ಧರ್ಮೋಪದೇಶಕಾಂಡ 30:1-20

  • ಯೆಹೋವನ ಹತ್ರ ವಾಪಸ್‌ ಬರೋದು (1-10)

  • ಯೆಹೋವನ ಆಜ್ಞೆಗಳು ಪಾಲಿಸೋಕೆ ಕಷ್ಟವಲ್ಲ (11-14)

  • ಜೀವ ಮರಣದ ಆಯ್ಕೆ (15-20)

30  ಆರಿಸ್ಕೊಳ್ಳೋಕೆ ನಿಮ್ಮ ಮುಂದೆ ಇಟ್ಟಿರೋ ಆಶೀರ್ವಾದ, ಶಾಪಗಳನ್ನೆಲ್ಲ ನೀವು ಅನುಭವಿಸ್ತೀರ.+ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಎಲ್ಲ ಜನ್ರ ಮಧ್ಯ ಚದರಿಸಿಬಿಟ್ಟಾಗ+ ಅಲ್ಲಿ ಇದನ್ನೆಲ್ಲ ನೆನಪು ಮಾಡ್ಕೊಳ್ಳಬೇಕು.+  ನಿಮ್ಮ ದೇವರಾದ ಯೆಹೋವನ ಹತ್ರ ವಾಪಸ್‌ ಬರಬೇಕು.+ ನಾನು ಇವತ್ತು ಹೇಳಿರೋ ಪ್ರಕಾರ ನೀವು, ನಿಮ್ಮ ಮಕ್ಕಳು ಆತನ ಮಾತನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ಪಾಲಿಸಬೇಕು.+  ಆಗ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಬಂದಿವಾಸದಿಂದ ಬಿಡುಗಡೆ ಮಾಡಿ+ ಕರುಣೆ ತೋರಿಸ್ತಾನೆ.+ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಚದರಿಸಿಬಿಟ್ಟ ಎಲ್ಲ ಕಡೆಯಿಂದ ಸೇರಿಸಿ ನಿಮ್ಮ ದೇಶಕ್ಕೆ ವಾಪಸ್‌ ಕರ್ಕೊಂಡು ಬರ್ತಾನೆ.+  ನೀವು ಭೂಮಿಯ ಯಾವುದೇ ಮೂಲೆಗೆ ಚದರಿ ಹೋಗಿದ್ರೂ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಅಲ್ಲಿಂದ ವಾಪಸ್‌ ಕರ್ಕೊಂಡು ಬರ್ತಾನೆ.+  ನಿಮ್ಮ ಪೂರ್ವಜರು ವಶ ಮಾಡ್ಕೊಂಡ ದೇಶಕ್ಕೆ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಮತ್ತೆ ಸೇರಿಸ್ತಾನೆ. ನೀವು ಅದನ್ನ ಮತ್ತೆ ವಶ ಮಾಡ್ಕೊಳ್ತೀರ. ಅಲ್ಲಿ ದೇವರು ನಿಮ್ಮನ್ನ ನಿಮ್ಮ ಪೂರ್ವಜರಿಗಿಂತ ಜಾಸ್ತಿ ಸಂಖ್ಯೆ ಆಗೋ ತರ ಮಾಡ್ತಾನೆ.+  ನಿಮ್ಮ ದೇವರಾದ ಯೆಹೋವ ನಿಮ್ಮ, ನಿಮ್ಮ ಮಕ್ಕಳ ಹೃದಯಗಳನ್ನ ಶುದ್ಧ ಮಾಡ್ತಾನೆ.*+ ಆಗ ನೀವು ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸ್ತೀರ, ಬದುಕಿ ಬಾಳ್ತೀರ.+  ನಿಮ್ಮನ್ನ ದ್ವೇಷಿಸಿ ಹಿಂಸಿಸಿದ ನಿಮ್ಮ ಶತ್ರುಗಳ ಮೇಲೆ ನಿಮ್ಮ ದೇವರಾದ ಯೆಹೋವ ಈ ಎಲ್ಲ ಶಾಪಗಳು ಬರೋ ಹಾಗೆ ಮಾಡ್ತಾನೆ.+  ನೀವು ಮತ್ತೆ ಯೆಹೋವನ ಮಾತು ಕೇಳೋಕೆ, ನಾನು ಇವತ್ತು ನಿಮಗೆ ಕೊಡೋ ಎಲ್ಲ ಆಜ್ಞೆಗಳನ್ನ ಪಾಲಿಸೋಕೆ ಶುರುಮಾಡಿದ್ರೆ  ನೀವು ಕೈಹಾಕಿದ ಕೆಲಸವನ್ನೆಲ್ಲ ನಿಮ್ಮ ದೇವರಾದ ಯೆಹೋವ ಆಶೀರ್ವದಿಸ್ತಾನೆ.+ ನಿಮಗೆ ಬೇಕಾಗಿರೋ ಎಲ್ಲ ಕೊಡ್ತಾನೆ. ನಿಮ್ಮ ವಂಶ ತುಂಬ ಬೆಳೆಯುತ್ತೆ, ಪ್ರಾಣಿಗಳು ಹೆಚ್ಚಾಗುತ್ತೆ, ಜಮೀನಲ್ಲಿ ತುಂಬ ಬೆಳೆ ಬರುತ್ತೆ. ನಿಮ್ಮ ಪೂರ್ವಜರು ಸಂತೋಷವಾಗಿ ಇರೋ ತರ ಮಾಡಿದ ಹಾಗೆ ನೀವು ಕೂಡ ಸಂತೋಷವಾಗಿ ಇರೋ ತರ ಯೆಹೋವ ಮಾಡ್ತಾನೆ.+ 10  ನಿಮ್ಮ ದೇವರಾದ ಯೆಹೋವ ಹೇಳಿದನ್ನ, ನಿಯಮ ಪುಸ್ತಕದಲ್ಲಿರೋ ಆತನ ಆಜ್ಞೆಗಳನ್ನ, ನಿಯಮಗಳನ್ನ, ಪಾಲಿಸಿದ್ರೆ ಮತ್ತು ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ನಿಮ್ಮ ದೇವರಾದ ಯೆಹೋವನ ಹತ್ರ ವಾಪಸ್‌ ಬಂದ್ರೆ ಆತನು ನಿಮ್ಮನ್ನ ಆ ರೀತಿ ಆಶೀರ್ವದಿಸ್ತಾನೆ.+ 11  ನಾನು ಇವತ್ತು ನಿಮಗೆ ಕೊಟ್ಟ ಈ ಆಜ್ಞೆಗಳು ನಿಮಗೆ ಪಾಲಿಸೋಕೆ ತುಂಬ ಕಷ್ಟ ಆಗಲ್ಲ. ಅವು ನಿಮಗೆ ಕೈಗೆಟುಕದಷ್ಟು ದೂರನೂ ಇಲ್ಲ.+ 12  ‘ನಮಗೋಸ್ಕರ ಸ್ವರ್ಗಕ್ಕೆ ಹೋಗಿ ಅವುಗಳನ್ನ ಯಾರು ತಗೊಂಡು ಬರ್ತಾರೆ? ತಂದ್ರೆ ನಾವು ಪಾಲಿಸಬಹುದಿತ್ತಲ್ಲಾ’+ ಅಂತ ಹೇಳೋಕೆ ಅವುಗಳೇನು ಸ್ವರ್ಗದಲ್ಲಿಲ್ಲ. 13  ಅಥವಾ ‘ನಮಗೋಸ್ಕರ ಸಮುದ್ರ ದಾಟಿ ಹೋಗಿ ಯಾರು ತಗೊಂಡು ಬರ್ತಾರೆ? ತಂದ್ರೆ ನಾವು ಪಾಲಿಸಬಹುದಿತ್ತಲ್ಲಾ’ ಅಂತ ಹೇಳೋಕೆ ಅವುಗಳೇನು ಸಮುದ್ರದ ಆಕಡೆ ಇಲ್ಲ. 14  ನಿಯಮ ಪುಸ್ತಕದಲ್ಲಿರೋ ಮಾತುಗಳು ನಿಮ್ಮ ಹತ್ರನೇ ಇದೆ, ನಿಮ್ಮ ಬಾಯಲ್ಲೇ ಹೃದಯದಲ್ಲೇ ಇದೆ.+ ಹಾಗಾಗಿ ನಿಮಗೆ ಅದನ್ನೆಲ್ಲ ಪಾಲಿಸೋಕೆ ಆಗುತ್ತೆ.+ 15  ನೋಡಿ, ಜೀವ ಅಥವಾ ಮರಣ, ಒಳ್ಳೇದು ಅಥವಾ ಕೆಟ್ಟದು ಆಯ್ಕೆ ಮಾಡೋ ಅವಕಾಶನ ಇವತ್ತು ನಿಮ್ಮ ಮುಂದೆ ಇಟ್ಟಿದ್ದೀನಿ.+ 16  ನಾನು ಇವತ್ತು ಕೊಡ್ತಿರೋ ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನ ಪಾಲಿಸಿದ್ರೆ, ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಿದ್ರೆ,+ ಎಲ್ಲ ವಿಷ್ಯದಲ್ಲಿ ಆತನು ಹೇಳಿದ ಹಾಗೆ ಕೇಳಿದ್ರೆ, ಆತನ ಆಜ್ಞೆ, ನಿಯಮ, ತೀರ್ಪುಗಳನ್ನ ಪಾಲಿಸ್ತಾ ಇದ್ರೆ ಬದುಕಿ ಬಾಳ್ತೀರ.+ ನಿಮ್ಮ ಸಂಖ್ಯೆ ಜಾಸ್ತಿ ಆಗುತ್ತೆ. ನೀವು ವಶ ಮಾಡ್ಕೊಳ್ಳೋ ದೇಶದಲ್ಲಿ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಆಶೀರ್ವದಿಸ್ತಾನೆ.+ 17  ಆದ್ರೆ ನಿಮ್ಮ ದೇವರಿಂದ ದೂರ ಹೋಗಿ+ ಆತನ ಮಾತು ಕೇಳದೆ, ಬೇರೆ ದೇವರುಗಳಿಗೆ ಮರುಳಾಗಿ ಅಡ್ಡಬಿದ್ದು ಅವುಗಳ ಸೇವೆ ಮಾಡಿದ್ರೆ+ 18  ನಾಶವಾಗಿ ಹೋಗ್ತೀರ+ ಅಂತ ಇವತ್ತೇ ನಿಮಗೆ ಹೇಳ್ತಾ ಇದ್ದೀನಿ. ನೀವು ಯೋರ್ದನ್‌ ನದಿ ದಾಟಿ ವಶ ಮಾಡ್ಕೊಳ್ಳೋ ದೇಶದಲ್ಲಿ ಜಾಸ್ತಿ ಕಾಲ ಬದುಕಲ್ಲ. 19  ಜೀವ ಅಥವಾ ಮರಣ, ಆಶೀರ್ವಾದ ಅಥವಾ ಶಾಪ ಆಯ್ಕೆ ಮಾಡೋ ಅವಕಾಶ ಇವತ್ತು ನಿಮ್ಮ ಮುಂದೆ ಇಟ್ಟಿದ್ದೀನಿ.+ ನೀವೇನು ಮಾಡ್ತಿರೋ ಅದಕ್ಕೆ ಭೂಮಿ, ಆಕಾಶನೇ ಸಾಕ್ಷಿ. ನೀವು, ನಿಮ್ಮ ವಂಶದವರು+ ಬದುಕಿ ಬಾಳೋ ತರ ಜೀವವನ್ನೇ ಆರಿಸ್ಕೊಳ್ಳಿ.+ 20  ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಬೇಕು,+ ಆತನ ಮಾತು ಕೇಳಬೇಕು, ಆತನಿಗೆ ಯಾವಾಗ್ಲೂ ನಿಷ್ಠೆಯಿಂದ ಇರಬೇಕು.+ ಯಾಕಂದ್ರೆ ನಿಮಗೆ ಜೀವ ಕೊಡೋನು, ನಿಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ, ಯಾಕೋಬರಿಗೆ ಕೊಡ್ತೀನಿ+ ಅಂತ ಮಾತು ಕೊಟ್ಟ ದೇಶದಲ್ಲಿ ನಿಮ್ಮನ್ನ ತುಂಬ ವರ್ಷ ಬದುಕೋ ತರ ಮಾಡೋನು ಯೆಹೋವನೇ.”

ಪಾದಟಿಪ್ಪಣಿ

ಅಕ್ಷ. “ಹೃದಯಕ್ಕೇ ಸುನ್ನತಿ ಮಾಡ್ತಾನೆ.”