ಮತ್ತಾಯ 3:1-17

  • ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಸಾರ್ತಿದ್ದ (1-12)

  • ಯೇಸುವಿನ ದೀಕ್ಷಾಸ್ನಾನ (13-17)

3  ಆ ಕಾಲದಲ್ಲಿ, ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ+ ಯೂದಾಯದ ಕಾಡಿಗೆ* ಬಂದು ಸಾರ್ತಿದ್ದ.+  “ಪಶ್ಚಾತ್ತಾಪಪಡಿ, ಯಾಕಂದ್ರೆ ಸ್ವರ್ಗದ ಆಳ್ವಿಕೆ ಹತ್ರ ಇದೆ”+ ಅಂತ ಹೇಳ್ತಾ ಇದ್ದ.  ಈ ಯೋಹಾನನಿಗೆ ಸೂಚಿಸಿ ಪ್ರವಾದಿ ಯೆಶಾಯ+ “ಯಾರೋ ಬಯಲು ಪ್ರದೇಶದಿಂದ ಹೀಗೆ ಕೂಗಿ ಹೇಳ್ತಿದ್ದಾರೆ ‘ಯೆಹೋವನ* ಮಾರ್ಗ ಸಿದ್ಧಮಾಡಿ! ಆತನ ದಾರಿ ಸರಾಗಗೊಳಿಸಿ’”+ ಅಂತ ಹೇಳಿದ್ದ.  ಯೋಹಾನ ಒಂಟೆ ಕೂದಲಿನ ಬಟ್ಟೆ ಹಾಕ್ತಿದ್ದ, ಸೊಂಟಕ್ಕೆ ಚರ್ಮದ ಸೊಂಟಪಟ್ಟಿ ಕಟ್ಕೊಳ್ತಿದ್ದ.+ ಇವನ ಆಹಾರ ಮಿಡತೆ ಮತ್ತು ಕಾಡುಜೇನು.+  ಯೆರೂಸಲೇಮ್‌, ಯೂದಾಯ ಮತ್ತು ಯೋರ್ದನಿನ ಸುತ್ತಲಿರೋ ಎಲ್ಲ ಪ್ರದೇಶಗಳ ಜನ್ರು ಇವನ ಹತ್ರ ಹೋಗ್ತಿದ್ರು.+  ತಮ್ಮ ಪಾಪಗಳನ್ನ ಮುಚ್ಚುಮರೆ ಇಲ್ಲದೆ ಒಪ್ಕೊಂಡು ಯೋರ್ದನ್‌ ನದಿಯಲ್ಲಿ ಅವನಿಂದ ದೀಕ್ಷಾಸ್ನಾನ ಮಾಡಿಸ್ಕೊಳ್ತಿದ್ರು.*+  ತುಂಬ ಫರಿಸಾಯರು,* ಸದ್ದುಕಾಯರು*+ ದೀಕ್ಷಾಸ್ನಾನದ ಸ್ಥಳಕ್ಕೆ ಬರೋದನ್ನ ನೋಡಿ ಯೋಹಾನ ಅವ್ರಿಗೆ “ವಿಷಹಾವಿನ ಮರಿಗಳೇ,+ ಮುಂದೆ ಬರೋ ದೇವರ ಕೋಪದ ದಿನದಲ್ಲಿ ತಪ್ಪಿಸ್ಕೊಳ್ಳೋಕೆ ನಿಮ್ಮಿಂದ ಸಾಧ್ಯಾನಾ?+  ಮೊದ್ಲು ನೀವು ಪಶ್ಚಾತ್ತಾಪ ಪಟ್ಟಿದ್ದೀರ ಅಂತ ನಡತೆಯಲ್ಲಿ ತೋರಿಸಿ.  ‘ಅಬ್ರಹಾಮ ನಮ್ಮ ತಂದೆ’+ ಅಂತ ಮನಸ್ಸಲ್ಲೂ ಯೋಚಿಸಬೇಡಿ! ನಾನು ಹೇಳೋ ಮಾತು ಕೇಳಿ, ಈ ಕಲ್ಲುಗಳಿಂದ ಸಹ ದೇವರು ಅಬ್ರಹಾಮನಿಗೆ ಮಕ್ಕಳನ್ನ ಹುಟ್ಟಿಸೋಕೆ ಸಾಧ್ಯ! 10  ಮರಗಳನ್ನ ಬುಡ ಸಮೇತ ಕಡಿದುಹಾಕೋಕೆ ಈಗಾಗಲೇ ಕೊಡಲಿ ಸಿದ್ಧವಾಗಿದೆ. ಒಳ್ಳೇ ಫಲ ಕೊಡದ ಮರಗಳನ್ನೆಲ್ಲ ಕಡಿದು ಬೆಂಕಿಗೆ ಬಿಸಾಕ್ತಾರೆ.+ 11  ನಾನು ನಿಮ್ಮ ಪಶ್ಚಾತ್ತಾಪ ನೋಡಿ ನೀರಲ್ಲಿ ದೀಕ್ಷಾಸ್ನಾನ ಮಾಡಿಸ್ತೀನಿ.+ ಆದ್ರೆ ನನ್ನ ನಂತ್ರ ಬರೋನು ನನಗಿಂತ ತುಂಬ ಬಲಶಾಲಿ. ಆತನ ಚಪ್ಪಲಿ ಬಿಚ್ಚೋಕೂ ನಂಗೆ ಯೋಗ್ಯತೆ ಇಲ್ಲ.+ ಆತನು ನಿಮಗೆ ಪವಿತ್ರಶಕ್ತಿ+ ಮತ್ತು ಬೆಂಕಿಯಿಂದ ದೀಕ್ಷಾಸ್ನಾನ ಮಾಡಿಸ್ತಾನೆ.+ 12  ಆತನ ಕೈಯಲ್ಲಿ ಮೊರ ಇದೆ. ಆತನು ಧಾನ್ಯದ ರಾಶಿ ತೂರಿ ಕಣವನ್ನ ಪೂರ್ತಿ ಸ್ವಚ್ಛ ಮಾಡಿ ಗೋದಿನ ಕಣಜಕ್ಕೆ ತುಂಬ್ತಾನೆ. ಉಳಿದಿರೋ ಹೊಟ್ಟನ್ನ ಆರಿಸೋಕೆ ಆಗದ ಬೆಂಕಿಯಲ್ಲಿ+ ಹಾಕಿ ಸುಟ್ಟುಬಿಡ್ತಾನೆ” ಅಂದ. 13  ಆಮೇಲೆ ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸ್ಕೊಳ್ಳೋಕೆ ಗಲಿಲಾಯದಿಂದ ಯೋರ್ದನ್‌ ನದಿ ಹತ್ರ ಬಂದ.+ 14  ಆದ್ರೆ ಯೋಹಾನ ಆತನನ್ನ ತಡೆದು “ನಾನು ಬಂದು ನಿನ್ನ ಹತ್ರ ದೀಕ್ಷಾಸ್ನಾನ ಮಾಡಿಸ್ಕೊಳ್ಳಬೇಕು. ಅಂಥದ್ರಲ್ಲಿ ನೀನು ಯಾಕೆ ನನ್ನ ಹತ್ರ ಬಂದೆ?” ಅಂದ. 15  ಅದಕ್ಕೆ ಯೇಸು “ನನ್ನನ್ನ ತಡಿಬೇಡ, ಯಾಕಂದ್ರೆ ದೇವರ ದೃಷ್ಟಿಯಲ್ಲಿ ಸರಿ* ಆಗಿರೋದನ್ನೇ ನಾವು ಮಾಡಬೇಕು” ಅಂದ. ಆಗ ಯೋಹಾನ ಸುಮ್ಮನಾದ. 16  ಯೇಸು ದೀಕ್ಷಾಸ್ನಾನ ಪಡೆದು ನೀರಿಂದ ಮೇಲಕ್ಕೆ ಬಂದ ತಕ್ಷಣ ಆಕಾಶ ತೆರಿತು.+ ದೇವರ ಪವಿತ್ರಶಕ್ತಿ ಪಾರಿವಾಳದ ರೂಪದಲ್ಲಿ ಆತನ ಮೇಲೆ ಇಳಿದು ಬರೋದನ್ನ ಯೋಹಾನ ನೋಡಿದ.+ 17  ಅಷ್ಟೇ ಅಲ್ಲ ಸ್ವರ್ಗದಿಂದ+ “ಇವನು ನನ್ನ ಪ್ರೀತಿಯ ಮಗ.+ ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ”+ ಅನ್ನೋ ಧ್ವನಿ ಕೇಳಿಸ್ತು.

ಪಾದಟಿಪ್ಪಣಿ

ಇದು ಜನವಾಸ ಕಡಿಮೆ ಇರೋ ಜಾಗ
ಅಥವಾ “ಅವನಿಂದ ಮುಳುಗಿಸ್ಕೊಳ್ತಿದ್ರು.”
ಒಂದನೇ ಶತಮಾನದಲ್ಲಿ ಹೆಸ್ರುವಾಸಿ ಆಗಿದ್ದ ಯೆಹೂದಿಗಳ ಒಂದು ಧಾರ್ಮಿಕ ಪಂಗಡ
ಇವರು ಸಹ ಹೆಸ್ರುವಾಸಿಯಾಗಿದ್ದ ಯೆಹೂದಿಗಳ ಒಂದು ಧಾರ್ಮಿಕ ಪಂಗಡದವರು. ಪುರೋಹಿತರು ಇವ್ರಿಗೆ ಬೆಂಬಲಿಸ್ತಾ ಇದ್ರು. ಇವ್ರಿಗೆ ದೇವದೂತರ ಮೇಲಾಗಲಿ, ಮತ್ತೆ ಜೀವ ಬರೋದರ ಮೇಲಾಗಲಿ ನಂಬಿಕೆ ಇರ್ಲಿಲ್ಲ.
ಅಥವಾ “ನೀತಿ.”