ಮೀಕ 7:1-20

  • ಇಸ್ರಾಯೇಲ್ಯರ ನೈತಿಕ ಅವನತಿ (1-6)

    • ಮನೆಯವರೇ ಶತ್ರುಗಳು (6)

  • “ತಾಳ್ಮೆಯಿಂದ ಕಾಯ್ತೀನಿ” (7)

  • ದೇವಜನರು ನೀತಿವಂತರು ಅಂತ ಸಾಬೀತಾದದ್ದು (8-13)

  • ಮೀಕ ಪ್ರಾರ್ಥಿಸಿದ್ದು ಮತ್ತು ದೇವರನ್ನ ಸ್ತುತಿಸಿದ್ದು (14-20)

    • ಯೆಹೋವನ ಉತ್ತರ (15-17)

    • ‘ಯೆಹೋವನಂಥ ದೇವರು ಬೇರೆ ಯಾರೂ ಇಲ್ಲ’ (18)

7  ಬೇಸಿಗೆಯ ಹಣ್ಣುಗಳನ್ನ* ಕೂಡಿಸಿದ ಮೇಲೆಮೊದ್ಲು ಮಾಗಿದ ಅಂಜೂರ ತಿನ್ನೋಕೆ ಆಸೆಪಟ್ರೂ ಸಿಗಲ್ಲ,ದ್ರಾಕ್ಷಿ ಕೊಯ್ಲು ಆದ್ಮೇಲೆ ಹಕ್ಕಲಾಯೋದು* ಮುಗಿದ ಮೇಲೆದ್ರಾಕ್ಷಿ ತಿನ್ನೋಕೆ ಇಷ್ಟಪಟ್ರೂ ಒಂದೇ ಒಂದು ಗೊಂಚಲು ಸಹ ಸಿಗಲ್ಲ,ನನ್ನ ಸ್ಥಿತಿ ಇದೇ ತರ ಆಗಿದೆ, ನನ್ನ ಗತಿ ಏನಂತ ಹೇಳಲಿ!   ನಿಷ್ಠಾವಂತರು ಭೂಮಿ ಮೇಲಿಂದ ಅಳಿದುಹೋಗಿದ್ದಾರೆ,*ನ್ಯಾಯವಾಗಿ ನಡೆಯುವವರು ಒಬ್ರೂ ಇಲ್ಲ,+ಎಲ್ರೂ ರಕ್ತಸುರಿಸೋಕೆ ಹೊಂಚುಹಾಕ್ತಾರೆ,+ಪ್ರತಿಯೊಬ್ಬನೂ ತನ್ನ ಸ್ವಂತ ಸಹೋದರನನ್ನ ಬಲೆಬೀಸಿ ಬೇಟೆ ಆಡ್ತಾನೆ.   ಅವರು ಕೆಟ್ಟದ್ದನ್ನ ಮಾಡೋದ್ರಲ್ಲಿ ತುಂಬ ನಿಪುಣರು,+ಅಧಿಕಾರಿಗಳು ಬೇರೆಯವ್ರನ್ನ ಒತ್ತಾಯ ಮಾಡ್ತಾರೆ,ನ್ಯಾಯಾಧೀಶರು ಲಂಚ ಕೇಳ್ತಾರೆ,+ಗಣ್ಯ ವ್ಯಕ್ತಿಗಳು ತಮ್ಮ ಮನದಾಸೆಗಳನ್ನ ತಿಳಿಸ್ತಾರೆ,+ಅವ್ರೆಲ್ಲ ಒಟ್ಟು ಸೇರಿ ತಮ್ಮ ಕೆಲಸ ಸಾಧಿಸ್ತಾರೆ.   ಅವ್ರಲ್ಲಿರೋ ಒಳ್ಳೆಯವನು ಮುಳ್ಳುಗಳ ತರ ಇದ್ದಾನೆ,ಅವ್ರಲ್ಲಿ ತುಂಬ ನೀತಿವಂತನು ಮುಳ್ಳುಬೇಲಿಗಿಂತ ಕಡೆ ಆಗಿದ್ದಾನೆ,ನಿನ್ನ ಕಾವಲುಗಾರರು ಹೇಳಿದ ದಿನ ಬರ್ತಾ ಇದೆ,ನಿನಗೆ ತೀರ್ಪಾಗೋ ದಿನ ಬರ್ತಾ ಇದೆ.+ ಆಗ ಅವರು ಭಯಬೀಳ್ತಾರೆ.+   ನಿನ್ನ ಜೊತೆಗಾರನಲ್ಲಿ ನಂಬಿಕೆ ಇಡಬೇಡ,ಆಪ್ತ ಸ್ನೇಹಿತನ ಮೇಲೆ ಭರವಸೆ ಇಡಬೇಡ.+ ನಿನ್ನ ಅಪ್ಪುಗೆಯಲ್ಲಿ ಮಲಗುವವಳಿಗೂ ಗುಟ್ಟು ಹೇಳಬೇಡ.   ಯಾಕಂದ್ರೆ ಮಗ ತಂದೆಯನ್ನ ತಿರಸ್ಕರಿಸ್ತಾನೆ,ಮಗಳು ತಾಯಿಗೆ ತಿರುಗಿಬೀಳ್ತಾಳೆ,+ಸೊಸೆ ಅತ್ತೆಗೆ ತಿರುಗಿಬೀಳ್ತಾಳೆ,+ಒಬ್ಬನಿಗೆ ಅವನ ಮನೆಯವ್ರೇ ಶತ್ರುಗಳಾಗಿ ಇರ್ತಾರೆ.+   ಆದ್ರೆ ನಾನಂತೂ ಯೆಹೋವನಿಗಾಗಿ ಕಾಯ್ತಾ ಇರ್ತಿನಿ,+ನನ್ನ ರಕ್ಷಕನಾದ ದೇವರಿಗಾಗಿ ತಾಳ್ಮೆಯಿಂದ ಕಾಯ್ತೀನಿ.+ ನನ್ನ ದೇವರು ನನಗೆ ಕಿವಿಗೊಡ್ತಾನೆ.+   ನನ್ನ ಶತ್ರುವೇ,* ನನ್ನನ್ನ ನೋಡಿ ಹಿಗ್ಗಬೇಡ,ನಾನು ಬಿದ್ದಿದ್ರೂ ಎದ್ದೇಳ್ತೀನಿ,ನಾನು ಕತ್ತಲಲ್ಲಿ ವಾಸಿಸೋದಾದ್ರೂ ಯೆಹೋವ ನನ್ನ ಬೆಳಕಾಗಿ ಇರ್ತಾನೆ.   ನಾನು ಯೆಹೋವನ ವಿರುದ್ಧ ಪಾಪಮಾಡಿದ್ರಿಂದ+ಆತನ ಕ್ರೋಧವನ್ನ ತಾಳ್ಕೊಳ್ತೀನಿ. ಮೊಕದ್ದಮೆಯಲ್ಲಿ ಆತನು ನನ್ನ ಪರ ವಾದಿಸಿ ನನಗೆ ನ್ಯಾಯ ದೊರಕಿಸೋ ತನಕ ನಾನು ತಾಳ್ಕೊಳ್ತೀನಿ. ಆತನು ನನ್ನನ್ನ ಬೆಳಕಿಗೆ ಕರ್ಕೊಂಡು ಬರ್ತಾನೆ,ನಾನು ಆತನ ನೀತಿಯನ್ನ ನೋಡ್ತೀನಿ. 10  ಇದನ್ನ ನನ್ನ ಶತ್ರು ಸಹ ನೋಡ್ತಾಳೆ,“ನಿನ್ನ ದೇವರಾದ ಯೆಹೋವ ಎಲ್ಲಿ?”+ ಅಂತ ಕೇಳಿದಆ ಶತ್ರುವನ್ನ ಅವಮಾನ ಕವಿಯುತ್ತೆ. ನಾನು ಅವಳ ನಾಶ ನೋಡ್ತೀನಿ. ಅವಳನ್ನ ಬೀದಿಗಳ ಮಣ್ಣಿನ ತರ ತುಳಿಯಲಾಗುತ್ತೆ. 11  ಆ ದಿನ ನಿನ್ನ ಕಲ್ಲಿನ ಗೋಡೆಗಳನ್ನ ಕಟ್ಟಲಾಗುತ್ತೆ,ಆ ದಿನ ನಿನ್ನ ಗಡಿಯನ್ನ ವಿಸ್ತರಿಸಲಾಗುತ್ತೆ. 12  ಆ ದಿನ ಅಶ್ಶೂರದಿಂದ್ಲೂ ಈಜಿಪ್ಟಿನ ಪಟ್ಟಣಗಳಿಂದ್ಲೂಈಜಿಪ್ಟಿಂದ ಯೂಫ್ರೆಟಿಸ್‌ ನದಿ ತನಕ ಇರೋ ಪ್ರದೇಶಗಳಿಂದ್ಲೂಸಮುದ್ರದಿಂದ ಸಮುದ್ರದ ತನಕ, ಬೆಟ್ಟದಿಂದ ಬೆಟ್ಟದ ತನಕ ಇರೋಎಲ್ಲ ಪ್ರದೇಶಗಳಿಂದಲೂ ಅವರು ನಿನ್ನ ಹತ್ರ ಬರ್ತಾರೆ.+ 13  ಆ ದೇಶದ ಜನ್ರಿಂದಾಗಿ,ಅವ್ರ ಕೆಟ್ಟ ಕೆಲಸದಿಂದಾಗಿ ದೇಶ ನಿರ್ಜನವಾಗುತ್ತೆ. 14  ದೇವರೇ, ನಿನ್ನ ಜನ್ರನ್ನ ಮೇಯಿಸು,ಕಾಡಲ್ಲಿ ಪ್ರತ್ಯೇಕವಾಗಿ, ಹಣ್ಣಿನ ತೋಟದ ಮಧ್ಯದಲ್ಲಿ ವಾಸಿಸ್ತಿದ್ದ ಇವ್ರನ್ನ,ನಿನ್ನ ಆಸ್ತಿಯಾಗಿರೋ ಈ ಹಿಂಡನ್ನ ನಿನ್ನ ಕೋಲಿಂದ ಮೇಯಿಸು.+ ಹಿಂದಿನ ಕಾಲದ ತರಾನೇ ಅವರು ಬಾಷಾನಲ್ಲೂ ಗಿಲ್ಯಾದಲ್ಲೂ ಮೇಯಲಿ.+ 15  “ನೀವು ಈಜಿಪ್ಟ್‌ ದೇಶದಿಂದ ಹೊರಗೆ ಬಂದ ಕಾಲದಲ್ಲಿ ನಾನು ತೋರಿಸಿದ ಹಾಗೆಈಗ ನಿಮಗೆ ಆಶ್ಚರ್ಯಕರ ಸಂಗತಿಗಳನ್ನ ತೋರಿಸ್ತೀನಿ.+ 16  ಜನಾಂಗಗಳು ಎಷ್ಟೇ ಬಲಿಷ್ಠವಾಗಿದ್ರೂ ಈ ಆಶ್ಚರ್ಯಕರ ಸಂಗತಿಗಳನ್ನ ನೋಡಿ ತಲೆತಗ್ಗಿಸ್ತಾರೆ.+ ತಮ್ಮ ಕೈಯಿಂದ ಬಾಯಿ ಮುಚ್ಕೊಳ್ತಾರೆ,ಅವರ ಕಿವಿ ಕಿವುಡಾಗುತ್ತೆ. 17  ಅವರು ಹಾವಿನ ಹಾಗೆ ಧೂಳನ್ನ ನೆಕ್ತಾರೆ,+ಅವರು ಸರೀಸೃಪಗಳ ತರ ತಮ್ಮ ಭದ್ರ ಕೋಟೆಗಳಿಂದ ನಡುಗ್ತಾ ಹೊರಗೆ ಬರ್ತಾರೆ. ಅವರು ನಮ್ಮ ದೇವರಾದ ಯೆಹೋವನ ಹತ್ರ ಗಾಬರಿಪಡ್ತಾ ಬರ್ತಾರೆ. ಅವರು ನಿನಗೆ ಭಯಪಡ್ತಾರೆ.”+ 18  ನಿನ್ನಂಥ ದೇವರು ಬೇರೆ ಯಾರೂ ಇಲ್ಲ. ನಿನ್ನ ಆಸ್ತಿಯಾಗಿರೋ ಜನ್ರಲ್ಲಿ ಉಳಿದಿರುವವ್ರ+ ತಪ್ಪುಗಳನ್ನ ನೀನು ಕ್ಷಮಿಸ್ತೀಯ,ಅವ್ರ ಅಪರಾಧಗಳನ್ನ ನೆನಪಿಡಲ್ಲ,*+ ನೀನು ನಿರಂತರಕ್ಕೂ ಕೋಪದಿಂದ ಇರಲ್ಲ. ಯಾಕಂದ್ರೆ ಶಾಶ್ವತ ಪ್ರೀತಿ ತೋರಿಸೋದ್ರಲ್ಲಿ ನೀನು ತುಂಬ ಸಂತೋಷಪಡ್ತೀಯ,+ 19  ನೀನು ಮತ್ತೆ ನಮಗೆ ಕರುಣೆ ತೋರಿಸ್ತೀಯ,+ ನಮ್ಮ ತಪ್ಪುಗಳನ್ನ ತುಳಿದುಹಾಕ್ತೀಯ.* ನೀನು ನಮ್ಮ ಎಲ್ಲ ಪಾಪಗಳನ್ನ ಸಮುದ್ರದಾಳಕ್ಕೆ ಬಿಸಾಡಿಬಿಡ್ತೀಯ.+ 20  ನೀನು ಹಿಂದಿನ ಕಾಲದಲ್ಲಿದ್ದ ನಮ್ಮ ಪೂರ್ವಜರಿಗೆ ಆಣೆ ಮಾಡಿದ ಹಾಗೇಯಾಕೋಬನಿಗೆ ನಂಬಿಗಸ್ತಿಕೆ ತೋರಿಸ್ತೀಯ,ಅಬ್ರಹಾಮನಿಗೆ ಶಾಶ್ವತ ಪ್ರೀತಿ ತೋರಿಸ್ತೀಯ.+

ಪಾದಟಿಪ್ಪಣಿ

ಮುಖ್ಯವಾಗಿ ಅಂಜೂರ ಹಣ್ಣುಗಳು. ಖರ್ಜೂರ ಕೂಡ ಆಗಿರಬಹುದು.
ಅಥವಾ “ಕಣ್ಮರೆ ಆಗಿದ್ದಾರೆ.”
ಹೀಬ್ರುವಲ್ಲಿ “ಶತ್ರು” ಅನ್ನೋದಕ್ಕಿರೋ ಪದ ಸ್ತ್ರೀಲಿಂಗ ಪದವಾಗಿದೆ.
ಅಕ್ಷ. “ಲಕ್ಷ್ಯ ಕೊಡದೆ ಮುಂದೆ ಹೋಗುವವನು.”
ಅಥವಾ “ಜಯಿಸ್ತೀಯ; ಮಟ್ಟಹಾಕ್ತೀಯ.”