ಜ್ಞಾನೋಕ್ತಿ 21:1-31

  • ರಾಜನ ಹೃದಯಕ್ಕೆ ಯೆಹೋವನೇ ದಾರಿ ತೋರಿಸ್ತಾನೆ (1)

  • ಬಲಿಗಳಿಗಿಂತ ನ್ಯಾಯವಾದ ಕೆಲಸಗಳೇ ಇಷ್ಟ (3)

  • ಕಷ್ಟಪಟ್ಟು ಕೆಲಸ ಮಾಡಿದ್ರೆ ಯಶಸ್ಸು (5)

  • ದೀನರ ಕೂಗನ್ನ ಕೇಳದವನ ಕೂಗನ್ನ ಯಾರೂ ಕೇಳಲ್ಲ (13)

  • ಯಾವ ವಿವೇಕನೂ ಯೆಹೋವನ ಮುಂದೆ ನಿಲ್ಲಲ್ಲ (30)

21  ರಾಜನ ಹೃದಯ ಯೆಹೋವನ ಕೈಯಲ್ಲಿರೋ ನದಿ,+ಅದನ್ನ ಇಷ್ಟಬಂದ ಕಡೆಗೆ ತಿರುಗಿಸ್ತಾನೆ.+   ಮನುಷ್ಯನಿಗೆ ತನ್ನೆಲ್ಲ ದಾರಿ ಸರಿಯಾಗೇ ಇದೆ ಅಂತ ಅನಿಸುತ್ತೆ,+ಆದ್ರೆ ಯೆಹೋವ ಹೃದಯಗಳನ್ನ* ಪರೀಕ್ಷಿಸ್ತಾನೆ.+   ಯೆಹೋವನಿಗೆ ಬಲಿಗಳಿಗಿಂತಸರಿಯಾದ, ನ್ಯಾಯವಾದ ಕೆಲಸಗಳೇ ಇಷ್ಟ.+   ಸೊಕ್ಕಿನ ಕಣ್ಣು, ಅಹಂಕಾರದ ಹೃದಯ,ಕೆಟ್ಟವ್ರ ದಾರಿ ಬೆಳಗಿಸೋ ದೀಪ, ಇವು ಪಾಪ.+   ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ,*+ಆದ್ರೆ ಆತುರಪಡುವವರು ಬಡತನಕ್ಕೆ ಬೀಳ್ತಾರೆ.+   ಸುಳ್ಳಿಂದ ಸಿಕ್ಕಿದ ಸಿರಿಸಂಪತ್ತು,ಕಣ್ಮರೆ ಆಗೋ ಮಂಜಿನ ಹಾಗೆ, ಪ್ರಾಣ ತೆಗಿಯೋ ಉರ್ಲಿನ ಹಾಗೆ.*+   ಕೆಟ್ಟವನು ಕೊಡೋ ಹಿಂಸೆ ಅವನನ್ನ ಗುಡಿಸಿ ಗುಂಡಾಂತರ ಮಾಡುತ್ತೆ,+ಯಾಕಂದ್ರೆ ಅವನು ನ್ಯಾಯದಿಂದ ನಡ್ಕೊಳ್ಳೋಕೆ ಒಪ್ಪಲ್ಲ.   ಅಪರಾಧಿ ದಾರಿ ಕೆಟ್ಟದು,ಆದ್ರೆ ತಪ್ಪು ಮಾಡದವನು ಸರಿಯಾದ ದಾರಿಯಲ್ಲಿ ನಡಿತಾನೆ.+   ಜಗಳಗಂಟಿ* ಹೆಂಡತಿ ಜೊತೆ ಇರೋದಕ್ಕಿಂತ,ಮಾಳಿಗೆಯ ಒಂದು ಮೂಲೆಯಲ್ಲಿ ಇರೋದೇ ಒಳ್ಳೇದು.+ 10  ಕೆಟ್ಟವನು ಕೆಟ್ಟದು ಮಾಡೋಕೆ ತುದಿಗಾಲಲ್ಲಿ ಇರ್ತಾನೆ,+ಪಕ್ಕದ ಮನೆಯವನಿಗೆ ಒಂಚೂರೂ ದಯೆ ತೋರಿಸಲ್ಲ.+ 11  ಗೇಲಿ ಮಾಡುವವನಿಗೆ ಶಿಕ್ಷೆ ಆದಾಗ ಅನುಭವ ಇಲ್ಲದವನು ವಿವೇಕಿ ಆಗ್ತಾನೆ,ವಿವೇಕಿಗೆ ತಿಳುವಳಿಕೆ* ಸಿಕ್ಕಿದಾಗ ಅವನು ಜ್ಞಾನ ಪಡ್ಕೊಳ್ತಾನೆ.*+ 12  ನೀತಿವಂತನಾದ ದೇವರು ಕೆಟ್ಟವನ ಮನೆಯನ್ನ ನೋಡ್ತಾನೆ,ಕೆಟ್ಟವನನ್ನ ನಾಶ ಮಾಡ್ತಾನೆ.+ 13  ದೀನರ ಕೂಗಿಗೆ ಕಿವಿ ಮುಚ್ಕೊಳ್ಳೋನಿಗೆ,ಅವನು ಕೂಗುವಾಗ ಯಾರಿಂದಾನೂ ಉತ್ತರ ಸಿಗಲ್ಲ.+ 14  ಗುಟ್ಟಾಗಿ ಕೊಟ್ಟ ಉಡುಗೊರೆ ಕೋಪ ಆರಿಸುತ್ತೆ,+ಗುಟ್ಟಾಗಿ ಕೊಟ್ಟ ಲಂಚ ಕಡುಕೋಪವನ್ನ ಶಾಂತ ಮಾಡುತ್ತೆ. 15  ನ್ಯಾಯವಾಗಿ ನಡ್ಕೊಳ್ಳೋದಂದ್ರೆ ನೀತಿವಂತನಿಗೆ ಖುಷಿ,+ಆದ್ರೆ ಕೆಟ್ಟಕೆಲಸ ಮಾಡುವವನಿಗೆ ಅದು ಅಸಹ್ಯ. 16  ತಿಳುವಳಿಕೆಯ* ದಾರಿಯಿಂದ ತಪ್ಪಿಹೋಗಿರುವವನುಸತ್ತವರ ಜೊತೆ ಸಮಾಧಿ ಸೇರ್ತಾನೆ.+ 17  ಮೋಜುಮಸ್ತಿ ಪ್ರೀತಿಸುವವನು ಬಡತನಕ್ಕೆ ಹೋಗ್ತಾನೆ,+ದ್ರಾಕ್ಷಾಮದ್ಯ, ಎಣ್ಣೆಯನ್ನ ಪ್ರೀತಿಸುವವನು ಶ್ರೀಮಂತನಾಗಿ ಏಳಿಗೆ ಆಗಲ್ಲ. 18  ನೀತಿವಂತನನ್ನ ಬಿಡಿಸೋಕೆ ಕೆಟ್ಟವನೇ ಬಿಡುಗಡೆ ಬೆಲೆ,ಪ್ರಾಮಾಣಿಕನಿಗೆ ಮೋಸಗಾರನೇ ಬಿಡುಗಡೆ ಬೆಲೆ.+ 19  ಕಿರಿಕಿರಿ ಮಾಡೋ ಜಗಳಗಂಟಿ ಹೆಂಡತಿ ಜೊತೆ ಬದುಕೋದಕ್ಕಿಂತ,ಕಾಡಿಗೆ ಹೋಗಿ ಇರೋದೇ ಒಳ್ಳೇದು.+ 20  ವಿವೇಕಿಯ ಮನೇಲಿ ಬೆಲೆಬಾಳೋ ನಿಧಿ, ಎಣ್ಣೆ ಇರುತ್ತೆ,+ಆದ್ರೆ ಮೂರ್ಖ ತನ್ನ ಹತ್ರ ಇರೋದನ್ನೆಲ್ಲ ನುಂಗಿ ನೀರು ಕುಡಿತಾನೆ.+ 21  ನೀತಿ, ಶಾಶ್ವತ ಪ್ರೀತಿ ತೋರಿಸುವವರು ನೀತಿವಂತರಾಗ್ತಾರೆ. ಅವ್ರಿಗೆ ಜೀವ, ಗೌರವ ಸಿಗುತ್ತೆ.+ 22  ವಿವೇಕಿ ಭದ್ರವಾದ ಪಟ್ಟಣವನ್ನ ವಶ ಮಾಡ್ಕೋಳ್ತಾನೆ,ಆ ಪಟ್ಟಣದವರು ಯಾವುದನ್ನ ನಂಬಿದ್ರೋ ಅದನ್ನ ನೆಲಕ್ಕೆ ಉರುಳಿಸ್ತಾನೆ.+ 23  ಬಾಯಿ, ನಾಲಿಗೆಯನ್ನ ಹತೋಟಿಯಲ್ಲಿ ಇಟ್ಕೊಳ್ಳೋನು,ಕಷ್ಟದಿಂದ ತಪ್ಪಿಸ್ಕೊಳ್ತಾನೆ.+ 24  ಸೊಕ್ಕು ಇರುವವನನ್ನ, ಜಂಬ ಕೊಚ್ಕೋಳ್ಳೋನನ್ನಮೊಂಡ ಅಹಂಕಾರಿ ಅಂತ ಕರಿತಾರೆ.+ 25  ಸೋಮಾರಿಯ ಕೈಗಳು ಕೆಲಸ ಮಾಡೋಕೆ ಇಷ್ಟಪಡಲ್ಲ,ಅವನ ಸೋಮಾರಿತನದಿಂದ ಸತ್ತುಹೋಗ್ತಾನೆ.+ 26  ಅವನು ಇಡೀ ದಿನ ಒಂದಲ್ಲ ಒಂದು ವಿಷ್ಯಕ್ಕೆ ಅತಿಯಾಸೆಪಡ್ತಾನೆ,ಆದ್ರೆ ನೀತಿವಂತ ತನ್ನ ಹತ್ರ ಏನೂ ಇಟ್ಕೊಳ್ಳದೆ ಎಲ್ಲ ಕೊಟ್ಟುಬಿಡ್ತಾನೆ.+ 27  ಕೆಟ್ಟವನು ಅರ್ಪಿಸೋ ಬಲಿನೇ ಅಸಹ್ಯವಾಗಿ ಇರುವಾಗ,+ಅದನ್ನ ಕೆಟ್ಟ ಉದ್ದೇಶದಿಂದ* ಕೊಟ್ರೆ ಇನ್ನೂ ಅಸಹ್ಯವಾಗಿ ಇರಲ್ವಾ? 28  ಸುಳ್ಳು ಸಾಕ್ಷಿ ನಾಶವಾಗಿ ಹೋಗುತ್ತೆ,+ಆದ್ರೆ ಜಾಗ್ರತೆಯಿಂದ ಕೇಳಿಸ್ಕೊಳ್ಳೋ ವ್ಯಕ್ತಿ ಹೇಳೋ ಸಾಕ್ಷಿ ಬಿದ್ದುಹೋಗಲ್ಲ. 29  ಕೆಟ್ಟವನ ಮುಖದಲ್ಲಿ ನಾಚಿಕೆ ಸುಳಿವೇ ಇರಲ್ಲ,+ನೀತಿವಂತನ ದಾರಿಯಲ್ಲಿ ಅಪಾಯ ಇರಲ್ಲ.+ 30  ಯಾವ ವಿವೇಕನೂ, ವಿವೇಚನಾ ಶಕ್ತಿನೂ, ಸಲಹೆನೂ ಯೆಹೋವನ ಮುಂದೆ ನಿಲ್ಲಲ್ಲ.+ 31  ಯುದ್ಧದ ದಿನಕ್ಕಾಗಿ ಕುದುರೆಯನ್ನ ಸಿದ್ಧಮಾಡಿದ್ರೂ+ರಕ್ಷಣೆ ಯೆಹೋವನಿಂದಾನೇ!+

ಪಾದಟಿಪ್ಪಣಿ

ಅಥವಾ “ಉದ್ದೇಶಗಳನ್ನ.”
ಅಥವಾ “ಅವನಿಗೆ ಪ್ರಯೋಜನ ತರುತ್ತೆ.”
ಬಹುಶಃ, “ಮರಣವನ್ನ ಹುಡುಕುವವ್ರಿಗೆ, ಕಣ್ಮರೆಯಾಗೋ ಮಂಜಿನ ಹಾಗೆ.”
ಅಥವಾ “ಕಿರಿಕಿರಿ ಮಾಡೋ.”
ಅಕ್ಷ. “ಒಳನೋಟ.”
ಅಥವಾ “ತಾನೇನು ಮಾಡಬೇಕಂತ ಗೊತ್ತಾಗುತ್ತೆ.”
ಅಕ್ಷ. “ಒಳನೋಟ.”
ಅಥವಾ “ನಾಚಿಕೆಗೆಟ್ಟ ನಡತೆ ಇಟ್ಕೊಂಡು.”