ಮೀಕ 1:1-16

  • ಸಮಾರ್ಯ ಮತ್ತು ಯೆಹೂದಕ್ಕೆ ಶಿಕ್ಷೆ (1-16)

    • ದಂಗೆ ಮತ್ತು ಪಾಪಗಳು ಸಮಸ್ಯೆಗಳಿಗೆ ಕಾರಣ (5)

1  ಯೆಹೋವ ಮೀಕನಿಗೆ*+ ದರ್ಶನದ* ಮೂಲಕ ಸಮಾರ್ಯ ಮತ್ತು ಯೆರೂಸಲೇಮಿನ ಬಗ್ಗೆ ಹೇಳಿದ ಮಾತುಗಳು. ಮೀಕ ಮೋರೆಷೆತ್‌ ಅನ್ನೋ ಪಟ್ಟಣದವನು. ಯೆಹೂದದ ರಾಜರಾದ+ ಯೋತಾಮ,+ ಆಹಾಜ,+ ಹಿಜ್ಕೀಯ+ ಆಳ್ತಿದ್ದ ಕಾಲದಲ್ಲಿ ದೇವರು ಮೀಕನ ಮೂಲಕ ಈ ಮಾತುಗಳನ್ನ ಹೇಳಿದನು:   “ಜನ್ರೇ, ಎಲ್ರೂ ಕೇಳಿ! ಭೂಮಿಯೇ, ಅದ್ರಲ್ಲಿರೋ ಸಮಸ್ತವೇ, ಗಮನಕೊಡಿ,ಯೆಹೋವ ತನ್ನ ಪವಿತ್ರ ಆಲಯದಲ್ಲಿ ಇದ್ದಾನೆ,ವಿಶ್ವದ ರಾಜ ಯೆಹೋವ ನಿಮ್ಮ ವಿರುದ್ಧ ಸಾಕ್ಷಿ ಆಗಿರಲಿ.+   ನೋಡಿ! ಯೆಹೋವ ತನ್ನ ಸ್ಥಳದಿಂದ ಬರ್ತಿದ್ದಾನೆ,ಆತನು ಕೆಳಗಿಳಿದು ಭೂಮಿಯ ಎತ್ತರವಾದ ಸ್ಥಳಗಳಲ್ಲಿ ನಡಿತಾನೆ.   ಬೆಂಕಿ ಮುಂದೆ ಮೇಣ ಕರಗೋ ತರ,ಇಳಿಜಾರಲ್ಲಿ ನೀರು ಹರಿದು ಹೋಗೋ ತರ,ಆತನ ಕಾಲ ಕೆಳಗೆ ಬೆಟ್ಟಗಳು ಕರಗಿ ಹೋಗುತ್ತೆ,+ಕಣಿವೆಗಳು ಸೀಳಿಹೋಗುತ್ತೆ.   ಇದಕ್ಕೆಲ್ಲಾ ಯಾಕೋಬನ ದಂಗೆನೇ,ಇಸ್ರಾಯೇಲ್‌ ಜನ್ರ ಪಾಪಗಳೇ ಕಾರಣ.+ ಯಾಕೋಬನ ದಂಗೆಗೆ ಯಾರು ಹೊಣೆ? ಸಮಾರ್ಯ ಅಲ್ವಾ?+ ಯೆಹೂದದ ಪೂಜಾಸ್ಥಳಗಳಿಗೆ ಯಾರು ಹೊಣೆ?+ ಯೆರೂಸಲೇಮ್‌ ಅಲ್ವಾ?   ನಾನು ಸಮಾರ್ಯವನ್ನ ಹೊಲದಲ್ಲಿನ ಕಲ್ಲುರಾಶಿಯಾಗಿ,ದ್ರಾಕ್ಷಿತೋಟಗಳನ್ನ ಬೆಳೆಸೋ ಸ್ಥಳವಾಗಿ ಮಾಡ್ತೀನಿ. ಅದ್ರ ಕಲ್ಲುಗಳನ್ನ ಕಣಿವೆಗೆ ಎಸೆದುಬಿಡ್ತೀನಿ,*ಅದ್ರ ಅಡಿಪಾಯ ಕಾಣೋ ತರ ಮಾಡ್ತೀನಿ.   ನಾನು ಅದ್ರ ಕೆತ್ತಿದ ಮೂರ್ತಿಗಳನ್ನೆಲ್ಲ ಪುಡಿಪುಡಿ ಮಾಡ್ತೀನಿ,+ವೇಶ್ಯಾವಾಟಿಕೆಯಿಂದ ಅದು ಸಂಪಾದಿಸಿದ ಎಲ್ಲ ಉಡುಗೊರೆಗಳನ್ನ ಬೆಂಕಿಯಲ್ಲಿ ಸುಟ್ಟುಬಿಡ್ತೀನಿ.+ ನಾನು ಅದ್ರ ಎಲ್ಲ ಮೂರ್ತಿಗಳನ್ನ ನಾಶಮಾಡ್ತೀನಿ,ಯಾಕಂದ್ರೆ ಸಮಾರ್ಯ ಅದನ್ನೆಲ್ಲ ವೇಶ್ಯಾವಾಟಿಕೆಯಿಂದ ಸಂಪಾದಿಸಿದೆ,ಆದ್ರೆ ಅವೆಲ್ಲ ಬೇರೆ ಕಡೆಯಿರೋ ವೇಶ್ಯೆಯರ ಸಂಪಾದನೆ ಆಗುತ್ತೆ.”   ಹಾಗಾಗಿ ನಾನು ಅಳ್ತೀನಿ, ಗೋಳಾಡ್ತೀನಿ,+ನಾನು ಬೆತ್ತಲೆಯಾಗಿ ಬರಿಗಾಲಲ್ಲಿ ನಡಿತೀನಿ.+ ನನ್ನ ಗೋಳಾಟ ಗುಳ್ಳೆನರಿಗಳು ಊಳಿಡೋ ತರ ಇರುತ್ತೆ,ನನ್ನ ಶೋಕ ಉಷ್ಟ್ರಪಕ್ಷಿಗಳ ಕೂಗಿನ ತರ ಇರುತ್ತೆ.   ಯಾಕಂದ್ರೆ ಸಮಾರ್ಯದ ಗಾಯ ವಾಸಿ ಆಗಲ್ಲ,+ಅದು ಯೆಹೂದದ ತನಕ ಹರಡಿದೆ,+ಅದ್ರ ಕಾಯಿಲೆ ನನ್ನ ಜನ್ರಿರೋ ಯೆರೂಸಲೇಮಿನ ಬಾಗಿಲ ತನಕ ಹರಡಿದೆ.+ 10  “ಗತ್‌ ಪಟ್ಟಣದಲ್ಲಿ ಇದನ್ನ ಹೇಳಬೇಡಿ,ಅಲ್ಲಿ ನೀವು ಅಳಲೇಬಾರದು,ಬೇತ್‌-ಒಫ್ರದ ಜನ್ರೇ, ಧೂಳಲ್ಲಿ ಹೊರಳಾಡಿ. 11  ಶಾಫೀರಿನ ಜನ್ರೇ, ಬೆತ್ತಲೆಯಾಗಿ ಅವಮಾನಪಟ್ಟು ಹೋಗಿ,ಚಾನಾನಿನ ಜನ್ರು ಹೊರಗೆ ಬರಲಿಲ್ಲ,ಬೇತ್‌-ಏಚೆಲಲ್ಲಿ ಗೋಳಾಟ ಇರುತ್ತೆ, ಅದು ಇನ್ಮುಂದೆ ನಿಮಗೆ ಬೆಂಬಲ ಕೊಡಲ್ಲ. 12  ಮಾರೋತಿನ ಜನ್ರು ಒಳ್ಳೇದಾಗುತ್ತೆ ಅಂತ ಕಾಯ್ತಿದ್ರು,ಆದ್ರೆ ಯೆಹೋವನಿಂದ ಯೆರೂಸಲೇಮಿನ ಬಾಗಿಲಿಗೆ ಕೇಡು ಬಂದಿದೆ. 13  ಲಾಕೀಷಿನ+ ಜನ್ರೇ, ರಥಗಳನ್ನ ಸಿದ್ಧಮಾಡಿ ಕುದುರೆಗಳನ್ನ ಅವುಗಳಿಗೆ ಕಟ್ಟಿ,ಚೀಯೋನ್‌ ಅನ್ನುವವಳ ಪಾಪಕ್ಕೆ ನೀವೇ ಕಾರಣ,ಯಾಕಂದ್ರೆ ಇಸ್ರಾಯೇಲಿನ ದಂಗೆಗಳು+ ನಿನ್ನಲ್ಲೇ ಸಿಕ್ಕಿದ್ವು. 14  ಹಾಗಾಗಿ ನೀನು ಮೋರೆಷತ್‌ಗತ್‌ ಪಟ್ಟಣಕ್ಕೆ ವಿದಾಯದ ಉಡುಗೊರೆಗಳನ್ನ ಕೊಡ್ತೀಯ. ಇಸ್ರಾಯೇಲಿನ ರಾಜರು ಅಕ್ಜೀಬಿನ+ ಮನೆಗಳನ್ನ ನಂಬಿ ಮೋಸಹೋದ್ರು. 15  ಮಾರೇಷದ+ ಜನ್ರೇ, ನಾನು ನಿಮ್ಮ ಹತ್ರ ಜಯಶಾಲಿಯನ್ನ* ಕಳಿಸ್ತೀನಿ,+ಇಸ್ರಾಯೇಲಿನ ಮಹಿಮೆ ಅದುಲ್ಲಾಮಿನ+ ತನಕ ಬರುತ್ತೆ. 16  ನಿಮ್ಮ ಮುದ್ದು ಮಕ್ಕಳಿಗಾಗಿ ನಿಮ್ಮ ಕೂದಲು ಕತ್ತರಿಸ್ಕೊಳ್ಳಿ, ತಲೆ ಬೋಳಿಸ್ಕೊಳ್ಳಿ. ಹದ್ದಿನ ಹಾಗೆ ತಲೆ ಬೋಳಿಸ್ಕೊಳ್ಳಿ,ಯಾಕಂದ್ರೆ ನಿಮ್ಮ ಮಕ್ಕಳನ್ನ ನಿಮ್ಮಿಂದ ಕಿತ್ಕೊಂಡು ಸೆರೆ ಹಿಡ್ಕೊಂಡು ಹೋಗಲಾಗಿದೆ.”+

ಪಾದಟಿಪ್ಪಣಿ

ಇದು ಮೀಕಾಯೇಲ ಅಥವಾ ಮೀಕಾಯ ಹೆಸ್ರಿನ ಸಂಕ್ಷಿಪ್ತರೂಪ. ಅರ್ಥ “ಯೆಹೋವನ ತರ ಯಾರಿದ್ದಾರೆ?”
ಅಕ್ಷ. “ಸುರಿದುಬಿಡ್ತೀನಿ.”
ಅಥವಾ “ಸುಲಿಗೆಗಾರನನ್ನ.”