ಯೆಶಾಯ 23:1-18

  • ತೂರಿನ ವಿರುದ್ಧ ಬಂದ ಸಂದೇಶ (1-18)

23  ತೂರಿನ ವಿರುದ್ಧ ಬಂದ ಸಂದೇಶ+ತಾರ್ಷೀಷಿನ ಹಡಗುಗಳೇ, ಗೋಳಾಡಿ!+ ಬಂದರನ್ನ ನಾಶಮಾಡಲಾಗಿದೆ, ಅದನ್ನ ಪ್ರವೇಶಿಸೋಕಾಗಲ್ಲ. ಅವ್ರಿಗೆ ಈ ಸಂದೇಶ ಕಿತ್ತೀಮ್‌+ ದೇಶದಲ್ಲಿ ಬಯಲಾಯ್ತು.   ಕರಾವಳಿಯ ನಿವಾಸಿಗಳೇ ಮೌನವಾಗಿರಿ. ಸಮುದ್ರ ದಾಟಿ ವ್ಯಾಪಾರ ಮಾಡೋ ಸೀದೋನಿನ+ ವ್ಯಾಪಾರಿಗಳು ತಮ್ಮ ಸಂಪತ್ತಿಂದ ನಿಮ್ಮನ್ನ ತುಂಬಿಸಿಬಿಟ್ಟಿದ್ದಾರೆ.   ಶೀಹೋರಿನ*+ ಧಾನ್ಯ ಮತ್ತು ನೈಲ್‌ ನದಿಯ ಬೆಳೆ,ಅಂದ್ರೆ ತೂರಿನ ಆದಾಯಸಮುದ್ರಗಳ ಮಾರ್ಗವಾಗಿ ಹೋಗಿ ದೇಶಗಳಿಗೆ ಲಾಭ ತಂದಿದೆ.+   ಸಮುದ್ರದ ಭದ್ರಕೋಟೆ ಆಗಿರೋ ಸೀದೋನೇ, ನಿನಗೆ ನಾಚಿಕೆಯಾಗಲಿ,ಯಾಕಂದ್ರೆ ಸಮುದ್ರ ಹೀಗೆ ಹೇಳಿದೆ“ನನಗೆ ಹೆರಿಗೆ ನೋವು ಬರಲೂ ಇಲ್ಲ, ನಾನು ಹೆರಲೂ ಇಲ್ಲ,ನಾನು ಯುವಕರನ್ನಾಗಲಿ ಯುವತಿಯರನ್ನಾಗಲಿ* ಬೆಳೆಸಿ ದೊಡ್ಡವರನ್ನಾಗಿ ಮಾಡಲಿಲ್ಲ.”+   ಈಜಿಪ್ಟಿನ ಬಗ್ಗೆ ವರದಿ ಕೇಳಿಸ್ಕೊಂಡಾಗ ಸಂಕಟಪಟ್ಟ ಹಾಗೇ+ತೂರಿನ ಬಗ್ಗೆ ವರದಿ ಕೇಳಿಸ್ಕೊಂಡಾಗ್ಲೂ ಜನ ಸಂಕಟಪಡ್ತಾರೆ.+   ಸಮುದ್ರ ಮಾರ್ಗವಾಗಿ ತಾರ್ಷೀಷಿಗೆ ಹೋಗಿ! ಕರಾವಳಿಯ ನಿವಾಸಿಗಳೇ ಗೋಳಾಡಿ!   ಹಳೇ ಕಾಲದಿಂದ, ತನ್ನ ಆರಂಭದ ದಿನಗಳಿಂದ ಎಷ್ಟೋ ಉಲ್ಲಾಸಪಡ್ತಿದ್ದ ನಿಮ್ಮ ಪಟ್ಟಣ ಇದೇನಾ? ದೂರದೇಶಗಳಿಗೆ ಹೋಗಿ ವಾಸಿಸೋ ಹಾಗೆ ಅದ್ರ ನಿವಾಸಿಗಳ ಕಾಲುಗಳು ಅವ್ರನ್ನ ಬೇರೆ ದೇಶಗಳಿಗೆ ನಡೆಸ್ತಿದ್ವು.   ತೂರ್‌ ಇತರರಿಗೆ ಕಿರೀಟವನ್ನ ತೊಡಿಸ್ತಿತ್ತು,ಅದ್ರ ವ್ಯಾಪಾರಿಗಳು ಅಧಿಕಾರಿಗಳಾಗಿದ್ರು,ಅದ್ರ ವ್ಯಾಪಾರಿಗಳನ್ನ ಭೂಮಿಯಲ್ಲೆಲ್ಲ ಗೌರವಿಸಲಾಗ್ತಿತ್ತು,+ಅಂಥ ತೂರ್‌ ಪಟ್ಟಣಕ್ಕೆ ಹೀಗಾಗಬೇಕಂತ ನಿರ್ಣಯಿಸಿದವನು ಯಾರು?   ಅದನ್ನ ನಿರ್ಣಯಿಸಿದವನು ಸೈನ್ಯಗಳ ದೇವರಾದ ಯೆಹೋವನೇ. ಅದ್ರ ಗರ್ವವನ್ನ, ಸೌಂದರ್ಯವನ್ನ ಮಣ್ಣುಪಾಲು ಮಾಡೋಕೆ,ಭೂಮಿಯೆಲ್ಲೆಡೆ ಗೌರವಿಸಲಾಗೋ ಜನ್ರನ್ನ ಅವಮಾನಕ್ಕೆ ಗುರಿಮಾಡೋಕೆ ಆತನು ಹೀಗೆ ಮಾಡಿದನು.+ 10  ತಾರ್ಷೀಷಿನ ಜನ್ರೇ, ನೈಲ್‌ ನದಿ ತರ ನಿಮ್ಮ ದೇಶ ದಾಟಿ ಹೋಗಿ. ಇನ್ನು ಮುಂದೆ ಅದ್ರಲ್ಲಿ ಹಡಗುಗಳನ್ನ ನಿಲ್ಲಿಸೋಕೆ ಯಾವುದೇ ಸ್ಥಳ ಇಲ್ಲ.*+ 11  ಆತನು ಸಮುದ್ರದ ಮೇಲೆ ತನ್ನ ಕೈ ಚಾಚಿದ್ದಾನೆ,ಸಾಮ್ರಾಜ್ಯಗಳನ್ನ ನಡುಗಿಸಿದ್ದಾನೆ. ಫೊಯಿನಿಕೆಯ ಭದ್ರಕೋಟೆಗಳನ್ನ ಪೂರ್ತಿ ನಾಶಮಾಡೋಕೆ ಯೆಹೋವ ಆಜ್ಞೆ ಕೊಟ್ಟಿದ್ದಾನೆ.+ 12  ಆತನು ಹೀಗೆ ಹೇಳ್ತಿದ್ದಾನೆ “ದಬ್ಬಾಳಿಕೆಗೆ ಒಳಗಾದ ಸೀದೋನಿನ ಜನರೇ,*+ಇನ್ನು ಯಾವತ್ತೂ ನೀವು ಉಲ್ಲಾಸಿಸಲ್ಲ. ಎದ್ದೇಳಿ, ಸಮುದ್ರದ ದಾರಿ ಹಿಡಿದು ಕಿತ್ತೀಮಿಗೆ ಓಡಿಹೋಗಿ.+ ಆದ್ರೆ ಅಲ್ಲೂ ನಿಮಗೆ ನೆಮ್ಮದಿ ಸಿಗಲ್ಲ.” 13  ಕಸ್ದೀಯರ ದೇಶ ನೋಡಿ!+ ಅದನ್ನ* ಮರುಭೂಮಿಯ ಪ್ರಾಣಿಗಳು ತಿರುಗಾಡೋ ಸ್ಥಳವನ್ನಾಗಿ ಮಾಡಿದವರು ಅಶ್ಶೂರಿನ+ ಜನ್ರಲ್ಲ,ಕಸ್ದೀಯ ಜನ್ರೇ. ಅವರು ದಾಳಿ ಮಾಡೋಕೆ ಗೋಪುರಗಳನ್ನ ಕಟ್ಟಿದ್ರು,ಅದ್ರ ಭದ್ರಕೋಟೆಗಳನ್ನ ಬೀಳಿಸಿ,+ಅದನ್ನ ಹಾಳು ತಿಪ್ಪೆಯಾಗಿ ಮಾಡಿದ್ರು. 14  ತಾರ್ಷೀಷಿನ ಹಡಗುಗಳೇ, ಗೋಳಾಡಿ,ಯಾಕಂದ್ರೆ ನಿಮ್ಮ ಭದ್ರಕೋಟೆ ನಾಶವಾಗಿದೆ.+ 15  ಆ ದಿನ ತೂರನ್ನ 70 ವರ್ಷಗಳ ತನಕ, ಅಂದ್ರೆ ಒಬ್ಬ ರಾಜ ಬದುಕುವಷ್ಟು ಕಾಲದ ತನಕ ಮರೆಯಲಾಗುತ್ತೆ.+ ಆ 70 ವರ್ಷಗಳ ಕೊನೆಯಲ್ಲಿ ತೂರ್‌ ಈ ಗೀತೆಯಲ್ಲಿ ಹೇಳಲಾಗಿರೋ ವೇಶ್ಯೆ ತರ ಇರುತ್ತೆ: 16  “ಜನ ಮರೆತಿರೋ ವೇಶ್ಯೆಯೇ, ತಂತಿವಾದ್ಯ ತಗೊಂಡು ಪಟ್ಟಣದಲ್ಲೆಲ್ಲ ತಿರುಗಾಡು. ನಿನ್ನ ತಂತಿವಾದ್ಯವನ್ನ ಚೆನ್ನಾಗಿ ಬಾರಿಸು,ಅವರು ನಿನ್ನನ್ನ ನೆನಪಿಸ್ಕೊಳ್ಳೋ ಹಾಗೆ ತುಂಬ ಹಾಡುಗಳನ್ನ ಹಾಡು.” 17  ಯೆಹೋವ 70 ವರ್ಷಗಳ ಕೊನೆಯಲ್ಲಿ ತೂರಿನ ಕಡೆ ತನ್ನ ಗಮನ ಹರಿಸ್ತಾನೆ. ಅದು ಮತ್ತೆ ವೇಶ್ಯಾವಾಟಿಕೆ ಮಾಡ್ತಾ ಹಣ ಸಂಪಾದಿಸುತ್ತೆ. ಭೂಮಿಯಲ್ಲಿರೋ ಎಲ್ಲ ಸಾಮ್ರಾಜ್ಯಗಳ ಜೊತೆ ವ್ಯಭಿಚಾರ ಮಾಡುತ್ತೆ. 18  ಆದ್ರೆ ಅದಕ್ಕೆ ಬಂದ ಹಣ ಮತ್ತು ಲಾಭ ಯೆಹೋವನಿಗೆ ಪವಿತ್ರವಾಗಿರುತ್ತೆ. ಅದು ಅವುಗಳನ್ನ ಶೇಖರಿಸೋದಾಗಲಿ ಎತ್ತಿಡೋದಾಗಲಿ ಮಾಡಲ್ಲ. ಯಾಕಂದ್ರೆ ಯೆಹೋವನ ಜನ ಆ ಹಣವನ್ನ ಬಳಸ್ತಾರೆ. ಅವರು ಅದ್ರಿಂದ ಹೊಟ್ಟೆ ತುಂಬ ತಿಂತಾರೆ, ವೈಭವಯುತ ಬಟ್ಟೆಗಳನ್ನ ಹಾಕ್ತಾರೆ.+

ಪಾದಟಿಪ್ಪಣಿ

ಅದು, ನೈಲ್‌ ನದಿಯ ಒಂದು ವಿಭಾಗ.
ಅಕ್ಷ. “ಕನ್ಯೆ.”
ಬಹುಶಃ, “ಬಂದರು ಇಲ್ಲ.”
ಅಕ್ಷ. “ಕನ್ಯೆ ತರ ಇರೋ ಸೀದೋನಿನ ಮಗಳೇ.”
ಇಲ್ಲಿ ಬಹುಶಃ ತೂರನ್ನ ಸೂಚಿಸ್ತಿರಬಹುದು.