ಯೆಶಾಯ 64:1-12

  • ಪಶ್ಚಾತ್ತಾಪದ ಪ್ರಾರ್ಥನೆ ಮುಂದುವರಿತು (1-12)

    • ಯೆಹೋವ “ನಮ್ಮ ಕುಂಬಾರ” (8)

64  ಆಕಾಶವನ್ನ ಸೀಳಿ ನೀನು ಕೆಳಗಿಳಿದು ಬಂದ್ರೆ,ಬೆಟ್ಟಗಳು ನಿನ್ನ ಮುಂದೆ ಕಂಪಿಸೋ ತರ ಮಾಡಿದ್ರೆ,  2  ಅದು, ಅಗ್ನಿ ಕುರುಚಲು ಗಿಡಗಳನ್ನ ಸುಡೋ ತರ ಇರುತ್ತೆ,ಬೆಂಕಿಯು ನೀರನ್ನ ಕುದಿಯೋ ಹಾಗೆ ಮಾಡೋ ತರ ಇರುತ್ತೆ. ಆಗ ನಿನ್ನ ಶತ್ರುಗಳಿಗೆ ನಿನ್ನ ಹೆಸ್ರು ತಿಳಿದುಬರುತ್ತೆ,ಜನಾಂಗಗಳು ನಿನ್ನ ಮುಂದೆ ನಡುಗ್ತವೆ!  3  ನಾವು ನಿರೀಕ್ಷಿಸೋಕೆ ಸಹ ಭಯಪಡುವಂಥ ಭಯವಿಸ್ಮಯಕಾರಿ ವಿಷ್ಯಗಳನ್ನ ನೀನು ಮಾಡಿದೆ,+ನೀನು ಕೆಳಗಿಳಿದು ಬಂದೆ, ನಿನ್ನ ಮುಂದೆ ಬೆಟ್ಟಗಳು ಕಂಪಿಸಿದವು.+  4  ತನ್ನನ್ನ ಕಾತುರದಿಂದ ಕಾದಿರುವವರ* ಪರವಾಗಿ ಕ್ರಿಯೆಗೈಯೋನಿನ್ನಂಥ ದೇವರು ಮತ್ತೊಬ್ಬನಿದ್ದಾನೆ ಅಂತ ಹಿಂದಿನ ಕಾಲದಿಂದನೂಯಾರೂ ಕೇಳಿಸ್ಕೊಂಡಿಲ್ಲ, ಯಾರೂ ಗಮನಿಸಿಲ್ಲ, ಯಾರೂ ನೋಡಿಲ್ಲ.+  5  ನಿನ್ನನ್ನ ನೆನಪಲ್ಲಿಟ್ಕೊಂಡು, ನಿನ್ನ ಮಾರ್ಗಗಳನ್ನ ಅನುಸರಿಸ್ತಾ,ಸಂತೋಷದಿಂದ ಒಳ್ಳೇ ಕೆಲಸವನ್ನ ಮಾಡುವವರ ಸಹಾಯಕ್ಕಾಗಿ ನೀನು ಬಂದೆ.+ ಆದ್ರೆ ನಿನಗೆ ನಮ್ಮ ಮೇಲೆ ಕೋಪ ಬಂತು. ಯಾಕಂದ್ರೆ ನಾವು ಪಾಪ ಮಾಡ್ತಾ ಬಂದ್ವಿ,+ತುಂಬ ಸಮ್ಯದಿಂದ ಅದ್ರಲ್ಲೇ ಮುಳುಗಿ ಹೋಗಿದ್ವಿ. ಹೀಗಿರುವಾಗ ರಕ್ಷಣೆಯನ್ನ ಪಡೆಯೋಕೆ ನಾವು ಅರ್ಹರಾ?  6  ನಾವೆಲ್ಲ ಅಶುದ್ಧ ವ್ಯಕ್ತಿ ತರ ಆಗಿದ್ದೀವಿ,ನಮ್ಮ ನೀತಿಯ ಕಾರ್ಯಗಳೆಲ್ಲ ಮುಟ್ಟಿನ ಬಟ್ಟೆ ತರ ಇದೆ.+ ನಾವೆಲ್ಲ ಎಲೆಗಳ ತರ ಒಣಗಿ ಹೋಗ್ತೀವಿ,ನಮ್ಮ ತಪ್ಪುಗಳು ಗಾಳಿ ತರ ನಮ್ಮನ್ನ ಹೊಡ್ಕೊಂಡು ಹೋಗ್ತವೆ.  7  ನಿನ್ನ ಹೆಸ್ರನ್ನೆತ್ತಿ ಪ್ರಾರ್ಥಿಸುವವರು ಯಾರೂ ಇಲ್ಲ,ನಿನ್ನನ್ನು ಗಟ್ಟಿಯಾಗಿ ಹಿಡ್ಕೊಳ್ಳೋಕೆ ಯಾರೂ ಹಂಬಲಿಸ್ತಿಲ್ಲ,ಯಾಕಂದ್ರೆ ನೀನು ನಮ್ಮಿಂದ ನಿನ್ನ ಮುಖವನ್ನ ಮರೆಮಾಡ್ಕೊಂಡೆ,+ನಮ್ಮ ತಪ್ಪುಗಳಿಂದಾಗಿ ನಾವು ಸೊರಗಿ ಸಾಯೋ ಸ್ಥಿತಿಗೆ ಬರೋ ತರ* ಮಾಡಿದೆ.  8  ಆದ್ರೂ ಯೆಹೋವನೇ, ನೀನು ನಮ್ಮ ತಂದೆ.+ ನಾವು ಜೇಡಿಮಣ್ಣು, ನೀನು ನಮ್ಮ ಕುಂಬಾರ.*+ ನಾವೆಲ್ಲ ನಿನ್ನ ಕೈಕೆಲಸವಾಗಿದ್ದೀವಿ.  9  ಯೆಹೋವನೇ, ನಮ್ಮ ಮೇಲೆ ಇಷ್ಟೊಂದು ಕೋಪಿಸ್ಕೊಳ್ಳಬೇಡ,+ನಮ್ಮ ತಪ್ಪುಗಳನ್ನ ಸದಾಕಾಲಕ್ಕೂ ನೆನಪಲ್ಲಿ ಇಟ್ಕೊಳ್ಳಬೇಡ. ದಯವಿಟ್ಟು ನಮ್ಮ ಕಡೆ ನೋಡು, ನಾವೆಲ್ಲ ನಿನ್ನ ಜನ್ರಲ್ವಾ. 10  ನಿನ್ನ ಪವಿತ್ರ ಪಟ್ಟಣಗಳು ಕಾಡು ಪ್ರದೇಶವಾಗಿವೆ. ಚೀಯೋನ್‌ ಮರುಳುಗಾಡಾಗಿದೆ,ಯೆರೂಸಲೇಮ್‌ ಪಾಳುಬಿದ್ದಿದೆ.+ 11  ನಮ್ಮ ಪೂರ್ವಜರು ನಿನ್ನನ್ನ ಸ್ತುತಿಸ್ತಿದ್ದನಮ್ಮ ಆ ಪವಿತ್ರ, ವೈಭವಯುತ* ಆಲಯವನ್ನಬೆಂಕಿಯಿಂದ ಸುಡಲಾಗಿದೆ,+ನಾವು ಇಷ್ಟಪಟ್ಟ ಎಲ್ಲ ವಸ್ತುಗಳು ಈಗ ಹಾಳಾಗಿ ಹೋಗಿವೆ. 12  ಯೆಹೋವನೇ, ಇದನ್ನೆಲ್ಲ ನೋಡಿನೂ ನೀನು ನಮಗೆ ಸಹಾಯ ಮಾಡೋಕೆ ನಿರಾಕರಿಸ್ತಾ ಇರ್ತಿಯಾ? ತೀವ್ರ ಕಷ್ಟಗಳನ್ನ ನಾವು ಅನುಭವಿಸ್ತಿರೋವಾಗ ನೀನು ಮೌನವಾಗಿ ಇರ್ತಿಯಾ?+

ಪಾದಟಿಪ್ಪಣಿ

^ ಅಥವಾ “ತಾಳ್ಮೆಯಿಂದ ಕಾಯುವವರ.”
^ ಅಕ್ಷ. “ಕರಗಿಹೋಗೋ ತರ.”
^ ಅಥವಾ “ನಮ್ಮನ್ನ ರಚಿಸಿದವನು.”
^ ಅಥವಾ “ಅಂದವಾದ.”