ಯೆಶಾಯ 47:1-15
47 ಬಾಬೆಲಿನ ಕನ್ಯೆಯೇ,ಕೆಳಗಿಳಿದು ಬಂದು ಧೂಳಲ್ಲಿ ಕೂತ್ಕೊ.+
ಕಸ್ದೀಯರ ಪುತ್ರಿಯೇ,ಸಿಂಹಾಸನವಿಲ್ಲದ ನೆಲದ ಮೇಲೆ ಕೂತ್ಕೊ.+
ಯಾಕಂದ್ರೆ ಇನ್ಯಾವತ್ತೂ ಜನ ನಿನ್ನನ್ನ ಕೋಮಲೆ ಅಂತಾಗಲಿ, ಮುದ್ದಿನ ಮಗಳೇ ಅಂತಾಗಲಿ ಕರಿಯಲ್ಲ.
2 ಬೀಸೋ ಕಲ್ಲು ತಗೊಂಡು ಹಿಟ್ಟನ್ನ ಬೀಸು.
ನಿನ್ನ ಮುಸುಕನ್ನ ತೆಗೆದುಹಾಕು.
ನಿನ್ನ ಕಾಲುಗಳು ಕಾಣೋ ತರ ಲಂಗವನ್ನ ಕಿತ್ತು ಬಿಸಾಡು.
ನದಿಗಳನ್ನ ದಾಟು.
3 ನಿನ್ನ ನಗ್ನತೆಯನ್ನ ಮರೆಮಾಡಲಾಗಲ್ಲ,ನಿನಗಾಗೋ ಅವಮಾನವನ್ನ ಎಲ್ರೂ ನೋಡ್ತಾರೆ.
ನಾನು ಸೇಡು ತೀರಿಸ್ತೀನಿ,+ ನನ್ನ ದಾರಿಗೆ ಅಡ್ಡವಾಗಿ ಯಾರೂ ನಿಲ್ಲಲ್ಲ.*
4 “ನಮ್ಮನ್ನ ಬಿಡುಗಡೆ ಮಾಡ್ತಿರುವವನುಇಸ್ರಾಯೇಲ್ಯರ ಪವಿತ್ರ ದೇವರಾಗಿದ್ದಾನೆ,ಆತನ ಹೆಸ್ರು ಸೈನ್ಯಗಳ ದೇವರಾದ ಯೆಹೋವ.”+
5 ಕಸ್ದೀಯರ ಮಗಳೇ,ನೀನು ಅಲ್ಲಿ ಮೌನವಾಗಿ ಕೂತ್ಕೊ, ಕತ್ತಲೆಯೊಳಗೆ ಹೋಗು.+
ಇನ್ನು ಮುಂದೆ ಜನ ನಿನ್ನನ್ನ ‘ಸಾಮ್ರಾಜ್ಯಗಳ ರಾಣಿ’ ಅಂತ ಕರಿಯಲ್ಲ.+
6 ನನ್ನ ಜನ್ರ ಮೇಲೆ ನನಗೆ ತುಂಬ ಕೋಪ ಬಂತು.+
ನನ್ನ ಸ್ವಂತ ಜನ್ರು ಮಲಿನಗೊಳ್ಳೋಕೆ ನಾನು ಬಿಟ್ಕೊಟ್ಟೆ,+ನಾನು ಅವ್ರನ್ನ ನಿನ್ನ ಕೈಗೆ ಒಪ್ಪಿಸಿದೆ.+
ಆದ್ರೆ ನೀನು ಅವ್ರಿಗೆ ಕರುಣೆ ತೋರಿಸಲಿಲ್ಲ.+
ವೃದ್ಧರ ಮೇಲೂ ನೀನು ಭಾರವಾದ ಹೊರೆ ಹೊರಿಸಿದೆ.+
7 “ನಾನು ಸದಾಕಾಲಕ್ಕೂ ರಾಣಿಯಾಗಿ ಇರ್ತಿನಿ” ಅಂತ ನೀನು ಹೇಳಿದೆ.+
ನೀನು ಈ ವಿಷ್ಯಗಳನ್ನ ನಿನ್ನ ಹೃದಯಕ್ಕೆ ತಗೊಳ್ಳಲಿಲ್ಲ,ವಿಷ್ಯ ಹೇಗೆ ಕೊನೆಗೊಳ್ಳುತ್ತೆ ಅಂತ ನೀನು ಯೋಚಿಸಲಿಲ್ಲ.
8 ಸುಖವನ್ನ ಪ್ರೀತಿಸುವವಳೇ,+ಸುರಕ್ಷಿತವಾಗಿ ಕೂತ್ಕೊಂಡು “ನನ್ನ ತರ ಬೇರೆ ಯಾರೂ ಇಲ್ಲ, ನಾನು ನಾನೇ.+
ನಾನು ವಿಧವೆ ಆಗಲ್ಲ.
ನಾನು ಯಾವತ್ತೂ ಪುತ್ರಶೋಕವನ್ನ ಅನುಭವಿಸಲ್ಲ”+ ಅಂತ ಮನಸ್ಸಲ್ಲಿ ಅಂದ್ಕೊಳ್ತಿರುವವಳೇ,ಈಗ ಈ ಮಾತನ್ನ ಕೇಳು,
9 ಒಂದೇ ದಿನದಲ್ಲಿ ವಿಧವೆಯ ಪಟ್ಟ, ಪುತ್ರಶೋಕ ಇವೆರಡೂತಟ್ಟನೆ ನಿನ್ನ ಮೇಲೆ ಬರುತ್ತೆ.+
ನೀನು ಮಾಡಿರೋ* ಅನೇಕ ಮಾಟಮಂತ್ರಗಳಿಂದಾಗಿ, ಶಕ್ತಿಯುತ ಮಂತ್ರಗಳಿಂದಾಗಿ+ಈ ಎಲ್ಲ ವಿಷ್ಯಗಳು ನಿಜವಾಗ್ಲೂ ನಿನ್ನ ಮೇಲೆ ಬರುತ್ತೆ.+
10 ನೀನು ನಿನ್ನ ಕೆಟ್ಟತನದಲ್ಲಿ ಭರವಸೆಯನ್ನ ಇಟ್ಟು,“ನನ್ನನ್ನ ಯಾರೂ ನೋಡಲ್ಲ” ಅಂತ ಹೇಳಿದೆ.
ನಿನ್ನ ವಿವೇಕ, ನಿನ್ನ ಜ್ಞಾನ ನಿನ್ನನ್ನ ದಾರಿ ತಪ್ಪಿಸಿದ್ವು.
ನೀನು ನಿನ್ನ ಹೃದಯದಲ್ಲಿ “ನನ್ನ ತರ ಬೇರೆ ಯಾರೂ ಇಲ್ಲ, ನಾನು ನಾನೇ” ಅಂತ ಅಂದ್ಕೊಂಡೆ.
11 ಆದ್ರೆ ನಿನ್ನ ಮೇಲೆ ಕಷ್ಟ ಬಂದೆರಗುತ್ತೆ,ನಿನ್ನ ಯಾವುದೇ ಮಂತ್ರಗಳು ಅದನ್ನ ನಿಲ್ಲಿಸಲಾರವು.*
ನಿನಗೆ ದೊಡ್ಡ ಆಪತ್ತು ಬರುತ್ತೆ, ನೀನು ಅದ್ರಿಂದ ತಪ್ಪಿಸ್ಕೊಳ್ಳೋಕಾಗಲ್ಲ.
ನಿನಗೇ ಗೊತ್ತಿಲ್ಲದೆ ನಾಶನ ಹಠಾತ್ತನೇ ನಿನ್ನ ಮೇಲೆ ಬರುತ್ತೆ.+
12 ಹಾಗಾಗಿ ನೀನು ಬಾಲ್ಯದಿಂದ ಹೆಣಗಾಡಿ ಮಾಡ್ತಿರೋನಿನ್ನ ಮಂತ್ರಗಳನ್ನ ಮತ್ತು ನಿನ್ನ ಮಾಟಮಂತ್ರಗಳನ್ನ ಮುಂದುವರಿಸ್ತಾ ಹೋಗು.+
ಬಹುಶಃ ಅವುಗಳಿಂದ ನಿನಗೆ ಒಳ್ಳೇದಾಗಬಹುದೇನೋ.
ಬಹುಶಃ ಅವುಗಳಿಂದ ಜನ ನಿನಗೆ ಭಯಪಡಬಹುದೇನೋ.
13 ನಿನ್ನ ತುಂಬ ಸಲಹೆಗಾರರಿಂದಾಗಿ ನೀನು ಬಳಲಿಹೋದೆ.
ಈಗ ಅವರು ಎದ್ದು ನಿನ್ನನ್ನ ರಕ್ಷಿಸಲಿ.
ಅವರು ಆಕಾಶದಲ್ಲಿ ಇರುವವುಗಳನ್ನ ಆರಾಧಿಸ್ತಾರೆ,* ನಕ್ಷತ್ರಗಳನ್ನ ನೋಡ್ತಾರೆ,+ಹೊಸ ಚಂದ್ರನನ್ನ ನೋಡಿ ಭವಿಷ್ಯದಲ್ಲಿ ನಿನಗೆ ಏನಾಗುತ್ತೆ ಅಂತ ಹೇಳ್ತಾರೆ.
14 ನೋಡು! ಅವರು ಕೂಳೆ ತರ ಇದ್ದಾರೆ.
ಬೆಂಕಿ ಅವ್ರನ್ನ ಸುಟ್ಟುಬಿಡುತ್ತೆ,ಜ್ವಾಲೆಯ ಶಕ್ತಿ ಮುಂದೆ ಅವರು ತಮ್ಮನ್ನ ತಾವು ಕಾಪಾಡ್ಕೊಳ್ಳೋಕಾಗಲ್ಲ.
ಅದು ಬೆಚ್ಚಗಾಗಿಸೋ ಕೆಂಡ ಅಲ್ಲ,ಮುಂದೆ ಕೂತು ಚಳಿಕಾಯಿಸ್ಕೊಳ್ಳೋ ಬೆಂಕಿನೂ ಅಲ್ಲ.
15 ನೀನು ಬಾಲ್ಯದಿಂದ ಯಾರ ಜೊತೆ ಹೆಣಗಾಡ್ತಿದ್ದೀಯೋಯಾರ ಮೇಲೆ ನೀನು ನಂಬಿಕೆ ಇಟ್ಟಿದ್ದೀಯೋ ಆ ಮಂತ್ರಗಾರರಿಗೆ* ಆಗೋ ಗತಿನೂ ಇದೇ.
ಅವರು ದಾರಿತಪ್ಪಿ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ* ಚೆದರಿಹೋಗ್ತಾರೆ.
ನಿನ್ನನ್ನ ಕಾಪಾಡೋಕೆ ಯಾರೂ ಇರಲ್ಲ.+

