ಯೆಶಾಯ 43:1-28

  • ಯೆಹೋವ ತನ್ನ ಜನ್ರನ್ನ ಒಟ್ಟುಗೂಡಿಸ್ತಾನೆ (1-7)

  • ದೇವರುಗಳ ಪರೀಕ್ಷೆ (8-13)

    • “ನೀವು ನನ್ನ ಸಾಕ್ಷಿಗಳು” (10, 12)

  • ಬಾಬೆಲಿಂದ ಬಿಡುಗಡೆ (14-21)

  • ‘ನಮ್ಮ ಮಧ್ಯ ಇರೋ ವಿವಾದದ ಬಗ್ಗೆ ಮಾತಾಡೋಣ’ (22-28)

43  ಯಾಕೋಬನೇ, ಇಸ್ರಾಯೇಲೇ,ನಿನ್ನ ಸೃಷ್ಟಿಕರ್ತನೂ ನಿನ್ನನ್ನ ರಚಿಸಿದವನೂ ಆದಯೆಹೋವ+ ಹೀಗೆ ಹೇಳ್ತಿದ್ದಾನೆ“ಹೆದರಬೇಡ, ನಾನು ನಿನ್ನನ್ನ ಬಿಡಿಸಿದ್ದೀನಿ.+ ನಾನು ನಿನ್ನನ್ನ ಹೆಸ್ರಿಡಿದು ಕರೆದಿದ್ದೀನಿ. ನೀನು ನನ್ನವನು.   ನೀನು ನೀರನ್ನ ದಾಟಿಹೋಗುವಾಗ, ನಾನು ನಿನ್ನ ಜೊತೆ ಇರ್ತಿನಿ.+ ನೀನು ನದಿಗಳನ್ನ ದಾಟುವಾಗ ಅದ್ರ ನೀರು ನಿನ್ನನ್ನ ಮುಳುಗಿಸಲ್ಲ.+ ಬೆಂಕಿಯಲ್ಲಿ ನೀನು ನಡಿಯೋವಾಗ ಅದು ನಿನ್ನನ್ನ ದಹಿಸಲ್ಲ,ಅದ್ರ ಜ್ವಾಲೆ ನಿನ್ನನ್ನ ಸುಡಲ್ಲ.   ಯಾಕಂದ್ರೆ ನಾನು ನಿನ್ನ ದೇವರಾದ ಯೆಹೋವ,ಇಸ್ರಾಯೇಲ್ಯರ ಪವಿತ್ರ ದೇವರು, ನಿನ್ನ ರಕ್ಷಕ. ನಿನ್ನನ್ನ ಬಿಡಿಸೋಕೆ ನಾನು ಈಜಿಪ್ಟನ್ನ,ಇಥಿಯೋಪ್ಯವನ್ನ ಮತ್ತು ಸೆಬಾವನ್ನ ಬಿಡುಗಡೆ ಬೆಲೆಯಾಗಿ ಕೊಟ್ಟೆ.   ನೀನು ನನ್ನ ದೃಷ್ಟಿಯಲ್ಲಿ ತುಂಬ ಅಮೂಲ್ಯ,+ನಾನು ನಿನ್ನನ್ನ ಗೌರವಿಸಿದ್ದೀನಿ, ಪ್ರೀತಿಸಿದ್ದೀನಿ.+ ಹಾಗಾಗಿ ನಿನ್ನ ಜೀವ ಉಳಿಸೋಕೆನಾನು ಜನ್ರನ್ನ ಮತ್ತು ಜನಾಂಗಗಳನ್ನ ಕೊಡ್ತೀನಿ.   ಭಯಪಡಬೇಡ, ನಾನು ನಿನ್ನ ಜೊತೆ ಇದ್ದೀನಿ.+ ನಾನು ಪೂರ್ವದಿಂದ ನಿನ್ನ ಸಂತತಿಯನ್ನ ತರ್ತಿನಿ,ಪಶ್ಚಿಮದಿಂದ ನಿನ್ನನ್ನ ಒಟ್ಟುಗೂಡಿಸ್ತೀನಿ.+   ನಾನು ಉತ್ತರ ದಿಕ್ಕಿಗೆ ‘ಅವ್ರನ್ನ ಕೊಟ್ಟುಬಿಡು!’ ಅಂತೀನಿ.+ ದಕ್ಷಿಣ ದಿಕ್ಕಿಗೆ ‘ಅವ್ರನ್ನ ನಿನ್ನ ಹತ್ರ ಇಟ್ಕೊಬೇಡ. ದೂರದಿಂದ ನನ್ನ ಗಂಡುಮಕ್ಕಳನ್ನ, ಭೂಮಿಯ ಕಟ್ಟಕಡೆಯಿಂದ ನನ್ನ ಹೆಣ್ಣು ಮಕ್ಕಳನ್ನ ಕರ್ಕೊಂಡು ಬಾ.+   ನನ್ನ ಹೆಸ್ರಿಂದ ಕರೆಯಲಾಗೋ ಪ್ರತಿಯೊಬ್ಬರನ್ನ+ನನ್ನ ಮಹಿಮೆಗಾಗಿ ನಾನು ಸೃಷ್ಟಿಮಾಡಿದವ್ರನ್ನನಾನು ರೂಪಿಸಿದವ್ರನ್ನ ರಚಿಸಿದವ್ರನ್ನನ್ನೂ+ ಕರ್ಕೊಂಡು ಬಾ’ ಅಂತೀನಿ.   ಕಣ್ಣುಗಳಿದ್ರೂ ಕುರುಡರಾಗಿರೋ ಜನ್ರನ್ನ,ಕಿವಿಗಳಿದ್ರೂ ಕಿವುಡರಾಗಿರೋ ಜನ್ರನ್ನ+ ಕರ್ಕೊಂಡು ಬಾ.   ಜನಾಂಗಗಳೆಲ್ಲ ಒಂದು ಸ್ಥಳದಲ್ಲಿ ಸಭೆಸೇರಲಿ,ಜನಾಂಗಗಳ ಜನ್ರೆಲ್ಲ ಒಟ್ಟುಗೂಡಲಿ.+ ನಿಮ್ಮ ದೇವರುಗಳಲ್ಲಿ ಯಾರಾದ್ರೂ ಇದನ್ನ ಹೇಳೋಕಾಗುತ್ತಾ? ಅವ್ರಲ್ಲಿ ಯಾರಾದ್ರೂ ಮುಂದೆ ಆಗಲಿರೋ ವಿಷ್ಯಗಳ ಬಗ್ಗೆ ನಮಗೆ ತಿಳಿಸೋಕಾಗುತ್ತಾ?*+ ತಮ್ಮನ್ನ ತಾವು ಸರಿ ಅಂತ ಸಾಬೀತುಪಡಿಸೋಕೆ ಅವರು ತಮ್ಮ ಸಾಕ್ಷಿಗಳನ್ನ ಪ್ರಸ್ತುತಪಡಿಸಲಿ,ಇಲ್ಲವೇ ಇದನ್ನ ಕೇಳಿ ‘ಇದೇ ಸತ್ಯ!’ ಅಂತ ಒಪ್ಕೊಳ್ಳಲಿ.”+ 10  ಯೆಹೋವ ಹೀಗೆ ಹೇಳ್ತಿದ್ದಾನೆ “ನೀವು ನನ್ನ ಸಾಕ್ಷಿಗಳು.+ ಹೌದು, ನಾನು ಆರಿಸ್ಕೊಂಡ ನನ್ನ ಸೇವಕ.+ ನೀವು ನನ್ನನ್ನ ತಿಳ್ಕೊಂಡು, ನನ್ನ ಮೇಲೆ ನಂಬಿಕೆಯನ್ನಿಟ್ಟು,*ನಾನು ಎಂದಿಗೂ ಬದಲಾಗದವನು+ ಅಂತ ಅರ್ಥ ಮಾಡ್ಕೊಳ್ಳೋಕೆಆಗೋ ತರ ನಾನು ನಿಮ್ಮನ್ನ ಆರಿಸ್ಕೊಂಡೆ. ನನಗಿಂತ ಮುಂಚೆ ಯಾವ ದೇವರೂ ಇರಲಿಲ್ಲ. ನನ್ನ ನಂತ್ರನೂ ಯಾವ ದೇವರೂ ಇರಲ್ಲ.+ 11  ನಾನೇ, ನಾನೇ ಯೆಹೋವ.+ ನನ್ನ ಹೊರತು ಬೇರೆ ಯಾವ ರಕ್ಷಕನೂ ಇಲ್ಲ.”+ 12  ಯೆಹೋವ ಹೀಗೆ ಹೇಳ್ತಿದ್ದಾನೆ“ನಿಮ್ಮ ಮಧ್ಯ ಬೇರೆ ಯಾವ ದೇವರುಗಳೂ ಇಲ್ಲದಿದ್ದಾಗ+ನಾನು ನಿಮ್ಮ ಜೊತೆ ಮಾತಾಡಿದೆ, ನಿಮ್ಮನ್ನ ರಕ್ಷಿಸಿದೆ ಮತ್ತು ನಿಮಗೆ ಅರ್ಥ ಮಾಡಿಸಿದೆ. ಹಾಗಾಗಿ ನೀವು ನನ್ನ ಸಾಕ್ಷಿಗಳು ಮತ್ತು ನಾನು ನಿಮ್ಮ ದೇವರು.+ 13  ಅಷ್ಟೇ ಅಲ್ಲ ನಾನು ಯಾವತ್ತೂ ಬದಲಾಗದವನು.+ ನನ್ನ ಕೈಯಿಂದ ಯಾರೂ ಏನೂ ಕಿತ್ಕೊಳ್ಳೋಕೆ ಆಗಲ್ಲ.+ ನಾನೇನಾದ್ರೂ ಮಾಡೋವಾಗ ಯಾರು ತಾನೇ ನನ್ನನ್ನ ತಡಿಯೋಕಾಗುತ್ತೆ?”+ 14  ನಿಮ್ಮನ್ನ ಬಿಡಿಸುವವನೂ+ ಇಸ್ರಾಯೇಲ್ಯರ ಪವಿತ್ರ ದೇವರೂ+ ಆದ ಯೆಹೋವ ಹೀಗೆ ಹೇಳ್ತಿದ್ದಾನೆ“ನಿಮ್ಮ ಸಲುವಾಗಿ ನಾನು ಒಂದು ಸೈನ್ಯವನ್ನ ಬಾಬೆಲಿಗೆ ಕಳಿಸ್ತೀನಿ,ಅಲ್ಲಿನ ಬಾಗಿಲುಗಳ ಕಂಬಿಗಳನ್ನ ಮುರಿದುಹಾಕ್ತೀನಿ.+ ಕಸ್ದೀಯರು ತಮ್ಮ ಹಡಗುಗಳಲ್ಲಿ ದುಃಖದಿಂದ ಅಳ್ತಾರೆ.+ 15  ನಾನೇ ಯೆಹೋವ, ನಿಮ್ಮ ಪವಿತ್ರ ದೇವರು,+ಇಸ್ರಾಯೇಲನ್ನ ಸೃಷ್ಟಿಸಿದವನು,+ ನಿಮ್ಮ ರಾಜ.”+ 16  ಯೆಹೋವ ಸಮುದ್ರದ ಮಧ್ಯ ದಾರಿ ಮಾಡ್ತಾನೆ,ಪ್ರವಾಹದ ನೀರಿನ ಮಧ್ಯ ಮಾರ್ಗವನ್ನ ತೆರಿತಾನೆ,+ 17  ಯುದ್ಧ ರಥಗಳನ್ನ, ಕುದುರೆಗಳನ್ನ ನಡೆಸ್ತಾ,+ಬಲಿಷ್ಠ ವೀರ ಸೈನಿಕರ ಜೊತೆ ಇಡೀ ಸೈನ್ಯವನ್ನ ತಗೊಂಡು ಬರುವವನು ಆತನೇ ಆಗಿದ್ದಾನೆ. ಆತನು ಹೀಗೆ ಹೇಳ್ತಾನೆ“ಅವರು ಮಲಗ್ತಾರೆ, ಆದ್ರೆ ಮತ್ತೆ ಏಳಲ್ಲ.+ ಉರಿತಿರೋ ಬತ್ತಿಯನ್ನ ಆರಿಸೋ ತರ ಅವ್ರನ್ನ ಆರಿಸಿಬಿಡಲಾಗುತ್ತೆ.” 18  “ಹಿಂದಿನ ವಿಷ್ಯಗಳನ್ನ ನೆನಪಿಸ್ಕೊಳ್ಳಬೇಡಿ,ನಡೆದ ವಿಷ್ಯಗಳ ಬಗ್ಗೆನೇ ಚಿಂತಿಸ್ತಾ ಕೂರಬೇಡಿ. 19  ಇಗೋ! ನಾನೊಂದು ಹೊಸ ವಿಷ್ಯವನ್ನ ಮಾಡ್ತಿದ್ದೀನಿ,+ಈಗಾಗಲೇ ಅದು ಶುರುವಾಗಿದೆ. ನಿಮಗದು ಗೊತ್ತಾಗ್ತಿಲ್ವಾ? ನಾನು ಕಾಡಿನ ಮಧ್ಯದಲ್ಲಿ ಒಂದು ದಾರಿ ಮಾಡ್ತೀನಿ,+ಮರುಭೂಮಿಯ ಮಧ್ಯದಲ್ಲಿ ನದಿಗಳು ಹರಿಯೋ ತರ ಮಾಡ್ತೀನಿ.+ 20  ಕಾಡುಪ್ರಾಣಿಗಳು ನನ್ನನ್ನ ಮಹಿಮೆಪಡಿಸ್ತವೆ,ಗುಳ್ಳೆನರಿಗಳು ಮತ್ತು ಉಷ್ಟ್ರಪಕ್ಷಿಗಳು ನನ್ನನ್ನ ಘನತೆಗೇರಿಸ್ತವೆ,ಯಾಕಂದ್ರೆ ನಾನು ಆರಿಸ್ಕೊಂಡಿರೋ ನನ್ನ ಜನ್ರಿಗೆ ಕುಡಿಯೋಕೆ+ಬರಡುಭೂಮಿಯಲ್ಲಿ ನೀರನ್ನೂಮರುಭೂಮಿಯಲ್ಲಿ ನದಿಗಳನ್ನೂ ಕೊಡ್ತೀನಿ.+ 21  ಹೌದು, ನನ್ನ ಗುಣಗಾನ ಮಾಡೋಕಂತನಾನು ನನಗಾಗಿ ರಚಿಸಿರೋ ಜನ್ರಿಗೋಸ್ಕರ ಹೀಗೆ ಮಾಡ್ತೀನಿ.+ 22  ಆದ್ರೆ ಯಾಕೋಬನೇ, ನೀನು ನನಗೆ ಪ್ರಾರ್ಥಿಸಲಿಲ್ಲ.+ ಯಾಕಂದ್ರೆ ಇಸ್ರಾಯೇಲನೇ, ನೀನು ನನ್ನ ವಿಷ್ಯದಲ್ಲಿ ಬೇಸರ ಮಾಡ್ಕೊಂಡೆ.+ 23  ನೀನು ಸರ್ವಾಂಗಹೋಮಗಳನ್ನ ಅರ್ಪಿಸೋಕೆ ನನಗಾಗಿ ಕುರಿಗಳನ್ನ ತರಲಿಲ್ಲ,ನಿನ್ನ ಬಲಿಗಳಿಂದ ನನ್ನನ್ನ ಮಹಿಮೆಪಡಿಸಲಿಲ್ಲ. ನೀನು ನನಗಾಗಿ ಉಡುಗೊರೆ ತರಲೇಬೇಕಂತ,ಸಾಂಬ್ರಾಣಿ ಕೊಡಲೇಬೇಕಂತ ನಾನು ನಿನ್ನನ್ನ ಒತ್ತಾಯ ಮಾಡಲಿಲ್ಲ.+ 24  ನೀನು ನಿನ್ನ ಹಣದಲ್ಲಿ ನನಗಾಗಿ ಸುವಾಸನೆ ಬೀರೋ ಕೋಲನ್ನ ಖರೀದಿಸಲಿಲ್ಲ,ಬಲಿಯಲ್ಲಿ ಕೊಬ್ಬನ್ನ ಕೊಟ್ಟು ನನ್ನನ್ನ ತೃಪ್ತಿಪಡಿಸಲಿಲ್ಲ.+ ಬದಲಿಗೆ ನೀನು ನಿನ್ನ ಪಾಪಗಳ ಹೊರೆಯನ್ನ ನನ್ನ ಮೇಲೆ ಹೊರಿಸಿದೆ,ನಿನ್ನ ತಪ್ಪುಗಳಿಂದ ನನ್ನನ್ನ ಬೇಸರಗೊಳಿಸಿದೆ.+ 25  ನಾನೇ, ಹೌದು ನಾನೇ ನನ್ನ ಹೆಸ್ರಿಗಾಗಿ+ ನಿನ್ನ ತಪ್ಪುಗಳನ್ನ* ಅಳಿಸಿಹಾಕ್ತೀನಿ,+ನಿನ್ನ ಪಾಪಗಳನ್ನ ನೆನಪಿಸ್ಕೊಳ್ಳಲ್ಲ.+ 26  ನಮ್ಮ ಮಧ್ಯ ಇರೋ ವಿವಾದದ ಬಗ್ಗೆ ನಾವು ಮಾತಾಡೋಣ, ಅದನ್ನ ನನಗೆ ಜ್ಞಾಪಿಸು,ನೀನೇ ಸರಿ ಅಂತ ನಿರೂಪಿಸೋಕೆ ನಿನ್ನ ವಾದವಿವಾದಗಳನ್ನ ಮಂಡಿಸು. 27  ನಿನ್ನ ಮೊದಲ ಪೂರ್ವಜ ಪಾಪ ಮಾಡಿದ,ನಿನ್ನ ಪರವಾಗಿ ಮಾತಾಡುವವನು* ನನ್ನ ವಿರುದ್ಧ ದಂಗೆಯೆದ್ದ.+ 28  ಹಾಗಾಗಿ ನಾನು ಪವಿತ್ರ ಸ್ಥಳದ ಮುಖ್ಯಸ್ಥರನ್ನ ಅಪವಿತ್ರರನ್ನಾಗಿ ಮಾಡ್ತೀನಿ,ಯಾಕೋಬನನ್ನ ನಾಶನಕ್ಕೆ ಒಪ್ಪಿಸ್ತೀನಿ,ಇಸ್ರಾಯೇಲನ್ನ ನಿಂದೆಯ ಮಾತುಗಳಿಗೆ ಗುರಿಮಾಡ್ತೀನಿ.+

ಪಾದಟಿಪ್ಪಣಿ

ಬಹುಶಃ ಭವಿಷ್ಯದಲ್ಲಿ ನಡಿಯೋ ಮೊಟ್ಟಮೊದಲ ವಿಷ್ಯದ ಬಗ್ಗೆ ಹೇಳಲಾಗ್ತಿದೆ.
ಅಥವಾ “ಭರವಸೆ ಇಟ್ಟು.”
ಅಥವಾ “ದಂಗೆಕೋರ ಕೃತ್ಯಗಳನ್ನ.”
ಬಹುಶಃ, ಇಲ್ಲಿ ನಿಯಮ ಪುಸ್ತಕವನ್ನ ಬೋಧಿಸುವವರ ಬಗ್ಗೆ ಮಾತಾಡಲಾಗ್ತಿದೆ.