ಯೆಹೆಜ್ಕೇಲ 31:1-18

  • ಅತಿ ಎತ್ತರದ ದೇವದಾರು ಮರದ ತರ ಇದ್ದ ಈಜಿಪ್ಟಿನ ನಾಶ (1-18)

31  ಹನ್ನೊಂದನೇ ವರ್ಷದ* ಮೂರನೇ ತಿಂಗಳ ಮೊದಲನೇ ದಿನ ಯೆಹೋವ ನನಗೆ ಮತ್ತೆ ಹೀಗಂದನು:  “ಮನುಷ್ಯಕುಮಾರನೇ, ನೀನು ಈಜಿಪ್ಟಿನ ರಾಜ ಫರೋಹಗೆ ಮತ್ತು ಅವನ ಜನ್ರಿಗೆ ಏನು ಹೇಳಬೇಕಂದ್ರೆ+‘ನಿನ್ನಷ್ಟು ದೊಡ್ಡಸ್ತಿಕೆ ಯಾರಿಗೆ ತಾನೇ ಇದೆ?   ನೀನು ಅಶ್ಶೂರ್ಯದವನ ತರ ಇದ್ದೆ, ಲೆಬನೋನಿನ ದೇವದಾರು ಮರದ ತರ ಇದ್ದೆ,ಆ ಮರದ ಕೊಂಬೆಗಳು ತುಂಬ ಸುಂದರವಾಗಿದ್ವು, ಒತ್ತೊತ್ತಾಗಿ ಬೆಳೆದ ಅದ್ರ ರೆಂಬೆಗಳು ನೆರಳು ಕೊಡ್ತಿದ್ವು,ಆ ಮರ ಎಷ್ಟು ಉದ್ದ ಇತ್ತಂದ್ರೆ ಅದು ಮೋಡಗಳನ್ನೇ ಮುಟ್ತಿತ್ತು.   ಅಲ್ಲಿ ಜಾಸ್ತಿ ನೀರು ಇದ್ದಿದ್ರಿಂದ ಅದು ದೊಡ್ಡದಾಗಿ ಬೆಳೀತು, ಆಳವಾದ ಬುಗ್ಗೆಗಳು ಇದ್ದಿದ್ರಿಂದ ಎತ್ತರವಾಗಿ ಬೆಳೀತು. ಆ ಮರದ ಸುತ್ತ ತೊರೆಗಳು ಹರೀತಿದ್ವು,ಅವುಗಳ ಕಾಲುವೆಗಳು ಬಯಲಿನ ಎಲ್ಲ ಮರಗಳಿಗೆ ನೀರು ಕೊಡ್ತಿದ್ವು.   ಹಾಗಾಗಿ ಬಯಲಿನ ಬೇರೆ ಎಲ್ಲ ಮರಗಳಿಗಿಂತ ಆ ಮರ ತುಂಬ ದೊಡ್ಡದಾಗಿ ಬೆಳೀತು. ತುಂಬಿ ಹರೀತಿದ್ದ ತೊರೆಗಳಿಂದಅದ್ರ ಕೊಂಬೆಗಳು ಚೆನ್ನಾಗಿ ಬೆಳೆದ್ವು, ರೆಂಬೆಗಳು ಉದ್ದುದ್ದ ಬೆಳೆದ್ವು.   ಆಕಾಶದ ಪಕ್ಷಿಗಳೆಲ್ಲ ಅದ್ರ ಕೊಂಬೆಗಳಲ್ಲಿ ಗೂಡು ಕಟ್ಟಿದ್ವು,ಕಾಡು ಪ್ರಾಣಿಗಳೆಲ್ಲ ಅದ್ರ ರೆಂಬೆಗಳ ಕೆಳಗೆ ಮರಿ ಹಾಕಿದ್ವು,ದೊಡ್ಡ ದೊಡ್ಡ ಜನಾಂಗಗಳೆಲ್ಲ ಅದ್ರ ನೆರಳಲ್ಲಿ ವಾಸಿಸ್ತಿದ್ವು.   ಅದ್ರ ಸೌಂದರ್ಯವನ್ನ, ಉದ್ದುದ್ದ ರೆಂಬೆಗಳನ್ನ ನೋಡೋದೇ ಕಣ್ಣಿಗೆ ಹಬ್ಬವಾಗಿತ್ತು. ಯಾಕಂದ್ರೆ ಅದ್ರ ಬೇರುಗಳು ಸಮೃದ್ಧ ನೀರಲ್ಲಿ ಇಳಿದು ಹೋಗಿದ್ವು.   ದೇವರ ತೋಟದಲ್ಲಿದ್ದ+ ಬೇರೆ ಯಾವ ದೇವದಾರು ಮರವನ್ನೂ ಅದಕ್ಕೆ ಹೋಲಿಸೋಕೆ ಆಗ್ತಿರಲಿಲ್ಲ. ಯಾವ ಜುನಿಪರ್‌ ಮರದ ಕೊಂಬೆಗಳೂ ಅದ್ರ ಕೊಂಬೆಗಳಿಗೆ ಸರಿಸಾಟಿ ಆಗಿರಲಿಲ್ಲ,ಯಾವ ಪ್ಲೇನ್‌ ಮರದ ರೆಂಬೆಗಳೂ ಅದಕ್ಕೆ ಸಮವಲ್ಲ. ಅದ್ರ ಸೌಂದರ್ಯಕ್ಕೆ ದೇವರ ತೋಟದಲ್ಲಿದ್ದ ಬೇರೆಲ್ಲ ಮರಗಳು ನಾಚ್ಕೊಳ್ತಿದ್ವು.   ನಾನೇ ಅದಕ್ಕೆ ಎಲೆಗಳನ್ನ ದಟ್ಟವಾಗಿ ಹೊದಿಸಿ ಸೊಬಗು ಕೊಟ್ಟೆ,ಸತ್ಯ ದೇವರ ತೋಟವಾದ ಏದೆನಿನ ಬೇರೆಲ್ಲ ಮರಗಳು ಅದ್ರ ಚೆಲುವನ್ನ ನೋಡಿ ಹೊಟ್ಟೆಕಿಚ್ಚು ಪಟ್ವು.’ 10  ಹಾಗಾಗಿ ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಅದು ಎಷ್ಟು ಉದ್ದ ಬೆಳೀತಂದ್ರೆ ಅದ್ರ ತುದಿ ಮೋಡಗಳನ್ನ ಮುಟ್ತು. ಅದ್ರ ಎತ್ರ ನೋಡಿ ಅದಕ್ಕೆ ದುರಹಂಕಾರ ಬಂತು. 11  ಹಾಗಾಗಿ ನಾನು ಅದನ್ನ ಜನಾಂಗಗಳ ಶಕ್ತಿಶಾಲಿ ಅಧಿಪತಿಯ ಕೈಗೆ ಕೊಟ್ಟು ಬಿಡ್ತೀನಿ.+ ಅವನು ಅದಕ್ಕೆ ಶಿಕ್ಷೆ ಕೊಡದೇ ಬಿಡಲ್ಲ, ಅದ್ರ ಕೆಟ್ಟತನದಿಂದಾಗಿ ಅದನ್ನ ಬಿಟ್ಟುಬಿಟ್ಟೆ. 12  ಜನಾಂಗಗಳಲ್ಲೇ ಅತಿ ಕ್ರೂರಿಗಳಾದ ವಿದೇಶಿಯರು ಅದನ್ನ ಕಡಿದುಹಾಕ್ತಾರೆ. ಬೆಟ್ಟಗಳ ಮೇಲೆ ಅದನ್ನ ಬಿಟ್ಟುಬಿಡ್ತಾರೆ, ಅದ್ರ ಎಲೆಗಳು ಕಣಿವೆಗಳಲ್ಲೆಲ್ಲ ಬೀಳುತ್ತೆ. ದೇಶದ ಎಲ್ಲ ತೊರೆಗಳಲ್ಲಿ ಅದರ ಮುರಿದ ರೆಂಬೆಗಳು ಬಿದ್ದಿರುತ್ತೆ.+ ಅದ್ರ ನೆರಳಲ್ಲಿ ಆಸರೆ ಪಡೆದಿದ್ದ ಭೂಮಿಯ ಎಲ್ಲ ಜನಾಂಗಗಳು ಅದನ್ನ ಬಿಟ್ಟು ಹೋಗುತ್ತೆ. 13  ಮುರಿದು ಬಿದ್ದಿರೋ ಅದ್ರ ಕಾಂಡದ ಮೇಲೆ ಆಕಾಶದ ಪಕ್ಷಿಗಳೆಲ್ಲ ವಾಸಿಸುತ್ತೆ. ಅದ್ರ ರೆಂಬೆಗಳ ಮೇಲೆ ಕಾಡು ಪ್ರಾಣಿಗಳೆಲ್ಲ ವಾಸಿಸುತ್ತೆ.+ 14  ಈ ರೀತಿ ಯಾಕೆ ನಡಿಯುತ್ತಂದ್ರೆ, ಇನ್ಮುಂದೆ ತುಂಬ ನೀರಿರೋ ಕಡೆ ಬೆಳೆದಿರೋ ಯಾವ ಮರನೂ ತುಂಬ ಉದ್ದ ಬೆಳೀಬಾರದು, ಮೋಡಗಳನ್ನ ಮುಟ್ಟುವಷ್ಟು ತಲೆ ಎತ್ತಬಾರದು. ಅಷ್ಟೇ ಅಲ್ಲ ಚೆನ್ನಾಗಿ ನೀರು ಹೀರಿಕೊಂಡು ಬೆಳೆದ ಮರ ಮೋಡಗಳನ್ನ ಮುಟ್ಟುವಷ್ಟು ಎತ್ತರಕ್ಕೆ ಹೋಗಬಾರದು. ಸತ್ತ ಮೇಲೆ ಗುಂಡಿಗೆ* ಸೇರೋ ಮನುಷ್ಯರ ಜೊತೆ ಈ ಮರಗಳನ್ನ ಸಾವಿಗೆ ಒಪ್ಪಿಸಲಾಗುತ್ತೆ. ಅವು ಭೂಮಿಯ ತಳ ಸೇರುತ್ತೆ.’ 15  ವಿಶ್ವದ ರಾಜ ಯೆಹೋವ ಹೀಗಂತಾನೆ ‘ಆ ಮರ ಸಮಾಧಿ* ಸೇರೋ ದಿನ ಜನ ಶೋಕಿಸೋ ಹಾಗೆ ನಾನು ಮಾಡ್ತೀನಿ. ತುಂಬ ನೀರಿರೋ ಜಾಗಗಳನ್ನ ಮುಚ್ಚಿ, ತೊರೆಗಳಿಗೆ ಅಡ್ಡ ಇಟ್ಟು ನೀರು ತುಂಬಿ ಹರಿಯೋದನ್ನ ತಡೀತೀನಿ. ಆ ಮರದಿಂದಾಗಿ ಲೆಬನೋನಿನಲ್ಲಿ ಕತ್ತಲೆ ಕವಿಯೋ ಹಾಗೆ, ಬಯಲಿನ ಮರಗಳು ಒಣಗಿ ಹೋಗೋ ಹಾಗೆ ಮಾಡ್ತೀನಿ. 16  ಆ ಮರ ಬೀಳೋ ಶಬ್ದಕ್ಕೆ ಜನಾಂಗಗಳು ಗಡಗಡ ನಡುಗೋ ತರ ಮಾಡ್ತೀನಿ. ಗುಂಡಿಗೆ* ಸೇರೋ ಎಲ್ರ ಜೊತೆ ಆ ಮರವನ್ನೂ ಸಮಾಧಿಗೆ* ಸೇರಿಸ್ತೀನಿ. ಏದೆನಿನ ಮರಗಳು,+ ಲೆಬನೋನಿನ ಒಳ್ಳೇ ಮತ್ತು ಶ್ರೇಷ್ಠ ಮರಗಳು, ಚೆನ್ನಾಗಿ ನೀರು ಹೀರಿಕೊಂಡು ಬೆಳೆದ ಮರಗಳೆಲ್ಲ ಭೂಮಿಯ ಅಡಿ ಸಮಾಧಾನ ಪಡ್ಕೊಳ್ಳುತ್ತೆ. 17  ಅವೆಲ್ಲ ಅವನ ಜೊತೆ* ಸಮಾಧಿ* ಸೇರಿವೆ. ಅವನ ನೆರಳಲ್ಲಿ ವಾಸಿಸ್ತಾ ಅವನಿಗೆ ಸಹಕಾರ ಕೊಟ್ಟಿದ್ದ ಜನಾಂಗಗಳು ಮತ್ತು ಕತ್ತಿಯಿಂದ ಸತ್ತವರು+ ಎಲ್ಲಿದ್ದಾರೋ ಅಲ್ಲಿಗೆ ಅವು ಹೋಗಿ ಸೇರಿವೆ.+ 18  ಮಹಿಮೆಯಲ್ಲೂ ದೊಡ್ಡಸ್ತಿಕೆಯಲ್ಲೂ ನಿನಗೆ ಸರಿಸಾಟಿಯಾದ ಮರ ಏದೆನಿನಲ್ಲಿ ಯಾವುದೂ ಇರಲಿಲ್ಲ.+ ಆದ್ರೆ ಏದೆನಿನ ಆ ಮರಗಳ ಜೊತೆಗೇ ನಿನ್ನನ್ನ ನಿಜವಾಗ್ಲೂ ಭೂಮಿಯ ಅಡಿಗೆ ಸೇರಿಸಲಾಗುತ್ತೆ. ಸುನ್ನತಿ ಆಗಿರದ ಜನ್ರ ಮಧ್ಯ, ಕತ್ತಿಯಿಂದ ಸತ್ತವರ ಜೊತೆ ನೀನು ಬಿದ್ದಿರ್ತೀಯ. ಫರೋಹನಿಗೂ ಅವನ ಎಲ್ಲ ಜನ್ರಿಗೂ ಇದೇ ಗತಿ ಆಗುತ್ತೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”

ಪಾದಟಿಪ್ಪಣಿ

ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ 11ನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
ಅಥವಾ “ಸಮಾಧಿಗೆ.”
ಅಥವಾ “ಸಮಾಧಿಗೆ.”
ಅಂದ್ರೆ ಲೆಬನೋನಿನ ದೇವದಾರು ಮರ.