ಮತ್ತಾಯ 10:1-42

  • 12 ಅಪೊಸ್ತಲರು (1-4)

  • ಸೇವೆಗೆ ಸಲಹೆ-ಸೂಚನೆಗಳು (5-15)

  • ಶಿಷ್ಯರಿಗೆ ಹಿಂಸೆ ಬಂದೇ ಬರುತ್ತೆ (16-25)

  • ಮನುಷ್ಯರಿಗಲ್ಲ ದೇವರಿಗೆ ಭಯಪಡಿ (26-31)

  • ಶಾಂತಿಯನ್ನಲ್ಲ ಕತ್ತಿ ಹಾಕೋಕೆ ಬಂದೆ (32-39)

  • ಯೇಸುವಿನ ಶಿಷ್ಯರಿಗೆ ಸಿಗೋ ಗೌರವ (40-42)

10  ಯೇಸು ತನ್ನ 12 ಶಿಷ್ಯರನ್ನ ಕರೆದು ಅವ್ರಿಗೆ ಕೆಟ್ಟ ದೇವದೂತರನ್ನ ಬಿಡಿಸೋ ಅಧಿಕಾರ ಕೊಟ್ಟನು.+ ಅಷ್ಟೇ ಅಲ್ಲ ಎಲ್ಲ ರೀತಿಯ ರೋಗಗಳನ್ನ ಕಾಯಿಲೆಗಳನ್ನ ವಾಸಿಮಾಡೋ ಶಕ್ತಿನೂ ಕೊಟ್ಟನು.  ಈ 12 ಅಪೊಸ್ತಲರು ಯಾರಂದ್ರೆ+ ಪೇತ್ರ ಅನ್ನೋ ಹೆಸ್ರಿದ್ದ ಸೀಮೋನ,+ ಅವನ ತಮ್ಮ ಅಂದ್ರೆಯ,+ ಜೆಬೆದಾಯನ ಮಗ ಯಾಕೋಬ, ಅವನ ತಮ್ಮ ಯೋಹಾನ,+  ಫಿಲಿಪ್ಪ, ಬಾರ್ತೊಲೊಮಾಯ,+ ತೋಮ,+ ತೆರಿಗೆ ವಸೂಲಿಗಾರನಾಗಿದ್ದ ಮತ್ತಾಯ,+ ಅಲ್ಫಾಯನ ಮಗ ಯಾಕೋಬ, ತದ್ದಾಯ,  ಹುರುಪಿಂದ ಕೆಲಸಮಾಡ್ತಿದ್ದ ಸೀಮೋನ* ಮತ್ತು ಇಸ್ಕರಿಯೂತ ಯೂದ. ಕೊನೆಯಲ್ಲಿ ಯೇಸುಗೆ ನಂಬಿಕೆ ದ್ರೋಹ ಮಾಡಿದ್ದು ಇವನೇ.+  ಯೇಸು 12 ಅಪೊಸ್ತಲರನ್ನ ಕಳಿಸ್ತಾ ಈ ಸೂಚನೆಗಳನ್ನ ಕೊಟ್ಟನು:+ “ಬೇರೆ ಜನಾಂಗದ ಜನ್ರ ಹತ್ರ ಹೋಗಬೇಡಿ. ಸಮಾರ್ಯದ ಯಾವ ಪಟ್ಟಣಕ್ಕೂ ಕಾಲಿಡಬೇಡಿ.+  ಅದ್ರ ಬದಲು ತಪ್ಪಿಹೋದ ಕುರಿಗಳ ತರ ಇರೋ ಇಸ್ರಾಯೇಲ್‌ ಜನ್ರ ಹತ್ರ ಮಾತ್ರ ಹೋಗಿ.+  ನೀವು ಹೋಗೋ ಕಡೆಯೆಲ್ಲ ‘ಸ್ವರ್ಗದ ಆಳ್ವಿಕೆ ಹತ್ರ ಆಗಿದೆ’ ಅಂತ ಸಾರಿ ಹೇಳಿ.+  ರೋಗಿಗಳನ್ನ ವಾಸಿಮಾಡಿ,+ ಸತ್ತವರನ್ನ ಬದುಕಿಸಿ, ಕುಷ್ಠರೋಗಿಗಳನ್ನ ವಾಸಿಮಾಡಿ, ಕೆಟ್ಟ ದೇವದೂತರನ್ನ ಬಿಡಿಸಿ. ನಿಮಗೆ ಉಚಿತವಾಗಿ ಸಿಕ್ಕಿದೆ, ಉಚಿತವಾಗಿ ಕೊಡಿ.  ನಿಮ್ಮ ಹಣದ ಚೀಲದಲ್ಲಿ* ಚಿನ್ನ, ಬೆಳ್ಳಿ, ತಾಮ್ರದ ನಾಣ್ಯ ಯಾವುದನ್ನೂ ತಗೊಂಡು ಹೋಗಬೇಡಿ.+ 10  ಪ್ರಯಾಣ ಮಾಡುವಾಗ ಊಟದ ಬುತ್ತಿ ತಗೊಂಡು ಹೋಗಬೇಡಿ. ಇನ್ನೊಂದು ಜೊತೆ ಬಟ್ಟೆಯಾಗಲಿ, ಚಪ್ಪಲಿಯಾಗಲಿ, ಕೋಲಾಗಲಿ+ ತಗೊಂಡು ಹೋಗಬೇಡಿ. ಯಾಕಂದ್ರೆ ಕೆಲಸ ಮಾಡುವವನಿಗೆ ಊಟ ಸಿಕ್ಕೇ ಸಿಗುತ್ತೆ.+ 11  ನೀವು ಒಂದು ಊರಿಗೆ, ಹಳ್ಳಿಗೆ ಹೋದ ಮೇಲೆ ಅಲ್ಲಿ ದೇವರ ಆಳ್ವಿಕೆಯ ಸಂದೇಶ ಕೇಳಿಸ್ಕೊಳ್ಳೋಕೆ ಯಾರು ಯೋಗ್ಯರು ಅಂತ ಹುಡುಕಿ. ಅಲ್ಲಿಂದ ಹೋಗೋ ತನಕ ಅವ್ರ ಮನೆಯಲ್ಲೇ ಇರಿ.+ 12  ನೀವು ಒಂದು ಮನೆಗೆ ಹೋದಾಗ ಮನೆಯವ್ರನ್ನ ವಂದಿಸಿ ಆಶೀರ್ವಾದ ಸಿಗಲಿ ಅಂತ ಹಾರೈಸಿ. 13  ಅವರು ಮನೆಯೊಳಗೆ ಕರೆದ್ರೆ ಅವ್ರಿಗೆ ಆಶೀರ್ವಾದ* ಸಿಗುತ್ತೆ.+ ಕರಿದಿದ್ರೆ ಆ ಆಶೀರ್ವಾದ* ನಿಮ್ಮಲ್ಲೇ ಇರುತ್ತೆ. 14  ಯಾವುದೇ ಮನೆಯವರು, ಊರಿನವರು ನಿಮ್ಮನ್ನ ಒಳಗೆ ಕರಿದೆ ಇದ್ರೆ ಅಥವಾ ನಿಮ್ಮ ಸಂದೇಶ ಕೇಳದಿದ್ರೆ ಅಲ್ಲಿಂದ ಹೋಗೋವಾಗ ನಿಮ್ಮ ಕಾಲಿನ ಧೂಳನ್ನ ಝಾಡಿಸಿ.+ 15  ನಾನು ನಿಮಗೆ ನಿಜ ಹೇಳ್ತೀನಿ, ತೀರ್ಪಿನ ದಿನದಲ್ಲಿ ಆ ಪಟ್ಟಣದ ಸ್ಥಿತಿ ಸೊದೋಮ್‌ ಮತ್ತು ಗೊಮೋರದ+ ಸ್ಥಿತಿಗಿಂತ ಕೆಟ್ಟದಾಗಿರುತ್ತೆ. 16  ನೋಡಿ! ನಾನು ನಿಮ್ಮನ್ನ ಕಳಿಸ್ತಿದ್ದೀನಿ. ನೀವು ತೋಳಗಳ ಮಧ್ಯ ಕುರಿಗಳ ಹಾಗೆ ಇರ್ತಿರ. ಹಾಗಾಗಿ ನೀವು ಹಾವಿನ ತರ ಚುರುಕಾಗಿ ಇರಿ. ಪಾರಿವಾಳದ ತರ ಯಾವ ಹಾನಿನೂ ಮಾಡಬೇಡಿ.+ 17  ಎಚ್ಚರವಾಗಿರಿ. ಯಾಕಂದ್ರೆ ಜನ ನಿಮ್ಮನ್ನ ನ್ಯಾಯಾಲಯದ ಮೆಟ್ಟಿಲು ಹತ್ತಿಸ್ತಾರೆ,+ ಸಭಾಮಂದಿರಗಳಲ್ಲಿ ಚಾಟಿಯಿಂದ ಹೊಡಿತಾರೆ.+ 18  ನನ್ನಿಂದಾಗಿ ರಾಜ್ಯಪಾಲರ, ರಾಜರ ಹತ್ರ ಎಳ್ಕೊಂಡು ಹೋಗ್ತಾರೆ,+ ಆಗ ನೀವು ಅವ್ರಿಗೂ ಬೇರೆ ಜನ್ರಿಗೂ ನನ್ನ ಬಗ್ಗೆ ಸಾಕ್ಷಿ ಕೊಡೋಕಾಗುತ್ತೆ.+ 19  ಅವರು ನಿಮ್ಮನ್ನ ಬಂಧಿಸಿದಾಗ ನೀವು ಹೇಗೆ ಮಾತಾಡಬೇಕು, ಏನು ಮಾತಾಡಬೇಕು ಅಂತ ಚಿಂತೆ ಮಾಡಬೇಡಿ. ಏನು ಮಾತಾಡಬೇಕು ಅನ್ನೋದು ಆ ಕ್ಷಣದಲ್ಲಿ ನಿಮಗೆ ಗೊತ್ತಾಗುತ್ತೆ.+ 20  ಯಾಕಂದ್ರೆ ಅಲ್ಲಿ ನೀವು ಮಾತಾಡಲ್ಲ, ನಿಮ್ಮ ತಂದೆ ಕೊಡೋ ಪವಿತ್ರಶಕ್ತಿ ನಿಮ್ಮನ್ನ ಮಾತಾಡಿಸುತ್ತೆ.+ 21  ಅಷ್ಟೇ ಅಲ್ಲ ಅಣ್ಣ ತಮ್ಮನನ್ನ, ಅಪ್ಪ ಮಗನನ್ನ ಮರಣಕ್ಕೆ ಒಪ್ಪಿಸ್ತಾರೆ. ಮಕ್ಕಳು ಹೆತ್ತವರ ವಿರುದ್ಧ ತಿರುಗಿಬಿದ್ದು ಅವ್ರನ್ನ ಕೊಲ್ಲಿಸ್ತಾರೆ.+ 22  ನೀವು ನನ್ನ ಶಿಷ್ಯರಾಗಿರೋ ಕಾರಣ ಜನ್ರೆಲ್ಲ ನಿಮ್ಮನ್ನ ದ್ವೇಷಿಸ್ತಾರೆ.+ ಆದ್ರೆ ಕೊನೆ ತನಕ ತಾಳ್ಕೊಳ್ಳುವವನಿಗೆ ರಕ್ಷಣೆ ಸಿಗುತ್ತೆ.+ 23  ಅವರು ನಿಮಗೆ ಒಂದು ಊರಲ್ಲಿ ಹಿಂಸೆ ಕೊಟ್ರೆ ಇನ್ನೊಂದು ಊರಿಗೆ ಓಡಿಹೋಗಿ.+ ಯಾಕಂದ್ರೆ ನಾನು ನಿಮಗೆ ನಿಜ ಹೇಳ್ತೀನಿ, ನೀವು ಇಸ್ರಾಯೇಲಿನ ಊರುಗಳಲ್ಲಿ ಮತ್ತು ಹಳ್ಳಿಗಳಲ್ಲಿ ಸಾರೋ ಕೆಲಸ ಮುಗಿಸೋದಕ್ಕಿಂತ ಮುಂಚೆನೇ ಮನುಷ್ಯಕುಮಾರ ಬರ್ತಾನೆ. 24  ಗುರುಗಿಂತ ವಿದ್ಯಾರ್ಥಿ ದೊಡ್ಡವನಲ್ಲ. ಯಜಮಾನನಿಗಿಂತ ಆಳು ದೊಡ್ಡವನಲ್ಲ.+ 25  ವಿದ್ಯಾರ್ಥಿ ಗುರುವಿನ ತರ ಆದ್ರೆ, ಆಳು ಯಜಮಾನನ ತರ ಆದ್ರೆ ಅದೇ ದೊಡ್ಡ ವಿಷ್ಯ.+ ಜನ ಯಜಮಾನನನ್ನೇ ಸೈತಾನ*+ ಅಂತ ಕರೆದಿರುವಾಗ ಅವನ ಮನೆಯವ್ರನ್ನ ಇನ್ನೆಷ್ಟು ಕೆಟ್ಟದಾಗಿ ಕರಿಬಹುದು? 26  ಅವ್ರಿಗೆ ಭಯಪಡಬೇಡಿ. ಮುಚ್ಚಿಟ್ಟಿರೋ ಎಲ್ಲ ವಿಷ್ಯಗಳು ಹೊರಗೆ ಬಂದೆ ಬರುತ್ತೆ. ಗುಟ್ಟು ಖಂಡಿತ ರಟ್ಟಾಗುತ್ತೆ.+ 27  ನಾನು ನಿಮಗೆ ಕತ್ತಲಲ್ಲಿ ಹೇಳಿದ್ದನ್ನ ನೀವು ಬೆಳಕಲ್ಲಿ ಹೇಳಿ. ನಾನು ನಿಮಗೆ ಕಿವಿಯಲ್ಲಿ ಹೇಳಿದ್ದನ್ನ ನೀವು ಮನೆ ಮೇಲಿಂದ ಸಾರಿಹೇಳಿ.+ 28  ನಿಮ್ಮನ್ನ ಕೊಲ್ಲುವವರಿಗೆ ಹೆದರಬೇಡಿ. ಯಾಕಂದ್ರೆ ನೀವು ಭವಿಷ್ಯದಲ್ಲಿ ಮತ್ತೆ ಬದುಕೋದನ್ನ ತಡಿಯೋಕೆ ಅವ್ರಿಂದ ಆಗಲ್ಲ.+ ಅವ್ರಿಗೆ ಹೆದರೋ ಬದಲು ನಿಮ್ಮನ್ನ ಸಂಪೂರ್ಣವಾಗಿ ನಾಶ ಮಾಡೋ* ಶಕ್ತಿ ಇರುವವನಿಗೆ ಹೆದ್ರಿ.+ 29  ಕಮ್ಮಿ ಬೆಲೆಯ ಒಂದು ನಾಣ್ಯಕ್ಕೆ ಎರಡು ಗುಬ್ಬಿ ಸಿಗುತ್ತಲ್ಲಾ? ಹಾಗಿದ್ರೂ ನಿಮ್ಮ ತಂದೆಗೆ ಗೊತ್ತಾಗದೆ ಒಂದು ಗುಬ್ಬಿನೂ ನೆಲಕ್ಕೆ ಬೀಳಲ್ಲ.+ 30  ನಿಮ್ಮ ತಲೆಯಲ್ಲಿ ಎಷ್ಟು ಕೂದಲಿದೆ ಅಂತಾನೂ ದೇವರಿಗೆ ಗೊತ್ತು. 31  ಹಾಗಾಗಿ ಹೆದ್ರಬೇಡಿ. ನಿಮಗೆ ಈ ಚಿಕ್ಕ ಗುಬ್ಬಿಗಳಿಗಿಂತ ತುಂಬ ಬೆಲೆ ಇದೆ.+ 32  ಜನ್ರ ಮುಂದೆ ‘ನಾನು ಯೇಸುವಿನ ಶಿಷ್ಯ’+ ಅಂತ ಹೇಳುವವನ ಬಗ್ಗೆ ನಾನು ಸಹ ಸ್ವರ್ಗದಲ್ಲಿ ನನ್ನ ತಂದೆ ಮುಂದೆ ‘ಹೌದು, ಇವನು ನನ್ನ ಶಿಷ್ಯ’ ಅಂತ ಹೇಳ್ತೀನಿ.+ 33  ಆದ್ರೆ ಒಬ್ಬ ಜನ್ರ ಮುಂದೆ ‘ಯೇಸು ಯಾರಂತ ನಂಗೊತ್ತಿಲ್ಲ’ ಅಂತ ಹೇಳಿದ್ರೆ ನಾನೂ ಅವನ ಬಗ್ಗೆ ಸ್ವರ್ಗದಲ್ಲಿ ನನ್ನ ತಂದೆ ಮುಂದೆ ‘ಅವನು ಯಾರಂತ ನಂಗೂ ಗೊತ್ತಿಲ್ಲ’ ಅಂತ ಹೇಳ್ತೀನಿ.+ 34  ನಾನು ಲೋಕಕ್ಕೆ ಶಾಂತಿ ತರೋಕೆ ಬಂದೆ ಅಂತ ನೆನಸಬೇಡಿ. ಶಾಂತಿಯನ್ನಲ್ಲ ಕತ್ತಿ ಹಾಕೋಕೆ ಬಂದಿದ್ದೀನಿ.+ 35  ಅಪ್ಪನಿಗೂ ಮಗನಿಗೂ, ಅಮ್ಮನಿಗೂ ಮಗಳಿಗೂ, ಅತ್ತೆಗೂ ಸೊಸೆಗೂ ವಿರೋಧ ತರೋಕೆ ನಾನು ಬಂದಿದ್ದೀನಿ.+ 36  ಒಬ್ಬನಿಗೆ ಅವನ ಮನೆಯವ್ರೇ ಶತ್ರುಗಳಾಗ್ತಾರೆ. 37  ನನಗಿಂತ ಹೆಚ್ಚಾಗಿ ಅಪ್ಪಅಮ್ಮನನ್ನ ಪ್ರೀತಿಸಿದ್ರೆ ನನ್ನ ಶಿಷ್ಯನಾಗೋ ಯೋಗ್ಯತೆ ಅವನಿಗಿಲ್ಲ. ನನಗಿಂತ ಹೆಚ್ಚಾಗಿ ಮಗ ಅಥವಾ ಮಗಳನ್ನ ಪ್ರೀತಿಸಿದ್ರೆ ನನ್ನ ಶಿಷ್ಯನಾಗೋ ಯೋಗ್ಯತೆ ಅವನಿಗಿಲ್ಲ.+ 38  ಯಾರಿಗೆಲ್ಲ ತಮ್ಮ ಹಿಂಸಾ ಕಂಬವನ್ನ* ಹೊತ್ಕೊಂಡು ನನ್ನ ಹಿಂದೆ ಬರೋಕೆ ಇಷ್ಟ ಇಲ್ವೋ ಅವ್ರಿಗೆ ನನ್ನ ಶಿಷ್ಯರಾಗೋ ಯೋಗ್ಯತೆ ಇಲ್ಲ.+ 39  ತನ್ನ ಪ್ರಾಣ ಉಳಿಸ್ಕೊಳ್ಳೋಕೆ ಪ್ರಯತ್ನಿಸುವವನು ಅದನ್ನ ಕಳ್ಕೊಳ್ತಾನೆ. ಆದ್ರೆ ನನ್ನ ಶಿಷ್ಯನಾಗಿರೋ ಕಾರಣ ಪ್ರಾಣ ಕಳ್ಕೊಳ್ಳುವವನಿಗೆ ಅದು ಮತ್ತೆ ಸಿಗುತ್ತೆ.+ 40  ನಿಮ್ಮನ್ನ ಗೌರವಿಸುವವನು ನನ್ನನ್ನೂ ಗೌರವಿಸ್ತಾನೆ. ನನ್ನನ್ನ ಗೌರವಿಸುವವನು ನನ್ನನ್ನ ಕಳಿಸಿದ ದೇವರನ್ನೂ ಗೌರವಿಸ್ತಾನೆ.+ 41  ದೇವರು ಪ್ರವಾದಿಗಳಿಗೆ, ನೀತಿವಂತರಿಗೆ ಬಹುಮಾನ ಕೊಡ್ತಾನೆ.+ ಯಾರು ಪ್ರವಾದಿಯನ್ನ ಮತ್ತು ನೀತಿವಂತನನ್ನ ಗೌರವಿಸ್ತಾರೋ ಅವ್ರಿಗೂ ಆ ಬಹುಮಾನ ಸಿಗುತ್ತೆ. 42  ನಾನು ನಿಮಗೆ ನಿಜ ಹೇಳ್ತೀನಿ, ನನ್ನ ಶಿಷ್ಯನಾಗಿರೋ ಕಾರಣ ಇವ್ರಲ್ಲಿ* ಒಬ್ಬನಿಗೆ ಕುಡಿಯೋಕೆ ಒಂದು ಲೋಟ ತಣ್ಣೀರು ಕೊಟ್ರೂ ಅವನಿಗೆ ಖಂಡಿತ ಬಹುಮಾನ ಸಿಗುತ್ತೆ.”+

ಪಾದಟಿಪ್ಪಣಿ

ಅಥವಾ “ಕಾನಾನ್ಯನಾಗಿದ್ದ ಸೀಮೋನ.”
ಅಕ್ಷ. “ನಡುಪಟ್ಟಿಯ ಜೇಬು.”
ಅಥವಾ “ಶಾಂತಿ.”
ಅಥವಾ “ಶಾಂತಿ.”
ಅಕ್ಷ. “ಬೆಲ್ಜೆಬೂಲ.” ಕೆಟ್ಟದೂತರ ನಾಯಕನಿಗೆ ಅಥವಾ ಅಧಿಪತಿಗೆ ಸೂಚಿಸುತ್ತೆ.
ಅಕ್ಷ. “ಗೆಹೆನ್ನಕ್ಕೆ ಹಾಕೋ.” ಪದವಿವರಣೆ ನೋಡಿ.
ಅಥವಾ “ಈ ಸಾಮಾನ್ಯರಲ್ಲಿ.”