ಜ್ಞಾನೋಕ್ತಿ 25:1-28
25 ಇವು ಸಹ ಸೊಲೊಮೋನನ ನಾಣ್ಣುಡಿಗಳು.+ ಇದನ್ನೆಲ್ಲ ಯೆಹೂದದ ರಾಜ ಹಿಜ್ಕೀಯನ+ ಆಸ್ಥಾನದಲ್ಲಿದ್ದ ಗಂಡಸರು ನಕಲು ಮಾಡಿದ್ರು.*
2 ವಿಷ್ಯವನ್ನ ಗುಟ್ಟಾಗಿ ಇಡೋದ್ರಿಂದ ದೇವರಿಗೆ ಗೌರವ,+ವಿಷ್ಯವನ್ನ ಪರಿಶೋಧಿಸೋದು ರಾಜರಿಗೆ ಗೌರವ.
3 ಆಕಾಶದ ಎತ್ತರವನ್ನ, ಭೂಮಿಯ ಆಳವನ್ನ,ರಾಜರ ಹೃದಯವನ್ನ ತಿಳ್ಕೊಳ್ಳಕ್ಕಾಗಲ್ಲ.
4 ಬೆಳ್ಳಿಯಿಂದ ಕೊಳೆ* ತೆಗೀರಿ,ಆಗ ಅದು ಪೂರ್ತಿ ಶುದ್ಧ ಆಗುತ್ತೆ.+
5 ರಾಜನ ಸನ್ನಿಧಿಯಿಂದ ಕೆಟ್ಟವ್ರನ್ನ ತೆಗೆದುಹಾಕಿದ್ರೆ,ಅವನ ಸಿಂಹಾಸನ ನೀತಿವಂತರಿಂದ ಇನ್ನೂ ಗಟ್ಟಿ ಆಗುತ್ತೆ.+
6 ರಾಜನ ಮುಂದೆ ನಿನ್ನನ್ನ ನೀನೇ ಹೆಚ್ಚಿಸ್ಕೊಳ್ಳಬೇಡ,+ದೊಡ್ಡ ದೊಡ್ಡ ಜನ್ರ ಮಧ್ಯ ನಿಲ್ಲಬೇಡ.+
7 ಪ್ರಧಾನ ವ್ಯಕ್ತಿಗಳ ಮುಂದೆ ರಾಜ ನಿನಗೆ ಅವಮಾನ ಮಾಡೋದಕ್ಕಿಂತ,“ಹೋಗಿ ಅಲ್ಲಿ ಕೂತ್ಕೊ” ಅಂತ ಹೇಳೋದೇ ಒಳ್ಳೇದು.+
8 ಪಕ್ಕದ ಮನೆಯವನ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹಾಕೋಕೆ ಆತುರಪಡಬೇಡ,ಯಾಕಂದ್ರೆ ನೀನೇ ಅಪರಾಧಿ ಅಂತ ಅವನು ಸಾಬೀತು ಮಾಡಿದ್ರೆ ನೀನೇನು ಮಾಡ್ತೀಯ?+
9 ಅವನ ಜೊತೆ ಮಾತಾಡಿ ವಿಷ್ಯ ಸರಿಮಾಡ್ಕೊ,+ಆದ್ರೆ ಅವನ* ಗುಟ್ಟುಗಳನ್ನ ಬೇರೆಯವ್ರಿಗೆ ಹೇಳಬೇಡ.+
10 ಯಾಕಂದ್ರೆ ಆ ವಿಷ್ಯವನ್ನ ಕೇಳಿಸ್ಕೊಳ್ಳುವವನು ನಿನಗೆ ಅವಮಾನ ಮಾಡ್ತಾನೆ,ನೀನು ಹಬ್ಬಿಸಿದ ಕೆಟ್ಟ ವಿಷ್ಯವನ್ನ* ವಾಪಸ್ ತಗೋಳ್ಳೋಕೆ ಆಗಲ್ಲ.
11 ಸರಿಯಾದ ಸಮಯದಲ್ಲಿ ಹೇಳಿದ ಮಾತುಬೆಳ್ಳಿ ಪಾತ್ರೆಯಲ್ಲಿ ಇರೋ ಬಂಗಾರದ ಸೇಬುಗಳ ತರ ಚಂದ.+
12 ವಿವೇಕದಿಂದ ತಿದ್ದುವವನ ಮಾತನ್ನ ಕೇಳೋ ಕಿವಿಗೆಅದು ಬಂಗಾರದ ಕಿವಿಯೋಲೆ ತರ, ಅಪ್ಪಟ ಚಿನ್ನದ ಒಡವೆ ತರ.+
13 ನಂಬಿಗಸ್ತ ಸಂದೇಶವಾಹಕ ತನ್ನನ್ನ ಕಳಿಸಿದ ವ್ಯಕ್ತಿಗೆಕೊಯ್ಲಿನ ದಿನ ಬೀಳೋ ತಂಪಾದ ಹಿಮದ ತರತನ್ನ ಯಜಮಾನನಿಗೆ ಚೈತನ್ಯ ಕೊಡ್ತಾನೆ.+
14 ಯಾವತ್ತೂ ಸಿಗದ ಬಹುಮಾನದ ಬಗ್ಗೆ ಕೊಚ್ಕೊಳ್ಳುವವನು,ಮಳೆ ಕೊಡದ ಮೋಡದ ಹಾಗೆ, ಗಾಳಿ ಹಾಗೆ ಇರ್ತಾನೆ.+
15 ತಾಳ್ಮೆಯಿಂದ ಅಧಿಕಾರಿಯನ್ನ ಗೆಲ್ಲಬಹುದು,ಮೃದುವಾದ ಮಾತಿಂದ ಮೂಳೆನೂ ಮುರಿಬಹುದು.+
16 ಜೇನು ಸಿಕ್ಕಿದಾಗ ಅಗತ್ಯ ಇದ್ದಷ್ಟೆ ತಿನ್ನು,ಜಾಸ್ತಿ ತಿಂದ್ರೆ ಆಮೇಲೆ ಅದನ್ನ ಕಕ್ಕಬೇಕಾಗುತ್ತೆ.+
17 ಪಕ್ಕದ ಮನೆಗೆ ಪದೇಪದೇ ಹೋಗಬೇಡ,ಹೋದ್ರೆ ಅವನು ಬೇಸತ್ತು ನಿನ್ನನ್ನ ದ್ವೇಷಿಸ್ತಾನೆ.
18 ಬೇರೆಯವ್ರ ಬಗ್ಗೆ ಸುಳ್ಳುಸಾಕ್ಷಿ ಹೇಳುವವನು,ಯುದ್ಧದಲ್ಲಿ ಬಳಸೋ ದೊಣ್ಣೆ, ಕತ್ತಿ, ಚೂಪಾದ ಬಾಣಗಳ ತರ.+
19 ನಂಬೋಕೆ ಆಗದ* ವ್ಯಕ್ತಿ ಮೇಲೆ ಕಷ್ಟಕಾಲದಲ್ಲಿ ನಂಬಿಕೆ ಇಡೋದು,ಅಲ್ಲಾಡೋ ಹಲ್ಲಿಂದ ಅಗಿಯೋ ತರ, ನಡುಗೋ ಕಾಲಿಂದ ನಡಿಯೋ ತರ.
20 ನಿರಾಶೆಗೊಂಡಿರೋ ಹೃದಯದ ಮುಂದೆ ಹಾಡು ಹಾಡೋನು+ಚಳಿಗಾಲದ ದಿನದಲ್ಲಿ ಬಟ್ಟೆ ಬಿಚ್ಚೋ ತರ,ಸೋಡದ* ಮೇಲೆ ಹುಳಿ ಸುರಿಯೋ ತರ.
21 ನಿನ್ನ ಶತ್ರು ಹಸಿವೆಯಿಂದ ಇರುವಾಗ ಅವನಿಗೆ ಊಟ ಕೊಡು,ಬಾಯಾರಿಕೆ ಆದಾಗ ಕುಡಿಯೋಕೆ ನೀರು ಕೊಡು.+
22 ಹಾಗೆ ಮಾಡಿದ್ರೆ ಉರಿತಿರೋ ಕೆಂಡಗಳನ್ನ ಅವನ ತಲೆ ಮೇಲೆ ರಾಶಿರಾಶಿಯಾಗಿ ಇಟ್ಟಹಾಗೆ ಇರುತ್ತೆ,*+ಯೆಹೋವನೇ ನಿನಗೆ ಪ್ರತಿಫಲ ಕೊಡ್ತಾನೆ.
23 ಉತ್ತರದ ಗಾಳಿ ಸುರಿಮಳೆಯನ್ನ ತರುತ್ತೆ,ಗಾಳಿಸುದ್ದಿ ಹಬ್ಬಿಸೋ ನಾಲಿಗೆ ಕೋಪ ಬರಿಸುತ್ತೆ.+
24 ಜಗಳಗಂಟಿ* ಹೆಂಡತಿ ಜೊತೆ ಇರೋದಕ್ಕಿಂತ,ಮಾಳಿಗೆಯ ಒಂದು ಮೂಲೆಯಲ್ಲಿ ಇರೋದೇ ಒಳ್ಳೇದು.+
25 ದೂರದೇಶದಿಂದ ಬಂದ ಒಳ್ಳೇ ವರದಿ,ದಣಿದಿರೋ ಪ್ರಾಣಕ್ಕೆ* ತಂಪಾದ ನೀರಿನ ತರ.+
26 ಕೆಟ್ಟವನ ಜೊತೆ ರಾಜಿಮಾಡ್ಕೊಳ್ಳೋ ನೀತಿವಂತ,ಕೆಸರಿನ ಬುಗ್ಗೆ ತರ, ಹಾಳು ಬಾವಿ ತರ.
27 ಅತಿಯಾಗಿ ಜೇನು ತಿನ್ನೋದು ಒಳ್ಳೇದಲ್ಲ,+ಅದೇ ತರ ತನಗೆ ಗೌರವ ಬರಬೇಕಂತ ಬಯಸೋದೂ ಒಳ್ಳೇದಲ್ಲ.+
28 ಕೋಪಕ್ಕೆ ಕಡಿವಾಣ ಹಾಕದವನುಗೋಡೆ ಬಿದ್ದ ಪಟ್ಟಣ ತರ.+
ಪಾದಟಿಪ್ಪಣಿ
^ ಅಥವಾ “ಸಂಗ್ರಹಿಸಿ ಅದ್ರ ಪ್ರತಿಯನ್ನ ತಯಾರಿಸಿದ್ರು.”
^ ಅಥವಾ “ಕಿಟ್ಟ.”
^ ಅಥವಾ “ಬೇರೆಯವ್ರ”
^ ಅಥವಾ “ಕೆಟ್ಟ ಉದ್ದೇಶದಿಂದ ಕೂಡಿದ ಗಾಳಿಸುದ್ದಿಯನ್ನ.”
^ ಬಹುಶಃ, “ವಂಚಕ.”
^ ಅಥವಾ “ಕ್ಷಾರದ.”
^ ಅದು, ಅವನನ್ನ ಮೃದುಮಾಡಿ ಅವನ ಕೋಪ ಕರಗಿಸುತ್ತೆ.
^ ಅಥವಾ “ಕಿರಿಕಿರಿ ಮಾಡೋ.”