ಜ್ಞಾನೋಕ್ತಿ 31:1-31
31 ಇವು ರಾಜ ಲೆಮೂವೇಲನ ಮಾತುಗಳು. ಅವನ ಅಮ್ಮ ಅವನಿಗೆ ಕಲಿಸಿದ ಮುಖ್ಯ ಸಂದೇಶ:+
2 ನನ್ನ ಮಗನೇ, ನನ್ನ ಗರ್ಭಫಲವೇ,ನಾನು ನಿನಗೆ ಏನಂತ ಹೇಳಲಿ?
ಹರಕೆ ಮಾಡಿ ನನಗೆ ಹುಟ್ಟಿದ ಮಗನೇ, ನಿನಗೆ ಏನಂತ ಹೇಳಲಿ?+
3 ನಿನ್ನ ಶಕ್ತಿಯನ್ನ ಹೆಂಗಸ್ರಿಗೆ ಕೊಡಬೇಡ,+ರಾಜರನ್ನ ನಾಶಕ್ಕೆ ನಡೆಸೋ ದಾರಿಯಲ್ಲಿ ನಡಿಬೇಡ.+
4 ಲೆಮೂವೇಲನೇ, ದ್ರಾಕ್ಷಾಮದ್ಯ ರಾಜರಿಗೆ ಯೋಗ್ಯವಲ್ಲ.
ಮದ್ಯಪಾನ ರಾಜರಿಗೆ ಗೌರವ ತರಲ್ಲ.
“ನನ್ನ ದ್ರಾಕ್ಷಾಮದ್ಯ ಎಲ್ಲಿ?” ಅಂತ ಕೇಳೋದು ಆಳುವವ್ರಿಗೆ ಸರಿ ಅಲ್ಲ.+
5 ಯಾಕಂದ್ರೆ ಮದ್ಯ ನೀತಿನಿಯಮಗಳನ್ನ ಮರೆಯೋ ತರ ಮಾಡುತ್ತೆ,ದೀನರ ಹಕ್ಕುಗಳನ್ನ ಕಿತ್ಕೊಳ್ಳೋ ತರ ಮಾಡುತ್ತೆ.
6 ನಾಶವಾಗಿ ಹೋಗುವವ್ರಿಗೆ ಮದ್ಯ ಕೊಡಿ,+ದುಃಖದಲ್ಲಿ ಮುಳುಗಿ ಹೋಗಿರುವವರಿಗೆ ದ್ರಾಕ್ಷಾಮದ್ಯ ಕೊಡಿ.+
7 ಅವರು ಅದನ್ನ ಕುಡಿದು ತಮ್ಮ ಬಡತನವನ್ನ ಮರಿಯಲಿ,ಅವ್ರ ಕಷ್ಟಗಳು ಅವ್ರ ನೆನಪಿಗೆ ಬರೋದು ಬೇಡ.
8 ತಮ್ಮನ್ನ ಕಾಪಾಡ್ಕೊಳ್ಳೋಕೆ ಆಗದವ್ರ ಪರವಾಗಿ ಮಾತಾಡು,ನಾಶವಾಗಿ ಹೋಗ್ತಾ ಇರುವವ್ರ ಪರವಾಗಿ ನಿಂತು ಅವ್ರ ಹಕ್ಕುಗಳಿಗಾಗಿ ವಾದಿಸು.+
9 ಸುಮ್ನೆ ಇರಬೇಡ, ನ್ಯಾಯವಾದ ತೀರ್ಪು ಕೊಡು.
ದೀನರ, ಬಡವರ ಹಕ್ಕುಗಳಿಗಾಗಿ ಹೋರಾಡು.+
א [ಆಲೆಫ್]
10 ಒಳ್ಳೇ* ಹೆಂಡತಿ ಸಿಗೋದು ಅಪರೂಪ.+
ಅವಳು ಹವಳಕ್ಕಿಂತ* ಅಮೂಲ್ಯ.
ב [ಬೆತ್]
11 ಅವಳ ಗಂಡ ಅವಳನ್ನ ಪೂರ್ತಿಯಾಗಿ ನಂಬ್ತಾನೆ,ಅವನಿಗೆ ಯಾವ ಕೊರತೆನೂ ಇರಲ್ಲ.
ג [ಗಿಮೆಲ್]
12 ಅವಳು ಸಾಯೋ ತನಕಗಂಡನಿಗೆ ಒಳ್ಳೇದು ಮಾಡ್ತಾಳೆ, ಕೆಟ್ಟದು ಮಾಡಲ್ಲ.
ד [ಡಾಲತ್]
13 ಅವಳು ಉಣ್ಣೆ ಬಟ್ಟೆ, ನಾರನ್ನ ಹುಡುಕಿ ತರ್ತಾಳೆ.
ಏನೇ ಕೆಲಸ ಇದ್ರೂ ಖುಷಿಖುಷಿಯಾಗಿ ಮಾಡ್ತಾಳೆ.+
ה [ಹೆ]
14 ವ್ಯಾಪಾರಿಯ ಹಡಗುಗಳ ತರ,+ದೂರದಿಂದ ಆಹಾರ ತರ್ತಾಳೆ.
ו [ವಾವ್]
15 ಅವಳು ಇನ್ನೂ ಕತ್ತಲೆ ಇರುವಾಗ್ಲೇ ಎದ್ದು,ಕುಟುಂಬಕ್ಕಾಗಿ ಅಡಿಗೆ ಮಾಡ್ತಾಳೆ.
ತನ್ನ ಸೇವಕಿಯರಿಗೆ ಅವ್ರ ಪಾಲು ಕೊಡ್ತಾಳೆ.+
ז [ಜಯಿನ್]
16 ಅವಳು ಒಂದು ಹೊಲವನ್ನ ಚೆನ್ನಾಗಿ ನೋಡಿ, ತಗೋಳ್ತಾಳೆ.
ಅವಳು ತನ್ನ ದುಡಿಮೆಯಿಂದ ಒಂದು ದ್ರಾಕ್ಷಿತೋಟ ಮಾಡ್ತಾಳೆ.
ח [ಹೆತ್]
17 ಅವಳು ಕಷ್ಟಪಟ್ಟು ಕೆಲಸ ಮಾಡೋಕೆ ತಯಾರಾಗಿ ಇರ್ತಾಳೆ,*+ತನ್ನ ಕೈಗಳನ್ನ ಬಲಪಡಿಸ್ಕೊಳ್ತಾಳೆ.
ט [ಟೆತ್]
18 ಅವಳು ತನ್ನ ವ್ಯಾಪಾರದಲ್ಲಿ ಲಾಭ ಸಿಗೋ ತರ ನೋಡ್ಕೊಳ್ತಾಳೆ.
ರಾತ್ರಿ ಅವಳ ದೀಪ ಆರಿಹೋಗಲ್ಲ.
י [ಯೋದ್]
19 ಅವಳು ಒಂದು ಕೈಯಲ್ಲಿ ಸೀಳುಗೋಲು ಹಿಡ್ಕೊಂಡು,ಇನ್ನೊಂದು ಕೈಯಲ್ಲಿ ಚರಕದ ಕಡ್ಡಿ ಹಿಡಿತಾಳೆ.*+
כ [ಕಾಫ್]
20 ಅವಳು ತನ್ನ ಕೈ ಚಾಚಿ,ದೀನರಿಗೆ ಸಹಾಯ ಮಾಡ್ತಾಳೆ, ಬಡವ್ರಿಗೆ ಉದಾರವಾಗಿ ಕೊಡ್ತಾಳೆ.+
ל [ಲಾಮೆದ್]
21 ಹಿಮ ಬೀಳುವಾಗ ಅವಳು ತನ್ನ ಕುಟುಂಬದ ಬಗ್ಗೆ ಚಿಂತೆ ಮಾಡಲ್ಲ,ಯಾಕಂದ್ರೆ ಅವರೆಲ್ಲ ಬೆಚ್ಚಗಿನ* ಬಟ್ಟೆ ಹಾಕೊಂಡು ಇರ್ತಾರೆ.
מ [ಮೆಮ್]
22 ತನ್ನ ಹಾಸಿಗೆ ಮೇಲೆ ಹಾಸೋ ಬಟ್ಟೆಗಳನ್ನ ತಾನೇ ಮಾಡ್ಕೊಳ್ತಾಳೆ.
ಅವಳು ನಾರಿನ, ನೇರಳೆ ಬಣ್ಣದ ಉಣ್ಣೆಯಿಂದ ಮಾಡಿರೋ ಬಟ್ಟೆ ಹಾಕೊಳ್ತಾಳೆ.
נ [ನೂನ್]
23 ಪಟ್ಟಣದ ಬಾಗಿಲಲ್ಲಿ ಅವಳ ಗಂಡನಿಗೆ ಒಳ್ಳೇ ಹೆಸ್ರು ಇರುತ್ತೆ,+ದೇಶದ ಹಿರಿಯರ ಜೊತೆ ಅವನು ಕೂತ್ಕೊಳ್ತಾನೆ.
ס [ಸಾಮೆಕ್]
24 ಅವಳು ನಾರಿನ ಬಟ್ಟೆ ಮಾಡಿ ಮಾರ್ತಾಳೆ.
ಸೊಂಟಪಟ್ಟಿಗಳನ್ನ ವ್ಯಾಪಾರಿಗಳಿಗೆ ಸರಬರಾಜು ಮಾಡ್ತಾಳೆ.
ע [ಅಯಿನ್]
25 ಅವಳು ಮನೋಬಲವನ್ನ, ತೇಜಸ್ಸನ್ನ ತೊಟ್ಕೊಂಡಿದ್ದಾಳೆ,ಭವಿಷ್ಯದ ಬಗ್ಗೆ ಧೈರ್ಯವಾಗಿ ಇರ್ತಾಳೆ.*
פ [ಪೇ]
26 ಅವಳು ಬಾಯಿ ತೆರೆದಾಗೆಲ್ಲ ವಿವೇಕದಿಂದ ಮಾತಾಡ್ತಾಳೆ,+ಮಾರ್ಗದರ್ಶನವನ್ನ ಪ್ರೀತಿಯಿಂದ* ಕೊಡ್ತಾಳೆ.
צ [ಸಾದೆ]
27 ಅವಳು ತನ್ನ ಕುಟುಂಬದವ್ರ ಕೆಲಸಗಳ ಮೇಲೆ ಗಮನ ಇಟ್ಟಿರ್ತಾಳೆ,ಸೋಮಾರಿತನದ ರೊಟ್ಟಿ ತಿನ್ನಲ್ಲ.+
ק [ಕೊಫ್]
28 ಅವಳ ಮಕ್ಕಳು ಎದ್ದು ನಿಂತು ಅವಳನ್ನ ಹೊಗಳ್ತಾರೆ,ಅವಳ ಗಂಡ ಎದ್ದು ನಿಂತು ಅವಳ ಗುಣಗಾನ ಮಾಡ್ತಾನೆ.
ר [ರೆಶ್]
29 ತುಂಬ ಜನ ಒಳ್ಳೇ* ಸ್ತ್ರೀಯರಿದ್ದಾರೆ,ಆದ್ರೆ ನೀನು ಅವರನ್ನೆಲ್ಲಾ ಮೀರಿಸಿದ್ದೀಯ.
ש [ಶಿನ್]
30 ಸೌಂದರ್ಯ ಸುಳ್ಳಾಗಬಹುದು, ಅಂದಚಂದ ಇವತ್ತು ಇದ್ದು ನಾಳೆ ಇಲ್ಲದೆ ಹೋಗಬಹುದು+ಆದ್ರೆ ಯೆಹೋವನಿಗೆ ಭಯಪಡೋ ಸ್ತ್ರೀಯನ್ನ ಯಾವಾಗ್ಲೂ ಹೊಗಳ್ತಾ ಇರ್ತಾರೆ.+
ת [ಟಾವ್]
31 ಅವಳ ಪರಿಶ್ರಮಕ್ಕೆ ಪ್ರತಿಫಲ ಕೊಡಿ,+ಪಟ್ಟಣದ ಬಾಗಿಲಲ್ಲಿ ಅವಳ ಕೆಲಸಗಳೇ ಅವಳನ್ನ ಹೊಗಳಲಿ.+
ಪಾದಟಿಪ್ಪಣಿ
^ ಅಕ್ಷ. “ಸಮರ್ಥ.”
^ ಅಕ್ಷ. “ಅವಳು ತನ್ನ ಸೊಂಟಕ್ಕೆ ಬಲ ಕಟ್ಟಿಕೊಳ್ತಾಳೆ.”
^ ನೂಲು ತಯಾರಿಸೋಕೆ, ಸುತ್ತೋಕೆ, ಹೆಣೆಯೋಕೆ ಬಳಸೋ ಕೋಲುಗಳೇ ಈ ಸೀಳುಗೋಲು ಮತ್ತು ಚರಕದ ಕಡ್ಡಿ.
^ ಅಕ್ಷ. “ದುಪ್ಪಟ್ಟು.”
^ ಅಥವಾ “ಭವಿಷ್ಯವನ್ನ ನಗನಗ್ತಾ ಭಯ ಇಲ್ಲದೆ ಸ್ವಾಗತಿಸ್ತಾಳೆ.”
^ ಅಕ್ಷ. “ಅವಳ ನಾಲಿಗೆಯಲ್ಲಿ ಶಾಶ್ವತ ಪ್ರೀತಿ ಕೂಡಿದ ನಿಯಮ ಇದೆ.”
^ ಅಕ್ಷ. “ಸಮರ್ಥ.”