ಧರ್ಮೋಪದೇಶಕಾಂಡ 19:1-21

  • ಕೊಲೆಯ ಅಪರಾಧ ಮತ್ತು ಆಶ್ರಯ ನಗರಗಳು (1-13)

  • ಗಡಿ ಸರಿಸಬಾರದು (14)

  • ನ್ಯಾಯವಿಚಾರಣೆಯಲ್ಲಿ ಸಾಕ್ಷಿಗಳು (15-21)

    • ಇಬ್ರು ಮೂವರು ಸಾಕ್ಷಿಗಳು ಬೇಕು (15)

19  ನಿಮ್ಮ ದೇವರಾದ ಯೆಹೋವ ನಿಮಗೆ ಕೊಡಬೇಕಂತಿರೋ ದೇಶದಲ್ಲಿ ವಾಸಿಸ್ತಿರೋ ಜನ್ರನ್ನ ನಾಶ ಮಾಡಿ ಅವ್ರ ದೇಶನ ಯೆಹೋವ ನಿಮಗೆ ಕೊಡ್ತಾನೆ. ಅದನ್ನ ನಿಮ್ಮದಾಗಿ ಮಾಡ್ಕೊಂಡು ಅವ್ರ ಪಟ್ಟಣಗಳಲ್ಲಿ, ಮನೆಗಳಲ್ಲಿ ವಾಸಿಸ್ತೀರ.+  ನಿಮ್ಮ ದೇವರಾದ ಯೆಹೋವ ಕೊಡೋ ಆ ದೇಶದಲ್ಲಿ ನೀವು ಆಶ್ರಯನಗರ ಮಾಡೋಕೆ ಮೂರು ಪಟ್ಟಣಗಳನ್ನ ಆರಿಸ್ಕೊಳ್ಳಬೇಕು.+  ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟಿರೋ ಆ ದೇಶನ ಮೂರು ಭಾಗ ಮಾಡಿ ಒಂದೊಂದು ಭಾಗದಲ್ಲಿ ಒಂದೊಂದು ಆಶ್ರಯನಗರ ಇರಬೇಕು. ಅಲ್ಲಿಗೆ ಹೋಗೋಕೆ ರಸ್ತೆನೂ ಮಾಡ್ಬೇಕು. ಆಗ ಯಾರನ್ನಾದ್ರು ಸಾಯಿಸಿದವನು ಅಲ್ಲಿ ಓಡಿಹೋಗೋಕೆ ಸುಲಭ ಆಗುತ್ತೆ.  ಆಶ್ರಯನಗರದ ವಿಷ್ಯದಲ್ಲಿ ಈ ನಿಯಮ ಪಾಲಿಸಬೇಕು: ಯಾರಾದ್ರು ಅಪ್ಪಿತಪ್ಪಿ ಇನ್ನೊಬ್ಬನನ್ನ ಕೊಂದ್ರೆ ಸತ್ತವನ ಮೇಲೆ ಈ ಹಿಂದೆ ಅವನಿಗೆ ಯಾವುದೇ ದ್ವೇಷ ಇರದಿದ್ರೆ ಅವನು ಆಶ್ರಯನಗರಕ್ಕೆ ಓಡಿಹೋಗಿ ಜೀವ ಉಳಿಸ್ಕೊಬಹುದು.+  ಉದಾಹರಣೆಗೆ, ಇಬ್ರು ಕಟ್ಟಿಗೆ ತರೋಕೆ ಕಾಡಿಗೆ ಹೋಗಿ, ಒಬ್ಬ ಕೊಡಲಿಯಿಂದ ಮರ ಕಡಿತಾ ಇರುವಾಗ ಆ ಕೊಡಲಿ ಜಾರಿ ಇನ್ನೊಬ್ಬನ ಮೇಲೆ ಬಿದ್ದು ಅವನು ಸತ್ರೆ, ಸಾಯಿಸಿದ ಆ ವ್ಯಕ್ತಿ ಯಾವುದಾದ್ರೂ ಆಶ್ರಯನಗರಕ್ಕೆ ಓಡಿಹೋಗಿ ಜೀವ ಉಳಿಸ್ಕೊಬಹುದು.+  ಆ ಆಶ್ರಯನಗರ ತುಂಬ ದೂರ ಇದ್ರೆ ಸೇಡು ತೀರಿಸ್ಕೊಳ್ಳಬೇಕು ಅಂತಿರೋ ವ್ಯಕ್ತಿ+ ಕೋಪದಿಂದ ಅವನನ್ನ ಅಟ್ಟಿಸ್ಕೊಂಡು ದಾರಿಯಲ್ಲೇ ಕೊಲ್ಲೋ ಸಾಧ್ಯತೆ ಇದೆ. ಆದ್ರೆ ಹಾಗೆ ಆಗಬಾರದು. ಆ ವ್ಯಕ್ತಿಗೆ ಸತ್ತವನ ಮೇಲೆ ಈ ಹಿಂದೆ ಯಾವ ದ್ವೇಷನೂ ಇಲ್ದೆ ಇರೋದ್ರಿಂದ ಅವನನ್ನ ಸಾಯಿಸೋದು ಸರಿಯಲ್ಲ.+  ಹಾಗಾಗಿ ಆಶ್ರಯನಗರ ಮಾಡೋಕೆ ಮೂರು ಪಟ್ಟಣಗಳನ್ನ ಆರಿಸಬೇಕು ಅಂತ ನಿಮಗೆ ಆಜ್ಞೆ ಕೊಟ್ಟಿದ್ದೀನಿ.  ನಿಮ್ಮ ದೇವರಾದ ಯೆಹೋವ ನಿಮ್ಮ ಪೂರ್ವಜರಿಗೆ ಮಾತುಕೊಟ್ಟ+ ಹಾಗೆ ನಿಮ್ಮ ಪ್ರದೇಶದ ಗಡಿನ ವಿಶಾಲ ಮಾಡಿ ಈ ಇಡೀ ದೇಶನ ನಿಮ್ಮ ವಶಕ್ಕೆ ಕೊಟ್ಟ ಮೇಲೆ+  ಇನ್ನೂ ಮೂರು ಪಟ್ಟಣಗಳನ್ನ ನೀವು ಆಶ್ರಯನಗರಗಳಾಗಿ ಆರಿಸ್ಕೊಳ್ಳಬೇಕು.+ ನಾನು ಇವತ್ತು ಕೊಟ್ಟ ಆಜ್ಞೆ ಪ್ರಕಾರ ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಿದ್ರೆ, ಎಲ್ಲ ವಿಷ್ಯದಲ್ಲಿ ಆತನು ಹೇಳೋ ರೀತಿ ನಡ್ಕೊಂಡ್ರೆ+ ಮಾತ್ರ ನಿಮಗೆ ಈ ಇಡೀ ದೇಶ ಕೊಡ್ತಾನೆ. 10  ನೀವು ಈ ರೀತಿ ಆಶ್ರಯನಗರಗಳನ್ನ ಆರಿಸ್ಕೊಂಡ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ದೇಶದಲ್ಲಿ ನಿರಪರಾಧಿಗಳ ಕೊಲೆ ಆಗಲ್ಲ.+ ನಿಮ್ಮ ಮೇಲೆನೂ ಕೊಲೆಯ ಅಪರಾಧ ಬರಲ್ಲ.+ 11  ಒಬ್ಬನಿಗೆ ಇನ್ನೊಬ್ಬನ ಮೇಲೆ ದ್ವೇಷ ಇದ್ದು+ ಅವನ ಮೇಲೆ ದಾಳಿ ಮಾಡೋಕೆ ಕಾಯ್ತಾ ಅವಕಾಶ ಸಿಕ್ಕಾಗ ಅವನನ್ನ ಸಾಯೋ ಹಾಗೆ ಹೊಡೆದ್ರೆ, ಅದ್ರಿಂದ ಅವನು ಸತ್ರೆ, ಹೊಡೆದವನು ಆಶ್ರಯನಗರಕ್ಕೆ ಓಡಿಹೋದ್ರೆ 12  ಅವನ ಪಟ್ಟಣದ ಹಿರಿಯರು ಅವನನ್ನ ಆಶ್ರಯನಗರದಿಂದ ಕರೆಸಿ ಸೇಡು ತೀರಿಸ್ಕೊಳ್ಳೋನ ಕೈಗೆ ಒಪ್ಪಿಸಬೇಕು. ಅವನು ಸಾಯಬೇಕು.+ 13  ನೀವು ಅವನಿಗೆ ಕನಿಕರ ತೋರಿಸಬಾರದು. ನಿರಪರಾಧಿಯ ರಕ್ತ ಸುರಿಸಿದ ಅಪರಾಧವನ್ನ ಇಸ್ರಾಯೇಲ್ಯರ ಮಧ್ಯದಿಂದ ತೆಗೆದುಹಾಕಬೇಕು.+ ಆಗ ನಿಮಗೆ ಒಳ್ಳೇದಾಗುತ್ತೆ. 14  ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ನಿಮಗೆ ಆಸ್ತಿ ಸಿಕ್ಕಾಗ ನಿಮ್ಮ ಪೂರ್ವಜರು ಹಾಕಿದ ಗಡಿ ಸರಿಸಿ* ನಿಮ್ಮ ಅಕ್ಕಪಕ್ಕದವರ ಆಸ್ತಿ ಒಳಗೆ ಹಾಕಬಾರದು.+ 15  ಒಬ್ಬ ತಪ್ಪನ್ನ ಅಥವಾ ಪಾಪವನ್ನ ಮಾಡಿದ್ದಾನೆ ಅಂತ ತೀರ್ಮಾನಿಸೋಕೆ ಒಬ್ಬನೇ ಒಬ್ಬ ಸಾಕ್ಷಿ ಹೇಳಿದ್ರೆ ಸಾಕಾಗಲ್ಲ.+ ಇಬ್ರು ಅಥವಾ ಮೂರು ಜನ ಸಾಕ್ಷಿ ಹೇಳಿದ ಮೇಲೆನೇ ತೀರ್ಮಾನ ತಗೊಬೇಕು.+ 16  ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಕೆಟ್ಟದು ಮಾಡಬೇಕು ಅಂತ ಸುಳ್ಳು ಸಾಕ್ಷಿ ಹೇಳಿ ಅವನ ಮೇಲೆ ದೊಡ್ಡ ಆರೋಪ ಹೊರಿಸಿದ್ರೆ+ 17  ಆ ಇಬ್ರೂ ಯೆಹೋವನ ಮುಂದೆ ಅಂದ್ರೆ ಪುರೋಹಿತರ, ನ್ಯಾಯಾಧೀಶರ ಮುಂದೆ ಬರಬೇಕು.+ 18  ಆ ನ್ಯಾಯಾಧೀಶರು ಅದ್ರ ಬಗ್ಗೆ ಚೆನ್ನಾಗಿ ತನಿಖೆ ಮಾಡಬೇಕು.+ ಆಗ ಆ ವ್ಯಕ್ತಿ ಸುಳ್ಳು ಸಾಕ್ಷಿ ಹೇಳಿ ಅವನ ಮೇಲೆ ಸುಳ್ಳಾರೋಪ ಹಾಕಿದ್ದಾನೆ ಅಂತ ಗೊತ್ತಾದ್ರೆ 19  ಆ ವ್ಯಕ್ತಿ ಅವನಿಗೆ ಏನು ಮಾಡಬೇಕಂತ ಸಂಚು ಮಾಡಿದ್ದನೋ ಅದನ್ನೇ ನೀವು ಆ ವ್ಯಕ್ತಿಗೆ ಮಾಡಬೇಕು.+ ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನವನ್ನ ತೆಗಿಬೇಕು.+ 20  ಆಗ ಇದನ್ನ ಕೇಳಿಸ್ಕೊಂಡ ಜನ್ರು ಹೆದರಿ ಮುಂದೆ ಯಾವತ್ತೂ ಅಂಥ ಕೆಟ್ಟ ಕೆಲಸ ಮಾಡಲ್ಲ.+ 21  ನೀವು ಅಂಥವ್ರಿಗೆ ಕನಿಕರ ತೋರಿಸಬಾರದು.+ ಪ್ರಾಣಕ್ಕೆ ಪ್ರಾಣ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು ತೆಗಿಬೇಕು.+

ಪಾದಟಿಪ್ಪಣಿ

ಅಥವಾ “ಕಲ್ಲು ಜರಗಿಸಿ.”