ಯಾಜಕಕಾಂಡ 12:1-8

  • ಹೆರಿಗೆ ಆದ್ಮೇಲೆ ಶುದ್ಧೀಕರಣ (1-8)

12  ಯೆಹೋವ ಮೋಶೆಗೆ ಇನ್ನೂ ಹೇಳಿದ್ದೇನಂದ್ರೆ  “ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಒಬ್ಬ ಸ್ತ್ರೀಗೆ ಗಂಡು ಮಗು ಹುಟ್ಟಿದ್ರೆ ಅವಳು ಏಳು ದಿನ ಅಶುದ್ಧ. ತಿಂಗಳ ಮುಟ್ಟಿಂದ ಅಶುದ್ಧ ಆಗಿರೋ ತರಾನೇ ಈ ಸಮಯದಲ್ಲೂ ಅಶುದ್ಧ.+  ಎಂಟನೇ ದಿನದಲ್ಲಿ ಆ ಮಗುಗೆ ಸುನ್ನತಿ* ಮಾಡಿಸಬೇಕು.+  ಅವಳಿಗೆ ರಕ್ತಸ್ರಾವ ಆಗೋದ್ರಿಂದ ಶುದ್ಧ ಆಗೋಕೆ ಇನ್ನೂ 33 ದಿನ ಹಿಡಿಯುತ್ತೆ. ಅವಳು ಶುದ್ಧ ಆಗೋ ತನಕ ಅವಳು ಪವಿತ್ರವಾದ ಯಾವುದನ್ನೂ ಮುಟ್ಟಬಾರದು, ಆರಾಧನಾ ಸ್ಥಳದ ಒಳಗೆ ಬರಬಾರದು.  ಅವಳಿಗೆ ಹೆಣ್ಣು ಮಗು ಹುಟ್ಟಿದ್ರೆ 14 ದಿನ ಅಶುದ್ಧ. ತಿಂಗಳ ಮುಟ್ಟಿಂದ ಅಶುದ್ಧ ಆಗಿರೋ ತರಾನೇ ಈ ಸಮಯದಲ್ಲೂ ಅಶುದ್ಧ. ಅವಳಿಗೆ ರಕ್ತಸ್ರಾವ ಆಗೋದ್ರಿಂದ ಅವಳು ಶುದ್ಧ ಆಗೋಕೆ ಇನ್ನೂ 66 ದಿನ ಹಿಡಿಯುತ್ತೆ.  ಅವಳಿಗೆ ಗಂಡು ಮಗು ಹುಟ್ಟಿದ್ರೂ ಹೆಣ್ಣು ಮಗು ಹುಟ್ಟಿದ್ರೂ ಅವಳು ಅಶುದ್ಧ ಆಗಿದ್ದ ದಿನಗಳು ಮುಗಿದ ಮೇಲೆ ಸರ್ವಾಂಗಹೋಮ ಬಲಿಗಾಗಿ ಒಂದು ವರ್ಷದೊಳಗಿನ ಟಗರು,+ ಪಾಪಪರಿಹಾರಕ ಬಲಿಗಾಗಿ ಒಂದು ಪಾರಿವಾಳ ಮರಿ ಅಥವಾ ಒಂದು ಕಾಡುಪಾರಿವಾಳ ತರಬೇಕು. ಅವುಗಳನ್ನ ದೇವದರ್ಶನ ಡೇರೆಯ ಬಾಗಿಲ ಹತ್ರ ತಂದು ಪುರೋಹಿತನಿಗೆ ಕೊಡಬೇಕು.  ಪುರೋಹಿತ ಅದನ್ನ ಯೆಹೋವನ ಮುಂದೆ ಅರ್ಪಿಸಬೇಕು, ಅವಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಇದ್ರಿಂದ ರಕ್ತಸ್ರಾವದಿಂದಾದ ಅಶುದ್ಧತೆ ಹೋಗಿ ಅವಳು ಶುದ್ಧ ಆಗ್ತಾಳೆ. ಸ್ತ್ರೀಗೆ ಒಂದು ಮಗು ಹುಟ್ಟಿದಾಗ ಪಾಲಿಸಬೇಕಾದ ನಿಯಮ ಇದೇ.  ಅವಳಿಗೆ ಟಗರು ಕೊಡೋಕೆ ಆಗದಿದ್ರೆ ಎರಡು ಕಾಡುಪಾರಿವಾಳ ಅಥವಾ ಎರಡು ಪಾರಿವಾಳ ಮರಿ ಕೊಡಬೇಕು.+ ಅವುಗಳಲ್ಲಿ ಒಂದನ್ನ ಸರ್ವಾಂಗಹೋಮ ಬಲಿಗಾಗಿ, ಇನ್ನೊಂದನ್ನ ಪಾಪಪರಿಹಾರಕ ಬಲಿಗಾಗಿ ಕೊಡಬೇಕು. ಪುರೋಹಿತ ಅವಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವಳು ಶುದ್ಧ ಆಗ್ತಾಳೆ.’”

ಪಾದಟಿಪ್ಪಣಿ