ನ ನೋಡಿ ಹೇಗೆ ಕೂಗ್ತಾರೋಹಾಗೆ ಅವ್ರನ್ನ ನೋಡಿ ಕೂಗಿ ಓಡಿಸಿಬಿಡ್ತಾರೆ.+   ಕಣಿವೆಗಳ ಇಳಿಜಾರಲ್ಲಿ ವಾಸ ಮಾಡ್ತಾರೆನೆಲದಲ್ಲಿ, ಬಂಡೆಯಲ್ಲಿ ಗುಂಡಿ ತೋಡಿ ಅಲ್ಲಿ ಇರ್ತಾರೆ.   ಪೊದೆಗಳ ಒಳಗಿಂದ ಕೂಗ್ತಾರೆ,ಮುಳ್ಳುಗಿಡಗಳ* ಮಧ್ಯ ಮುದುರಿಕೊಂಡು ಒಟ್ಟಿಗೆ ಕೂತಿರ್ತಾರೆ.   ಅವರು ಮೂರ್ಖರ ಮಕ್ಕಳು, ನೀಚರಿಗೆ ಹುಟ್ಟಿದವರು,ಜನರು ಅವ್ರನ್ನ ದೇಶದಿಂದ ಓಡಿಸಿಬಿಟ್ಟಿದ್ದಾರೆ.   ಆದ್ರೆ ಈಗ ಅಂಥವ್ರೇ ತಮ್ಮ ಹಾಡುಗಳಲ್ಲೂ ನನ್ನನ್ನ ಗೇಲಿ ಮಾಡ್ತಾರೆ,+ನನ್ನನ್ನ ನೋಡಿ ಮುಸಿ ಮುಸಿ ನಗ್ತಾರೆ.*+ 10  ನನ್ನನ್ನ ನೋಡಿ ಅಸಹ್ಯಪಟ್ಟು ದೂರ ನಿಲ್ತಾರೆ,+ನನ್ನ ಮುಖದ ಮೇಲೆ ಉಗುಳೋಕ್ಕೂ ಹಿಂದೆಮುಂದೆ ನೋಡಲ್ಲ.+ 11  ದೇವರು ನನ್ನ ಬಿಲ್ಲಿನ ದಾರವನ್ನ ಸಡಿಲಿಸಿ ನಾನು ಸೋಲೋ ತರ ಮಾಡಿದ್ದಾನೆ,ಹಾಗಾಗಿ ಅವರು ನನ್ನ ಕಣ್ಮುಂದೆನೇ ಲಂಗುಲಗಾಮಿಲ್ಲದೆ ನಡ್ಕೊಳ್ತಾರೆ. 12  ಅವರು ನನ್ನ ಬಲಗಡೆಯಲ್ಲಿ ನನ್ನ ವಿರುದ್ಧ ದೊಂಬಿ ಏಳ್ತಾರೆ,ನನ್ನನ್ನ ಅಲ್ಲಿಂದ ಓಡಿಹೋಗೋ ಹಾಗೆ ಮಾಡ್ತಾರೆ,ಆದ್ರೆ ನನ್ನನ್ನ ದಾರೀಲಿ ಮುಗಿಸೋಕೆ ಸಂಚು ಮಾಡ್ತಾರೆ. 13  ತಪ್ಪಿಸ್ಕೊಳ್ಳೋ ದಾರಿನ್ನೆಲ್ಲ ಮುಚ್ಚಿಬಿಡ್ತಾರೆ,ನನ್ನ ಕಷ್ಟನಾ ಇನ್ನೂ ಜಾಸ್ತಿ ಮಾಡ್ತಾರೆ,+ಅವ್ರನ್ನ ತಡೆಯುವವರು* ಯಾರೂ ಇಲ್ಲ. 14  ಗೋಡೆಯಲ್ಲಿ ದೊಡ್ಡ ಬಿರುಕಿಂದ ನುಸುಳ್ಕೊಂಡು ಬರ್ತಾರೆ,ನನಗೆ ಅಷ್ಟೊಂದು ಕಷ್ಟ ಇರುವಾಗ್ಲೇ ನನ್ನ ಮೇಲೆ ಬೀಳ್ತಾರೆ. 15  ಭಯ ನನ್ನನ್ನ ಸುತ್ಕೊಂಡಿದೆ,ನನ್ನ ಗೌರವವನ್ನ ಗಾಳಿ ತಗೊಂಡು ಹೋಗಿದೆ,ಬದುಕಿ ಉಳಿತೀನಿ ಅನ್ನೋ ಭರವಸೆ ಮೋಡದ ಹಾಗೆ ಕಣ್ಮರೆ ಆಗಿದೆ. 16  ನನ್ನ ಆಯಸ್ಸು ಮುಗೀತಾ ಬಂದಿದೆ,+ಪ್ರತಿದಿನ ಕಷ್ಟದಲ್ಲೇ ಕೈತೊಳೀತಾ ಇದ್ದೀನಿ.+ 17  ಯಾರೋ ನನ್ನ ಮೂಳೆಗಳನ್ನ ಜಜ್ಜಿದ ಹಾಗೆ+ರಾತ್ರಿಯೆಲ್ಲ ಮೂಳೆಗಳು ತುಂಬ ನೋವಾಗುತ್ತೆ, ಕಡಿಮೆನೇ ಆಗಲ್ಲ.+ 18  ನನ್ನ ಬಟ್ಟೆಯನ್ನ* ಹಿಡಿದು ಜೋರಾಗಿ ಎಳೆದ ಹಾಗಾಗುತ್ತೆ,*ಕೊರಳಪಟ್ಟಿ ಎಷ್ಟು ಬಿಗಿಯಾಗುತ್ತೆ ಅಂದ್ರೆ ಉಸಿರುಗಟ್ಟುತ್ತೆ. 19  ದೇವರು ನನ್ನನ್ನ ಕೆಸರಲ್ಲಿ ಬಿಸಾಕಿದ್ದಾನೆ,ನಾನು ಧೂಳು ತರ, ಬೂದಿ ತರ ಆಗಿದ್ದೀನಿ. 20  ದೇವ್ರೇ, ನಾನು ಸಹಾಯ ಕೇಳಿದ್ರೂ ನಿನ್ಯಾಕೆ ಉತ್ತರ ಕೊಡ್ತಿಲ್ಲ,+ಎದ್ದು ನಿಂತ್ರೂ ಯಾಕೆ ಸುಮ್ಮನೆ ನೋಡ್ತಾ ಇದ್ದೀಯ. 21  ನನ್ನ ವಿರುದ್ಧ ನಿಂತು ಕ್ರೂರವಾಗಿ ನಡ್ಕೊಳ್ತಾ ಇದ್ದೀಯ,+ನಿನ್ನ ಶಕ್ತಿನ್ನೆಲ್ಲ ಬಳಸಿ ನನ್ನನ್ನ ಹೊಡಿತಾ ಇದ್ದೀಯ. 22  ನಾನು ಗಾಳಿಯಲ್ಲಿ ಹಾರಿ ಹೋಗೋ ಹಾಗೆ ಮಾಡ್ತೀಯ,ಆಮೇಲೆ ಬಿರುಗಾಳಿಗೆ ಕೊಟ್ಟುಬಿಡ್ತೀಯ.* 23  ನಂಗೊತ್ತು, ನನ್ನನ್ನ ಸಾಯಿಸಬೇಕಂತ ಇದ್ದೀಯ,ಕೊನೆಗೆ ಎಲ್ರೂ ಹೋಗೋ ಜಾಗಕ್ಕೆ ನನ್ನನ್ನ ಸೇರಿಸಬೇಕಂತ ಇದ್ದೀಯ. 24  ಆದ್ರೆ ಈಗಾಗ್ಲೇ ಕಷ್ಟದಲ್ಲಿ ಬಿದ್ದಿರೋ ಮನುಷ್ಯಸಹಾಯ ಮಾಡಿ ಅಂತ ಬೇಡ್ಕೊಳ್ಳುವಾಗ ಅವನನ್ನ ಯಾರಾದ್ರೂ ಹೊಡೀತಾರಾ?+ 25  ಕಷ್ಟದಲ್ಲಿ ಇದ್ದವ್ರನ್ನ ನೋಡಿ ನಾನು ಅತ್ತಿಲ್ವಾ? ಬಡವರ ಪಾಡು ನೋಡಿ ನಂಗೂ ಬೇಜಾರು ಆಗಿಲ್ವಾ?+ 26  ಒಳ್ಳೆದಾಗುತ್ತೆ ಅಂತ ನೆನಸಿದ್ರೆ ನನಗೆ ಕೆಟ್ಟದಾಗಿದೆ,ನನ್ನ ಬಾಳಲ್ಲಿ ಬೆಳಕು ಇರುತ್ತೆ ಅಂದ್ಕೊಂಡ್ರೆ ಕತ್ತಲೆ ತುಂಬಿದೆ. 27  ಮನಸ್ಸು ಚಿಂತೆಯಿಂದ ಚಡಪಡಿಸ್ತಾನೇ ಇದೆ,ದಿನೇ ದಿನೇ ಕಷ್ಟ ಬರ್ತಾನೇ ಇದೆ. 28  ನಾನು ದುಃಖದಲ್ಲಿ ನಡೀತಾ ಇದ್ದೀನಿ,+ನನ್ನ ಬದುಕಲ್ಲಿ ಸೂರ್ಯನ ಬೆಳಕೇ ಇಲ್ಲ,ಜನ್ರ ಮಧ್ಯ ಎದ್ದುನಿಂತು ಸಹಾಯಕ್ಕಾಗಿ ಕೂಗ್ತಾ ಇದ್ದೀನಿ. 29  ನನ್ನ ಸ್ಥಿತಿ ಹೇಗಿದೆ ಅಂದ್ರೆ,ನಾನು ಗುಳ್ಳೆನರಿಗಳಿಗೆ ಸಹೋದರ ಆಗಿದ್ದೀನಿ,ಉಷ್ಟ್ರಪಕ್ಷಿಗಳಿಗೆ ಸ್ನೇಹಿತ ಆಗಿದ್ದೀನಿ.+ 30  ನನ್ನ ಚರ್ಮ ಕಪ್ಪಾಗಿ ಉದುರಿಹೋಗಿದೆ,+ನನ್ನ ಮೂಳೆಗಳೆಲ್ಲ ಬಿಸಿ ಜಾಸ್ತಿಯಾಗಿ ಸುಡ್ತಿದೆ.* 31  ನನ್ನ ತಂತಿವಾದ್ಯದಲ್ಲಿ ಬರೀ ಶೋಕಗೀತೆ ಬರ್ತಿದೆ,ನನ್ನ ಕೊಳಲಲ್ಲಿ ಅಳೋ ಸ್ವರ ಮಾತ್ರ ಬರ್ತಿದೆ.

ಪಾದಟಿಪ್ಪಣಿ

ಅಥವಾ “ಚುರುಚುರಿಕೆ ಗಿಡಗಳ.”
ಅಕ್ಷ. “ಗಾದೆಮಾತಾಗಿದ್ದೀನಿ; ಉದಾಹರಣೆಯಾಗಿ ಬಳಸ್ತಾರೆ.”
ಬಹುಶಃ, “ಸಹಾಯ ಮಾಡುವವರು.”
ಬಹುಶಃ ಇದು ಅವನ ಚರ್ಮವನ್ನ ಸೂಚಿಸುತ್ತೆ.
ಬಹುಶಃ, “ನನ್ನ ದೊಡ್ಡ ಕಾಯಿಲೆ ನನ್ನ ರೂಪ ವಿಕಾರ ಮಾಡಿದೆ.”
ಬಹುಶಃ, “ನೆಲಕ್ಕೆ ಅಪ್ಪಳಿಸಿ ಜಜ್ಜಿಬಿಡ್ತೀಯ.”
ಬಹುಶಃ, “ಜ್ವರದಿಂದ ಸುಡ್ತಿದೆ.”