ಪ್ರಸಂಗಿ 1:1-18

  • ಎಲ್ಲನೂ ವ್ಯರ್ಥ (1-11)

    • ಭೂಮಿ ಯಾವಾಗ್ಲೂ ಇರುತ್ತೆ (4)

    • ನೈಸರ್ಗಿಕ ಚಕ್ರಗಳು (5-7)

    • ಭೂಮಿಯಲ್ಲಿ ಹೊಸದೇನೂ ಇಲ್ಲ (9)

  • ಮನುಷ್ಯನ ವಿವೇಕ ಸೀಮಿತ (12-18)

    • ಗಾಳಿ ಹಿಡಿಯೋಕೆ ಓಡಿದ ಹಾಗೆ (14)

1  ದಾವೀದನ ಮಗನೂ ಯೆರೂಸಲೇಮಲ್ಲಿ+ ಆಳ್ತಿರೋ ರಾಜನೂ ಆದ ಪ್ರಸಂಗಿಯ*+ ಮಾತುಗಳು.   ಪ್ರಸಂಗಿ ಹೇಳೋದು ಏನಂದ್ರೆ “ವ್ಯರ್ಥನೇ ವ್ಯರ್ಥ,ವ್ಯರ್ಥನೇ ವ್ಯರ್ಥ! ಎಲ್ಲನೂ ವ್ಯರ್ಥ!”+   ಈ ಭೂಮಿಯಲ್ಲಿ* ಒಬ್ಬ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದ್ರೂಆ ಎಲ್ಲ ಶ್ರಮದಿಂದ ಅವನಿಗೇನು ಲಾಭ?+   ಒಂದು ಪೀಳಿಗೆ ಹೋಗುತ್ತೆ, ಇನ್ನೊಂದು ಪೀಳಿಗೆ ಬರುತ್ತೆ,ಆದ್ರೆ ಭೂಮಿ ಶಾಶ್ವತವಾಗಿ ಇರುತ್ತೆ.*+   ಸೂರ್ಯ ಹುಟ್ತಾನೆ, ಮುಳುಗ್ತಾನೆ,ಹುಟ್ಟಿದ ಜಾಗಕ್ಕೆ ಓಡಿ ಹೋಗಿ ಮತ್ತೆ ಹುಟ್ತಾನೆ.+   ಗಾಳಿ ದಕ್ಷಿಣಕ್ಕೆ ಬೀಸುತ್ತೆ, ಸುತ್ತು ಹಾಕಿ ಮತ್ತೆ ಉತ್ತರಕ್ಕೆ ಬರುತ್ತೆ,ಹೀಗೆ ಮತ್ತೆಮತ್ತೆ ಸುತ್ತು ಹಾಕ್ತಾ ಇರುತ್ತೆ, ಅದು ನಿಲ್ಲೋದೇ ಇಲ್ಲ.   ನದಿಗಳೆಲ್ಲಾ* ಸಮುದ್ರಕ್ಕೆ ಹರಿದು ಹೋಗುತ್ತೆ, ಆದ್ರೂ ಸಮುದ್ರ ತುಂಬಲ್ಲ.+ ಅವು ಎಲ್ಲಿಂದ ಹರಿದು ಬಂದ್ವೋ ಆ ಸ್ಥಳಕ್ಕೇ ವಾಪಸ್‌ ಹೋಗ್ತವೆ ಮತ್ತೆ ಅಲ್ಲಿಂದ ಹರಿತವೆ.+   ಎಲ್ಲ ವಿಷ್ಯಗಳು ಮನುಷ್ಯನನ್ನ ಬಳಲಿಸೋ ವಿಷ್ಯಗಳೇ,ಅವುಗಳನ್ನ ಯಾರೂ ವಿವರಿಸಕ್ಕಾಗಲ್ಲ. ಎಷ್ಟು ನೋಡಿದ್ರೂ ಕಣ್ಣಿಗೆ ತೃಪ್ತಿ ಆಗಲ್ಲ,ಎಷ್ಟು ಕೇಳಿಸಿಕೊಂಡ್ರೂ ಕಿವಿಗೆ ತೃಪ್ತಿ ಆಗಲ್ಲ.   ಇಲ್ಲಿ ತನಕ ನಡೆದದ್ದೇ ನಡೆಯುತ್ತೆ,ಇಲ್ಲಿ ತನಕ ಮಾಡಿದ್ದನ್ನೇ ಮಾಡಲಾಗುತ್ತೆ,ಭೂಮಿಯಲ್ಲಿ ಹೊಸದೇನೂ ಇಲ್ಲ.+ 10  “ನೋಡಿಲ್ಲಿ, ಇದು ಹೊಸದು” ಅಂತ ಹೇಳೋಕೆ ಏನಾದ್ರೂ ಇದ್ಯಾ? ಅದು ಹಿಂದಿನ ಕಾಲದಿಂದಾನೂ ಇರೋದೇ,ಅದು ನಮ್ಮ ಕಾಲಕ್ಕಿಂತ ಮುಂಚಿನಿಂದಾನೂ ಇರೋದೇ. 11  ಹಿಂದಿನ ಕಾಲದ ಜನ್ರನ್ನ ಯಾರೂ ನೆನಪಿಡಲ್ಲ,ಅವ್ರ ನಂತ್ರ ಬರೋ ಜನ್ರನ್ನೂ ನೆನಪಿಡಲ್ಲ,ಅವ್ರಾದ ಮೇಲೆ ಬರೋ ಪೀಳಿಗೆನೂ ನೆನಪಿಡಲ್ಲ.+ 12  ಪ್ರಸಂಗಿ ಆಗಿರೋ ನಾನು ಯೆರೂಸಲೇಮಲ್ಲಿ ಇಸ್ರಾಯೇಲ್ಯರ ಮೇಲೆ ರಾಜನಾಗಿ ಆಳ್ತಿದ್ದೀನಿ.+ 13  ಆಕಾಶದ ಕೆಳಗೆ ನಡಿತಿರೋ ಪ್ರತಿಯೊಂದನ್ನ+ ವಿವೇಕದಿಂದ+ ಅಧ್ಯಯನ ಮಾಡಿ ಪರೀಕ್ಷಿಸಬೇಕಂತ ನಿರ್ಧಾರ ಮಾಡ್ದೆ. ಮನುಷ್ಯರನ್ನ ಕಾರ್ಯನಿರತರನ್ನಾಗಿ ಇಡೋಕೆ ದೇವರು ಅವ್ರಿಗೆ ಕೊಟ್ಟ ಆಶಾಭಂಗಗೊಳಿಸೋ ಕೆಲಸಗಳನ್ನ ನಾನು ಪರಿಶೋಧಿಸಿದೆ. 14  ಆಕಾಶದ* ಕೆಳಗೆ ನಡೆಯೋ ಎಲ್ಲ ಕೆಲಸಗಳನ್ನ ನಾನು ನೋಡಿದೆ,ಗಾಳಿನ ಹಿಡಿಯೋಕೆ ಓಡಿದ ಹಾಗೆ ಎಲ್ಲಾನೂ ವ್ಯರ್ಥ ಅಂತ ನಾನು ತಿಳ್ಕೊಂಡೆ.+ 15  ಸೊಟ್ಟಗಿರೋದನ್ನ ನೆಟ್ಟಗೆ ಮಾಡೋಕಾಗಲ್ಲ,ಇಲ್ಲದಿರೋದನ್ನ ಲೆಕ್ಕಿಸೋಕಾಗಲ್ಲ. 16  ಆಮೇಲೆ ನಾನು ಮನಸ್ಸಲ್ಲೇ “ಆಹಾ! ನಾನು ತುಂಬ ವಿವೇಕ ಪಡೆದಿದ್ದೀನಿ. ಯೆರೂಸಲೇಮಲ್ಲಿ ನನಗಿಂತ ಮುಂಚೆ ಇದ್ದ ಎಲ್ರಿಗಿಂತ ಹೆಚ್ಚು ವಿವೇಕ ಸಂಪಾದಿಸಿದ್ದೀನಿ.+ ನಾನು* ಅಪಾರ ಜ್ಞಾನ, ವಿವೇಕ ಪಡ್ಕೊಂಡಿದ್ದೀನಿ”+ ಅಂತ ಯೋಚಿಸಿದೆ. 17  ವಿವೇಕದ ಬಗ್ಗೆ, ಹುಚ್ಚುತನದ* ಬಗ್ಗೆ ಮತ್ತು ಮೂರ್ಖತನದ ಬಗ್ಗೆ ತಿಳ್ಕೊಳ್ಳೋಕೆ ನಾನು ಪ್ರಯಾಸಪಟ್ಟೆ,+ ಇದು ಕೂಡ ಗಾಳಿಯನ್ನ ಹಿಡಿಯೋಕೆ ಓಡಿದ ಹಾಗೆ ಅಂತ ತಿಳ್ಕೊಂಡೆ. 18  ಹೆಚ್ಚು ವಿವೇಕ ಪಡೆದವನಿಗೆ ಹೆಚ್ಚು ಹತಾಶೆ,ಹಾಗೇ ತುಂಬ ಜ್ಞಾನ ಪಡೆದವನಿಗೆ ತುಂಬ ವೇದನೆ.+

ಪಾದಟಿಪ್ಪಣಿ

ಅಥವಾ “ಸಭೆ ಸೇರಿಸುವವನ, ಜನ್ರನ್ನ ಒಟ್ಟುಗೂಡಿಸುವವನ.”
ಅಕ್ಷ. “ಸೂರ್ಯನ ಕೆಳಗೆ.”
ಅಕ್ಷ. “ನಿಲ್ಲುತ್ತೆ.”
ಅಥವಾ “ಚಳಿಗಾಲದ ನದಿಗಳೆಲ್ಲಾ; ಬೇರೆ ಕಾಲಗಳಲ್ಲಿ ಹರಿಯೋ ನದಿಗಳೆಲ್ಲಾ.”
ಅಕ್ಷ. “ಸೂರ್ಯನ.”
ಅಕ್ಷ. “ನನ್ನ ಹೃದಯ.”
ಅಥವಾ “ವಿಪರೀತ ಅವಿವೇಕದ.”