ಜ್ಞಾನೋಕ್ತಿ 2:1-22

  • ವಿವೇಕದ ಬೆಲೆ (1-22)

    • ಬಚ್ಚಿಟ್ಟಿರೋ ನಿಧಿ ಹುಡುಕೋ ತರ ಹುಡುಕು (4)

    • ಬುದ್ಧಿ ಕಾಪಾಡುತ್ತೆ (11)

    • ಅನೈತಿಕತೆ ಕಷ್ಟ ತರುತ್ತೆ (16-19)

2  ನನ್ನ ಮಗನೇ, ನನ್ನ ಮಾತನ್ನ ಕೇಳು,ನನ್ನ ಆಜ್ಞೆಗಳನ್ನ ಆಸ್ತಿ ತರ ಅಮೂಲ್ಯವಾಗಿ ನೋಡು,*+   ವಿವೇಕದ ಮಾತುಗಳನ್ನ ಕೇಳಿಸ್ಕೊ,+ಸರಿ ಯಾವುದು ತಪ್ಪು ಯಾವುದು ಅಂತ ಗೊತ್ತಾಗಬೇಕಂದ್ರೆ* ನಿನ್ನ ಮನಸ್ಸು ಕೊಡು,+   ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯಕ್ಕಾಗಿ ಬೇಡ್ಕೊ,+ವಿವೇಚನಾ ಶಕ್ತಿಗಾಗಿ ಕೇಳ್ಕೋ,+   ಅವುಗಳನ್ನ ಬೆಳ್ಳಿ ತರ ಹುಡುಕು,+ನೆಲದಲ್ಲಿ ಬಚ್ಚಿಟ್ಟಿರೋ ನಿಧಿ ತರ ಹುಡುಕು,+   ಆಗ ನಿನಗೆ ಯೆಹೋವನ ಭಯ ಅಂದ್ರೇನು ಅಂತ ಅರ್ಥ ಆಗುತ್ತೆ,+ದೇವರ ಬಗ್ಗೆ ಹೆಚ್ಚು ಕಲಿತೀಯ.+   ಯಾಕಂದ್ರೆ ಯೆಹೋವನೇ ವಿವೇಕ ಕೊಡ್ತಾನೆ,+ಜ್ಞಾನ, ತಿಳುವಳಿಕೆಯ ಮಾತುಗಳು ಆತನ ಬಾಯಿಂದಾನೇ ಬರುತ್ತೆ.   ಆತನು ತನ್ನ ಭಂಡಾರದಿಂದ ಪ್ರಾಮಾಣಿಕರಿಗೆ ವಿವೇಕ* ಕೊಡ್ತಾನೆ,ತಪ್ಪು ಮಾಡದವ್ರಿಗೆ ಗುರಾಣಿಯಾಗಿ ಇರ್ತಾನೆ.+   ನ್ಯಾಯದ ದಾರಿಯಲ್ಲಿ ನಡಿಯುವವ್ರಿಗೆ ಕಾವಲಾಗಿ ಇರ್ತಾನೆ,ತನ್ನ ನಿಷ್ಠಾವಂತರ ದಾರಿಯನ್ನ ಕಾದುಕಾಪಾಡ್ತಾನೆ.+   ಆಗ ನಿನಗೆ ನ್ಯಾಯ-ನೀತಿಯಿಂದ, ಭೇದಭಾವ ಮಾಡದೆ ಇರೋದು ಅಂದ್ರೇನು ಅಂತ ಅರ್ಥ ಆಗುತ್ತೆ,ಯಾವುದು ಒಳ್ಳೇ ದಾರಿ ಅಂತ ಗೊತ್ತಾಗುತ್ತೆ.+ 10  ವಿವೇಕ ನಿನ್ನ ಹೃದಯದ ಒಳಗೆ ಹೋದಾಗ,+ಜ್ಞಾನದಿಂದ ನಿನ್ನ ಪ್ರಾಣಕ್ಕೆ ಖುಷಿಯಾದಾಗ,+ 11  ಬುದ್ಧಿ ನಿನಗೆ ಕಾವಲಾಗಿರುತ್ತೆ,+ವಿವೇಚನಾ ಶಕ್ತಿ ನಿನ್ನನ್ನ ಕಾದುಕಾಪಾಡುತ್ತೆ. 12  ನೀನು ಕೆಟ್ಟ ದಾರಿಗೆ ಹೋಗದ ಹಾಗೆ ಅವು ಕಾಪಾಡುತ್ತೆ,ಬಾಯಿಗೆ ಬಂದದ್ದನ್ನ ಮಾತಾಡದ ಹಾಗೆ ನಿನ್ನನ್ನ ಕಾಪಾಡುತ್ತೆ.+ 13  ಸರಿ ದಾರಿ ಬಿಟ್ಟು ಕೆಟ್ಟ ದಾರಿಯಲ್ಲಿರೋ ಜನ್ರಿಂದ,+ನಿನ್ನನ್ನ ರಕ್ಷಿಸುತ್ತೆ. 14  ಕೆಟ್ಟ ಕೆಲಸ ಮಾಡಿ ಖುಷಿ ಪಡೋ,ಅಸಭ್ಯವಾಗಿ ಮಾತಾಡೋ ಜನ್ರಿಂದ ನಿನ್ನನ್ನ ಕಾಪಾಡುತ್ತೆ. 15  ಕೆಟ್ಟವರು ಅಡ್ಡ ದಾರಿಯಲ್ಲಿ ನಡಿತಾರೆ,ಬೇರೆಯವ್ರಿಗೆ ಮೋಸ ಮಾಡ್ತಾನೇ ಇರ್ತಾರೆ. 16  ವಿವೇಕ ನಿನ್ನನ್ನ ನಡತೆಗೆಟ್ಟ* ಹೆಂಗಸಿಂದ ಕಾಪಾಡುತ್ತೆ,ನಾಚಿಕೆಗೆಟ್ಟ* ಹೆಂಗಸಿನ ಮೋಡಿಯ ಮಾತಿಗೆ ಮರಳಾಗದ ಹಾಗೆ ತಪ್ಪಿಸುತ್ತೆ.+ 17  ಅವಳು ತನ್ನ ಯೌವನದ ಆಪ್ತ ಗೆಳೆಯನನ್ನ* ಬಿಟ್ಟುಬಿಟ್ಟಿದ್ದಾಳೆ.+ ತನ್ನ ದೇವರ ಜೊತೆ ಮಾಡ್ಕೊಂಡ ಒಪ್ಪಂದವನ್ನ ಮರೆತುಬಿಟ್ಟಿದ್ದಾಳೆ. 18  ನೀನು ಅವಳ ಮನೆಗೆ ಹೋದ್ರೆ ಮರಣದ ಬಾಯಿಗೆ ಹೋಗ್ತಿಯ. ಅವಳ ಮನೆಯ ದಾರಿಗಳು ಸಮಾಧಿಗೆ ನಡಿಸುತ್ತೆ.+ 19  ಅವಳ ಜೊತೆ ಸಂಬಂಧ ಇಟ್ಕೊಳ್ಳೋ* ಗಂಡಸ್ರು ವಾಪಸ್‌ ಬರಲ್ಲ,ಜೀವದ ದಾರಿಯಲ್ಲಿ ಅವ್ರಿಗೆ ಮತ್ತೆ ನಡಿಯೋಕೆ ಆಗಲ್ಲ.+ 20  ಹಾಗಾಗಿ ಒಳ್ಳೇ ಜನ್ರು ನಡಿಯೋ ದಾರಿಯಲ್ಲಿ ನಡಿ. ನೀತಿವಂತರು ಹೋಗೋ ದಾರಿಯನ್ನ ಬಿಟ್ಟುಬರಬೇಡ.+ 21  ಯಾಕಂದ್ರೆ ಒಳ್ಳೆಯವರು* ಮಾತ್ರ ಭೂಮಿಯಲ್ಲಿ ಇರ್ತಾರೆ,ತಪ್ಪು ಮಾಡದವರು* ಉಳಿತಾರೆ.+ 22  ಆದ್ರೆ ಕೆಟ್ಟವರು ಭೂಮಿ ಮೇಲಿಂದ ನಾಶ ಆಗ್ತಾರೆ,+ಮೋಸಗಾರರನ್ನ ದೇವರು ಕಿತ್ತು ಎಸಿತಾನೆ.+

ಪಾದಟಿಪ್ಪಣಿ

ಅಥವಾ “ನಿಧಿ ಹಾಗೆ ಕಾಪಾಡ್ಕೋ.”
ಅಥವಾ “ವಿವೇಚನಾ ಶಕ್ತಿ ಸಿಗಬೇಕಂದ್ರೆ.”
ಅಥವಾ “ಪ್ರಯೋಜನ ತರೋ ವಿವೇಕ.”
ಅಕ್ಷ. “ಅಪರಿಚಿತ.” ಇಲ್ಲಿ ನೈತಿಕವಾಗಿ ದೇವರಿಂದ ದೂರ ಹೋಗಿರೋ ಹೆಂಗಸನ್ನ ಸೂಚಿಸುತ್ತಿರಬೇಕು.
ಅಕ್ಷ. “ವಿದೇಶಿ.” ಇಲ್ಲಿ ನೈತಿಕವಾಗಿ ದೇವರಿಂದ ದೂರ ಹೋಗಿರೋ ಹೆಂಗಸನ್ನ ಸೂಚಿಸುತ್ತಿರಬೇಕು.
ಅಥವಾ “ಗಂಡನನ್ನ.”
ಅಕ್ಷ. “ಅವಳ ಹತ್ರ ಹೋಗೋ.”
ಅಥವಾ “ಪ್ರಾಮಾಣಿಕರು.”
ಅಥವಾ “ನಿರ್ದೋಷಿಗಳು.”