ಮೀಕ 6:1-16

  • ಇಸ್ರಾಯೇಲ್‌ ವಿರುದ್ಧ ದೇವರ ಮೊಕದ್ದಮೆ (1-5)

  • ಯೆಹೋವ ಏನು ಇಷ್ಟಪಡ್ತಾನೆ? (6-8)

    • ನ್ಯಾಯ, ನಿಷ್ಠೆ, ವಿನಮ್ರತೆ (8)

  • ಇಸ್ರಾಯೇಲ್ಯರ ಅಪರಾಧ ಮತ್ತು ಶಿಕ್ಷೆ (9-16)

6  ಯೆಹೋವ ಹೇಳೋದನ್ನ ದಯವಿಟ್ಟು ಕೇಳಿ. ಎದ್ದು ಬೆಟ್ಟಗಳ ಮುಂದೆ ನಿಮ್ಮ ಮೊಕದ್ದಮೆ ತನ್ನಿ,ಬೆಟ್ಟಗಳಿಗೆ ನಿಮ್ಮ ಧ್ವನಿ ಕೇಳಲಿ.+   ಬೆಟ್ಟಗಳೇ, ಭೂಮಿಯ ಸ್ಥಿರವಾದ ಅಡಿಪಾಯವೇ,ಯೆಹೋವನ ಮೊಕದ್ದಮೆ ಕೇಳಿ,+ಯಾಕಂದ್ರೆ ಯೆಹೋವ ತನ್ನ ಜನ್ರ ವಿರುದ್ಧ ಮೊಕದ್ದಮೆ ಹೂಡಿದ್ದಾನೆ,ಆತನು ಇಸ್ರಾಯೇಲ್ಯರ ವಿರುದ್ಧ ಹೀಗೆ ವಾದಿಸ್ತಾನೆ:+   “ನನ್ನ ಜನ್ರೇ, ನಾನು ನಿಮಗೆ ಅಂಥದ್ದೇನು ಮಾಡಿದೆ? ಯಾವ ವಿಷ್ಯದಿಂದ ನಿಮಗೆ ಬೇಜಾರಾಯ್ತು?+ ನನ್ನ ವಿರುದ್ಧ ಸಾಕ್ಷಿ ಇದ್ರೆ ಹೇಳಿ.   ನಾನು ನಿಮ್ಮನ್ನ ಈಜಿಪ್ಟ್‌* ದೇಶದಿಂದ ಹೊರಗೆ ಕರ್ಕೊಂಡು ಬಂದೆ,+ಅಲ್ಲಿ ಗುಲಾಮರಾಗಿದ್ದ ನಿಮ್ಮನ್ನ ಬಿಡಿಸ್ಕೊಂಡು ಬಂದೆ,+ನಿಮ್ಮ ಮುಂದೆ ಹೋಗೋಕೆ ಮೋಶೆ, ಆರೋನ ಮತ್ತು ಮಿರ್ಯಾಮ್‌ ಅನ್ನು ನಾನು ಕಳಿಸಿದೆ.+   ನನ್ನ ಜನ್ರೇ, ಮೋವಾಬಿನ ರಾಜ ಬಾಲಾಕ ಎಂಥ ಸಂಚು ಮಾಡಿದ+ ಅಂತ ದಯವಿಟ್ಟು ನೆನಪು ಮಾಡ್ಕೊಳ್ಳಿ,ಬೆಯೋರನ ಮಗ ಬಿಳಾಮ ಅವನಿಗೆ ಕೊಟ್ಟ ಉತ್ತರವನ್ನ ನೆನಪಿಸ್ಕೊಳ್ಳಿ,+ಶಿಟ್ಟೀಮಿಂದ+ ಗಿಲ್ಗಾಲಿನ+ ತನಕ ಏನಾಯ್ತು ಅಂತ ಯೋಚಿಸಿ ನೋಡಿ,ಯೆಹೋವ ಮಾಡೋದೆಲ್ಲ ನೀತಿಯುತ ಅಂತ ಆಗ ನಿಮಗೆ ಗೊತ್ತಾಗುತ್ತೆ.”   ನಾನು ಏನು ತಗೊಂಡು ಯೆಹೋವನ ಮುಂದೆ ಬರಲಿ? ಎತ್ರವಾದ ಸ್ಥಳದಲ್ಲಿರೋ ದೇವರ ಮುಂದೆ ಅಡ್ಡಬೀಳೋಕೆ ಏನು ತಗೊಂಡು ಬರಲಿ? ಆತನಿಗೆ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ ಪ್ರಾಣಿಗಳನ್ನ ತಗೊಂಡು ಬರ್ಲಾ? ಒಂದು ವರ್ಷದ ಕರುಗಳನ್ನ ತಗೊಂಡು ಬರ್ಲಾ?+   ನಾನು ಸಾವಿರಾರು ಟಗರುಗಳನ್ನ ಅರ್ಪಿಸಿದ್ರೆ ಯೆಹೋವನಿಗೆ ಸಂತೋಷ ಆಗುತ್ತಾ? ಸಾವಿರಗಟ್ಟಲೆ ನದಿಗಳಷ್ಟು ಎಣ್ಣೆ ತಂದ್ಕೊಟ್ರೆ ಆತನಿಗೆ ಇಷ್ಟ ಆಗುತ್ತಾ?+ ನಾನು ಮಾಡಿದ ಅಪರಾಧಗಳಿಗಾಗಿ* ನನ್ನ ಮೊದಲ್ನೇ ಮಗನನ್ನ ಅರ್ಪಿಸ್ಲಾ? ನಾನು ಮಾಡಿದ ಪಾಪಕ್ಕಾಗಿ ನನ್ನ ಸ್ವಂತ ಮಗುವನ್ನ ಕೊಡ್ಲಾ?+   ಮನುಷ್ಯನೇ, ಒಳ್ಳೇದು ಯಾವುದಂತ ಆತನು ನಿನಗೆ ಹೇಳಿದ್ದಾನೆ. ಯೆಹೋವ ನಿನ್ನಿಂದ ಏನು ಇಷ್ಟಪಡ್ತಾನೆ?* ನೀನು ನ್ಯಾಯದಿಂದ ನಡಿಬೇಕು,+ ನಿಷ್ಠೆ ತೋರಿಸ್ತಾ ಇರಬೇಕು,*+ನಿನ್ನ ದೇವರ ಜೊತೆ ವಿನಮ್ರನಾಗಿ ನಡಿಬೇಕು,+ ಇಷ್ಟನ್ನೇ ಅಲ್ವಾ?+   ಯೆಹೋವನ ಸ್ವರ ಪಟ್ಟಣವನ್ನ ಕೂಗಿ ಕರೆಯುತ್ತೆ,ವಿವೇಕ* ಇರುವವರು ನಿನ್ನ ಹೆಸ್ರಿಗೆ ಭಯಪಡ್ತಾರೆ. ಕೋಲಿಗೂ ಅದನ್ನ ನೇಮಿಸಿದಾತನಿಗೂ ಗಮನ ಕೊಡಿ.+ 10  ಕೆಟ್ಟವನ ಮನೇಲಿ, ದೇವರು ಹೇಸುವ ಅನ್ಯಾಯದ ಅಳತೆ ಪಾತ್ರೆನೂಕೆಟ್ಟತನದಿಂದ ಗಳಿಸಿದ ನಿಧಿ ಇನ್ನೂ ಇದ್ಯಾ? 11  ಮೋಸದ ತಕ್ಕಡಿ, ಅನ್ಯಾಯದ ತೂಕದ ಕಲ್ಲುಗಳನ್ನ ಬಳಸಿದ್ರೆನಾನು ನಿರಪರಾಧಿ ಆಗಿರೋಕೆ* ಸಾಧ್ಯನಾ?+ 12  ಅಲ್ಲಿನ ಶ್ರೀಮಂತರು ಹಿಂಸಾಚಾರದಲ್ಲಿ ಮುಳುಗಿಹೋಗಿದ್ದಾರೆ,ಅಲ್ಲಿನ ಜನ್ರು ಸುಳ್ಳು ಹೇಳ್ತಾರೆ,+ಅವ್ರ ಬಾಯಿಂದ ಬರೋದೆಲ್ಲ ಬರೀ ಮೋಸದ ಮಾತುಗಳೇ.+ 13  “ಹಾಗಾಗಿ ನಾನು ನಿನ್ನನ್ನ ಹೊಡೆದು ಗಾಯ ಮಾಡ್ತೀನಿ,+ನಿನ್ನ ಪಾಪಗಳ ಕಾರಣ ನಿನ್ನನ್ನ ಹಾಳು ಬೀಳೋ ತರ ಮಾಡ್ತೀನಿ. 14  ನೀನು ತಿಂದ್ರೂ ತೃಪ್ತಿ ಆಗಲ್ಲ,ನಿನ್ನ ಹೊಟ್ಟೆ ಖಾಲಿಯಾಗಿರುತ್ತೆ,+ನೀನು ಏನನ್ನೇ ತಗೊಂಡು ಹೋಗಿ ಸುರಕ್ಷಿತವಾಗಿ ಇಡೋಕೆ ಪ್ರಯತ್ನಿಸಿದ್ರೂ ಅದು ನಿನ್ನಿಂದ ಆಗಲ್ಲ,ನೀನು ತಗೊಂಡು ಹೋದದ್ದನ್ನ ನಾನು ಶತ್ರುಗಳ ವಶಮಾಡ್ತೀನಿ. 15  ನೀವು ಬಿತ್ತನೆ ಮಾಡ್ತೀರ, ಆದ್ರೆ ಬೆಳೆ ಕೊಯ್ಯಲ್ಲ,ನೀವು ಆಲಿವ್‌ಗಳನ್ನ ತುಳಿತೀರ, ಆದ್ರೆ ಅದ್ರ ಎಣ್ಣೆಯನ್ನ ಬಳಸಲ್ಲ,ನೀವು ಹೊಸ ದ್ರಾಕ್ಷಾಮದ್ಯ ಮಾಡ್ತೀರ, ಆದ್ರೆ ಕುಡಿಯಲ್ಲ.+ 16  ನೀವು ಒಮ್ರಿಯ ನಿಯಮಗಳನ್ನ ಪಾಲಿಸ್ತೀರ,ಅಹಾಬ ಮತ್ತು ಅವನ ಕುಟುಂಬ ಮಾಡಿದ್ದನ್ನೇ ನೀವು ಮಾಡ್ತೀರ,+ಅವ್ರ ಬುದ್ಧಿಮಾತಿನ ಪ್ರಕಾರ ನಡೀತೀರ,ಹಾಗಾಗಿ ನಾನು ನಿಮಗೆ ಎಂಥ ಗತಿ ತರ್ತಿನಿ ಅಂದ್ರೆ ನೋಡುವವ್ರೆಲ್ಲರ ಎದೆ ಧಸಕ್ಕೆನ್ನುತ್ತೆ,ನಿಮ್ಮನ್ನ ನೋಡಿ ಜನ ಸೀಟಿ ಹೊಡೆದು ಅವಮಾನ ಮಾಡ್ತಾರೆ,+ದೇಶದ ಜನ್ರು ನಿಮ್ಮನ್ನ ನೋಡಿ ನಗ್ತಾರೆ.”+

ಪಾದಟಿಪ್ಪಣಿ

ಅಥವಾ “ಐಗುಪ್ತ.”
ಅಥವಾ “ದಂಗೆಗಳಿಗಾಗಿ.”
ಅಥವಾ “ಹಕ್ಕಿಂದ ಕೇಳ್ತಾನೆ.”
ಅಥವಾ “ದಯೆ ಮತ್ತು ನಿಷ್ಠೆಯಿಂದ ಕೂಡಿದ ಪ್ರೀತಿ ತೋರಿಸಬೇಕು.” ಅಕ್ಷ. “ಶಾಶ್ವತ ಪ್ರೀತಿಯನ್ನ ಪ್ರೀತಿಸಬೇಕು.”
ಅಥವಾ “ಪ್ರಯೋಜನ ತರೋ ವಿವೇಕ.”
ಅಥವಾ “ನೈತಿಕವಾಗಿ ಶುದ್ಧನಾಗಿರೋಕೆ.”