ಯೋಬ 25:1-6

  • ಬಿಲ್ದದನ ಮೂರನೇ ಸಲದ ಮಾತು (1-6)

    • ‘ಮನುಷ್ಯ ದೇವರ ಮುಂದೆ ನಿರಪರಾಧಿ ಆಗಿರೋಕೆ ಹೇಗೆ ಸಾಧ್ಯ?’ (4)

    • ಮನುಷ್ಯ ನಿಯತ್ತಿಂದ ಇರೋದು ವ್ಯರ್ಥ (5, 6)

25  ಅದಕ್ಕೆ ಶೂಹ್ಯನಾದ ಬಿಲ್ದದ,+   “ಆಳ್ವಿಕೆ ಮಾಡೋ ಹಕ್ಕು ದೇವರಿಗಿದೆ,ಭಯ ಆಶ್ಚರ್ಯ ಹುಟ್ಟಿಸೋಷ್ಟು ಶಕ್ತಿ ಆತನಿಗಿದೆ,ಸ್ವರ್ಗದಲ್ಲಿ ಶಾಂತಿ ಇರೋ ಹಾಗೆ ಮಾಡ್ತಾನೆ.   ಆತನ ಸೈನ್ಯಗಳನ್ನ ಲೆಕ್ಕಿಸೋಕೆ ಸಾಧ್ಯನಾ? ಆತನ ಬೆಳಕು ಯಾರ ಮೇಲಾದ್ರೂ ಬೀಳದಿರೋ ಹಾಗೆ ಮಾಡಕ್ಕಾಗುತ್ತಾ?   ಹೀಗಿರುವಾಗ ಇವತ್ತು ಇದ್ದು ನಾಳೆ ಸಾಯೋ ಮನುಷ್ಯದೇವರ ಮುಂದೆ ನೀತಿವಂತ ಆಗಿರೋಕೆ ಹೇಗೆ ಸಾಧ್ಯ?+ ಸ್ತ್ರೀಗೆ ಹುಟ್ಟಿದ ಮನುಷ್ಯ ನಿರಪರಾಧಿ ಆಗಿರೋಕೆ ಹೇಗೆ ಸಾಧ್ಯ?+   ಚಂದ್ರ ಎಷ್ಟು ಹೊಳಿತಿದ್ರೂ ದೇವ್ರಿಗೆ ತೃಪ್ತಿಯಿಲ್ಲ,ನಕ್ಷತ್ರಗಳಲ್ಲೂ ತಪ್ಪು ಕಂಡುಹಿಡಿತಾನೆ.   ಅಂದ್ಮೇಲೆ ಹುಳ ತರ ಇವತ್ತಿಲ್ಲ ನಾಳೆ ಸಾಯೋ ಮನುಷ್ಯನನ್ನ,ಕ್ರಿಮಿ ತರ ಇರೋ ಮನುಷ್ಯನನ್ನ ದೇವರು ಶುದ್ಧ ಅಂತಾನಾ!” ಅಂದ.

ಪಾದಟಿಪ್ಪಣಿ