ನಹೂಮ 1:1-15

  • ದೇವರು ತನ್ನ ಶತ್ರುಗಳ ವಿರುದ್ಧ ಸೇಡು ತೀರಿಸ್ತಾನೆ (1-7)

    • ತನ್ನನ್ನ ಮಾತ್ರ ಆರಾಧಿಸಬೇಕು ಅಂತ ದೇವರು ಬಯಸ್ತಾನೆ (2)

    • ತನ್ನನ್ನ ಆಶ್ರಯಿಸೋ ಜನ್ರಿಗೆ ಯೆಹೋವ ಕಾಳಜಿ ವಹಿಸ್ತಾನೆ (7)

  • ನಿನೆವೆ ನಾಶ ಆಗಬೇಕು (8-14)

    • ಎರಡನೇ ಸಲ ಕಷ್ಟ ತರೋ ಅಗತ್ಯ ಇರಲ್ಲ (9)

  • ಯೆಹೂದಕ್ಕೆ ಸುವಾರ್ತೆ (15)

1  ಇದು ಎಲ್ಕೋಷ್‌ ಊರಿನ ನಹೂಮಗೆ* ಸಿಕ್ಕಿದ ದರ್ಶನವನ್ನ* ಹೇಳೋ ಪುಸ್ತಕ. ಇದ್ರಲ್ಲಿ ನಿನೆವೆ+ ವಿರುದ್ಧ ತೀರ್ಪಿನ ಸಂದೇಶ ಇದೆ. ಅದೇನಂದ್ರೆ:   ಜನ್ರು ತನ್ನನ್ನ ಮಾತ್ರ ಆರಾಧಿಸಬೇಕು ಅಂತ* ಬಯಸೋ ದೇವರು ಯೆಹೋವ,+ಯೆಹೋವ ತನ್ನ ಶತ್ರುಗಳಿಗೆ ಸರಿಯಾದ ಶಿಕ್ಷೆ ಕೊಡ್ತಾನೆ,ಅವರು ಮಾಡಿದ ಕೆಟ್ಟ ಕೆಲಸಗಳನ್ನ ಆತನು ಮರಿಯಲ್ಲ. ಆ ಶತ್ರುಗಳ ಮೇಲೆ ತನ್ನ ಕೋಪ ಸುರಿಸ್ತಾನೆ.+ ಯೆಹೋವ ತನ್ನ ಶತ್ರುಗಳ ವಿರುದ್ಧ ಸೇಡು ತೀರಿಸ್ಕೊಳ್ತಾನೆ.   ಯೆಹೋವ ತಟ್ಟಂತ ಕೋಪ ಮಾಡ್ಕೊಳ್ಳಲ್ಲ,+ ಆತನು ಮಹಾ ಶಕ್ತಿಶಾಲಿ.+ ಹಾಗಿದ್ರೂ ತಪ್ಪು ಮಾಡುವವ್ರಿಗೆ ಯೆಹೋವ ತಕ್ಕ ಶಿಕ್ಷೆ ಕೊಟ್ಟೇ ಕೊಡ್ತಾನೆ.+ ಆತನು ಬರುವಾಗ ನಾಶ ಮಾಡೋ ಗಾಳಿ, ಬಿರುಗಾಳಿ ಬೀಸುತ್ತೆ. ಮೋಡಗಳು ಆತನ ಕಾಲಿನ ಧೂಳು ತರ ಇವೆ.+   ಆತನು ಸಮುದ್ರವನ್ನ ಗದರಿಸಿ,+ ಒಣಗಿಸಿ ಬಿಡ್ತಾನೆ,ಎಲ್ಲ ನದಿಗಳು ಬತ್ತಿ ಹೋಗೋ ತರ ಮಾಡ್ತಾನೆ.+ ಬಾಷಾನಿನ ಮತ್ತು ಕರ್ಮೆಲಿನ ಸೌಂದರ್ಯ ಹಾಳಾಗಿ ಹೋಗುತ್ತೆ,+ಲೆಬನೋನಿನ ಹೂಗಳು ಬಾಡಿಹೋಗುತ್ತೆ.   ಆತನಿಂದಾಗಿ ಪರ್ವತಗಳು ಕಂಪಿಸುತ್ತೆ,ಬೆಟ್ಟಗಳು ಕರಗಿಹೋಗುತ್ತೆ.+ ಆತನ ಮುಂದೆ ಭೂಮಿ ನಡುಗುತ್ತೆ,ಲೋಕ, ಅದ್ರಲ್ಲಿ ಇರೋ ಜನ ನಡುಗ್ತಾರೆ.+   ಆತನ ಕೋಪದ ಮುಂದೆ ಯಾರಿಗೆ ನಿಲ್ಲಕ್ಕಾಗುತ್ತೆ?+ ಆತನ ಕೋಪವನ್ನ ಯಾರಿಂದ ತಾಳ್ಕೊಳ್ಳಕಾಗುತ್ತೆ?+ ಆತನ ಉಗ್ರ ಕೋಪ ಬೆಂಕಿ ತರ ಉರಿಯುತ್ತೆಆತನಿಂದಾಗಿ ಬಂಡೆಗಳು ಚೂರುಚೂರಾಗುತ್ತೆ.   ಯೆಹೋವ ಒಳ್ಳೆಯವನು,+ ಕಷ್ಟಕಾಲದಲ್ಲಿ ಭದ್ರ ಕೋಟೆಯಾಗ್ತಾನೆ.+ ಆತನನ್ನ ಆಶ್ರಯಿಸೋ ಜನ್ರ ಕಾಳಜಿವಹಿಸ್ತಾನೆ.+   ಆತನು ತರೋ ಭೀಕರ ಪ್ರವಾಹ ನಿನೆವೆಯನ್ನ ಸರ್ವನಾಶ ಮಾಡುತ್ತೆ. ಕತ್ತಲು ಆತನ ಶತ್ರುಗಳನ್ನ ಅಟ್ಟಿಸ್ಕೊಂಡು ಹೋಗುತ್ತೆ.   ಯೆಹೋವನ ವಿರುದ್ಧ ನೀವು ಯಾವ ಸಂಚು ಮಾಡ್ತೀರಾ? ಆತನು ನಿಮ್ಮನ್ನ ಸಂಪೂರ್ಣವಾಗಿ ನಾಶಮಾಡ್ತಾನೆ. ಇನ್ನೊಂದು ಸಲ ಕಷ್ಟ ತರೋ ಅಗತ್ಯ ಆತನಿಗಿರಲ್ಲ.+ 10  ಅವರು ಮುಳ್ಳುಗಳ ತರ ಹೆಣೆದ್ಕೊಂಡಿದ್ರೂ,ಮದ್ಯ* ಕುಡಿದು ಅಮಲೇರಿದವ್ರ ತರ ಆಗಿದ್ರೂಹುಲ್ಲು ಕಡ್ಡಿ ತರ ಸುಟ್ಟು ಬೂದಿ ಆಗ್ತಾರೆ. 11  ಯೆಹೋವನ ವಿರುದ್ಧ ಸಂಚು ಮಾಡುವವನು ನಿನ್ನಿಂದ ಬರ್ತಾನೆ,ಕೆಲಸಕ್ಕೆ ಬಾರದ ಸಲಹೆ ಕೊಡ್ತಾನೆ. 12  ಯೆಹೋವ ಹೀಗೆ ಹೇಳ್ತಿದ್ದಾನೆ: “ಅವರು ಎಷ್ಟೇ ಬಲಿಷ್ಠರಾಗಿದ್ರೂ, ಎಷ್ಟೇ ಜನ ಇದ್ರೂ,ಅವರು ಸತ್ತುಹೋಗ್ತಾರೆ, ನಾಶವಾಗ್ತಾರೆ.* ನಾನು ನಿನಗೆ* ಕಷ್ಟಕೊಟ್ಟಿದ್ದೀನಿ, ಆದ್ರೆ ಇನ್ನು ಮುಂದೆ ಕೊಡಲ್ಲ. 13  ಈಗ ನಾನು ನಿನ್ನ ಮೇಲಿರೋ ನೊಗವನ್ನ ತೆಗೆದು ಅದನ್ನ ಮುರಿದುಹಾಕ್ತೀನಿ,+ನಿನ್ನ ಬೇಡಿಗಳನ್ನ ಎರಡು ತುಂಡು ಮಾಡ್ತೀನಿ. 14  ಯೆಹೋವ ನಿನ್ನ* ಬಗ್ಗೆ ಹೀಗೆ ಆಜ್ಞೆ ಕೊಟ್ಟಿದ್ದಾನೆ: ‘ನಿನ್ನ ಹೆಸ್ರನ್ನ ಇಟ್ಕೊಳ್ಳೋರು ಇನ್ಮುಂದೆ ಹುಟ್ಟಲ್ಲ,ಗುಡಿಯಲ್ಲಿರೋ ನಿನ್ನ ದೇವರುಗಳ ಕೆತ್ತಿದ ಮೂರ್ತಿಗಳನ್ನ, ಅಚ್ಚಲ್ಲಿ ಹೊಯ್ದು ಮಾಡಿದ ಮೂರ್ತಿಗಳನ್ನ ನಾಶಮಾಡ್ತೀನಿ. ನಿನಗೆ ಸಮಾಧಿಯನ್ನ ಸಿದ್ಧಮಾಡ್ತೀನಿ, ಯಾಕಂದ್ರೆ ನೀನೊಬ್ಬ ನೀಚ.’ 15  ನೋಡು! ಸಿಹಿಸುದ್ದಿಯನ್ನ ತರ್ತಾ ಇರೋ,ಶಾಂತಿಯನ್ನ ಸಾರುತ್ತಾ ಇರೋ ವ್ಯಕ್ತಿ ಬೆಟ್ಟಗಳ ಮೇಲೆ ಬರ್ತಿದ್ದಾನೆ.+ ಯೆಹೂದವೇ, ನಿನ್ನ ಹಬ್ಬಗಳನ್ನ ಆಚರಿಸು,+ ನಿನ್ನ ಹರಕೆಗಳನ್ನ ತೀರಿಸು. ಯಾಕಂದ್ರೆ ಕೆಲಸಕ್ಕೆ ಬಾರದ ಯಾವ ವ್ಯಕ್ತಿನೂ ನಿನ್ನನ್ನ ಇನ್ಮುಂದೆ ದಾಟಿ ಹೋಗಲ್ಲ. ಅವನು ಪೂರ್ತಿ ನಾಶವಾಗಿ ಹೋಗ್ತಾನೆ .”

ಪಾದಟಿಪ್ಪಣಿ

ಅರ್ಥ “ಸಮಾಧಾನ ಮಾಡುವವನು.”
ಅಥವಾ “ಅನನ್ಯ ಭಕ್ತಿಯನ್ನ.”
ಅಥವಾ “ಗೋದಿಯಿಂದ ಮಾಡಿದ ಮದ್ಯ.”
ಬಹುಶಃ, “ಹಾದುಹೋಗ್ತಾರೆ.”
ಅದು, ಯೆಹೂದ.
ಅದು, ಅಶ್ಶೂರ್ಯ.