ಯೆಶಾಯ 63:1-19

  • ಜನಾಂಗಗಳ ಮೇಲೆ ಯೆಹೋವ ಸೇಡು ತೀರಿಸ್ತಾನೆ (1-6)

  • ಯೆಹೋವನ ಶಾಶ್ವತ ಪ್ರೀತಿ (7-14)

  • ಪಶ್ಚಾತ್ತಾಪದ ಪ್ರಾರ್ಥನೆ (15-19)

63  ಎದೋಮಿಂದ ಬರ್ತಿರೋ ಇವನು ಯಾರು?+ ಬಣ್ಣಬಣ್ಣದ* ವಸ್ತ್ರಗಳನ್ನ ಹಾಕಿ ಬೊಚ್ರದಿಂದ+ ಬರ್ತಿರೋ ಇವನು ಯಾರು? ವೈಭವಯುತ ವಸ್ತ್ರಗಳನ್ನ ಹಾಕಿ,ಮಹಾಬಲದಿಂದ ನಡೆದು ಬರ್ತಿರೋ ಇವನು ಯಾರು? “ಅವನು ಬೇರೆ ಯಾರೂ ಅಲ್ಲ, ನೀತಿಯಿಂದ ಮಾತಾಡುವವನೂ,ಮಹಾಬಲದಿಂದ ರಕ್ಷಿಸುವವನೂ ಆಗಿರುವ ನಾನೇ.”  2  ನಿನ್ನ ಬಟ್ಟೆ ಯಾಕೆ ಕೆಂಪಾಗಿದೆ? ನಿನ್ನ ಬಟ್ಟೆ ಯಾಕೆ ದ್ರಾಕ್ಷಿತೊಟ್ಟಿಯಲ್ಲಿ ದ್ರಾಕ್ಷಿಗಳನ್ನ ತುಳಿಯುವವರ ಬಟ್ಟೆ ತರ ಇದೆ?+  3  “ದ್ರಾಕ್ಷಿತೊಟ್ಟಿಯಲ್ಲಿ ನಾನೊಬ್ಬನೇ ದ್ರಾಕ್ಷಿಗಳನ್ನ ತುಳಿದೆ. ಜನಾಂಗಗಳ ಜನ್ರಲ್ಲಿ ನನ್ನ ಜೊತೆ ಯಾರೂ ಇರಲಿಲ್ಲ. ನಾನು ಕೋಪದಿಂದ ಶತ್ರುಗಳನ್ನ ತುಳಿತಾ ಇದ್ದೆ,ನಾನು ಕ್ರೋಧದಿಂದ ಅವ್ರನ್ನ ಹೊಸಕಿಹಾಕ್ತಾ ಇದ್ದೆ.+ ಅವ್ರ ರಕ್ತ ನನ್ನ ಬಟ್ಟೆ ಮೇಲೆಲ್ಲ ಆಯ್ತು,ಅದ್ರಿಂದ ನನ್ನ ಬಟ್ಟೆಯೆಲ್ಲ ಕಲೆ ಆಯ್ತು.  4  ಯಾಕಂದ್ರೆ ಸೇಡು ತೀರಿಸೋಕೆ ನಾನೊಂದು ದಿನವನ್ನ ಈಗಾಗಲೇ ನಿರ್ಣಯಿಸಿದ್ದೀನಿ,+ಅಷ್ಟೇ ಅಲ್ಲ ನನ್ನ ಜನ್ರನ್ನ ಬಿಡಿಸ್ಕೊಂಡು ಬರೋ ವರ್ಷ ಹತ್ರ ಆಗಿದೆ.  5  ನಾನು ಆಕಡೆ ಈಕಡೆ ನೋಡಿದೆ, ಆದ್ರೆ ಸಹಾಯ ಮಾಡುವವರು ಯಾರೂ ಇರಲಿಲ್ಲ,ಬೆಂಬಲಿಸೋಕೆ ಯಾರೂ ಮುಂದೆ ಬರಲಿಲ್ಲ, ಇದನ್ನ ನೋಡಿ ನನಗೆ ಆಶ್ಚರ್ಯ ಆಯ್ತು. ಹಾಗಾಗಿ ನನ್ನ ಬಾಹುನೇ ರಕ್ಷಣೆಯನ್ನ ತಗೊಂಡು ಬಂತು,*+ನನ್ನ ಕ್ರೋಧನೇ ನನ್ನನ್ನ ಬೆಂಬಲಿಸಿತು.  6  ನಾನು ಕೋಪದಲ್ಲಿ ಜನಾಂಗಗಳ ಜನ್ರನ್ನ ತುಳಿದುಹಾಕಿದೆ,ಅವ್ರಿಗೆ ನನ್ನ ಕ್ರೋಧವನ್ನ ಕುಡಿಸಿ ಮತ್ತೇರಿಸಿದೆ,+ಅವ್ರ ರಕ್ತವನ್ನ ನೆಲದ ಮೇಲೆ ಸುರಿದೆ.”  7  ಶಾಶ್ವತ ಪ್ರೀತಿಯಿಂದ ಯೆಹೋವ ಮಾಡಿದ ಕೆಲಸಗಳ ಬಗ್ಗೆ ನಾನು ಹೇಳ್ತೀನಿ,ಹೊಗಳಿಕೆಗೆ ಅರ್ಹವಾಗಿರೋ ಯೆಹೋವನ ಕೆಲಸಗಳ ಬಗ್ಗೆ ನಾನು ಮಾತಾಡ್ತೀನಿ,ಯಾಕಂದ್ರೆ ಯೆಹೋವ ನಮಗಾಗಿ ಎಷ್ಟೋ ವಿಷ್ಯಗಳನ್ನ ಮಾಡಿದ್ದಾನೆ.+ ಆತನು ಕರುಣೆಯಿಂದ, ಶಾಶ್ವತವಾದ ಮಹಾ ಪ್ರೀತಿಯಿಂದಇಸ್ರಾಯೇಲ್‌ ಮನೆತನದವರಿಗಾಗಿ ತುಂಬ ಒಳ್ಳೇ ವಿಷ್ಯಗಳನ್ನ ಮಾಡಿದ್ದಾನೆ.  8  ಯಾಕಂದ್ರೆ “ಅವರು ನನ್ನ ಜನ್ರು, ನನಗೆ ನಂಬಿಕೆದ್ರೋಹ ಮಾಡದ* ನನ್ನ ಮಕ್ಕಳು”+ ಅಂತ ದೇವರು ಅಂದ್ಕೊಂಡನು. ಹಾಗಾಗಿ ಆತನು ಅವ್ರ ರಕ್ಷಕನಾದನು.+  9  ಅವರು ಸಂಕಟದಲ್ಲಿದ್ದಾಗ ಆತನಿಗೂ ಸಂಕಟ ಆಯ್ತು.+ ಆತನ ಸ್ವಂತ ಸಂದೇಶವಾಹಕನೇ* ಅವ್ರನ್ನ ರಕ್ಷಿಸಿದನು.+ ತನ್ನ ಪ್ರೀತಿಯಿಂದಾಗಿ, ಕರುಣೆಯಿಂದಾಗಿ ಅವ್ರನ್ನ ಬಿಡುಗಡೆ ಮಾಡಿದನು.+ ಹಿಂದಿನ ಕಾಲದಿಂದನೂ ಆತನು ಅವ್ರನ್ನ ಎತ್ಕೊಂಡು ಹೊರ್ತಾ ಬಂದನು.+ 10  ಆದ್ರೆ ಅವರು ಆತನ ವಿರುದ್ಧ ದಂಗೆ ಎದ್ದರು,+ ಆತನ ಪವಿತ್ರ ಶಕ್ತಿಯನ್ನ ದುಃಖಪಡಿಸಿದ್ರು.+ ಆಗ ಆತನು ಅವ್ರ ಶತ್ರುವಾದನು,+ಅವ್ರ ಜೊತೆ ಹೋರಾಡಿದನು.+ 11  ಆಗ ಅವರು ಹಳೇ ದಿನಗಳನ್ನ,ಅಂದ್ರೆ ಆತನ ಸೇವಕ ಮೋಶೆಯ ದಿನಗಳನ್ನ ನೆನಪಿಸ್ಕೊಂಡು ಹೀಗಂದ್ರು“ತನ್ನ ಮಂದೆಯನ್ನ ಅದ್ರ ಕುರುಬನ ಜೊತೆ+ ಸಮುದ್ರದ ಮೂಲಕ ಹೊರಗೆ ಕರ್ಕೊಂಡು ಬಂದ ದೇವರು ಎಲ್ಲಿ?+ ಮೋಶೆ ಮೇಲೆ* ತನ್ನ ಪವಿತ್ರಶಕ್ತಿ ಸುರಿಸಿದ ದೇವರು ಎಲ್ಲಿ?+ 12  ತನ್ನ ಮಹಿಮಾಭರಿತ ಬಾಹುವಿಂದ ಮೋಶೆಯ ಬಲಗೈಯನ್ನ ಹಿಡಿದ ದೇವರು ಎಲ್ಲಿ?+ ತನ್ನ ಹೆಸ್ರು ಶಾಶ್ವತಕ್ಕೂ ನೆನಪಲ್ಲಿರೋ ತರ,+ಸಮುದ್ರವನ್ನ ಜನ್ರ ಮುಂದೆ ಇಬ್ಭಾಗ ಮಾಡಿದ ದೇವರು ಎಲ್ಲಿ?+ 13  ಬಯಲಲ್ಲಿ* ಕುದುರೆ ನಡೆದುಹೋಗೋ ಹಾಗೆಉಕ್ಕೇರೋ ಸಮುದ್ರದ ಮಧ್ಯದಿಂದಜನ ಮುಗ್ಗರಿಸದೆ ನಡೆದುಹೋಗೋ ತರ ಮಾಡಿದ ದೇವರು ಎಲ್ಲಿ? 14  ಕಣಿವೆ ಬಯಲಿಗೆ ಇಳಿದು ಹೋಗುವಾಗ ಪ್ರಾಣಿಗಳು ವಿಶ್ರಾಂತಿ ಪಡ್ಕೊಳ್ಳೋ ತರ,ಯೆಹೋವನ ಪವಿತ್ರಶಕ್ತಿ ಅವ್ರಿಗೆ ವಿಶ್ರಾಂತಿ ಕೊಟ್ಟಿತು.”+ ನಿನ್ನ ಹೆಸ್ರಿನ ಘನತೆ, ಮಾನಕ್ಕಾಗಿ+ನೀನು ನಿನ್ನ ಜನ್ರನ್ನ ಹೀಗೆ ಮುನ್ನಡೆಸಿದೆ. 15  ಸ್ವರ್ಗದಿಂದ ಕೆಳಗೆ ನೋಡು,ಪವಿತ್ರವೂ ಮಹಿಮಾಭರಿತವೂ ಆಗಿರೋ ನಿನ್ನ ಎತ್ತರ ಸ್ಥಳದಿಂದ ನೋಡು. ನೀನು ನಮಗೆ ಯಾಕೆ ಗಮನ ಕೊಡ್ತಿಲ್ಲ, ಯಾಕೆ ನಿನ್ನ ಬಲವನ್ನ ತೋರಿಸ್ತಿಲ್ಲ? ಯಾಕೆ ನಿನಗೆ ನಮ್ಮ ಮೇಲೆ ಕನಿಕರವಾಗಲಿ+ ಕರುಣೆಯಾಗಲಿ ಹುಟ್ಟುತ್ತಿಲ್ಲ?+ ಯಾಕೆ ನೀನು ಅವುಗಳನ್ನ ನಮ್ಮಿಂದ ತಡೆಹಿಡಿದಿದ್ದೀಯ? 16  ನೀನು ನಮ್ಮ ತಂದೆ,+ಅಬ್ರಹಾಮನಿಗೆ ನಮ್ಮ ಪರಿಚಯ ಇಲ್ಲದಿದ್ರೂ,ಇಸ್ರಾಯೇಲ್‌ ನಮ್ಮನ್ನ ಗುರುತಿಸದಿದ್ರೂಯೆಹೋವನೇ, ನೀನೇ ನಮ್ಮ ತಂದೆ. ‘ಪುರಾತನ ಕಾಲದಿಂದನೂ ನಮ್ಮನ್ನ ಬಿಡಿಸಿದವನು’ ಅನ್ನೋ ಹೆಸ್ರು ನಿನಗಿದೆ.+ 17  ಯೆಹೋವನೇ, ನಿನ್ನ ಮಾರ್ಗಗಳನ್ನ ಬಿಟ್ಟು ನಾವು ಅಲೆದಾಡೋ ತರ ನೀನ್ಯಾಕೆ ಅನುಮತಿಸಿದ್ದೀಯ? ನಿನಗೆ ಹೆದರದ ಹಾಗೆ ನಾವು ನಮ್ಮ ಹೃದಯಗಳನ್ನ ಕಠಿಣ ಮಾಡ್ಕೊಳ್ಳೋಕೆ ನೀನ್ಯಾಕೆ ಬಿಟ್ಟೆ?+ ನಿನ್ನ ಸೇವಕರ ಸಲುವಾಗಿ ವಾಪಸ್‌ ಬಾ,ನಿನ್ನ ಸ್ವತ್ತಾಗಿರೋ ನಿನ್ನ ಕುಲಗಳಿಗಾಗಿ ತಿರುಗಿ ಬಾ.+ 18  ನಿನ್ನ ದೇಶ ಸ್ವಲ್ಪ ಸಮ್ಯದ ತನಕ ಮಾತ್ರ ನಿನ್ನ ಪವಿತ್ರ ಜನ್ರ ಅಧೀನದಲ್ಲಿತ್ತು. ನಮ್ಮ ಶತ್ರುಗಳು ನಿನ್ನ ಆರಾಧನಾ ಸ್ಥಳವನ್ನ ತುಳಿದುಹಾಕಿದ್ರು.+ 19  ನೀನು ಯಾವತ್ತೂ ಆಳ್ವಿಕೆ ಮಾಡಿರದ ಜನ್ರ ತರ, ನಿನ್ನ ಹೆಸ್ರಿಂದ ಯಾವತ್ತೂ ಕರಸ್ಕೊಳ್ಳದ ಜನ್ರ ತರನಾವು ತುಂಬ ಕಾಲದ ತನಕ ಇದ್ವಿ.

ಪಾದಟಿಪ್ಪಣಿ

ಬಹುಶಃ, “ಕೆಂಪುಕೆಂಪಾದ.”
ಅಥವಾ “ನನಗೆ ಜಯವನ್ನ ತಂದುಕೊಟ್ಟಿತು.”
ಅಥವಾ “ಮೋಸಮಾಡದ.”
ಅಥವಾ “ಆತನ ಸನ್ನಿಧಿಯಲ್ಲಿದ್ದ ದೂತನೇ.”
ಅಕ್ಷ. “ಅವನ ಮೇಲೆ.”
ಅಥವಾ “ಅರಣ್ಯಪ್ರದೇಶದಲ್ಲಿ.”