ಜ್ಞಾನೋಕ್ತಿ 18:1-24

  • ಜನ್ರ ಜೊತೆ ಸೇರದವನು ಸ್ವಾರ್ಥಿ, ಮೂರ್ಖ (1)

  • ಯೆಹೋವನ ಹೆಸ್ರು ಬಲವಾದ ಕೋಟೆ (10)

  • ಆಸ್ತಿ ರಕ್ಷಣೆ ಕೊಡೋ ಗೋಡೆ ಅಂತ ಶ್ರೀಮಂತ ಅಂದ್ಕೊಳ್ತಾನೆ (11)

  • ಎರಡೂ ಕಡೆ ಕೇಳೋದ್ರಲ್ಲಿ ವಿವೇಕ ಇದೆ (17)

  • ಒಡಹುಟ್ಟಿದವನಿಗಿಂತ ಜಾಸ್ತಿ ಪ್ರೀತಿಸೋ ಸ್ನೇಹಿತ (24)

18  ಜನ್ರ ಜೊತೆ ಸೇರದೆ ಒಂಟಿಯಾಗಿ ಇರೋಕೆ ಇಷ್ಟಪಡುವವನು ಸ್ವಾರ್ಥ ಆಸೆಗಳ ಹಿಂದೆ ಹೋಗ್ತಾನೆ,ಅವನು ವಿವೇಕವನ್ನ* ಬೇಡ ಅಂತಾನೆ.   ಬುದ್ಧಿ ಮಾತಂದ್ರೆ ಮೂರ್ಖನಿಗೆ ಸ್ವಲ್ಪಾನೂ ಇಷ್ಟ ಆಗಲ್ಲ. ಅವನ ಮನಸ್ಸಲ್ಲಿ ಇರೋದನ್ನ ಕಕ್ಕೋದೆ ಅವನಿಗಿಷ್ಟ.+   ಕೆಟ್ಟವನು ಎಲ್ಲಿ ಇರ್ತಾನೋ ಅಲ್ಲಿ ತಿರಸ್ಕಾರನೂ ಇರುತ್ತೆ,ಅವಮಾನದ ಜೊತೆ ಕೆಟ್ಟ ಹೆಸ್ರೂ ಬರುತ್ತೆ.+   ಮನುಷ್ಯನ ಮಾತು ಆಳವಾದ ನೀರಿನ ತರ,+ಅವನಿಂದ ಬರೋ ವಿವೇಕ ಹರಿಯೋ ಕಾಲುವೆ ತರ.   ತೀರ್ಪನ್ನ ಕೊಡೋವಾಗ ಕೆಟ್ಟವನ ಪರ ವಹಿಸೋದು ಸರಿಯಲ್ಲ,+ನೀತಿವಂತನಿಗೆ ನ್ಯಾಯ ಸಿಗದ ಹಾಗೆ ಮಾಡೋದು ಒಳ್ಳೇದಲ್ಲ.+   ಮೂರ್ಖನ ಮಾತು ಜಗಳಕ್ಕೆ ನಡಿಸುತ್ತೆ,+ಅವನ ಬಾಯಿ ಹೊಡೆತಗಳನ್ನ ಕೈಬೀಸಿ ಕರಿಯುತ್ತೆ.+   ದಡ್ಡನ ಬಾಯಿ ಅವನಿಗೆ ನಾಶ ತರುತ್ತೆ,+ಅವನ ತುಟಿಗಳು ಅವನ ಪ್ರಾಣಕ್ಕೆ ಉರ್ಲು.   ಚಾಡಿಕೋರನ ಮಾತು ರುಚಿಯಾದ ತುತ್ತುಗಳ ತರ,*+ನುಂಗಿದಾಗ ನೇರವಾಗಿ ಹೊಟ್ಟೆಗೆ ಹೋಗುತ್ತೆ.+   ಸೋಮಾರಿಯಾಗಿ ಇರೋನು,ನಾಶ ತರುವವನ ತಮ್ಮ.+ 10  ಯೆಹೋವನ ಹೆಸ್ರು ಬಲವಾದ ಕೋಟೆ.+ ನೀತಿವಂತ ಅದ್ರೊಳಗೆ ಓಡಿಹೋಗಿ ರಕ್ಷಣೆ ಪಡೀತಾನೆ.*+ 11  ಶ್ರೀಮಂತನ ಆಸ್ತಿನೇ ಅವನಿಗೆ ಭದ್ರಕೋಟೆ,ಅದು ಅವನಿಗೆ ರಕ್ಷಣೆ ಕೊಡೋ ಗೋಡೆ ಅಂದ್ಕೊಳ್ತಾನೆ.+ 12  ಮನುಷ್ಯನ ಸೊಕ್ಕು ನಾಶಕ್ಕೆ ನಡಿಸುತ್ತೆ,+ದೀನತೆಯಿಂದ ಗೌರವ ಸಿಗುತ್ತೆ.+ 13  ನಿಜ ಏನಂತ ಅರ್ಥ ಮಾಡ್ಕೊಳ್ಳದೆ ಉತ್ತರ ಕೊಡುವವನು ಮೂರ್ಖ,ಅದ್ರಿಂದ ಅವನಿಗೆ ಅವಮಾನ ಆಗುತ್ತೆ.+ 14  ಧೈರ್ಯವಾಗಿದ್ರೆ ಕಾಯಿಲೆಯನ್ನೂ ಗೆಲ್ಲಬಹುದು,+ಆದ್ರೆ ಕುಗ್ಗಿದ ಮನಸ್ಸನ್ನ* ಯಾರು ತಾನೇ ಸಹಿಸ್ಕೊಳ್ತಾರೆ?+ 15  ಅರ್ಥ ಮಾಡ್ಕೊಳ್ಳೋ ಮನಸ್ಸು ಜ್ಞಾನ ಗಳಿಸುತ್ತೆ,+ಬುದ್ಧಿವಂತನ ಕಿವಿ ಜ್ಞಾನ ಹುಡುಕುತ್ತೆ. 16  ಒಬ್ಬನು ಕೊಡೋ ಉಡುಗೊರೆ ಅವನಿಗೆ ದಾರಿ ತೆರಿಯುತ್ತೆ,+ಅದು ಅವನನ್ನ ದೊಡ್ಡದೊಡ್ಡವ್ರ ಮುಂದೆ ಕರ್ಕೊಂಡು ಹೋಗುತ್ತೆ. 17  ಮೊದ್ಲು ಮಾತಾಡುವವನೇ ಸರಿ ಅಂತ ಅನಿಸುತ್ತೆ,+ಆದ್ರೆ ಪ್ರತಿವಾದಿ ಎದ್ದು ಪ್ರಶ್ನೆ ಮಾಡಿದಾಗ ನಿಜ ಗೊತ್ತಾಗುತ್ತೆ.+ 18  ಚೀಟಿ ಹಾಕಿದ್ರೆ ಜಗಳ ನಿಂತುಹೋಗುತ್ತೆ,+ವಿರೋಧಿಗಳು ಎಂಥವ್ರೇ ಆಗಿದ್ರೂ ಸಮಸ್ಯೆ ಬಗೆಹರಿಯುತ್ತೆ. 19  ಬೇಜಾರಾಗಿರೋ ಸಹೋದರನನ್ನ ಗೆಲ್ಲೋದಕ್ಕಿಂತ ಭದ್ರಕೋಟೆ ಇರೋ ಪಟ್ಟಣ ಗೆಲ್ಲೋದು ಸುಲಭ,+ಭದ್ರಕೋಟೆಯ ಕಂಬಿಗಳ ತರ ಜಗಳಗಳು ಜನ್ರನ್ನ ಬೇರೆಬೇರೆ ಮಾಡಿಬಿಡುತ್ತೆ.+ 20  ಮನುಷ್ಯ ತನ್ನ ಮಾತಿಂದ* ಹೊಟ್ಟೆ ತುಂಬಿಸ್ಕೊಳ್ತಾನೆ,+ತನ್ನ ತುಟಿಗಳ ಬೆಳೆಯಿಂದ ತೃಪ್ತನಾಗ್ತಾನೆ. 21  ಜೀವ, ಮರಣ ಎರಡೂ ನಾಲಿಗೆ ಕೈಯಲ್ಲಿದೆ,+ಮಾತಿಗೆ ತಕ್ಕ ಹಾಗೆ ಫಲ ಸಿಗುತ್ತೆ.+ 22  ಒಬ್ಬನಿಗೆ ಒಳ್ಳೇ ಹೆಂಡತಿ ಸಿಕ್ಕಿದ್ರೆ ಬೆಲೆಕಟ್ಟೋಕೆ ಆಗದ ನಿಧಿ ಸಿಕ್ಕಿದ ಹಾಗೆ.+ ಅವನು ಯೆಹೋವನ ಆಶೀರ್ವಾದ ಪಡೀತಾನೆ.+ 23  ಶ್ರೀಮಂತನ ಹತ್ರ ಬಡವ ಸಹಾಯಕ್ಕಾಗಿ ಅಂಗಲಾಚಿ ಕೇಳ್ತಾನೆ,ಆದ್ರೆ ಶ್ರೀಮಂತ ಕನಿಕರ ತೋರಿಸದೆ ಉತ್ತರ ಕೊಡ್ತಾನೆ. 24  ಒಬ್ರನ್ನೊಬ್ರು ಜಜ್ಜಿಬಿಡಬೇಕು ಅಂತ ಕಾಯೋ ಜೊತೆಗಾರರೂ ಇದ್ದಾರೆ,+ಒಡಹುಟ್ಟಿದವನಿಗಿಂತ ಜಾಸ್ತಿ ಪ್ರೀತಿಸೋ ಸ್ನೇಹಿತನೂ ಇರ್ತಾನೆ.+

ಪಾದಟಿಪ್ಪಣಿ

ಅಥವಾ “ಪ್ರಯೋಜನ ಆಗೋ ವಿವೇಕವನ್ನ.”
ಅಥವಾ “ಅತಿಯಾಸೆಯಿಂದ ನುಂಗೋ ಆಹಾರದ ತರ.”
ಅಕ್ಷ. “ಮೇಲೆ ಎತ್ತಲಾಗುತ್ತೆ.” ಅಂದ್ರೆ, ಯಾರಿಗೂ ಸಿಗದೆ ಸುರಕ್ಷಿತವಾಗಿ ಇರ್ತಾನೆ.
ಅಥವಾ “ಪೂರ್ತಿ ನಿರಾಶೆಯಾದ್ರೆ.”
ಅಕ್ಷ. “ಬಾಯಿ.”