ಯಾಜಕಕಾಂಡ 16:1-34

  • ಪ್ರಾಯಶ್ಚಿತ್ತ ದಿನ (1-34)

16  ಆರೋನನ ಇಬ್ರು ಮಕ್ಕಳು ನಿಯಮಕ್ಕೆ ವಿರುದ್ಧವಾಗಿ ಯೆಹೋವನ ಮುಂದೆ ಸತ್ತುಹೋದ ಮೇಲೆ+ ಯೆಹೋವ ಮೋಶೆ ಜೊತೆ ಮಾತಾಡಿದನು.  ಯೆಹೋವ ಮೋಶೆಗೆ ಹೀಗಂದನು: “ನಿನ್ನ ಅಣ್ಣ ಆರೋನ ನೆನಸಿದಾಗೆಲ್ಲ ಪರದೆ ದಾಟಿ+ ಅತಿ ಪವಿತ್ರ ಸ್ಥಳದೊಳಗೆ ಮಂಜೂಷದ* ಮುಂದೆ ಬರಬಾರದು+ ಅಂತ ಅವನಿಗೆ ಹೇಳು. ಬಂದ್ರೆ ಸತ್ತುಹೋಗ್ತಾನೆ.+ ಯಾಕಂದ್ರೆ ನಾನು ಮಂಜೂಷದ ಮುಚ್ಚಳದ ಮೇಲೆ ಮೋಡದಲ್ಲಿ+ ಕಾಣಿಸ್ಕೊಳ್ತೀನಿ.+  ಆರೋನ ಅತಿ ಪವಿತ್ರ ಸ್ಥಳದ ಒಳಗೆ ಬರೋ ಮುಂಚೆ ಪಾಪಪರಿಹಾರಕ ಬಲಿಗಾಗಿ ಒಂದು ಹೋರಿಯನ್ನ,+ ಸರ್ವಾಂಗಹೋಮ ಬಲಿಗಾಗಿ ಒಂದು ಟಗರನ್ನ ತರಬೇಕು.+  ಅವನು ಅತಿ ಪವಿತ್ರ ಸ್ಥಳದ ಒಳಗೆ ಬರೋ ಮುಂಚೆ ಸ್ನಾನ ಮಾಡಿ+ ನಾರಿನ ಪವಿತ್ರವಾದ ಉದ್ದ ಅಂಗಿಯನ್ನ,+ ಗುಪ್ತಾಂಗಗಳು ಕಾಣಿಸದ ಹಾಗೆ ನಾರಿನ ಚಡ್ಡಿ*+ ಹಾಕೊಳ್ಳಬೇಕು. ನಾರಿನ ಸೊಂಟಪಟ್ಟಿಯನ್ನ ಸುತ್ಕೊಂಡು,+ ನಾರಿನ ವಿಶೇಷ ಪೇಟವನ್ನ+ ತಲೆಗೆ ಸುತ್ಕೊಳ್ಳಬೇಕು. ಅವು ಪವಿತ್ರ ಬಟ್ಟೆಗಳು.+  ಆರೋನ ಎಲ್ಲ ಇಸ್ರಾಯೇಲ್ಯರಿಂದ ಪಾಪಪರಿಹಾರಕ ಬಲಿಗಾಗಿ ಎರಡು ಆಡುಮರಿಗಳನ್ನ, ಸರ್ವಾಂಗಹೋಮ ಬಲಿಗಾಗಿ ಒಂದು ಟಗರನ್ನ ತಗೊಳ್ಳಬೇಕು.+  ಆರೋನ ತಾನು ತಂದ ಹೋರಿಯನ್ನ ತನ್ನ ಪಾಪಗಳ ಪರಿಹಾರಕ್ಕಾಗಿ ಬಲಿ ಅರ್ಪಿಸಬೇಕು. ತನಗಾಗಿ,+ ತನ್ನ ಮನೆಯವರಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.  ಆಮೇಲೆ ಅವನು ಆ ಎರಡು ಆಡುಗಳನ್ನ ಯೆಹೋವನ ಮುಂದೆ, ದೇವದರ್ಶನ ಡೇರೆಯ ಬಾಗಿಲ ಹತ್ರ ತಂದು ನಿಲ್ಲಿಸಬೇಕು.  ಒಂದು ಯೆಹೋವನಿಗಾಗಿ, ಇನ್ನೊಂದು ಜನ್ರ ಪಾಪಗಳನ್ನ ಹೊತ್ಕೊಂಡು ಹೋಗೋಕೆ.* ಅವುಗಳಲ್ಲಿ ಯಾವುದನ್ನ ಯಾವುದಕ್ಕಾಗಿ ಉಪಯೋಗಿಸಬೇಕು ಅಂತ ಆರೋನ ಚೀಟು ಹಾಕಿ ತೀರ್ಮಾನಿಸಬೇಕು.  ಚೀಟು ಹಾಕಿದಾಗ+ ಯೆಹೋವನಿಗೆ ಬಂದ ಆಡನ್ನ ಆರೋನ ಪಾಪಪರಿಹಾರಕ ಬಲಿಗಾಗಿ ಅರ್ಪಿಸಬೇಕು. 10  ಪ್ರಾಯಶ್ಚಿತ್ತ ಮಾಡೋಕೆ ಇನ್ನೊಂದು* ಆಡನ್ನ ಯೆಹೋವನ ಮುಂದೆ ಜೀವಂತವಾಗಿ ತಂದು ನಿಲ್ಲಿಸಬೇಕು. ಜನ್ರ ಪಾಪಗಳನ್ನ ಹೊತ್ಕೊಂಡು ಹೋಗೋಕೆ* ಅದನ್ನ ಕಾಡಿಗೆ ಕಳಿಸಿಬಿಡಬೇಕು.+ 11  ಆರೋನ ತನಗೋಸ್ಕರ ಪಾಪಪರಿಹಾರಕ ಬಲಿಗಾಗಿ ಅರ್ಪಿಸೋ ಹೋರಿಯನ್ನ ಯಜ್ಞವೇದಿ ಹತ್ರ ತರಬೇಕು. ಅವನು ತನ್ನ,+ ತನ್ನ ಕುಟುಂಬದವರ ಪಾಪಗಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಮೇಲೆ ಅವನು ಆ ಹೋರಿನ ಕಡಿಬೇಕು. 12  ಆರೋನ ಧೂಪ ಹಾಕೋ ಪಾತ್ರೆ ತಗೊಂಡು+ ಅದ್ರಲ್ಲಿ ಯೆಹೋವನ ಮುಂದಿರೋ ಯಜ್ಞವೇದಿಯಿಂದ ಕೆಂಡ ತುಂಬಿಸಬೇಕು.+ ಜೊತೆಗೆ ಎರಡು ಹಿಡಿ ತುಂಬ ಪರಿಮಳ ಇರೋ ಧೂಪದ ಪುಡಿ+ ತಗೊಂಡು ಅತಿ ಪವಿತ್ರ ಸ್ಥಳದ ಒಳಗೆ ಬರಬೇಕು.+ 13  ಅಲ್ಲಿ ಅವನು ಯೆಹೋವನ ಮುಂದೆ+ ಕೆಂಡಗಳ ಮೇಲೆ ಧೂಪ ಹಾಕಬೇಕು. ಆಗ ಸಾಕ್ಷಿ ಮಂಜೂಷದ+ ಮೇಲಿರೋ ಮುಚ್ಚಳವನ್ನ ಧೂಪದ ಹೊಗೆ ಮುಚ್ಕೊಳ್ಳುತ್ತೆ.+ ಆಗ ಅವನು ಸಾಯಲ್ಲ. 14  ಅವನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನ+ ತನ್ನ ಬೆರಳಿಂದ ತಗೊಂಡು ಮಂಜೂಷದ ಮುಚ್ಚಳದ ಮುಂದೆ ಪೂರ್ವದ ಕಡೆಗೆ ಚಿಮಿಕಿಸಬೇಕು. ಸ್ವಲ್ಪ ರಕ್ತವನ್ನ ಮಂಜೂಷದ ಮುಚ್ಚಳದ ಮುಂದೆ ಬೆರಳಿಂದ ಏಳು ಸಲ ಚಿಮಿಕಿಸಬೇಕು.+ 15  ಆಮೇಲೆ ಆರೋನ ಜನ್ರ ಪಾಪಗಳ ಪರಿಹಾರಕ್ಕಾಗಿ+ ಇರೋ ಆಡನ್ನ ಕಡಿಬೇಕು. ಅದ್ರ ರಕ್ತವನ್ನ ಅತಿ ಪವಿತ್ರ ಸ್ಥಳದ ಒಳಗೆ ತಂದು+ ಹೋರಿಯ ರಕ್ತವನ್ನ ಚಿಮಿಕಿಸಿದ ಹಾಗೆ+ ಮಂಜೂಷದ ಮುಚ್ಚಳದ ಕಡೆ ಮತ್ತು ಅದ್ರ ಮುಂದೆ ಚಿಮಿಕಿಸಬೇಕು. 16  ಆರೋನ ಅತಿ ಪವಿತ್ರ ಸ್ಥಳಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಇಸ್ರಾಯೇಲ್ಯರ ಅಶುದ್ಧ ಕೆಲಸಗಳಿಂದ, ಅಪರಾಧ ಪಾಪಗಳಿಂದ+ ಆ ಸ್ಥಳ ಅಪವಿತ್ರ ಆಗದ ಹಾಗೆ ಮಾಡಬೇಕು. ಇಸ್ರಾಯೇಲ್ಯರ ಮಧ್ಯ ಇರೋ ದೇವದರ್ಶನ ಡೇರೆ ಅವರ ಅಶುದ್ಧ ಕೆಲಸಗಳಿಂದ ಅಪವಿತ್ರ ಆಗದ ಹಾಗೆ ಆ ಡೇರೆಗಾಗಿ ಅವನು ಪ್ರಾಯಶ್ಚಿತ್ತ ಮಾಡಬೇಕು. 17  ಅವನು ಪ್ರಾಯಶ್ಚಿತ್ತ ಮಾಡೋಕೆ ಅತಿ ಪವಿತ್ರ ಸ್ಥಳದ ಒಳಗೆ ಹೋಗಿ ಹೊರಗೆ ಬರೋ ತನಕ ಯಾರೂ ದೇವದರ್ಶನ ಡೇರೆಯಲ್ಲಿ ಇರಬಾರದು. ಅವನು ತನಗಾಗಿ, ತನ್ನ ಕುಟುಂಬದವರಿಗಾಗಿ,+ ಎಲ್ಲ ಇಸ್ರಾಯೇಲ್‌ ಜನರಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.+ 18  ಆರೋನ ಹೊರಗೆ ಬಂದ ಮೇಲೆ ಯೆಹೋವನ ಮುಂದಿರೋ ಯಜ್ಞವೇದಿ+ ಹತ್ರ ಹೋಗಿ ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಅವನು ಹೋರಿ ರಕ್ತದಲ್ಲಿ ಸ್ವಲ್ಪ, ಆಡಿನ ರಕ್ತದಲ್ಲಿ ಸ್ವಲ್ಪ ತಗೊಂಡು ಯಜ್ಞವೇದಿಯ ಎಲ್ಲ ಕೊಂಬುಗಳಿಗೆ ಹಚ್ಚಬೇಕು. 19  ಅಷ್ಟೇ ಅಲ್ಲ ಯಜ್ಞವೇದಿಯ ಮೇಲೆನೂ ಸ್ವಲ್ಪ ರಕ್ತವನ್ನ ಬೆರಳಿಂದ ಏಳು ಸಲ ಚಿಮಿಕಿಸಬೇಕು. ಇಸ್ರಾಯೇಲ್ಯರಿಂದ ಅಶುದ್ಧವಾಗಿದ್ದ ಯಜ್ಞವೇದಿಯನ್ನ ಶುದ್ಧ ಮಾಡಬೇಕು, ಪವಿತ್ರ ಮಾಡಬೇಕು. 20  ಅವನು ಅತಿ ಪವಿತ್ರ ಸ್ಥಳಕ್ಕಾಗಿ, ದೇವದರ್ಶನ ಡೇರೆಗಾಗಿ, ಯಜ್ಞವೇದಿಗಾಗಿ ಪ್ರಾಯಶ್ಚಿತ್ತ ಮಾಡಿದ+ ಮೇಲೆ ಜೀವ ಇರೋ ಆಡನ್ನ ತರಬೇಕು.+ 21  ಆರೋನ ತನ್ನ ಎರಡು ಕೈಯನ್ನ ಆ ಆಡಿನ ತಲೆ ಮೇಲಿಟ್ಟು ಇಸ್ರಾಯೇಲ್ಯರ ಎಲ್ಲ ತಪ್ಪು, ಅಪರಾಧ, ಪಾಪಗಳನ್ನ ಅರಿಕೆ ಮಾಡಬೇಕು. ಇದು ಆಡಿನ ತಲೆ ಮೇಲೆ ಆ ಎಲ್ಲ ಪಾಪಗಳನ್ನ ಹಾಕಿದ ಹಾಗೆ ಇರುತ್ತೆ.+ ಆಮೇಲೆ ಆ ಆಡನ್ನ ಕಾಡಿಗೆ ಕಳಿಸಿಬಿಡಬೇಕು. ಅದನ್ನ ಕಳಿಸೋಕೆ ಒಬ್ಬನನ್ನ ನೇಮಿಸಿರಬೇಕು. 22  ಅವನು ಆ ಆಡನ್ನ ಕಾಡಿಗೆ ಕಳಿಸಿಬಿಡ್ತಾನೆ.+ ಅದು ಅವ್ರ ಎಲ್ಲ ತಪ್ಪನ್ನ ತನ್ನ ಮೇಲೆ ಹೊತ್ಕೊಂಡು+ ಬಯಲು ಪ್ರದೇಶಕ್ಕೆ+ ಹೋಗುತ್ತೆ. 23  ಆಮೇಲೆ ಆರೋನ ದೇವದರ್ಶನ ಡೇರೆ ಒಳಗೆ ಹೋಗಬೇಕು. ಅವನು ಅತಿ ಪವಿತ್ರ ಸ್ಥಳದ ಒಳಗೆ ಹೋಗುವಾಗ ಹಾಕೊಂಡಿದ್ದ ನಾರಿನ ಬಟ್ಟೆಗಳನ್ನ ತೆಗೆದು ಅಲ್ಲೇ ಕೆಳಗೆ ಇಡಬೇಕು. 24  ಅವನು ಪವಿತ್ರವಾದ ಒಂದು ಜಾಗದಲ್ಲಿ* ಸ್ನಾನ ಮಾಡಿ+ ಪುರೋಹಿತ ಬಟ್ಟೆಗಳನ್ನ ಹಾಕೊಳ್ಳಬೇಕು.+ ಆಮೇಲೆ ಯಜ್ಞವೇದಿ ಹತ್ರ ಬಂದು ಸರ್ವಾಂಗಹೋಮ ಬಲಿಗಾಗಿ ತಾನು ತಂದ ಪ್ರಾಣಿನ,+ ಜನ್ರು ತಂದಿದ್ದ ಪ್ರಾಣಿನ+ ಅರ್ಪಿಸಬೇಕು. ತನ್ನ ಮತ್ತು ಜನ್ರ ಪಾಪಗಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.+ 25  ಪಾಪಪರಿಹಾರಕ ಬಲಿಯ ಪ್ರಾಣಿಯ ಕೊಬ್ಬನ್ನ ಯಜ್ಞವೇದಿ ಮೇಲೆ ಸುಡಬೇಕು. ಅದ್ರ ಹೊಗೆ ಮೇಲೆ ಹೋಗಬೇಕು. 26  ಜನ್ರ ಪಾಪಗಳನ್ನ ಹೊತ್ಕೊಂಡು ಹೋದ ಆಡನ್ನ+ ಕಾಡಿಗೆ ಕಳಿಸಿಬಿಟ್ಟ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗೆದು ಸ್ನಾನ ಮಾಡ್ಕೊಂಡ ಮೇಲೆ ಪಾಳೆಯದ ಒಳಗೆ ಬರಬಹುದು. 27  ಪ್ರಾಯಶ್ಚಿತ್ತ ಮಾಡೋಕೆ ಯಾವುದ್ರ ರಕ್ತವನ್ನ ಅತಿ ಪವಿತ್ರ ಸ್ಥಳದ ಒಳಗೆ ತಗೊಂಡು ಹೋಗಿದ್ರೋ ಆ ಪಾಪಪರಿಹಾರಕ ಬಲಿಯ ಹೋರಿಯನ್ನ, ಪಾಪಪರಿಹಾರಕ ಬಲಿಯ ಆಡನ್ನ, ಅವುಗಳ ಚರ್ಮ, ಮಾಂಸ, ಸಗಣಿಯನ್ನ ಪಾಳೆಯದ ಹೊರಗೆ ತಗೊಂಡು ಹೋಗಿ ಬೆಂಕಿಯಲ್ಲಿ ಸುಟ್ಟುಬಿಡಬೇಕು.+ 28  ಅದನ್ನ ಸುಡೋ ವ್ಯಕ್ತಿ ತನ್ನ ಬಟ್ಟೆ ಒಗೆದು ಸ್ನಾನ ಮಾಡಬೇಕು. ಆಮೇಲೆ ಅವನು ಪಾಳೆಯದ ಒಳಗೆ ಬರಬಹುದು. 29  ನೀವು ಯಾವಾಗ್ಲೂ ಪಾಲಿಸಬೇಕಾದ ನಿಯಮ ಯಾವುದಂದ್ರೆ, ನೀವೆಲ್ಲ ಏಳನೇ ತಿಂಗಳ ಹತ್ತನೇ ದಿನದಲ್ಲಿ ನಿಮ್ಮ ಪಾಪಗಳಿಗಾಗಿ ದುಃಖ ಪಡಬೇಕು,* ಇಸ್ರಾಯೇಲ್ಯನಾಗಲಿ ನಿಮ್ಮ ಮಧ್ಯ ವಾಸ ಮಾಡೋ ವಿದೇಶಿಯಾಗಲಿ ಯಾವುದೇ ಕೆಲಸ ಮಾಡಬಾರದು.+ 30  ಯಾಕಂದ್ರೆ ಆ ದಿನ ಪುರೋಹಿತ ಪ್ರಾಯಶ್ಚಿತ್ತ ಮಾಡ್ತಾನೆ.+ ಆಗ ನಿಮ್ಮ ಎಲ್ಲ ಪಾಪಗಳಿಗೆ ಕ್ಷಮೆ ಸಿಗುತ್ತೆ. ಯೆಹೋವನ ದೃಷ್ಟಿಯಲ್ಲಿ ನೀವು ಶುದ್ಧ ಆಗ್ತೀರ.+ 31  ಅವತ್ತು ನಿಮಗೆ ಸಬ್ಬತ್‌ ದಿನ ಆಗಿರೋದ್ರಿಂದ ನೀವು ಪೂರ್ತಿ ವಿಶ್ರಾಂತಿ ಪಡ್ಕೊಬೇಕು, ನಿಮ್ಮ ಪಾಪಗಳಿಗಾಗಿ ದುಃಖ ಪಡಬೇಕು.+ ಈ ನಿಯಮವನ್ನ ಯಾವಾಗ್ಲೂ ಪಾಲಿಸಬೇಕು. 32  ಮಹಾ ಪುರೋಹಿತ ಸ್ಥಾನಕ್ಕೆ+ ತಂದೆ ನಂತ್ರ ಅವನ ಮಕ್ಕಳಲ್ಲಿ ಯಾರಿಗೆ+ ಅಭಿಷೇಕ ಆಗಿರುತ್ತೋ,+ ಯಾರ ನೇಮಕ ಆಗಿರುತ್ತೋ ಅವನು ಪ್ರಾಯಶ್ಚಿತ್ತ ಮಾಡಬೇಕು. ಅವನು ನಾರಿನ ಬಟ್ಟೆಗಳನ್ನ+ ಅಂದ್ರೆ ಪವಿತ್ರ ಬಟ್ಟೆಗಳನ್ನ+ ಹಾಕೊಳ್ಳಬೇಕು. 33  ಅವನು ಅತಿ ಪವಿತ್ರ ಸ್ಥಳಕ್ಕಾಗಿ,+ ದೇವದರ್ಶನ ಡೇರೆಗಾಗಿ,+ ಯಜ್ಞವೇದಿಗಾಗಿ+ ಪ್ರಾಯಶ್ಚಿತ್ತ ಮಾಡಬೇಕು. ಅವನು ಪುರೋಹಿತರಿಗಾಗಿ, ಎಲ್ಲ ಇಸ್ರಾಯೇಲ್ಯರಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.+ 34  ಇಸ್ರಾಯೇಲ್ಯರ ಎಲ್ಲ ಪಾಪಗಳಿಗಾಗಿ ವರ್ಷಕ್ಕೆ ಒಮ್ಮೆ ಪ್ರಾಯಶ್ಚಿತ್ತ ಮಾಡಬೇಕು.+ ಈ ನಿಯಮವನ್ನ ಯಾವಾಗ್ಲೂ ಪಾಲಿಸಬೇಕು.”+ ಮೋಶೆಗೆ ಯೆಹೋವ ಹೇಳಿದ ಹಾಗೆನೇ ಆರೋನ ಮಾಡಿದ.

ಪಾದಟಿಪ್ಪಣಿ

ಅಕ್ಷ. “ಮಂಜೂಷದ ಮುಚ್ಚಳದ.”
ಅಥವಾ “ಒಳಉಡುಪು.”
ಅಕ್ಷ. “ಅಜಾಜೇಲಗಾಗಿ.” ಪದವಿವರಣೆಯಲ್ಲಿ “ಅಜಾಜೇಲ” ನೋಡಿ.
ಅಕ್ಷ. “ಅಜಾಜೇಲಗಾಗಿರೋ.”
ಅಕ್ಷ. “ಅಜಾಜೇಲಗಾಗಿ.” ಪದವಿವರಣೆಯಲ್ಲಿ “ಅಜಾಜೇಲ” ನೋಡಿ.
ಬಹುಶಃ ಪವಿತ್ರ ಡೇರೆಯ ಅಂಗಳದಲ್ಲಿ.
ಇದು ಸಾಮಾನ್ಯವಾಗಿ, ಉಪವಾಸ ಇರೋದನ್ನ, ಬೇರೆ ತುಂಬ ವಿಷ್ಯ ಮಾಡದೇ ಇರೋದನ್ನ ಸೂಚಿಸುತ್ತೆ.