ಯೆಶಾಯ 46:1-13

  • ಬಾಬೆಲಿನ ಮೂರ್ತಿಗಳ ಮತ್ತು ಇಸ್ರಾಯೇಲಿನ ದೇವರ ಮಧ್ಯ ಇರೋ ವ್ಯತ್ಯಾಸ (1-13)

    • ಯೆಹೋವ ಭವಿಷ್ಯದಲ್ಲಿ ನಡಿಯೋ ಸಂಗತಿಗಳನ್ನ ಮೊದಲೇ ತಿಳಿಸ್ತಾನೆ (10)

    • ಪೂರ್ವದಿಂದ ಬರೋ ಒಂದು ಹದ್ದು (11)

46  ಬೇಲ್‌ ಬೊಗ್ಗಿಕೊಂಡಿದೆ,+ ನೆಬೋ ತಲೆ ತಗ್ಗಿಸಿದೆ. ಅವುಗಳ ಮೂರ್ತಿಗಳನ್ನ ಪ್ರಾಣಿಗಳ ಮೇಲೆ, ಭಾರವನ್ನ ಹೊರೋ ಪ್ರಾಣಿಗಳ ಮೇಲೆ ಇಡಲಾಗಿದೆ.+ ಅವು ಬಳಲಿ ಹೋಗಿರೋ ಪ್ರಾಣಿಗಳ ಮೇಲಿನ ಭಾರದಂತಿವೆ.  2  ಬೇಲ್‌ ಮತ್ತು ನೆಬೋ ತಲೆ ತಗ್ಗಿಸಿ ಒಟ್ಟಾಗಿ ಬಾಗಿಕೊಂಡಿವೆ,ಈ ದೇವರುಗಳು, ಪ್ರಾಣಿಗಳ ಮೇಲೆ ಹೇರಲಾಗಿರೋ ತಮ್ಮ ಸ್ವಂತ ಮೂರ್ತಿಗಳನ್ನ ಕಾಪಾಡಲಾರವು,ಸ್ವತಃ ಅವೇ ಬಂದಿವಾಸಕ್ಕೆ ಹೋಗ್ತವೆ.  3  “ಯಾಕೋಬನ ಮನೆತನದವ್ರೇ, ಇಸ್ರಾಯೇಲಿನ ಮನೆತನದಲ್ಲಿ ಉಳಿದವ್ರೇ ನನಗೆ ಕಿವಿಗೊಡಿ,+ನೀವು ಹುಟ್ಟಿದಾಗಿಂದ ನಾನು ನಿಮ್ಮನ್ನ ಬೆಂಬಲಿಸ್ತಾ ಬಂದೆ, ಗರ್ಭದಲ್ಲಿ ಇದ್ದಾಗಿಂದ ನಿಮ್ಮನ್ನ ಹೊರ್ತಾ ಬಂದೆ.+  4  ನಿಮಗೆ ವಯಸ್ಸಾದ್ರೂ ನಾನು ಬದಲಾಗಲ್ಲ,+ನಿಮ್ಮ ಕೂದಲು ಬೆಳ್ಳಗಾದ್ರೂ ನಾನು ನಿಮ್ಮನ್ನ ಬೆಂಬಲಿಸ್ತೀನಿ. ಇಲ್ಲಿ ತನಕ ಮಾಡಿದ ಹಾಗೆ ನಾನು ನಿಮ್ಮನ್ನ ಎತ್ಕೊಳ್ತೀನಿ, ಹೊರ್ತಿನಿ ಮತ್ತು ಕಾಪಾಡ್ತೀನಿ.+  5  ನನ್ನನ್ನ ನೀವು ಯಾರಿಗೆ ಹೋಲಿಸ್ತೀರ? ನೀನು ಅವನ ತರಾನೇ ಇರ್ತಿಯ ಅಂತ ಯಾರಿಗೆ ಹೋಲಿಕೆ ಮಾಡ್ತೀರ?+ ನಾನು ಯಾರ ಜೊತೆ ಸರಿಸಮಾನ ಅಂತ ಹೇಳ್ತೀರ? ನನ್ನನ್ನ ಯಾರ ಜೊತೆ ತುಲನೆಮಾಡಿ ನೋಡ್ತೀರ?+  6  ತಮ್ಮ ಚೀಲಗಳಲ್ಲಿ ಚಿನ್ನವನ್ನ ತಂದು ಸುರಿಯುವವ್ರಿದ್ದಾರೆ,ಅವರು ತಕ್ಕಡಿಯಲ್ಲಿ ಬೆಳ್ಳಿಯನ್ನ ತೂಗಿನೋಡ್ತಾರೆ,ಅಕ್ಕಸಾಲಿಗನಿಗೆ ಕೂಲಿ ಕೊಟ್ಟು ಕೆಲಸಕ್ಕೆ ಇಡ್ತಾರೆ, ಅವನ ಕೈಯಿಂದ ಒಂದು ದೇವರ ಮೂರ್ತಿಯನ್ನ ಮಾಡಿಸ್ತಾರೆ.+ ಆಮೇಲೆ ಅವರು ಅದಕ್ಕೆ ಅಡ್ಡಬಿದ್ದು ಅದನ್ನ ಆರಾಧಿಸ್ತಾರೆ.*+  7  ಅವರು ಅದನ್ನ ತಮ್ಮ ಭುಜಗಳ ಮೇಲೆ ಹೊತ್ಕೊಂಡು ಹೋಗ್ತಾರೆ,+ಅದನ್ನ ಮೆರವಣಿಗೆ ಮಾಡಿಸಿ ಅದ್ರ ಸ್ಥಳದಲ್ಲಿ ಇಡ್ತಾರೆ,ಅದು ಅದ್ರ ಸ್ಥಳವನ್ನ ಬಿಟ್ಟು ಅಲುಗಾಡಲ್ಲ.+ ಅವರು ಅದಕ್ಕೆ ಎಷ್ಟೇ ಮೊರೆಯಿಟ್ರೂ ಅದು ಅವ್ರಿಗೆ ಉತ್ರ ಕೊಡಲ್ಲ. ಯಾರನ್ನೂ ಕಷ್ಟಗಳಿಂದ ಬಿಡಿಸೋಕೆ ಅದ್ರಿಂದ ಆಗಲ್ಲ.+  8  ಇದನ್ನ ನೆನಪಲ್ಲಿಟ್ಕೊಳ್ಳಿ, ಧೈರ್ಯ ತಂದ್ಕೊಳ್ಳಿ. ಅಪರಾಧಿಗಳೇ, ಇದನ್ನ ಮನಸ್ಸಲ್ಲಿ ಇಟ್ಕೊಳ್ಳಿ.  9  ತುಂಬ ಹಿಂದೆನೇ ನಡೆದ ಹಳೇ* ವಿಷ್ಯಗಳನ್ನ ನೆನಪಿಸ್ಕೊಳ್ಳಿ,ನಾನೇ ದೇವರು, ನಾನಲ್ಲದೆ ಬೇರೆ ಯಾರೂ ಇಲ್ಲ. ನಾನೇ ದೇವರು, ನನ್ನ ತರ ಬೇರೆ ಯಾರೂ ಇಲ್ಲ.+ 10  ಮುಂದೆ ಏನಾಗುತ್ತೆ ಅಂತ ನಾನು ತುಂಬ ಮುಂಚೆನೇ ಹೇಳ್ತೀನಿ. ಇನ್ನೂ ನಡೆಯದ ವಿಷ್ಯಗಳನ್ನ ನಾನು ತುಂಬ ಹಿಂದೆನೇ ಹೇಳಿದ್ದೆ.+ ‘ನನ್ನ ನಿರ್ಣಯ* ತಪ್ಪದೆ ನೆರವೇರುತ್ತೆ,+ನಾನು ಬಯಸಿದ್ದನ್ನೆಲ್ಲ ಖಂಡಿತ ನೆರವೇರಿಸ್ತೀನಿ’+ ಅಂತ ಹೇಳ್ತಿದ್ದೀನಿ. 11  ನಾನು ಪೂರ್ವದಿಂದ ಒಂದು ಹದ್ದನ್ನ ಕರಿತೀನಿ,+ನನ್ನ ನಿರ್ಣಯವನ್ನ* ನೆರವೇರಿಸೋ ತರ ದೂರದ ದೇಶದಿಂದ ಒಬ್ಬ ವ್ಯಕ್ತಿಯನ್ನ ಕರಿತೀನಿ.+ ನಾನು ಹೇಳಿದ್ದೀನಿ, ಅದನ್ನ ಮಾಡೇ ಮಾಡ್ತೀನಿ. ನಾನು ಉದ್ದೇಶಿಸಿದ್ದೀನಿ, ಅದನ್ನ ನೆರವೇರಿಸಿಯೇ ನೆರವೇರಿಸ್ತೀನಿ.+ 12  ಮೊಂಡು* ಹೃದಯದವ್ರೇ,ನೀತಿಯಿಂದ ತುಂಬ ದೂರದಲ್ಲಿರುವವ್ರೇ, ನನ್ನ ಮಾತನ್ನ ಕೇಳಿ. 13  ತುಂಬ ಬೇಗ ನಾನು ನನ್ನ ನೀತಿಯನ್ನ ತೋರಿಸ್ತೀನಿ,ಅದು ತಡವಾಗಲ್ಲ. ನಾನು ದಯಪಾಲಿಸೋ ರಕ್ಷಣೆ ಬೇಗ ಬರುತ್ತೆ.+ ನಾನು ಚೀಯೋನಿನಲ್ಲಿ ರಕ್ಷಣೆಯನ್ನ ದಯಪಾಲಿಸ್ತೀನಿ,ಇಸ್ರಾಯೇಲನ್ನ ನನ್ನ ವೈಭವದಿಂದ ತುಂಬಿಸ್ತೀನಿ.”+

ಪಾದಟಿಪ್ಪಣಿ

ಅಕ್ಷ. “ಬಾಗಿ ನಮಸ್ಕರಿಸ್ತಾರೆ.”
ಅಕ್ಷ. “ಮೊದಲ.”
ಅಥವಾ “ಉದ್ದೇಶ, ಸಲಹೆ.”
ಅಥವಾ “ಉದ್ದೇಶವನ್ನ, ಸಲಹೆಯನ್ನ.”
ಅಕ್ಷ. “ಬಲಿಷ್ಠ.”