ಜ್ಞಾನೋಕ್ತಿ 30:1-33

  • ಆಗೂರನ ಮಾತುಗಳು (1-33)

    • ಬಡತನವನ್ನಾಗಲಿ, ಹಣ ಆಸ್ತಿಯನ್ನಾಗಲಿ ನನಗೆ ಕೊಡಬೇಡ (8)

    • ಯಾವತ್ತೂ ತಪ್ತಿಯಾಗದ ವಿಷ್ಯಗಳು (15, 16)

    • ಅರ್ಥ ಆಗದ ವಿಷ್ಯಗಳು (18, 19)

    • ವ್ಯಭಿಚಾರಿ ಹೆಂಗಸು (20)

    • ಹುಟ್ಟಿಂದಾನೇ ವಿವೇಕ ಪಡ್ಕೊಂಡ ಜೀವಿಗಳು (24)

30  ಇದು ಯಾಕೆಯ ಮಗ ಆಗೂರನ ಮುಖ್ಯ ಸಂದೇಶ. ಇದನ್ನ ಈತೀಯೇಲನಿಗೂ ಉಕ್ಕಾಲನಿಗೂ ಹೇಳಿದ.   ನನ್ನಷ್ಟು ದಡ್ಡ ಯಾರೂ ಇಲ್ಲ,+ಮನುಷ್ಯರಲ್ಲಿ ಇರಬೇಕಾದ ಸಾಮಾನ್ಯ ಬುದ್ಧಿ ಕೂಡ ನಂಗಿಲ್ಲ.   ನಾನು ವಿವೇಕ ಪಡಿಲಿಲ್ಲ,ಅತಿ ಪವಿತ್ರ ದೇವರ ಜ್ಞಾನ ನಂಗಿಲ್ಲ.   ಸ್ವರ್ಗಕ್ಕೆ ಏರಿ ಹೋಗಿ ಕೆಳಗೆ ಇಳಿದವರು ಯಾರು?+ ಕೈಯಲ್ಲಿ ಗಾಳಿ ಹಿಡಿದವರು ಯಾರು? ತನ್ನ ಬಟ್ಟೆಯಲ್ಲಿ ನೀರು ಸುತ್ತಿ ಇಟ್ಟವರು ಯಾರು?+ ಭೂಮಿಯ ಗಡಿಗಳನ್ನ ಮಾಡಿದವರು* ಯಾರು?+ ಆತನ ಹೆಸ್ರೇನು? ಆತನ ಮಗನ ಹೆಸ್ರೇನು? ನಿನಗೆ ಗೊತ್ತಿದ್ರೆ ಹೇಳು.   ದೇವರ ಎಲ್ಲಾ ಮಾತುಗಳು ಶುದ್ಧ,+ಆತನಲ್ಲಿ ಆಶ್ರಯ ಪಡ್ಕೊಂಡಿರುವವ್ರಿಗೆ ಆತನು ಗುರಾಣಿ.+   ಆತನ ಮಾತುಗಳಿಗೆ ಏನೂ ಸೇರಿಸಬೇಡ,+ಸೇರಿಸಿದ್ರೆ ಆತನು ನಿನಗೆ ಚೆನ್ನಾಗಿ ಬೈತಾನೆ,ಆಗ ನೀನು ಸುಳ್ಳುಗಾರ ಅಂತ ಸಾಬೀತು ಆಗುತ್ತೆ.   ದೇವರೇ ನಾನು ನಿನ್ನ ಹತ್ರ ಎರಡು ವಿಷ್ಯ ಕೇಳ್ತೀನಿ. ನಾನು ಬದುಕಿರೋ ತನಕ ಆ ಎರಡು ವಿಷ್ಯ ಬಿಟ್ಟು ಬೇರೇನೂ ಬೇಡ.   ಕಪಟ, ಸುಳ್ಳನ್ನ ನನ್ನಿಂದ ದೂರಮಾಡು,+ಬಡತನವನ್ನಾಗಲಿ, ಹಣ ಆಸ್ತಿಯನ್ನಾಗಲಿ ನನಗೆ ಕೊಡಬೇಡ,ನನಗೆ ಅಗತ್ಯ ಇರೋ ಊಟ ಕೊಟ್ರೆ ಸಾಕು.+   ಇಲ್ಲದಿದ್ರೆ ನಾನು ತೃಪ್ತನಾಗಿ ನಿನ್ನನ್ನ ನಿರಾಕರಿಸ್ತಾ “ಯೆಹೋವ ಯಾರು?” ಅಂತ ಕೇಳಿಬಿಡಬಹುದು,+ನನ್ನನ್ನ ಬಡವನಾಗಿ ಮಾಡಬೇಡ. ಯಾಕಂದ್ರೆ ನಾನು ಕಳ್ಳತನ ಮಾಡಿ ದೇವರ ಹೆಸ್ರು ಕೆಡಿಸಬಹುದು. 10  ಸೇವಕನ ಬಗ್ಗೆ ಯಜಮಾನನ ಹತ್ರ ಹೋಗಿ ಚಾಡಿ ಹೇಳಬೇಡ,ಹಾಗೆ ಮಾಡಿದ್ರೆ ಆ ಸೇವಕ ನಿನ್ನನ್ನ ಶಪಿಸಬಹುದು. ಆಗ ನೀನೇ ತಪ್ಪು ಮಾಡಿದವನು ಅಂತಾಗುತ್ತೆ.+ 11  ಅಪ್ಪನನ್ನ ಶಪಿಸೋ,ಅಮ್ಮನನ್ನ ಅಗೌರವಿಸೋ ಪೀಳಿಗೆ ಇದೆ.+ 12  ತಮ್ಮ ಕೊಳಕನ್ನ ಶುದ್ಧ ಮಾಡ್ಕೊಳ್ಳದೆ,ತಾವೇ ಶುದ್ಧರು ಅಂದ್ಕೊಳ್ಳೋ ಪೀಳಿಗೆ ಇದೆ.+ 13  ಸೊಕ್ಕಿನ ಕಣ್ಣುಗಳಿರೋ,ಕಣ್ಣುಗಳಲ್ಲಿ ಅಹಂಕಾರ ತುಂಬಿರೋ ಪೀಳಿಗೆ ಇದೆ.+ 14  ಕತ್ತಿಯಂಥ ಹಲ್ಲುಗಳು,ಪ್ರಾಣ ತೆಗಿಯೋ ದವಡೆಗಳು ಇರೋ ಪೀಳಿಗೆ ಇದೆ. ಅದು ಭೂಮಿ ಮೇಲಿರೋ ದೀನರ,ಬಡವರ ರಕ್ತ ಹೀರುತ್ತೆ.+ 15  ಜಿಗಣೆಗೆ “ಕೊಡು! ಕೊಡು!” ಅಂತ ಕಿರಿಚೋ ಇಬ್ರು ಹೆಣ್ಣುಮಕ್ಕಳು ಇದ್ದಾರೆ,ತೃಪ್ತಿಯಾಗದ ಮೂರು ವಿಷ್ಯ ಇದೆ,“ಸಾಕು!” ಅಂತ ಹೇಳದ ನಾಲ್ಕು ವಿಷ್ಯ ಇದೆ. 16  ಸಮಾಧಿ,+ ಹೆರದ ಗರ್ಭ,ನೀರಿಲ್ಲದ ಭೂಮಿ,ಯಾವತ್ತೂ “ಸಾಕು!” ಅನ್ನದ ಬೆಂಕಿ. 17  ಅಪ್ಪನನ್ನ ಗೇಲಿ ಮಾಡೋ, ಅಮ್ಮನ ಮಾತು ಕೇಳದ ಕಣ್ಣುಗಳನ್ನ,+ಕಣಿವೆಯ ಕಾಗೆಗಳು ಕುಕ್ಕುತ್ತೆ,ಹದ್ದಿನ ಮರಿಗಳು ತಿಂದು ಹಾಕುತ್ತೆ.+ 18  ನನಗೆ ಅರ್ಥ ಆಗದ ಮೂರು ವಿಷ್ಯ ಇದೆ,ನಾಲ್ಕು ವಿಷ್ಯ ನನಗಿನ್ನೂ ಅರ್ಥ ಆಗಿಲ್ಲ. ಅದೇನಂದ್ರೆ: 19  ಆಕಾಶದಲ್ಲಿ ಹಾರೋ ಹದ್ದಿನ ದಾರಿ,ಬಂಡೆ ಮೇಲೆ ಹರಿದಾಡೋ ಹಾವಿನ ದಾರಿ,ವಿಶಾಲ ಸಮುದ್ರದಲ್ಲಿ ಹೋಗೋ ಹಡಗಿನ ದಾರಿ,ಯುವತಿ ಜೊತೆ ಗಂಡಸು ನಡ್ಕೊಳ್ಳೋ ರೀತಿ. 20  ಒಬ್ಬ ವ್ಯಭಿಚಾರಿಯ ದಾರಿ ಹೀಗಿರುತ್ತೆ: ಅವಳು ತಿಂದು, ಬಾಯಿ ಒರೆಸ್ಕೊಂಡು,“ನಾನೇನೂ ತಪ್ಪು ಮಾಡಿಲ್ಲ” ಅಂತಾಳೆ.+ 21  ಭೂಮಿಯನ್ನ ನಡುಗಿಸೋ ಮೂರು ವಿಷ್ಯ ಇದೆ,ಅದು ಸಹಿಸದ ನಾಲ್ಕು ವಿಷ್ಯ ಇದೆ. ಅದೇನಂದ್ರೆ: 22  ಸೇವಕ ರಾಜನ ತರ ಆಳೋದು,+ಮೂರ್ಖ ಹೊಟ್ಟೆ ಬಿರಿಯೋಷ್ಟು ತಿನ್ನೋದು, 23  ಎಲ್ರೂ ದ್ವೇಷಿಸೋ* ಹೆಂಗಸನ್ನ ಹೆಂಡತಿಯಾಗಿ ಮಾಡ್ಕೊಳ್ಳೋದು,ಸೇವಕಿ ತನ್ನ ಯಜಮಾನಿಯ ಸ್ಥಾನಕ್ಕೆ ಬರೋದು.*+ 24  ಭೂಮಿಯಲ್ಲಿ ನಾಲ್ಕು ಜೀವಿ ಇದೆ. ಅವು ತುಂಬ ಚಿಕ್ಕದು,ಆದ್ರೂ ಹುಟ್ಟಿಂದಾನೇ ಅವುಗಳಿಗೆ ತುಂಬ ವಿವೇಕ ಇರುತ್ತೆ. ಅವು ಯಾವುದಂದ್ರೆ:+ 25  ಇರುವೆಗಳು ಬಲಶಾಲಿ ಜೀವಿಗಳಲ್ಲದಿದ್ರೂಸುಗ್ಗಿ ಕಾಲದಲ್ಲಿ ತಮ್ಮ ಆಹಾರವನ್ನ ತಾವೇ ಸಿದ್ಧ ಮಾಡ್ಕೊಳ್ಳುತ್ತೆ.+ 26  ಬೆಟ್ಟದ ಮೊಲಗಳು+ ಶಕ್ತಿಶಾಲಿ ಪ್ರಾಣಿಗಳಲ್ಲದಿದ್ರೂ,ಅವು ಕಡಿದಾದ ಬಂಡೆಗಳ ಸಂದಲ್ಲಿ ಮನೆ ಮಾಡ್ಕೊಳ್ಳುತ್ತೆ.+ 27  ಮಿಡತೆಗಳಿಗೆ+ ರಾಜ ಇಲ್ಲದಿದ್ರೂಗುಂಪುಗುಂಪಾಗಿ ಮುನ್ನುಗ್ಗುತ್ತೆ.+ 28  ಹಲ್ಲಿ+ ಬೀಳದ ಹಾಗೆ ಗೋಡೆ ಮೇಲೆ ನಡೆದಾಡುತ್ತೆ,ಅದು ಅರಮನೆಯಲ್ಲೂ ಇರುತ್ತೆ. 29  ಗಂಭೀರವಾಗಿ ನಡಿಯೋ ಮೂರು ಪ್ರಾಣಿಗಳಿವೆ,ದೊಡ್ಡ ದೊಡ್ಡ ಹೆಜ್ಜೆ ಇಡೋ ನಾಲ್ಕು ಪ್ರಾಣಿಗಳಿವೆ. ಅವು ಯಾವುದಂದ್ರೆ: 30  ಯಾರಿಗೂ ಭಯಪಟ್ಟು ಹಿಂಜರಿಯದ,ಪ್ರಾಣಿಗಳಲ್ಲೇ ತುಂಬಾ ಶಕ್ತಿಶಾಲಿ ಪ್ರಾಣಿ ಸಿಂಹ,+ 31  ಬೇಟೆ ನಾಯಿ, ಹೋತ, ತನ್ನ ಸೈನ್ಯದ ಮುಂದೆ ಹೋಗೋ ರಾಜ. 32  ಬುದ್ಧಿ ಇಲ್ಲದವನ ಹಾಗೆ ನಿನ್ನನ್ನೇ ನೀನು ಹೆಚ್ಚಿಸ್ಕೊಂಡ್ರೆ,+ಅಥವಾ ಅದಕ್ಕಾಗಿ ಸಂಚು ಮಾಡಿದ್ರೆ,ನಿನ್ನ ಬಾಯಿ ಮೇಲೆ ಕೈ ಇಟ್ಕೊಂಡು ಸುಮ್ಮನೇ ಇರು.+ 33  ಯಾಕಂದ್ರೆ ಹಾಲು ಕಡೆದ್ರೆ ಬೆಣ್ಣೆ ಬರೋ ತರ,ಮೂಗು ಹಿಂಡಿದ್ರೆ ರಕ್ತ ಬರೋ ತರ,ಕೋಪ ಕೆರಳಿದ್ರೆ ಜಗಳ ಆಗೇ ಆಗುತ್ತೆ.+

ಪಾದಟಿಪ್ಪಣಿ

ಅಕ್ಷ. “ಎತ್ತಿದವರು.”
ಅಥವಾ “ಯಾರೂ ಪ್ರೀತಿಸದ.”
ಅಥವಾ “ಸ್ಥಾನವನ್ನ ಕಬಳಿಸೋದು.”