ಯೋಬ 26:1-14

  • ಯೋಬನ ಉತ್ತರ (1-14)

    • ‘ಬಲ ಇಲ್ಲದವನಿಗೆ ಸಹಾಯ ಮಾಡಿಬಿಟ್ಟೆ!’ (1-4)

    • ‘ದೇವರು ಭೂಮಿಯನ್ನ ಯಾವ ಆಧಾರನೂ ಇಲ್ಲದೆ ತೂಗು ಹಾಕಿದ್ದಾನೆ’ (7)

    • ‘ಇವೆಲ್ಲ ದೇವರ ಕೆಲಸಗಳಲ್ಲಿ ಬರೀ ಕೆಲವಷ್ಟೇ’ (14)

26  ಆಗ ಯೋಬ ಏನ್‌ ಉತ್ತರ ಕೊಟ್ಟ ಅಂದ್ರೆ,   “ಬಳಲಿ ಬೆಂಡಾದವನಿಗೆ ನೀನು ದೊಡ್ಡ ಸಹಾಯ ಮಾಡಿಬಿಟ್ಟೆ ನೋಡು! ಬಲ ಇಲ್ಲದವನಿಗೆ ನೀನು ಊರುಗೋಲಾಗಿ ನಿಂತಿದ್ದೀಯ ನೋಡು!+   ನಿನ್ನಂಥ ಬುದ್ಧಿವಂತ ಯಾರೂ ಇಲ್ಲ! ಬುದ್ಧಿ ಇಲ್ಲದವನಿಗೆ ಎಷ್ಟು ಒಳ್ಳೇ ಬುದ್ಧಿ ಹೇಳ್ದೆ!+ ನಿನ್ನ ತಲೆಯಲ್ಲಿರೋ ಬುದ್ಧಿಯನ್ನ* ನದಿ ತರ ಹರಿಸಿಬಿಟ್ಟೆ!   ನೀನು ಯಾರಿಗೆ ಬುದ್ಧಿ ಹೇಳ್ತಾ ಇದ್ದೀಯ? ಈ ರೀತಿ ಮಾತಾಡೋಕೆ ನಿನಗ್ಯಾರು ಹೇಳ್ಕೊಟ್ರು?   ಸತ್ತವರು ಸಮುದ್ರಕ್ಕಿಂತ, ಸಮುದ್ರ ಜೀವಿಗಳಿಗಿಂತ ಅಡಿಯಲ್ಲಿದ್ದಾರೆ,ಅವರು ಗಡಗಡ ನಡುಗ್ತಾರೆ.   ಯಾಕಂದ್ರೆ ಸಮಾಧಿಯಲ್ಲಿ* ಯಾವುದೂ ದೇವರ ಕಣ್ಣಿಗೆ ಮರೆಯಾಗಿಲ್ಲ,+ನಾಶನದ ಜಾಗದಲ್ಲಿ* ಇರೋದನ್ನೆಲ್ಲ ಆತನು ನೋಡ್ತಾನೆ.   ಆತನು ಆಕಾಶವನ್ನ ಖಾಲಿ ಜಾಗದ* ಮೇಲೆ ಹರಡಿದ್ದಾನೆ,+ಭೂಮಿಯನ್ನ ಯಾವ ಆಧಾರನೂ ಇಲ್ಲದೆ ತೂಗು ಹಾಕಿದ್ದಾನೆ.   ಆತನು ನೀರನ್ನ ಮೋಡಗಳಲ್ಲಿ ತುಂಬಿ ಕಟ್ಟಿಟ್ಟಿದ್ದಾನೆ,+ನೀರಿನ ಭಾರಕ್ಕೆ ಒಡೆದುಹೋಗದ ಹಾಗೆ ಅವುಗಳನ್ನ ಕಟ್ಟಿಟ್ಟಿದ್ದಾನೆ,   ತನ್ನ ಸಿಂಹಾಸನ ಕಾಣದ ಹಾಗೆತನ್ನ ಮೋಡಗಳನ್ನ ಹರಡಿದ್ದಾನೆ.+ 10  ಆಕಾಶ ಮತ್ತು ಸಮುದ್ರ ಮಧ್ಯ ಗಡಿರೇಖೆ* ಎಳೆದಿದ್ದಾನೆ,+ಬೆಳಕು ಮತ್ತು ಕತ್ತಲೆಯ ಮಧ್ಯ ಗೆರೆ ಹಾಕಿದ್ದಾನೆ. 11  ಆತನ ಗದರಿಕೆಗೆ ಆಕಾಶದ ಆಧಾರ ಕಂಬಗಳು ಅಲುಗಾಡುತ್ತೆ,ಅವು ಹೆದರಿ ಕಂಪಿಸುತ್ತೆ. 12  ಆತನು ತನ್ನ ಶಕ್ತಿಯಿಂದ ಸಮುದ್ರವನ್ನ ಕೋಲಾಹಲ ಮಾಡ್ತಾನೆ,+ತನ್ನ ತಿಳುವಳಿಕೆಯಿಂದ ಸಮುದ್ರದಲ್ಲಿರೋ ದೈತ್ಯಾಕಾರದ ಜೀವಿಯನ್ನ* ತುಂಡು ತುಂಡು ಮಾಡ್ತಾನೆ.+ 13  ತನ್ನ ಉಸಿರಿಂದ* ಆಕಾಶವನ್ನ ಶುಚಿ ಮಾಡ್ತಾನೆ,ವೇಗವಾಗಿ ಓಡೋ ಹಾವನ್ನ ಕೈಯಿಂದ ಇರಿತಾನೆ. 14  ನೋಡು! ಇವೆಲ್ಲ ದೇವರು ಮಾಡಿದ ಕೆಲಸಗಳಲ್ಲಿ ಬರೀ ಕೆಲವಷ್ಟೇ,+ಆತನ ಬಗ್ಗೆ ನಮ್ಮ ಕಿವಿಗೆ ಬಿದ್ದಿರೋದು ಪಿಸು ಮಾತಷ್ಟೇ! ಹೀಗಿರುವಾಗ ಆತನ ಜೋರಾದ ಗರ್ಜನೆಯನ್ನ ಯಾರು ಅರ್ಥ ಮಾಡ್ಕೊಳ್ಳೋಕೆ ಸಾಧ್ಯ?”+

ಪಾದಟಿಪ್ಪಣಿ

ಅಥವಾ “ನಮಗೆ ಪ್ರಯೋಜನ ತರೋ ವಿವೇಕ; ಸಾಮಾನ್ಯ ಜ್ಞಾನವನ್ನ.”
ಅಥವಾ “ಅಬದ್ದೋನ್‌.” ಪದವಿವರಣೆ ನೋಡಿ.
ಅಥವಾ “ಶೂನ್ಯದ.”
ಇದು, ದಿಗಂತ. ಸಮುದ್ರ ಮತ್ತು ಆಕಾಶ ಸಂಧಿಸೋ ಹಾಗೆ ಕಾಣೋ ಗೆರೆ.
ಅಕ್ಷ. “ರಾಹಾಬ್‌.”
ಅಥವಾ “ಗಾಳಿಯಿಂದ.”