ಜ್ಞಾನೋಕ್ತಿ 7:1-27

  • ದೇವರ ಆಜ್ಞೆಗಳನ್ನ ಕೇಳಿ ಪಾಲಿಸು (1-5)

  • ಅನುಭವ ಇಲ್ಲದ ಯುವಕ ಮೋಸ ಹೋದ (6-27)

    • “ಬಲಿ ಕೊಡೋಕೆ ತಗೊಂಡು ಹೋಗೋ ಹೋರಿ ತರ” (22)

7  ನನ್ನ ಮಗನೇ, ನಾನು ಹೇಳೋದನ್ನ ಕೇಳು,ನನ್ನ ಆಜ್ಞೆಗಳನ್ನ ಬೆಳ್ಳಿ ಬಂಗಾರ ತರ ನೋಡು.+   ನನ್ನ ಆಜ್ಞೆಗಳನ್ನ ಪಾಲಿಸ್ತಾ ಹೆಚ್ಚು ವರ್ಷ ಬದುಕು,+ನಾನು ಕಲಿಸಿದ್ದನ್ನ* ನಿನ್ನ ಕಣ್ಣುಗುಡ್ಡೆ ತರ ಕಾಪಾಡ್ಕೊ.   ಅವುಗಳನ್ನ ನಿನ್ನ ಬೆರಳುಗಳಿಗೆ ಸುತ್ಕೊ,ನಿನ್ನ ಹೃದಯದ ಹಲಗೆ ಮೇಲೆ ಬರ್ಕೊ.+   ವಿವೇಕವನ್ನ “ಅಕ್ಕಾ” ಅಂತ ಕರಿ,ಬುದ್ಧಿಗೆ “ನೀನು ನನ್ನ ಸಂಬಂಧಿ” ಅಂತ ಹೇಳು.   ಆಗ ಅವು ನಡತೆಗೆಟ್ಟ* ಹೆಂಗಸಿಂದ ನಿನ್ನನ್ನ ಕಾಪಾಡುತ್ತೆ,+ನಾಚಿಕೆಗೆಟ್ಟ* ಹೆಂಗಸಿನ ಜೇನಿನಂತ* ಮಾತಿಗೆ ಮರುಳಾಗದ ಹಾಗೆ ನೋಡ್ಕೊಳ್ಳುತ್ತೆ.+   ಒಂದುಸಾರಿ ನನ್ನ ಮನೆ ಕಿಟಕಿ ಹತ್ರ ನಿಂತು,ಜಾಲರಿಯಿಂದ ಕೆಳಗೆ ನೋಡಿದೆ.   ಆಗ ಅನುಭವ ಇಲ್ಲದ ಯುವಕರ ಕಡೆ ನನ್ನ ಗಮನ ಹರಿತು,ಅವ್ರ ಮಧ್ಯ ಬುದ್ಧಿ ಇಲ್ಲದ* ಒಬ್ಬ ಯುವಕನನ್ನ ನೋಡಿದೆ.+   ಅವನು ಆ ಹೆಂಗಸು ಇರೋ ಬೀದಿಗೆ ಹೋದ,ಅವಳ ಮನೆ ಕಡೆ ಹೆಜ್ಜೆ ಹಾಕಿದ.   ಆಗ ಸಂಜೆ ಆಗಿತ್ತು, ಸೂರ್ಯ ಮುಳುಗಿತ್ತು,+ಕತ್ತಲಾಗ್ತಾ ಇತ್ತು, ರಾತ್ರಿ ಆಗ್ತಾ ಇತ್ತು. 10  ನಾನು ನೋಡ್ತಾ ಇದ್ದೆ, ಒಬ್ಬಳು ಆ ಯುವಕನ ಹತ್ರ ಬಂದಳು,ಅವಳು ವೇಶ್ಯೆ ತರ ಬಟ್ಟೆ ಹಾಕೊಂಡಿದ್ದಳು,+ ಅವಳ ಹೃದಯದಲ್ಲಿ ಮೋಸ ತುಂಬಿತ್ತು. 11  ಅವಳು ಬಾಯಿಬಡಕಿ, ಮನಸ್ಸಿಗೆ ಬಂದ ಹಾಗೆ ನಡಿಯೋ ಹಟಮಾರಿ.+ ಅವಳ ಕಾಲು ಮನೆಯಲ್ಲಿ ನಿಲ್ಲಲ್ಲ. 12  ಒಂದು ಕ್ಷಣ ಮನೆ ಹೊರಗಿದ್ರೆ, ಇನ್ನೊಂದು ಕ್ಷಣ ಪಟ್ಟಣದ ಮುಖ್ಯಸ್ಥಳದಲ್ಲಿ* ಇರ್ತಾಳೆ,ಮೂಲೆಮೂಲೆಯಲ್ಲಿ ಅಡಗಿಕೊಂಡು ಹೊಂಚು ಹಾಕೋದೇ ಅವಳ ಕೆಲಸ.+ 13  ಅವಳು ಅವನನ್ನ ಎಳೆದು ಮುತ್ತು ಕೊಟ್ಟಳು,ಒಂಚೂರೂ ನಾಚಿಕೆ ಇಲ್ಲದೆ ಹೀಗಂದಳು: 14  “ನಾನು ಸಮಾಧಾನ ಬಲಿಗಳನ್ನ ಅರ್ಪಿಸಬೇಕಿತ್ತು.+ ಈ ದಿನಾನೇ ನನ್ನ ಹರಕೆಗಳನ್ನ ತೀರಿಸ್ತೀನಿ. 15  ಅದಕ್ಕೆ ನಿನ್ನನ್ನ ನೋಡೋಕೆ ಬಂದೆ,ನಿನ್ನನ್ನ ಹುಡುಕಿದೆ, ನೀನು ನಂಗೆ ಸಿಕ್ಕಿಬಿಟ್ಟೆ! 16  ನನ್ನ ಹಾಸಿಗೆ ಮೇಲೆ ಒಳ್ಳೇ ಬಟ್ಟೆ ಹಾಸಿದ್ದೀನಿ,ಈಜಿಪ್ಟಿನ ಬಣ್ಣಬಣ್ಣದ ನೂಲಿನ ಹೊದಿಕೆಗಳನ್ನ ಹಾಸಿದ್ದೀನಿ.+ 17  ಹಾಸಿಗೆಗೆ ಗಂಧರಸ, ಅಗರು,* ದಾಲ್ಚಿನ್ನಿ ಚಿಮಿಕಿಸಿದ್ದೀನಿ.+ 18  ಬಾ, ಬೆಳಗಾಗೋ ತನಕ ನಾವಿಬ್ರೂ ಪ್ರೀತಿಯಲ್ಲಿ ತೇಲಾಡೋಣ,ಕಾಮದ ಸುಖ ಅನುಭವಿಸೋಣ. 19  ನನ್ನ ಗಂಡ ಮನೆಲಿಲ್ಲ,ತುಂಬ ದೂರ ಹೋಗಿದ್ದಾನೆ. 20  ಅವನು ಹಣದ ಗಂಟು ತಗೊಂಡು ಹೋಗಿದ್ದಾನೆ,ಹುಣ್ಣಿಮೆ ತನಕ ಬರಲ್ಲ.” 21  ಹೀಗೆ ಮನ ಒಲಿಸೋ ಮಾತಿಂದ ಅವನನ್ನ ತಪ್ಪುದಾರಿಗೆ ಎಳೆದಳು.+ ನಯವಾದ ಮಾತುಗಳಿಂದ ಬುಟ್ಟಿಗೆ ಹಾಕೊಂಡಳು. 22  ಬಲಿ ಕೊಡೋಕೆ ತಗೊಂಡು ಹೋಗೋ ಹೋರಿ ತರ, ಬೇಡಿ* ಹಾಕೋಕೆ ಕರ್ಕೊಂಡು ಹೋಗ್ತಿರೋ ಮೂರ್ಖನ ತರ,ತಕ್ಷಣ ಅವನು ಅವಳ ಹಿಂದೆ ಹೋದ.+ 23  ಕೊನೆಗೆ ಒಂದು ಬಾಣ ಅವನ ಪಿತ್ತಜನಕಾಂಗ ತೂರಿಹೋಗುತ್ತೆ,ಬಲೆ ಕಡೆಗೆ ಜೋರಾಗಿ ಹಾರಿಹೋಗೋ ಹಕ್ಕಿ ತರ,ಅದ್ರಿಂದ ತನ್ನ ಪ್ರಾಣ ಕಳ್ಕೊಳ್ತಾನೆ ಅಂತ ಗೊತ್ತಾಗದೆ ಹೋಗ್ತಾನೆ.+ 24  ಹಾಗಾಗಿ ನನ್ನ ಮಗನೇ, ನಾನು ಹೇಳೋದನ್ನ ಕೇಳು,ನನ್ನ ಮಾತುಗಳಿಗೆ ಗಮನಕೊಡು. 25  ನಿನ್ನ ಹೃದಯ ಅವಳ ದಾರಿ ಹಿಡಿಯೋಕೆ ಬಿಡಬೇಡ. ಅಪ್ಪಿತಪ್ಪಿನೂ ಅವಳ ಬೀದಿಗೆ ಹೋಗಬೇಡ.+ 26  ಅವಳಿಂದ ತುಂಬ ಜನ ಪ್ರಾಣ ಕಳ್ಕೊಂಡಿದ್ದಾರೆ,+ಅವಳು ಲೆಕ್ಕ ಇಲ್ಲದಷ್ಟು ಜನ್ರನ್ನ ಕೊಂದುಹಾಕಿದ್ದಾಳೆ.+ 27  ಅವಳ ಮನೆ ನಿನ್ನನ್ನ ಸ್ಮಶಾನಕ್ಕೆ* ಕರ್ಕೊಂಡು ಹೋಗುತ್ತೆ. ಸಾವಿನ ಕತ್ತಲೆ ಕೋಣೆಗೆ ಕಳಿಸುತ್ತೆ.

ಪಾದಟಿಪ್ಪಣಿ

ಅಥವಾ “ನಿಯಮವನ್ನ.”
ಅಕ್ಷ. “ಅಪರಿಚಿತ.” ಜ್ಞಾನೋಕ್ತಿ 2:16 ನೋಡಿ.
ಅಕ್ಷ. “ವಿದೇಶಿ.” ಜ್ಞಾನೋಕ್ತಿ 2:16 ನೋಡಿ.
ಅಥವಾ “ಪ್ರಲೋಭಿಸುವ.”
ಅಕ್ಷ. “ಹೃದಯ ಇಲ್ಲದ.”
ಈ ಮರಗಳು ರಾಳ, ಎಣ್ಣೆ ಉತ್ಪಾದಿಸುತ್ತೆ. ಈ ರಾಳ, ಎಣ್ಣೆಯನ್ನ ಸುಗಂಧ ದ್ರವ್ಯ ತಯಾರಿಸುವಾಗ ಬಳಸ್ತಿದ್ರು.
ಅಕ್ಷ. “ಕೋಳ.”
ಪದವಿವರಣೆಯಲ್ಲಿ “ಸಮಾಧಿ” ನೋಡಿ.