ಮಾರ್ಕ 3:1-35

  • ಕೈಗೆ ಲಕ್ವ ಹೊಡಿದಿದ್ದ ಮನುಷ್ಯನನ್ನ ವಾಸಿ ಮಾಡಿದನು (1-6)

  • ಸಮುದ್ರ ತೀರದಲ್ಲಿ ಜನ್ರ ದೊಡ್ಡ ಗುಂಪು (7-12)

  • 12 ಅಪೊಸ್ತಲರು (13-19)

  • ಪವಿತ್ರಶಕ್ತಿ ವಿರುದ್ಧ ಮಾತು (20-30)

  • ಯೇಸುವಿನ ಅಮ್ಮ ಮತ್ತು ತಮ್ಮಂದಿರು (31-35)

3  ಯೇಸು ಮತ್ತೆ ಸಭಾಮಂದಿರಕ್ಕೆ ಹೋದನು. ಅಲ್ಲಿ ಕೈಗೆ ಲಕ್ವ ಹೊಡಿದಿದ್ದ ಒಬ್ಬ ಇದ್ದ.+  ಯೇಸು ಮೇಲೆ ತಪ್ಪು ಹೊರಿಸೋ ಉದ್ದೇಶದಿಂದ ಸಬ್ಬತ್‌ ದಿನದಲ್ಲಿ ಆತನು ಆ ವ್ಯಕ್ತಿಯನ್ನ ವಾಸಿ ಮಾಡ್ತಾನೋ ಇಲ್ವೋ ಅಂತ ಫರಿಸಾಯರು ನೋಡ್ತಾ ಇದ್ರು.  ಆತನು ಲಕ್ವ ಹೊಡೆದವನಿಗೆ “ಎದ್ದು, ಮಧ್ಯಕ್ಕೆ ಬಾ” ಅಂದನು.  ಆಮೇಲೆ ಆತನು ಅವ್ರಿಗೆ “ಸಬ್ಬತ್‌ ದಿನದಲ್ಲಿ ಒಳ್ಳೇದನ್ನ ಮಾಡಬೇಕಾ ಕೆಟ್ಟದ್ದನ್ನ ಮಾಡಬೇಕಾ? ಜೀವ ಉಳಿಸಬೇಕಾ ತೆಗಿಬೇಕಾ?”+ ಅಂತ ಕೇಳಿದನು. ಅದಕ್ಕೆ ಅವರು ಬಾಯೇ ಬಿಚ್ಚಲಿಲ್ಲ.  ಅವ್ರ ಹೃದಯ ಕಲ್ಲು ತರ ಇರೋದನ್ನ ನೋಡಿ ಯೇಸುಗೆ ತುಂಬ ದುಃಖ ಆಯ್ತು.+ ಅವ್ರನ್ನ ಕೋಪದಿಂದ ನೋಡಿ ಯೇಸು ಆ ವ್ಯಕ್ತಿಗೆ “ನಿನ್ನ ಕೈಚಾಚು” ಅಂದನು. ಅವನು ಕೈ ಚಾಚಿದಾಗ ಅದು ಇನ್ನೊಂದು ಕೈ ತರಾನೇ ಆಯ್ತು.  ತಕ್ಷಣ ಫರಿಸಾಯರು ಹೊರಗೆ ಹೋಗಿ ಹೆರೋದನ+ ಪಕ್ಷದವರ ಜೊತೆ ಸೇರ್ಕೊಂಡು ಯೇಸುನ ಕೊಲ್ಲೋಕೆ ಸಂಚು ಮಾಡಿದ್ರು.  ಆದ್ರೆ ಯೇಸು ತನ್ನ ಶಿಷ್ಯರ ಜೊತೆ ಸಮುದ್ರದ ಕಡೆ ಹೋದನು. ಗಲಿಲಾಯ ಮತ್ತು ಯೂದಾಯದ ತುಂಬ ಜನ ಆತನ ಹಿಂದೆ ಹೋದ್ರು.+  ಅಷ್ಟೇ ಅಲ್ಲ ಯೇಸು ಮಾಡ್ತಿದ್ದ ಅದ್ಭುತಗಳ ಬಗ್ಗೆ ಕೇಳಿಸ್ಕೊಂಡು ಯೆರೂಸಲೇಮ್‌, ಇದೂಮಾಯ, ಯೋರ್ದನ್‌ ನದಿಯ ಆಕಡೆ ಪ್ರದೇಶದಿಂದ, ತೂರ್‌ ಮತ್ತು ಸೀದೋನ್‌ ಪಟ್ಟಣಗಳ ಸುತ್ತಲಿಂದ ಜನ ಆತನ ಹತ್ರ ಬಂದ್ರು.  ಜನ ತನ್ನ ಮೈಮೇಲೆ ಬಿದ್ದು ನೂಕುನುಗ್ಗಲು ಆಗಬಾರದು ಅಂತ ಒಂದು ಚಿಕ್ಕ ದೋಣಿ ಸಿದ್ಧಮಾಡೋಕೆ ಆತನು ಶಿಷ್ಯರಿಗೆ ಹೇಳಿದನು. 10  ಆತನು ತುಂಬ ಜನ್ರನ್ನ ವಾಸಿ ಮಾಡಿದ್ರಿಂದ ದೊಡ್ಡದೊಡ್ಡ ಕಾಯಿಲೆ ಇರುವವ್ರೆಲ್ಲ ಯೇಸುನ ಮುಟ್ಟೋಕಂತ ಮುಗಿಬೀಳ್ತಿದ್ರು.+ 11  ಕೆಟ್ಟ ದೇವದೂತರು+ ಸಹ ಯೇಸುನ ನೋಡಿದಾಗೆಲ್ಲ ಅವನ ಮುಂದೆ ಅಡ್ಡಬಿದ್ದು “ನೀನು ದೇವರ ಮಗ”+ ಅಂತ ಕೂಗ್ತಿದ್ರು. 12  ಆದ್ರೆ ಯೇಸು ತನ್ನ ಬಗ್ಗೆ ಯಾರಿಗೂ ಹೇಳಬೇಡಿ ಅಂತ ಅವ್ರಿಗೆ ತುಂಬ ಸಲ ಆಜ್ಞೆ ಕೊಟ್ಟಿದ್ದನು.+ 13  ಯೇಸು ಬೆಟ್ಟ ಹತ್ತಿ ಕೆಲವು ಶಿಷ್ಯರನ್ನ ಕರೆದನು.+ ಅವರು ಆತನ ಹತ್ರ ಹೋದ್ರು.+ 14  ಆತನು 12 ಜನ್ರನ್ನ ಆರಿಸಿ ಅವ್ರಿಗೆ ಅಪೊಸ್ತಲರು ಅಂತ ಹೆಸ್ರಿಟ್ಟನು. ಈ 12 ಜನ ಆತನ ಜೊತೆನೇ ಇದ್ದು ಸಾರೋ ಕೆಲಸಕ್ಕೆ ಹೋಗಬೇಕಿತ್ತು. 15  ಅಷ್ಟೇ ಅಲ್ಲ ಅಧಿಕಾರ ಪಡ್ಕೊಂಡು ಕೆಟ್ಟ ದೇವದೂತರನ್ನ ಓಡಿಸಬೇಕಿತ್ತು.+ 16  ಆ 12+ ಜನ ಯಾರಂದ್ರೆ ಸೀಮೋನ (ಯೇಸು ಇವನಿಗೆ ಪೇತ್ರ+ ಅಂತ ಹೆಸ್ರಿಟ್ಟನು), 17  ಜೆಬೆದಾಯನ ಮಗ ಯಾಕೋಬ, ಯಾಕೋಬನ ತಮ್ಮ ಯೋಹಾನ (ಇವ್ರಿಗೆ ಆತನು ‘ಬೊವನೆರ್ಗೆಸ್‌’ ಅಂದ್ರೆ ಗುಡುಗಿನ ಮಕ್ಕಳು ಅಂತ ಹೆಸ್ರಿಟ್ಟನು),+ 18  ಅಂದ್ರೆಯ, ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗ ಯಾಕೋಬ, ತದ್ದಾಯ, ಹುರುಪಿಂದ ಕೆಲಸಮಾಡ್ತಿದ್ದ* ಸೀಮೋನ, 19  ಇಸ್ಕರಿಯೂತ ಯೂದ. ಕೊನೆಯಲ್ಲಿ ಯೇಸುಗೆ ನಂಬಿಕೆ ದ್ರೋಹ ಮಾಡಿದ್ದು ಈ ಯೂದನೇ. ಆಮೇಲೆ ಯೇಸು ಒಂದು ಮನೆಗೆ ಹೋದನು. 20  ಜನ ಮತ್ತೆ ಗುಂಪುಗುಂಪಾಗಿ ಬಂದಿದ್ರಿಂದ ಯೇಸುಗೆ, ಶಿಷ್ಯರಿಗೆ ಊಟನೂ ಮಾಡೋಕಾಗಿಲ್ಲ. 21  ಆತನು ಮಾಡ್ತಿದ್ದ ವಿಷ್ಯಗಳ ಬಗ್ಗೆ ಯೇಸುವಿನ ಕುಟುಂಬದವ್ರಿಗೆ ಗೊತ್ತಾದಾಗ ಅವರು “ಇವನಿಗೆ ಹುಚ್ಚುಹಿಡಿದಿದೆ”+ ಅಂತ ಹೇಳ್ತಾ ಯೇಸುವನ್ನ ಹಿಡ್ಕೊಂಡು ಬರೋಕೆ ಹೋದ್ರು. 22  ಅಷ್ಟೇ ಅಲ್ಲ ಯೆರೂಸಲೇಮಿಂದ ಬಂದಿದ್ದ ಪಂಡಿತರು “ಇವನು ಸೈತಾನನ* ಸಹಾಯದಿಂದನೇ ಕೆಟ್ಟ ದೇವದೂತರನ್ನ ಬಿಡಿಸ್ತಾ ಇದ್ದಾನೆ”+ ಅಂತ ಹೇಳ್ತಾ ಇದ್ರು. 23  ಅದಕ್ಕೆ ಯೇಸು ಉದಾಹರಣೆಗಳನ್ನ ಬಳಸಿ ಅವ್ರ ಹತ್ರ ಮಾತಾಡೋಕೆ ಶುರುಮಾಡಿದನು. “ಸೈತಾನ ಸೈತಾನನನ್ನೇ ಹೇಗೆ ಬಿಡಿಸ್ತಾನೆ? 24  ಒಂದು ದೇಶದಲ್ಲಿ ಪ್ರಜೆಗಳೇ ಕಿತ್ತಾಡ್ತಾ ಇದ್ರೆ ಆ ದೇಶ ನಾಶ ಆಗುತ್ತೆ.+ 25  ತಮ್ಮತಮ್ಮೊಳಗೇ ಜಗಳ ಮಾಡೋ ಊರು, ಕುಟುಂಬ ಹಾಳಾಗಿ ಹೋಗುತ್ತೆ. 26  ಅದೇ ತರ ಸೈತಾನ ಸೈತಾನನನ್ನೇ ಬಿಡಿಸಿದ್ರೆ ಅವನು ತನ್ನ ವಿರುದ್ಧಾನೇ ತಿರುಗಿ ಬಿದ್ದಂಗೆ ಆಗುತ್ತಲ್ವಾ? ಹಾಗೆ ಮಾಡಿದ್ರೆ ಅವನ ಸಾಮ್ರಾಜ್ಯ ಒಡೆದು ಹೋಗುತ್ತೆ ತಾನೇ? 27  ಒಬ್ಬ ಬಲಶಾಲಿಯ ಮನೆಗೆ ನುಗ್ಗಿ ಅವನ ಕೈಕಾಲು ಕಟ್ಟಿಹಾಕದೆ ಆಸ್ತಿ ದೋಚೋಕಾಗುತ್ತಾ? ಅವನನ್ನ ಕಟ್ಟಿಹಾಕಿದ ಮೇಲೆನೇ ಮನೆ ದೋಚಕ್ಕೆ ಆಗೋದು. 28  ನಿಮಗೆ ನಿಜ ಹೇಳ್ತೀನಿ, ಮನುಷ್ಯರು ಯಾವ ಪಾಪನೇ ಮಾಡಿರಲಿ ಅಥವಾ ಕೆಟ್ಟದಾಗಿ ಮಾತಾಡಿರಲಿ ಅವ್ರಿಗೆ ಕ್ಷಮೆ ಸಿಗುತ್ತೆ. 29  ಆದ್ರೆ ಪವಿತ್ರಶಕ್ತಿಯ ವಿರುದ್ಧ ಮಾತಾಡಿದ್ರೆ ಯಾವತ್ತೂ ಕ್ಷಮೆ ಸಿಗಲ್ಲ.+ ಅವರು ಮಾಡಿದ ಪಾಪ ಯಾವತ್ತೂ ಹೋಗಲ್ಲ.”+ 30  ಯೇಸು ಇದನ್ನೆಲ್ಲ ಯಾಕೆ ಹೇಳಿದ ಅಂದ್ರೆ ‘ಅವನಲ್ಲಿ ಕೆಟ್ಟ ದೇವದೂತ ಸೇರ್ಕೊಂಡಿದ್ದಾನೆ’ ಅಂತ ಅವರು ಹೇಳ್ತಿದ್ರು.+ 31  ಯೇಸುವಿನ ಅಮ್ಮ, ತಮ್ಮಂದಿರು+ ಬಂದು ಹೊರಗೆ ನಿಂತು ಆತನನ್ನ ಕರಿರಿ ಅಂತ ಯಾರಿಗೋ ಹೇಳಿ ಒಳಗೆ ಕಳಿಸಿದ್ರು.+ 32  ಆದ್ರೆ ಸುತ್ತಲೂ ತುಂಬ ಜನ ಕೂತಿದ್ರಿಂದ ಯೇಸುಗೆ ಅವರು “ನೋಡಿಲ್ಲಿ! ನಿನ್ನ ಅಮ್ಮ, ತಮ್ಮಂದಿರು ಹೊರಗೆ ಕಾಯ್ತಾ ಇದ್ದಾರೆ”+ ಅಂತ ಹೇಳಿದ್ರು. 33  ಅದಕ್ಕೆ ಯೇಸು “ನನ್ನ ಅಮ್ಮ, ತಮ್ಮಂದಿರು ಯಾರು?” ಅಂತ ಕೇಳಿ 34  ತನ್ನ ಸುತ್ತಲೂ ಕೂತಿದ್ದ ಜನ್ರ ಕಡೆ ನೋಡಿ “ಇವರೇ ನನ್ನ ಅಮ್ಮ, ತಮ್ಮಂದಿರು!+ 35  ಸ್ವರ್ಗದಲ್ಲಿರೋ ದೇವರ ಇಷ್ಟದ ಪ್ರಕಾರ ನಡಿಯೋರೆ ನನ್ನ ಅಮ್ಮ, ಅಣ್ಣತಮ್ಮ, ಅಕ್ಕತಂಗಿ”+ ಅಂದನು.

ಪಾದಟಿಪ್ಪಣಿ

ಅಥವಾ “ಕಾನಾನ್ಯನಾದ.”
ಅಕ್ಷ. “ಬೆಲ್ಜೆಬೂಲ.” ಕೆಟ್ಟ ದೇವದೂತರ ನಾಯಕನಿಗೆ ಅಥವಾ ಅಧಿಪತಿಗೆ ಸೂಚಿಸುತ್ತೆ.