ಯೆಶಾಯ 15:1-9
-
ಮೋವಾಬಿನ ವಿರುದ್ಧ ಸಂದೇಶ (1-9)
15 ಮೋವಾಬಿನ ವಿರುದ್ಧ ಬಂದ ಸಂದೇಶ+ಮೋವಾಬಿನ ಆರ್+ ಪಟ್ಟಣ ನಿಶ್ಶಬ್ದವಾಗುತ್ತೆ,ಯಾಕಂದ್ರೆ ಅದನ್ನ ರಾತ್ರೋರಾತ್ರಿ ನಾಶ ಮಾಡಲಾಗುತ್ತೆ.
ಮೋವಾಬಿನ ಕೀರ್+ ಪಟ್ಟಣ ನಿಶ್ಶಬ್ದವಾಗುತ್ತೆ,ಯಾಕಂದ್ರೆ ಅದನ್ನ ರಾತ್ರೋರಾತ್ರಿ ನಾಶ ಮಾಡಲಾಗುತ್ತೆ.
2 ಜನ ಅಳುವುದಕ್ಕಾಗಿ ಮೇಲಿನ ಆಲಯಕ್ಕೆ* ಮತ್ತು ದೀಬೋನಿಗೆ+ ಹೋಗ್ತಾರೆ,ಎತ್ರ ಸ್ಥಳಗಳಿಗೆ ಹೋಗಿ ಬಿಕ್ಕಿಬಿಕ್ಕಿ ಅಳ್ತಾರೆ.
ನೆಬೋಗಾಗಿ+ ಮತ್ತು ಮೇದೆಬಕ್ಕಾಗಿ+ ಮೋವಾಬ್ ಗೋಳಾಡುತ್ತೆ.
ಪ್ರತಿಯೊಬ್ಬರ ತಲೆಯನ್ನ ಬೋಳಿಸಲಾಗುತ್ತೆ,+ ಪ್ರತಿಯೊಬ್ಬರ ಗಡ್ಡವನ್ನ ಕತ್ತರಿಸಲಾಗುತ್ತೆ.+
3 ಅದ್ರ ಬೀದಿಗಳಲ್ಲಿ ಗೋಣಿ ಸುತ್ಕೊಂಡಿರೋ ಜನ ಕಾಣಿಸ್ತಾರೆ,ತಮ್ಮ ಮನೆಯ ಚಾವಣಿಯಲ್ಲಿ ಮತ್ತು ಪಟ್ಟಣದ ಮುಖ್ಯಸ್ಥಳಗಳಲ್ಲಿ* ಅವರು ಗೋಳಾಡ್ತಾರೆ,ಅವರು ಅಳ್ತಾ ಅಳ್ತಾ ನೆಲಕ್ಕೆ ಕುಸಿದು ಬೀಳ್ತಾರೆ.+
4 ಹೆಷ್ಬೋನ್, ಎಲೆಯಾಲೆ+ ಗಟ್ಟಿಯಾಗಿ ಅಳ್ತವೆ,ಅವುಗಳ ಸ್ವರ ದೂರದ ಯಹಜ್+ ತನಕ ಕೇಳಿಸುತ್ತೆ.
ಹಾಗಾಗಿ ಮೋವಾಬಿನ ಸೈನಿಕರು ಕಿರುಚ್ತಾ ಇರ್ತಾರೆ.
ಮೋವಾಬ್ ಭಯದಿಂದ ನಡುಗುತ್ತೆ.
5 ಮೋವಾಬನ್ನ ನೋಡಿ ನನ್ನ ಹೃದಯ ಕೊರಗ್ತಿದೆ.
ಅದ್ರಿಂದ ತಲೆತಪ್ಪಿಸ್ಕೊಂಡು ಹೋಗಿರುವವರು ಚೋಗರ್+ ತನಕ ಎಗ್ಲತ್-ಶೆಲಿಶೀಯ+ ತನಕ ಓಡಿಹೋಗ್ತಾರೆ.
ಅವರು ಲೂಹೀತನ್ನ ಹತ್ತಿ ಹೋಗುವಾಗ ಕಣ್ಣೀರು ಹಾಕ್ತಾ ಹೋಗ್ತಾರೆ,ನಡೆದ ಮಹಾದುರಂತಕ್ಕಾಗಿ ಹೊರೊನಯಿಮಿಗೆ ಹೋಗೋ ಮಾರ್ಗದಲ್ಲಿ ಗಟ್ಟಿಯಾಗಿ ಅಳ್ತಾರೆ.+
6 ಯಾಕಂದ್ರೆ ನಿಮ್ರೀಮಿನ ನೀರೆಲ್ಲ ಒಣಗಿಹೋಗುತ್ತೆ,ಹಸಿಹುಲ್ಲು ಬಾಡಿಹೋಗುತ್ತೆ,ಹುಲ್ಲೇ ಇಲ್ಲದಂತಾಗಿ ಹಸಿರು ಕಣ್ಮರೆಯಾಗುತ್ತೆ.
7 ಹಾಗಾಗಿ ಜನ ಉಳಿದಿರೋ ತಮ್ಮ ವಸ್ತುಗಳನ್ನ ಮತ್ತು ಆಸ್ತಿಯನ್ನ ಹೊತ್ಕೊಂಡು,ನೀರವಂಜಿ* ಮರಗಳ ಕಣಿವೆ ದಾಟಿಹೋಗ್ತಾರೆ.
8 ಅವರ ಗೋಳು ಮೋವಾಬಿನ ಪ್ರಾಂತ್ಯದಲ್ಲೆಲ್ಲ ಪ್ರತಿಧ್ವನಿಸುತ್ತೆ,+ಆ ರೋದನೆ ಎಗ್ಲಯಿಮಿನ ತನಕ ಬೆಯೇರ್-ಏಲೀಮಿನ ತನಕ ತಲುಪುತ್ತೆ.
9 ದೀಮೋನಿನ ನದಿಗಳು ರಕ್ತದಿಂದ ತುಂಬಿಹೋಗ್ತವೆ,ನಾನು ದೀಮೋನಿಗೆ ಮಾಡಬೇಕಾಗಿರೋದು ಇನ್ನೂ ಇದೆಮೋವಾಬಲ್ಲಿ ಬದುಕುಳಿಯೋ ಜನ್ರ ಹತ್ರ,ದೇಶದಲ್ಲಿ ಉಳ್ಕೊಳ್ಳುವವರ ಹತ್ರ ನಾನು ಒಂದು ಸಿಂಹನ ಕಳಿಸ್ತೀನಿ.+

