ಜ್ಞಾನೋಕ್ತಿ 4:1-27
4 ನನ್ನ ಮಕ್ಕಳೇ, ಅಪ್ಪ ಕೊಡೋ ಶಿಸ್ತನ್ನ ಕೇಳಿ,+ಶ್ರದ್ಧೆಯಿಂದ ಗಮನಕೊಟ್ಟು ವಿವೇಚನೆ ಪಡ್ಕೊಳ್ಳಿ.
2 ಯಾಕಂದ್ರೆ ನಾನು ನಿಮಗೆ ಒಳ್ಳೆ ಸಲಹೆಗಳನ್ನ ಕೊಡ್ತೀನಿ.
ನನ್ನ ಮಾತನ್ನ* ತಳ್ಳಿಬಿಡಬೇಡಿ.+
3 ನನ್ನ ಅಪ್ಪನಿಗೆ ನಾನು ಒಳ್ಳೇ ಮಗನಾಗಿದ್ದೆ,+ನನ್ನ ಅಮ್ಮನಿಗೆ ಮುದ್ದಿನ ಮಗನಾಗಿದ್ದೆ.+
4 ನನ್ನ ಅಪ್ಪ ನನಗೆ ಕಲಿಸುವಾಗ ಹೀಗೆ ಹೇಳಿದ: “ನಿನ್ನ ಮನಸ್ಸಲ್ಲಿ ನನ್ನ ಮಾತುಗಳನ್ನ ಗಟ್ಟಿಯಾಗಿ ಹಿಡ್ಕೊ.+
ನನ್ನ ಆಜ್ಞೆಗಳನ್ನ ಪಾಲಿಸಿ ಜಾಸ್ತಿ ವರ್ಷ ಬದುಕು.+
5 ವಿವೇಕವನ್ನ ಸಂಪಾದಿಸು, ವಿವೇಚನೆಯನ್ನ ಗಳಿಸು.+
ನನ್ನ ಮಾತುಗಳನ್ನ ಮರಿಬೇಡ, ಅದ್ರಿಂದ ದೂರ ಹೋಗಬೇಡ.
6 ವಿವೇಕವನ್ನ ಬಿಟ್ಟುಬಿಡಬೇಡ, ಅದನ್ನ ಪ್ರೀತಿಸು,ಅದು ನಿನ್ನನ್ನ ಕಾಪಾಡುತ್ತೆ.
7 ವಿವೇಕ ತುಂಬಾ ಮುಖ್ಯ,+ ಹಾಗಾಗಿ ಅದನ್ನ ಪಡ್ಕೊ.
ನೀನು ಏನೇ ಸಂಪಾದಿಸಿದ್ರೂ ವಿವೇಚನೆಯನ್ನ ಸಂಪಾದಿಸೋಕೆ ಮರಿಲೇಬೇಡ.+
8 ಅದನ್ನ ಬಂಗಾರದ ಹಾಗೆ ನೋಡ್ಕೊ, ಅದು ನಿನ್ನನ್ನ ಮೇಲೆ ಏರಿಸುತ್ತೆ.+
ಅದನ್ನ ಅಪ್ಕೊ, ಅದು ನಿನಗೆ ಕೀರ್ತಿ ತರುತ್ತೆ.+
9 ಅದು ನಿನ್ನ ತಲೆಗೆ ಹೂವಿನ ಸುಂದರ ಕಿರೀಟ ಇಡುತ್ತೆ,ನಿನಗೆ ಅಂದದ ಕಿರೀಟ ಇಟ್ಟು ನಿನ್ನ ಚಂದ ಹೆಚ್ಚಿಸುತ್ತೆ.
10 ನನ್ನ ಮಗನೇ, ಕೇಳು, ನನ್ನ ಮಾತುಗಳನ್ನ ಪಾಲಿಸು.
ಆಗ ನೀನು ಜಾಸ್ತಿ ವರ್ಷ ಸಂತೋಷವಾಗಿ ಬದುಕ್ತಿಯ.+
11 ವಿವೇಕದ ದಾರಿಯಲ್ಲಿ ನಡಿಯೋಕೆ ನಿನಗೆ ಕಲಿಸ್ತೀನಿ,+ಒಳ್ಳೇ* ದಾರಿ ತೋರಿಸ್ತೀನಿ.+
12 ನೀನು ನಡಿಯುವಾಗ ನಿನ್ನ ಹೆಜ್ಜೆಗೆ ಅಡಚಣೆ ಆಗಲ್ಲ,ನೀನು ಓಡುವಾಗ ಬೀಳಲ್ಲ.
13 ಶಿಸ್ತನ್ನ ಗಟ್ಟಿಯಾಗಿ ಹಿಡ್ಕೊ, ಅದನ್ನ ಬಿಡಬೇಡ.+
ಅದನ್ನ ಕಾಪಾಡ್ಕೊ, ಯಾಕಂದ್ರೆ ಅದು ನಿನಗೆ ಜೀವ.+
14 ಕೆಟ್ಟವರ ದಾರಿಯಲ್ಲಿ ಕಾಲು ಇಡಬೇಡ,ಅವ್ರ ದಾರಿಯಲ್ಲಿ ನಡಿಬೇಡ.+
15 ಅದ್ರಿಂದ ದೂರ ಇರು, ಅದ್ರಲ್ಲಿ ಹೋಗಬೇಡ,+ಪಕ್ಕಕ್ಕೆ ಸರಿದು, ಮುಂದೆ ಹೋಗು.+
16 ಕೆಟ್ಟದ್ದನ್ನ ಮಾಡದಿದ್ರೆ ಅವ್ರಿಗೆ ನಿದ್ದೆ ಬರಲ್ಲ.
ಬೇರೆಯವ್ರನ್ನ ಬೀಳಿಸದಿದ್ರೆ ಅವ್ರಿಗೆ ನಿದ್ದೆ ಹತ್ತಲ್ಲ.
17 ಕೆಟ್ಟ ಕೆಲಸನೇ ಅವ್ರಿಗೆ ಊಟ,ಹಿಂಸೆನೇ ದ್ರಾಕ್ಷಾಮದ್ಯ.
18 ಆದ್ರೆ ನೀತಿವಂತನ ದಾರಿ ಬೆಳಿಗ್ಗೆ ಕಾಣೋ ಕಿರಣಗಳ ತರ ಹೊಳೆಯುತ್ತೆ,ಮಟಮಟ ಮಧ್ಯಾಹ್ನ ಆಗ್ತಾ ಆ ಬೆಳಕು ಹೆಚ್ಚಾಗ್ತಾನೇ ಹೋಗುತ್ತೆ.+
19 ಕೆಟ್ಟವ್ರ ದಾರಿ ಕತ್ತಲೆ ತರ,ಯಾವುದು ಎಡವಿಸುತ್ತೆ ಅಂತ ಅವ್ರಿಗೆ ಗೊತ್ತಾಗಲ್ಲ.
20 ನನ್ನ ಮಗನೇ, ನನ್ನ ಮಾತುಗಳಿಗೆ ಗಮನಕೊಡು.
ನನ್ನ ಮಾತುಗಳನ್ನ ಚೆನ್ನಾಗಿ ಕೇಳು.
21 ಅವುಗಳನ್ನ ನಿನ್ನ ಮನಸ್ಸಲ್ಲಿ ಇಟ್ಕೊ,ನಿನ್ನ ಹೃದಯದಲ್ಲಿ ಕಾಪಾಡ್ಕೊ.+
22 ಯಾಕಂದ್ರೆ ಅವುಗಳನ್ನ ಹುಡುಕುವವ್ರಿಗೆ ಜೀವ ಸಿಗುತ್ತೆ,+ಅವ್ರ ಇಡೀ ದೇಹ ಆರೋಗ್ಯವಾಗಿರುತ್ತೆ.
23 ಎಲ್ಲಕ್ಕಿಂತ ಮುಖ್ಯವಾಗಿ ನಿನ್ನ ಹೃದಯ ಕಾಪಾಡ್ಕೊ.+
ಯಾಕಂದ್ರೆ ನಿನಗೆ ಜೀವ ಸಿಗುತ್ತಾ ಇಲ್ವಾ ಅನ್ನೋದು ಅದ್ರ ಮೇಲೆ ಹೊಂದ್ಕೊಂಡಿದೆ.
24 ಕೊಂಕು ಮಾತಿಂದ ದೂರ ಇರು,+ಮೋಸದ ಮಾತುಗಳನ್ನ ಆಡಬೇಡ.
25 ನಿನ್ನ ಕಣ್ಣುಗಳು ಅತ್ತಿತ್ತ ತಿರುಗದಿರಲಿ,ನೇರವಾಗಿ ಮುಂದೆ ನೋಡಲಿ.+
26 ನಿನ್ನ ದಾರಿಯಲ್ಲಿರೋ ಅಡೆತಡೆಗಳನ್ನ ತೆಗೆದುಹಾಕು,*+ಧೈರ್ಯವಾಗಿ ಹೆಜ್ಜೆ ಇಡ್ತಾ ಮುಂದೆ ಹೋಗು.
27 ಎಡಕ್ಕೆ, ಬಲಕ್ಕೆ ತಿರುಗಬೇಡ.+
ಕೆಟ್ಟ ದಾರಿಯಲ್ಲಿ ಕಾಲು ಇಡಬೇಡ.
ಪಾದಟಿಪ್ಪಣಿ
^ ಅಥವಾ “ನಿಯಮವನ್ನ.”
^ ಅಥವಾ “ಪ್ರಾಮಾಣಿಕವಾದ.”
^ ಬಹುಶಃ, “ನಿನ್ನ ಜೀವನದಲ್ಲಿ ಏನೇನು ಮಾಡ್ತೀಯ ಅನ್ನೋದಕ್ಕೆ ಚೆನ್ನಾಗಿ ಗಮನ ಕೊಡು.”