ಯೆಶಾಯ 18:1-7
-
ಇಥಿಯೋಪ್ಯದ ವಿರುದ್ಧ ಸಂದೇಶ (1-7)
18 ಗಿರ್ರನೆ ತಿರುಗೋ ಕೀಟಗಳ ದೇಶದ ಗತಿಯನ್ನ ಏನು ಹೇಳಲಿ!
ಇಥಿಯೋಪ್ಯದ ನದಿಗಳ ಹತ್ರ ಇರೋ ಪ್ರಾಂತ್ಯದ ಗತಿಯನ್ನ ಏನು ಹೇಳಲಿ!+
2 ಅದು ತನ್ನ ಪ್ರತಿನಿಧಿಗಳನ್ನ ಸಮುದ್ರದ ಮಾರ್ಗವಾಗಿಪಪೈರಸ್ ದೋಣಿಗಳಲ್ಲಿ ನೀರಿನ ಮೂಲಕ ಆ ಕಡೆಗೆ ಕಳಿಸಿತು. ಆಗ ಅವ್ರಿಗೆ ಅದು ಹೀಗೆ ಹೇಳಿತು:
“ಚುರುಕಾಗಿರೋ ಸಂದೇಶವಾಹಕರೇ,ಎತ್ರವಾಗಿರೋ, ಮೃದು ಚರ್ಮ ಹೊಂದಿರೋ,ಎಲ್ಲ ಜನಾಂಗಗಳು ಹೆದರೋ,+ಬಲಿಷ್ಠವಾಗಿರೋ, ಜಯಶಾಲಿಯಾಗಿರೋ ಜನಾಂಗದ ಹತ್ರ ಹೋಗಿ,ನದಿಗಳು ಹೊಡ್ಕೊಂಡು ಹೋಗಿರೋ ದೇಶಕ್ಕೆ ಹೋಗಿ.”
3 ದೇಶದ ಎಲ್ಲ ನಿವಾಸಿಗಳೇ, ಭೂಮಿಯಲ್ಲಿ ವಾಸಿಸುವವರೇ,ನೀವು ನೋಡಲಿರೋ ವಿಷ್ಯ ಬೆಟ್ಟಗಳ ಮೇಲೆ ಎತ್ತಿ ನಿಲ್ಲಿಸೋ ಧ್ವಜದ ಹಾಗಿರುತ್ತೆ,*ನೀವು ಕೇಳಿಸ್ಕೊಳ್ಳಲಿರೋ ಶಬ್ದ ಕೊಂಬನ್ನ ಊದುವಾಗ ಬರೋ ಶಬ್ದದ ತರ ಇರುತ್ತೆ.
4 ಯಾಕಂದ್ರೆ ಯೆಹೋವ ನನಗೆ ಹೀಗೆ ಹೇಳಿದ್ದಾನೆ“ಸೂರ್ಯನ ಬೆಳಕಿನ ಜೊತೆ ಜಳಜಳಿಸೋ ಬಿಸಿ ತರ,ಬೇಸಿಗೆ ಕಾಲದ ಕೊಯ್ಲಿನ ಸಮ್ಯದಲ್ಲಿ ಮೋಡದಿಂದ ಬೀಳೋ ಇಬ್ಬನಿ ತರ,ನಾನು ನನ್ನ ಸ್ಥಳವನ್ನ* ನಿರಾತಂಕವಾಗಿ ನೋಡ್ತಾ ಇರ್ತಿನಿ.
5 ಹೂ ಅರಳುತ್ತೆ, ಅರಳಿದ ಹೂ ಮಾಗಿದ ದ್ರಾಕ್ಷಿಯಾಗುತ್ತೆ,ಆದ್ರೆ ಅದ್ರ ಕೊಯ್ಲಿನ ಸಮಯಕ್ಕೂ ಮುಂಚೆಕುಡುಗೋಲುಗಳಿಂದ ಚಿಗುರನ್ನ ಕತ್ತರಿಸಲಾಗುತ್ತೆ,ಬಳ್ಳಿಯ ಕೊಂಬೆಗಳನ್ನ ಕತ್ತರಿಸಿ ಬಿಸಾಡಲಾಗುತ್ತೆ.
6 ಬೆಟ್ಟದ ಹಸಿದಿರೋ ಪಕ್ಷಿಗಳಿಗಾಗಿ,ಭೂಮಿಯ ಕ್ರೂರ ಪ್ರಾಣಿಗಳಿಗಾಗಿ ಅವುಗಳನ್ನ ಬಿಟ್ಟುಬಿಡಲಾಗುತ್ತೆ.
ಬೆಟ್ಟದ ಪಕ್ಷಿಗಳು ಅವುಗಳನ್ನ ಬೇಸಿಗೆಯಿಡೀ ತಿನ್ನುತ್ತವೆ.
ಭೂಮಿಯ ಕ್ರೂರ ಪ್ರಾಣಿಗಳು ಕೊಯ್ಲಿನ ಕಾಲದಲ್ಲೆಲ್ಲ ಅವುಗಳನ್ನ ತಿಂದು ಹೊಟ್ಟೆ ತುಂಬಿಸ್ಕೊಳ್ತವೆ.
7 ಆ ಸಮಯದಲ್ಲಿ ಸೈನ್ಯಗಳ ದೇವರಾದ ಯೆಹೋವನ ಹತ್ರ ಒಂದು ಉಡುಗೊರೆಯನ್ನ ತರಲಾಗುತ್ತೆ,ಎತ್ರವಾಗಿರೋ, ಮೃದು ಚರ್ಮ ಹೊಂದಿರೋ,ಎಲ್ಲ ಜನಾಂಗಗಳು ಹೆದರೋ,ಬಲಿಷ್ಠವಾಗಿರೋ, ಜಯಶಾಲಿಯಾಗಿರೋ ಜನಾಂಗದಿಂದ,ನದಿಗಳು ಹೊಡ್ಕೊಂಡು ಹೋಗಿರೋ ದೇಶದಿಂದ,ಸೈನ್ಯಗಳ ದೇವರಾದ ಯೆಹೋವನ ಹೆಸ್ರನ್ನ ಹೊತ್ತಿರೋ ಚೀಯೋನ್ ಬೆಟ್ಟಕ್ಕೆ+ ಆ ಉಡುಗೊರೆಯನ್ನ ತರಲಾಗುತ್ತೆ.”

