ಪ್ರಸಂಗಿ 11:1-10

  • ಅವಕಾಶ ಕೈಬಿಡಬೇಡ (1-8)

    • ನಿನ್ನ ಆಹಾರವನ್ನ ನೀರಿನ ಮೇಲೆ ಚೆಲ್ಲು (1)

    • ಬೆಳಿಗ್ಗೆಯಿಂದ ಸಂಜೆ ತನಕ ಬೀಜ ಬಿತ್ತು (6)

  • ಯೌವನವನ್ನ ಸರಿಯಾದ ರೀತಿಯಲ್ಲಿ ಆನಂದಿಸು (9, 10)

11  ನಿನ್ನ ರೊಟ್ಟಿಯನ್ನ ನೀರಿನ ಮೇಲೆ ಎಸಿ,+ ತುಂಬ ದಿನಗಳಾದ ಮೇಲೆ ಅದು ನಿನಗೆ ಮತ್ತೆ ಸಿಗುತ್ತೆ.+  ನಿನ್ನ ಹತ್ರ ಇರೋದನ್ನ ಏಳು ಅಥವಾ ಎಂಟು ಜನರ ಜೊತೆ ಹಂಚ್ಕೊ.+ ಯಾಕಂದ್ರೆ ಭೂಮಿ ಮೇಲೆ ನಾಳೆ ಎಂಥ ವಿಪತ್ತು ಸಂಭವಿಸುತ್ತೆ ಅಂತ ನಿನಗೆ ಗೊತ್ತಿಲ್ಲ.  ಮೋಡಗಳಲ್ಲಿ ನೀರು ತುಂಬಿದ್ರೆ ಅವು ಭೂಮಿ ಮೇಲೆ ಖಂಡಿತ ಮಳೆ ಸುರಿಸುತ್ತೆ. ಒಂದು ಮರ ದಕ್ಷಿಣದ ಕಡೆ ಬಿದ್ರೂ ಉತ್ತರದ ಕಡೆ ಬಿದ್ರೂ ಅದು ಬಿದ್ದಲ್ಲೇ ಇರುತ್ತೆ.  ಗಾಳಿ ನೋಡ್ಕೊಂಡು ಇರುವವನು ಬೀಜ ಬಿತ್ತಲ್ಲ, ಮೋಡ ನೋಡ್ಕೊಂಡು ಇರುವವನು ಬೆಳೆ ಕೊಯ್ಯಲ್ಲ.+  ಗರ್ಭಿಣಿಯ ಗರ್ಭದಲ್ಲಿರೋ ಮಗುವಿನ ಮೂಳೆಗಳಿಗೆ ಜೀವಶಕ್ತಿ* ಕೆಲಸಮಾಡೋ ವಿಧ ಹೇಗೆ ನಿನಗೆ ಗೊತ್ತಿಲ್ವೋ+ ಹಾಗೇ ಎಲ್ಲವನ್ನ ಮಾಡೋ ಸತ್ಯ ದೇವರ ಕೆಲಸಗಳು ಸಹ ನಿನಗೆ ಗೊತ್ತಿಲ್ಲ.+  ಬೆಳಿಗ್ಗೆ ಬೀಜ ಬಿತ್ತೋಕೆ ಶುರು ಮಾಡು, ಸಂಜೆ ತನಕ ಬಿತ್ತೋದನ್ನ ನಿಲ್ಲಿಸಬೇಡ.+ ಬಿತ್ತಿದ ಬೀಜದಲ್ಲಿ ಯಾವುದು ಮೊಳಕೆ ಒಡೆದು ಬೆಳೆಯುತ್ತೆ. ಇದು ಬೆಳೆಯುತ್ತೋ ಅದು ಬೆಳೆಯುತ್ತೋ ಅಥವಾ ಎರಡೂ ಬೆಳೆಯುತ್ತೋ ನಿಂಗೊತ್ತಿಲ್ಲ.  ಬೆಳಕು ಆಹ್ಲಾದಕರ, ಸೂರ್ಯನ ಬೆಳಕನ್ನ ನೋಡೋದು ಕಣ್ಣುಗಳಿಗೆ ಒಳ್ಳೇದು.  ಒಬ್ಬ ಮನುಷ್ಯ ತುಂಬ ವರ್ಷ ಬದುಕಿದ್ರೆ ಅವನು ಜೀವನದ ಎಲ್ಲ ದಿನಗಳನ್ನ ಆನಂದಿಸಲಿ.+ ಆದ್ರೆ ಮುಂದೆ ಕತ್ತಲೆಯ ದಿನಗಳು ಬಂದಾಗ ಅವು ಜಾಸ್ತಿ ಇರಬಹುದು ಅಂತ ಮರಿದಿರಲಿ. ಮುಂದೆ ಬರೋ ಆ ದಿನಗಳೆಲ್ಲ ವ್ಯರ್ಥನೇ.+  ಯುವಕನೇ, ನಿನ್ನ ಯೌವನದಲ್ಲಿ ಖುಷಿಪಡು. ನಿನ್ನ ಯೌವನದ ದಿನಗಳಲ್ಲಿ ಆನಂದಪಡು. ನಿನ್ನ ಮನಸ್ಸು ಬಯಸಿದ್ದನ್ನ ಮಾಡು, ನಿನ್ನ ಕಣ್ಣು ಸೆಳೆದಲ್ಲೆಲ್ಲ ಹೋಗು. ಆದ್ರೆ ನೀನು ಏನೇ ಮಾಡಿದ್ರೂ ಅದಕ್ಕೆಲ್ಲ ಸತ್ಯ ದೇವರು ಲೆಕ್ಕ ಕೇಳ್ತಾನೆ ಅಂತ ನಿನಗೆ ಗೊತ್ತಿರಲಿ.+ 10  ಹಾಗಾಗಿ ಕಳವಳ ಉಂಟುಮಾಡೋ ವಿಷ್ಯಗಳನ್ನ ನಿನ್ನ ಮನಸ್ಸಿಂದ ತೆಗೆದುಹಾಕು. ನಿನ್ನ ದೇಹಕ್ಕೆ ಹಾನಿ ಮಾಡೋ ವಿಷ್ಯಗಳನ್ನ ದೂರಮಾಡು. ಯಾಕಂದ್ರೆ ಯೌವನ, ಜೀವನದ ಉದಯ ಕಾಲ ಬೇಗ ಕಳೆದುಹೋಗುತ್ತೆ.*+

ಪಾದಟಿಪ್ಪಣಿ

ಇದಕ್ಕೆ ಹೀಬ್ರುನಲ್ಲಿ ಬಳಸಿರೋ ದೇವರ ಪವಿತ್ರಶಕ್ತಿಗೂ ಸೂಚಿಸಬಹುದು.
ಅಥವಾ “ವ್ಯರ್ಥ ಆಗುತ್ತೆ.”