ಮೀಕ 4:1-13

  • ಯೆಹೋವನ ಬೆಟ್ಟವನ್ನ ಎತ್ತರಕ್ಕೆ ಏರಿಸಲಾಗುತ್ತೆ (1-5)

    • ಕತ್ತಿಗಳನ್ನ ನೇಗಿಲ ಗುಳಗಳಾಗಿ ಮಾಡ್ತಾನೆ (3)

    • ‘ನಾವು ಯೆಹೋವನ ಹೆಸ್ರಿಗೆ ತಕ್ಕ ಹಾಗೆ ಜೀವಿಸ್ತೀವಿ’ (5)

  • ಪುನಃಸ್ಥಾಪನೆ ಆದ್ಮೇಲೆ ಚೀಯೋನ್‌ ಬಲಿಷ್ಠವಾಗುತ್ತೆ (6-13)

4  ಕೊನೇ ದಿನಗಳಲ್ಲಿಯೆಹೋವನ ಆಲಯ ಇರೋ ಬೆಟ್ಟವನ್ನ+ಎಲ್ಲ ಬೆಟ್ಟಗಳಿಗಿಂತ ಎತ್ತರದಲ್ಲಿ ದೃಢವಾಗಿ ಸ್ಥಾಪಿಸಲಾಗುತ್ತೆ,ಅದನ್ನ ಎಲ್ಲ ಬೆಟ್ಟಗಳಿಗಿಂತ ಎತ್ತರಕ್ಕೆ ಏರಿಸಲಾಗುತ್ತೆ,ಅಲ್ಲಿಗೆ ಜನ್ರು ಪ್ರವಾಹದ ತರ ಹರಿದು ಬರ್ತಾರೆ.+   ಅನೇಕ ದೇಶಗಳ ಜನ್ರು ಬಂದು “ಬನ್ನಿ, ನಾವು ಯೆಹೋವನ ಬೆಟ್ಟಕ್ಕೆ ಹೋಗೋಣ,ಯಾಕೋಬನ ದೇವರ ಆಲಯಕ್ಕೆ ಹೋಗೋಣ.+ ಆತನು ತನ್ನ ರೀತಿ-ನೀತಿಗಳ ಬಗ್ಗೆ ನಮಗೆ ಕಲಿಸ್ತಾನೆ,ನಾವು ಆತನು ತೋರಿಸೋ ದಾರಿಗಳಲ್ಲಿ ನಡಿತೀವಿ” ಅಂತ ಹೇಳ್ತಾರೆ. ಯಾಕಂದ್ರೆ ಚೀಯೋನಿಂದ ನಿಯಮನೂ* ಬರುತ್ತೆ,ಯೆರೂಸಲೇಮಿಂದ ಯೆಹೋವನ ಮಾತುಗಳೂ ಬರುತ್ತೆ.   ಆತನು ಅನೇಕ ಜನಾಂಗಗಳಿಗೆ ತೀರ್ಪು ಕೊಡ್ತಾನೆ,+ದೂರ ದೂರದ ಬಲಿಷ್ಠ ಜನಾಂಗಗಳ ಸಮಸ್ಯೆಗಳನ್ನ ಸರಿಪಡಿಸ್ತಾನೆ. ಅವರು ತಮ್ಮ ಕತ್ತಿಗಳನ್ನ ಬಡಿದು ನೇಗಿಲ ಗುಳಗಳಾಗಿ* ಮಾಡ್ತಾರೆ,ಈಟಿಗಳನ್ನ ಬಡಿದು ಕುಡುಗೋಲುಗಳಾಗಿ* ಮಾಡ್ತಾರೆ.+ ಒಂದು ಜನಾಂಗ ಇನ್ನೊಂದು ಜನಾಂಗದ ವಿರುದ್ಧ ಕತ್ತಿ ಎತ್ತಲ್ಲ,ಇನ್ಮುಂದೆ ಅವರು ಯುದ್ಧ ಮಾಡೋಕೆ ಕಲಿಯಲ್ಲ.+   ಅವ್ರಲ್ಲಿ ಪ್ರತಿಯೊಬ್ಬನು ತನ್ನ ದ್ರಾಕ್ಷಿಬಳ್ಳಿ ಕೆಳಗೆ, ಅಂಜೂರ ಮರದ ಕೆಳಗೆ ಕೂತ್ಕೊಳ್ತಾನೆ,*+ಅವ್ರನ್ನ ಯಾರೂ ಹೆದರಿಸಲ್ಲ,+ಸೈನ್ಯಗಳ ದೇವರಾದ ಯೆಹೋವನೇ ಇದನ್ನ ಹೇಳಿದ್ದಾನೆ.   ಎಲ್ಲ ಜನಾಂಗಗಳವರು ತಮ್ಮ ದೇವರ ಹೆಸ್ರಿಗೆ ತಕ್ಕ ಹಾಗೆ ಜೀವಿಸ್ತಾರೆ,ಆದ್ರೆ ನಾವು ನಮ್ಮ ದೇವರಾದ ಯೆಹೋವನ ಹೆಸ್ರಿಗೆ ತಕ್ಕ ಹಾಗೆ ಯಾವಾಗ್ಲೂ ಜೀವಿಸ್ತೀವಿ.*+   ಯೆಹೋವ ಹೇಳೋದು ಏನಂದ್ರೆ,“ಕುಂಟುತ್ತಿದ್ದ ಜನ್ರನ್ನ ನಾನು ಆ ದಿನದಲ್ಲಿ ಕೂಡಿಸ್ತೀನಿ,ಚದರಿ ಹೋಗಿರುವವ್ರನ್ನ ಒಟ್ಟು ಸೇರಿಸ್ತೀನಿ,+ಅಷ್ಟೇ ಅಲ್ಲ ನನ್ನಿಂದ ಶಿಕ್ಷೆ ಪಡ್ಕೊಂಡ ಜನ್ರನ್ನೂ ಒಟ್ಟುಗೂಡಿಸ್ತೀನಿ.   ಕುಂಟುತ್ತಿದ್ದ ಜನ್ರಲ್ಲಿ ಉಳಿದವ್ರನ್ನ ಕಾಪಾಡ್ತೀನಿ,+ದೂರಕ್ಕೆ ಕಳಿಸಲಾದ ಜನ್ರನ್ನ ನಾನು ಒಂದು ಬಲಿಷ್ಠ ಜನಾಂಗವಾಗಿ ಮಾಡ್ತೀನಿ,+ಯೆಹೋವ ಚೀಯೋನ್‌ ಬೆಟ್ಟದಿಂದ ಅವ್ರ ಮೇಲೆ ರಾಜನಾಗಿ ಆಳ್ತಾನೆ. ಇವತ್ತಿಂದ ಶಾಶ್ವತಕ್ಕೂ ಆಳ್ತಾನೆ.   ಮಂದೆಯನ್ನ ಕಾಪಾಡೋ ಗೋಪುರವೇ,ಚೀಯೋನ್‌ ಅನ್ನುವವಳ ಗುಡ್ಡವೇ,+ಆರಂಭದಲ್ಲಿದ್ದ* ಆಳ್ವಿಕೆ ನಿನಗೆ ಸಿಗುತ್ತೆ,ಹೌದು, ಅದು ನಿನಗೆ ಖಂಡಿತ ಸಿಗುತ್ತೆ.+ ಯೆರೂಸಲೇಮ್‌ ಪ್ರಜೆಗಳ ಮೇಲೆ ನೀನು ಮತ್ತೆ ರಾಜನಾಗ್ತೀಯ.+   ನೀನೀಗ ಅರಚಿಕೊಳ್ತೀರೋದು ಯಾಕೆ? ನಿನಗೆ ರಾಜ ಇಲ್ವಾ? ನಿನ್ನ ಸಲಹೆಗಾರ ನಾಶವಾದ್ನಾ? ಅದಕ್ಕೆ ನಿನಗೆ ಹೆರಿಗೆ ನೋವಿನ ತರ ನೋವು ಬಂದಿದ್ಯಾ?+ 10  ಚೀಯೋನ್‌ ಅನ್ನುವವಳೇ, ಗರ್ಭಿಣಿ ತರನೋವಿಂದ ಒದ್ದಾಡು, ನರಳಾಡು. ಯಾಕಂದ್ರೆ ಈಗ ನೀನು ಪಟ್ಟಣದಿಂದ ಹೋಗಿ ಬಯಲಲ್ಲಿ ವಾಸಿಸ್ತೀಯ. ನೀನು ದೂರದ ಬಾಬೆಲಿಗೆ ಹೋಗ್ತೀಯ,+ಅಲ್ಲಿ ನಿನ್ನನ್ನ ಕಾಪಾಡಲಾಗುತ್ತೆ,+ಅಲ್ಲಿ ಯೆಹೋವ ನಿನ್ನನ್ನ ನಿನ್ನ ಶತ್ರುಗಳಿಂದ ಹಿಂದಕ್ಕೆ ಕೊಂಡುಕೊಳ್ತಾನೆ.+ 11  ಅನೇಕ ಜನಾಂಗಗಳವರು ನಿನ್ನ ವಿರುದ್ಧ ಕೂಡಿಕೊಳ್ತಾರೆ,‘ಚೀಯೋನ್‌ ಅಶುದ್ಧಳಾಗಲಿ,ಅದನ್ನ ನಾವು ಕಣ್ಣಾರೆ ನೋಡೋಣ’ ಅಂತ ಹೇಳ್ತಾರೆ. 12  ಆದ್ರೆ ಯೆಹೋವನ ಆಲೋಚನೆ ಅವ್ರಿಗೆ ಗೊತ್ತಿಲ್ಲ,ಆತನ ಉದ್ದೇಶ* ಅವ್ರಿಗೆ ಅರ್ಥವಾಗ್ತಿಲ್ಲ,ಯಾಕಂದ್ರೆ ಆಗಷ್ಟೇ ಕೊಯ್ದ ತೆನೆಯ ಕಟ್ಟುಗಳನ್ನ ಕಣದಲ್ಲಿ ಕೂಡಿಸೋ ತರ ಆತನು ಅವ್ರನ್ನ ಕೂಡಿಸ್ತಾನೆ. 13  ಚೀಯೋನ್‌ ಅನ್ನುವವಳೇ, ಎದ್ದು ಕಣವನ್ನ ಒಕ್ಕು,+ನಾನು ನಿನ್ನ ಕೊಂಬುಗಳನ್ನ ಕಬ್ಬಿಣವಾಗಿ ಮಾಡ್ತೀನಿ,ನಿನ್ನ ಗೊರಸುಗಳನ್ನ ತಾಮ್ರವನ್ನಾಗಿ ಮಾಡ್ತೀನಿ,ನೀನು ಅನೇಕ ಜನಾಂಗಗಳನ್ನ ಪುಡಿಪುಡಿ ಮಾಡ್ತೀಯ,+ಅವರು ಮೋಸದಿಂದ ಗಳಿಸಿದ ಲಾಭವನ್ನ ನೀನು ಯೆಹೋವನಿಗೆ ಮೀಸಲಾಗಿಡ್ತೀಯ,ಅವ್ರ ಸಂಪತ್ತನ್ನ ಇಡೀ ಭೂಮಿಯ ನಿಜವಾದ ಒಡೆಯನಿಗೆ ಮೀಸಲಾಗಿಡ್ತೀಯ.”+

ಪಾದಟಿಪ್ಪಣಿ

ಅಥವಾ “ಬೋಧನೆನೂ.”
ಅದು, ನೇಗಿಲಿನ ತುದಿಯಲ್ಲಿರೋ ಕಬ್ಬಿಣದ ಚೂಪಾದ ಭಾಗ.
ಅಥವಾ “ಸಮರುವ ಕತ್ತಿಯಾಗಿ.”
ಅಥವಾ “ವಾಸಿಸ್ತಾನೆ.”
ಅಕ್ಷ. “ನಡಿತೀವಿ.”
ಅಥವಾ “ಹಿಂದಿನ.”
ಅಥವಾ “ಬುದ್ಧಿವಾದ.”