ಯೋಬ 28:1-28

  • ಭೂಮಿಯ ನಿಧಿನಿಕ್ಷೇಪಗಳಿಗೂ ವಿವೇಕಕ್ಕೂ ಇರೋ ವ್ಯತ್ಯಾಸ (1-28)

    • ಗಣಿಗಾರಿಕೆಯಲ್ಲಿ ಮನುಷ್ಯನ ಪರಿಶ್ರಮ (1-11)

    • ಮುತ್ತುಗಳಿಗಿಂತಲೂ ವಿವೇಕ ಅಮೂಲ್ಯ (18)

    • ಯೆಹೋವನಿಗೆ ಭಯಪಡೋದೇ ನಿಜವಾದ ವಿವೇಕ (28)

28  ಗಣಿ ತೋಡಿ ಬೆಳ್ಳಿಯನ್ನ ತೆಗಿತಾರೆ,ಅದೇ ತರ ಚಿನ್ನ ತೆಗಿತಾರೆ, ಆಮೇಲೆ ಶುದ್ಧೀಕರಿಸ್ತಾರೆ.+   ನೆಲ ಅಗೆದು ಕಬ್ಬಿಣ ತೆಗಿತಾರೆ,ಬಂಡೆ ಕರಗಿಸಿ ತಾಮ್ರ ತೆಗಿತಾರೆ.+   ಮನುಷ್ಯ ಅಮೂಲ್ಯ ಲೋಹಗಳ ಅದಿರುಗಳನ್ನ ಹುಡುಕಿ ತೆಗಿಯೋಕೆಕತ್ತಲೆಯನ್ನ ಸೀಳ್ಕೊಂಡು ಹೋಗ್ತಾನೆ,ಗಾಢ ಅಂಧಕಾರದಲ್ಲಿ ಹುಡುಕ್ತಾ ಹೋಗ್ತಾನೆ.   ಮನೆಗಳಿರೋ ಜಾಗದಿಂದ ತುಂಬ ದೂರದಲ್ಲಿ,ಜನ ನಡೆದಾಡದ ಜಾಗದಲ್ಲಿ ಸುರಂಗ ತೋಡಿ,ಹಗ್ಗದಲ್ಲಿ ನೇತಾಡ್ಕೊಂಡು ಕೆಲಸ ಮಾಡ್ತಾನೆ.   ಭೂಮಿ ಮೇಲೆ ಬೆಳೆ ಬೆಳೆಯುತ್ತೆ ನಿಜ,ಆದ್ರೆ ಒಳಗೆ ಬೆಂಕಿ ಬಿದ್ದ ಹಾಗೆ ಛಿದ್ರಛಿದ್ರ ಆಗಿರುತ್ತೆ.*   ಅಲ್ಲಿರೋ ಕಲ್ಲುಗಳಲ್ಲಿ ನೀಲಮಣಿ ಸಿಗುತ್ತೆ,ಮಣ್ಣಲ್ಲಿ ಚಿನ್ನ ಕೂಡ ಇರುತ್ತೆ.   ಬೇಟೆ ಆಡೋ ಯಾವ ಪಕ್ಷಿಗೂ ಅಲ್ಲಿಗೆ ಹೋಗೋ ದಾರಿ ಗೊತ್ತಿಲ್ಲ,ಆ ಜಾಗ ಕಪ್ಪು ಗಿಡುಗದ ಕಣ್ಣಿಗೂ ಬಿದ್ದಿಲ್ಲ.   ಕ್ರೂರ ಪ್ರಾಣಿ ಅಲ್ಲಿ ಸಿಗಲ್ಲ,ಎಳೇ ಸಿಂಹ ಅಲ್ಲಿ ತಿರುಗಾಡಲ್ಲ.   ಮನುಷ್ಯ ಗಟ್ಟಿ ಬಂಡೆ ಒಡಿತಾನೆ,ಬೆಟ್ಟದ ಬುಡ ಅಗೆದು ನೆಲಸಮ ಮಾಡ್ತಾನೆ. 10  ಬಂಡೆಗಳನ್ನ ಕಡಿದು ನೀರಿನ ಕಾಲುವೆಗಳನ್ನ+ ಮಾಡ್ತಾನೆ,ಎಲ್ಲ ಬೆಲೆಬಾಳುವ ವಸ್ತುಗಳನ್ನ ಹುಡುಕಿ ತೆಗಿತಾನೆ. 11  ನೆಲದಡಿ ಹರಿಯೋ ನೀರಿಗೆ ಕಟ್ಟೆ ಕಟ್ತಾನೆ,ಕಣ್ಣಿಗೆ ಮರೆಯಾಗಿ ಇರೋದನ್ನ ಬೆಳಕಿಗೆ ತರ್ತಾನೆ. 12  ಆದ್ರೆ ಇಷ್ಟೊಂದು ವಿವೇಕ ಅವನಿಗೆ ಎಲ್ಲಿ ಸಿಗುತ್ತೆ?+ ತಿಳುವಳಿಕೆ ಯಾರಿಂದ ಬರುತ್ತೆ?+ 13  ಯಾವ ಮನುಷ್ಯನಿಗೂ ಅದ್ರ ಬೆಲೆ ಗೊತ್ತಿಲ್ಲ,+ಭೂಮಿ ಮೇಲೆ ಎಲ್ಲೂ ಅದು ಸಿಗಲ್ಲ. 14  ಆಳವಾದ ಸಾಗರ ‘ಅದು ನನ್ನಲ್ಲಿಲ್ಲ’ ಅಂತ ಹೇಳುತ್ತೆ,ಸಮುದ್ರ ‘ನನ್ನ ಹತ್ರನೂ ಇಲ್ಲ’ ಅನ್ನುತ್ತೆ.+ 15  ಅಪ್ಪಟ ಚಿನ್ನ ಕೊಟ್ಟು ಅದನ್ನ ಖರೀದಿಸೋಕೆ ಆಗಲ್ಲ,ಎಷ್ಟೇ ಬೆಳ್ಳಿ ಕೊಟ್ರೂ ಸಿಗಲ್ಲ.+ 16  ಓಫೀರಿನ ಚಿನ್ನ+ ಕೊಟ್ಟು ಅದನ್ನ ತಗೊಳ್ಳೋಕೆ ಆಗಲ್ಲ,ಅಮೂಲ್ಯವಾದ ಗೋಮೇದಕ ರತ್ನ, ನೀಲಮಣಿ ಕೊಟ್ರೂ ಸಿಗಲ್ಲ. 17  ಚಿನ್ನ, ಗಾಜನ್ನ ಅದಕ್ಕೆ ಹೊಲಿಸಕ್ಕಾಗಲ್ಲ,ಶುದ್ಧ ಚಿನ್ನದ ಪಾತ್ರೆ ಕೊಟ್ರೂ ಅದನ್ನ ಪಡಿಯಕ್ಕಾಗಲ್ಲ.+ 18  ಹವಳವಾಗಲಿ ಸ್ಫಟಿಕವಾಗಲಿ ಅದ್ರ ಮುಂದೆ ಏನೇನೂ ಅಲ್ಲ,+ಚೀಲ ತುಂಬ ಇರೋ ಮುತ್ತುಗಳಿಗಿಂತಲೂ ವಿವೇಕಕ್ಕೆ ಬೆಲೆಜಾಸ್ತಿ. 19  ಕೂಷಿನ ಪುಷ್ಯರಾಗ+ ಅದಕ್ಕೆ ಸರಿಸಾಟಿಯಲ್ಲ,ಶುದ್ಧ ಚಿನ್ನ ಕೊಟ್ರೂ ಅದು ಸಿಗಲ್ಲ. 20  ಹಾಗಾದ್ರೆ ವಿವೇಕ ಎಲ್ಲಿ ಸಿಗುತ್ತೆ? ತಿಳುವಳಿಕೆ ಯಾರಿಂದ ಬರುತ್ತೆ?+ 21  ಅದನ್ನ ಎಲ್ಲ ಜೀವಿಗಳ ಕಣ್ಣಿಗೆ ಕಾಣದ ಹಾಗೆ ಇಟ್ಟಿದ್ದಾರೆ,+ಪಕ್ಷಿಗಳಿಗೆ ಕಾಣದ ಹಾಗೆ ಬಚ್ಚಿಟ್ಟಿದ್ದಾರೆ. 22  ನಾಶನ, ಮರಣ,‘ನಾವು ಅದ್ರ ಬಗ್ಗೆ ಕೇಳಿಸ್ಕೊಂಡಿದ್ದೀವಿ ಅಷ್ಟೇ’ ಅಂತ ಹೇಳುತ್ತೆ. 23  ಆದ್ರೆ ಅದನ್ನ ಹೇಗೆ ಪಡಿಯೋದು ಅಂತ ದೇವ್ರಿಗೆ ಗೊತ್ತು,ಅದು ಎಲ್ಲಿದೆ ಅಂತ ಆತನಿಗೆ ಮಾತ್ರ ಗೊತ್ತು,+ 24  ಯಾಕಂದ್ರೆ ದೇವರು ಭೂಮಿಯ ಮೂಲೆ ಮೂಲೆನೂ ನೋಡ್ತಾನೆ,ಆಕಾಶದ ಕೆಳಗಿರೋ ಎಲ್ಲವನ್ನ ನೋಡ್ತಾನೆ.+ 25  ಜೋರಾಗಿ ಬೀಸೋಕೆ ದೇವರು ಗಾಳಿಗೆ ಶಕ್ತಿ ಕೊಟ್ಟನು,+ನೀರನ್ನ ಅಳೆದು ತುಂಬಿಸಿದನು,+ 26  ಮಳೆಗೆ ನಿಯಮ ಕೊಟ್ಟನು,+ಕಾರ್ಮೋಡಗಳಿಂದ, ಸಿಡಿಲಿಂದ ಕೂಡಿದ ದೊಡ್ಡ ಮಳೆಗೆ ದಾರಿ ಮಾಡಿದನು,+ 27  ಆತನು ತನ್ನ ಆ ಕೆಲಸಗಳಲ್ಲಿ ವಿವೇಕ ನೋಡಿ ಅದನ್ನ ವಿವರಿಸಿದನು,ಅದನ್ನ ನೆಲೆಗೊಳಿಸಿ, ಅದ್ರ ಮೌಲ್ಯ ಪರೀಕ್ಷಿಸಿದನು. 28  ಆತನು ಮನುಷ್ಯನಿಗೆ ಹೀಗಂದನು: ‘ನೋಡು! ಯೆಹೋವನಿಗೆ ಭಯಪಡೋದೇ ವಿವೇಕ,+ಕೆಟ್ಟದನ್ನ ಬಿಟ್ಟುಬಿಡೋದೇ ತಿಳುವಳಿಕೆ.’”+

ಪಾದಟಿಪ್ಪಣಿ

ಇದು ಗಣಿಗಾರಿಕೆಗೆ ಸೂಚಿಸಬಹುದು.