ಜ್ಞಾನೋಕ್ತಿ 16:1-33

  • ಯೆಹೋವ ಉದ್ದೇಶಗಳನ್ನ ಪರಿಶೀಲಿಸ್ತಾನೆ (2)

  • ನಿನ್ನ ಕೆಲಸಗಳನ್ನೆಲ್ಲ ಯೆಹೋವನಿಗೆ ಒಪ್ಪಿಸು (3)

  • ಪ್ರಾಮಾಣಿಕವಾದ ತಕ್ಕಡಿ ಯೆಹೋವನದ್ದೇ (11)

  • ಸೊಕ್ಕಿಂದ ಸರ್ವನಾಶ (18)

  • ನರೆಗೂದಲು ಸುಂದರ ಕಿರೀಟ (31)

16  ಮನುಷ್ಯ ಮಾತಾಡೋ ಮುಂಚೆ ತನ್ನ ಹೃದಯದ ಯೋಚ್ನೆಗಳನ್ನ ಸಿದ್ಧಮಾಡ್ತಾನೆ,ಆದ್ರೆ ಅವನು ಕೊಡೋ ಉತ್ತರ* ಯೆಹೋವನಿಂದ ಬರುತ್ತೆ.+   ಮನುಷ್ಯನಿಗೆ ತನ್ನೆಲ್ಲ ದಾರಿಗಳು ಸರಿಯಾಗೇ* ಇದೆ ಅಂತ ಅನಿಸುತ್ತೆ,+ಆದ್ರೆ ಯೆಹೋವ ಉದ್ದೇಶಗಳನ್ನ* ಪರೀಕ್ಷಿಸ್ತಾನೆ.+   ನಿನ್ನ ಕೆಲಸಗಳನ್ನೆಲ್ಲ ಯೆಹೋವನಿಗೆ ಒಪ್ಪಿಸು,*+ಆಗ ನಿನ್ನ ಯೋಜನೆಗಳಿಗೆ ಯಶಸ್ಸು ಸಿಗುತ್ತೆ.   ಯೆಹೋವ ತನ್ನ ಮಾತನ್ನ ಪೂರೈಸೋಕೆ ಪ್ರತಿಯೊಂದನ್ನ ಮಾಡಿದ್ದಾನೆ,ಕೆಟ್ಟವನನ್ನ ಕೂಡ ಕಷ್ಟದ ದಿನದಲ್ಲಿ ಶಿಕ್ಷೆ ಅನುಭವಿಸೋಕೆ ಇಟ್ಟಿದ್ದಾನೆ.+   ಹೃದಯದಲ್ಲಿ ಅಹಂಕಾರ ಇರುವವ್ರನ್ನ ಕಂಡ್ರೆ ಯೆಹೋವನಿಗೆ ಇಷ್ಟ ಆಗಲ್ಲ.+ ಅವ್ರಿಗೆ ಖಂಡಿತ ಶಿಕ್ಷೆ ಕೊಡ್ತಾನೆ ಅಂತ ನಂಬಿಕೆ ಇರಲಿ.   ಶಾಶ್ವತ ಪ್ರೀತಿಯಿಂದಾಗಿ, ನಂಬಿಗಸ್ತಿಕೆಯಿಂದಾಗಿ ತಪ್ಪಿಗೆ ಕ್ಷಮೆ ಸಿಗುತ್ತೆ,+ಯೆಹೋವನಿಗೆ ಭಯಪಡುವವನು ಕೆಟ್ಟದು ಮಾಡಲ್ಲ.+   ಯೆಹೋವ ಒಬ್ಬನ ನಡತೆಯನ್ನ ಮೆಚ್ಚಿದ್ರೆ,ಅವನ ಶತ್ರುಗಳನ್ನ ಸಹ ಮಿತ್ರರಾಗಿ ಮಾಡ್ತಾನೆ.*+   ಅನ್ಯಾಯ ಮಾಡಿ ಶ್ರೀಮಂತರಾಗೋದಕ್ಕಿಂತ,+ನೀತಿಯಿಂದ ನಡೆದು ಬಡವ್ರಾಗಿ ಇರೋದೇ ಒಳ್ಳೇದು.+   ಮನುಷ್ಯ ತನ್ನ ಹೃದಯದಲ್ಲೇ ಯೋಜನೆ ಮಾಡಬಹುದು,ಆದ್ರೆ ಯೆಹೋವ ಅವನ ಕಾಲಿಗೆ ದಾರಿ ತೋರಿಸ್ತಾನೆ.+ 10  ರಾಜನ ತುಟಿಗಳ ಮೇಲೆ ದೇವರ ತೀರ್ಮಾನ ಇರ್ಬೇಕು,+ಅವನು ಯಾವುದೇ ಕಾರಣಕ್ಕೂ ನ್ಯಾಯ ಮೀರಿ ನಡಿಬಾರದು.+ 11  ಪ್ರಾಮಾಣಿಕವಾದ ತಕ್ಕಡಿ ಯೆಹೋವನದ್ದೇ,ಚೀಲದೊಳಗೆ ಇಟ್ಟಿರೋ ತೂಕದ ಕಲ್ಲುಗಳನ್ನೆಲ್ಲ ಆತನೇ ಮಾಡಿದ್ದು.+ 12  ಕೆಟ್ಟ ಕೆಲಸಗಳಂದ್ರೆ ರಾಜರಿಗೆ ಇಷ್ಟ ಇಲ್ಲ,+ಯಾಕಂದ್ರೆ ನೀತಿ ಇದ್ರೇನೇ ಸಿಂಹಾಸನಕ್ಕೆ ಬಲ.+ 13  ರಾಜರಿಗೆ ನೀತಿ ಮಾತುಗಳೆಂದ್ರೆ ಇಷ್ಟ,ಸತ್ಯ ಹೇಳೋರನ್ನ ಕಂಡ್ರೆ ಅವ್ರಿಗೆ ಇಷ್ಟ.+ 14  ರಾಜನ ಕೋಪ ಸಾವಿನ ದೂತನ ತರ ಇರುತ್ತೆ,+ಆದ್ರೆ ರಾಜನ ಕೋಪವನ್ನ ವಿವೇಕಿ ಶಾಂತ ಮಾಡ್ತಾನೆ.+ 15  ರಾಜ ದಯೆ ತೋರಿಸಿದ್ರೆ ಜೀವನ ಸಂತೋಷವಾಗಿ ಇರುತ್ತೆ,ಅವನ ಅನುಗ್ರಹ ವಸಂತಕಾಲದ ಮಳೆಯ ಮೋಡದ ಹಾಗೆ ಇರುತ್ತೆ.+ 16  ಚಿನ್ನಕ್ಕಿಂತ ವಿವೇಕ ಪಡಿಯೋದು ಉತ್ತಮ,+ಬೆಳ್ಳಿಗಿಂತ ವಿವೇಚನೆ ಸಂಪಾದಿಸೋದು ಒಳ್ಳೇದು.+ 17  ನೀತಿವಂತನ ದಾರಿ ಕೆಟ್ಟ ವಿಷ್ಯಗಳಿಂದ ದೂರ ಇರುತ್ತೆ. ಸರಿಯಾದ ದಾರಿಯಲ್ಲಿ ನಡಿಯುವವನು ತನ್ನ ಪ್ರಾಣ ಕಾಪಾಡ್ಕೊಳ್ತಾನೆ.+ 18  ಸೊಕ್ಕಿಂದ ಸರ್ವನಾಶ,ದರ್ಪದಿಂದ ದುರ್ಗತಿ.+ 19  ಸೊಕ್ಕು ಇರುವವ್ರ ಜೊತೆ ಸೂರೆಯನ್ನ ಹಂಚ್ಕೊಳ್ಳೋದಕ್ಕಿಂತ,ದೀನರ ಜೊತೆ ಸೌಮ್ಯಸ್ವಭಾವದಿಂದ ಇರೋದೇ ಒಳ್ಳೇದು.+ 20  ಒಂದು ವಿಷ್ಯದ ಬಗ್ಗೆ ಸೂಕ್ಷ್ಮ ವಿವೇಚನೆ* ಇರುವವನು ಯಶಸ್ಸು ಪಡಿತಾನೆ,ಯೆಹೋವನ ಮೇಲೆ ನಂಬಿಕೆ ಇಡುವವನು ಸಂತೋಷವಾಗಿ ಇರ್ತಾನೆ. 21  ವಿವೇಕ ಇರೋ ವ್ಯಕ್ತಿಗೆ ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಇದೆ+ ಅಂತ ಜನ ಹೇಳ್ತಾರೆ,ಪ್ರೀತಿಯಿಂದ ಮಾತಾಡೋ ವ್ಯಕ್ತಿ ಮನಸ್ಸು ಗೆಲ್ತಾನೆ.+ 22  ತಿಳುವಳಿಕೆ* ಇರುವವ್ರಿಗೆ ತಿಳುವಳಿಕೆನೇ ಜೀವದ ಬುಗ್ಗೆ,ಮೂರ್ಖರು ತಮ್ಮ ಮೂರ್ಖತನದಿಂದಾನೇ ಶಿಕ್ಷೆ ಅನುಭವಿಸ್ತಾರೆ. 23  ವಿವೇಕಿಯ ಹೃದಯ ಅವನ ಬಾಯಿಗೆ ತಿಳುವಳಿಕೆಯನ್ನ,*+ಅವನ ಮಾತಿಗೆ ಮನವೊಲಿಸೋ ಶಕ್ತಿ ಕೊಡುತ್ತೆ. 24  ಸವಿ ಮಾತುಗಳು ಜೇನಿನ ಹಾಗೆ ಚೆನ್ನಾಗಿರುತ್ತೆ,ಅವು ಮನಸ್ಸಿಗೆ ಮಧುರ, ಮೂಳೆಗೆ ಔಷಧಿ.+ 25  ಮನುಷ್ಯನಿಗೆ ಸರಿ ಅನಿಸೋ ಒಂದು ದಾರಿ ಇದೆ,ಅದು ಸಾವಲ್ಲಿ ಕೊನೆ ಆಗುತ್ತೆ.+ 26  ದುಡಿಯುವವನಿಗೆ ಹೊಟ್ಟೆನೇ ದುಡಿಯೋಕೆ ಹೇಳುತ್ತೆ,ಅವನ ಹಸಿವು ಅವನನ್ನ ಒತ್ತಾಯಿಸುತ್ತೆ.+ 27  ಕೆಲಸಕ್ಕೆ ಬಾರದ ವ್ಯಕ್ತಿ ಕೆಟ್ಟದ್ದನ್ನ ಅಗೆದು ತೆಗಿತಾನೆ,+ಅವನ ಮಾತು ಸುಡೋ ಬೆಂಕಿ.+ 28  ಜಗಳ ತಂದಿಡುವವನು* ಒಡಕು ತರ್ತಾನೆ,+ಚಾಡಿ ಹೇಳುವವನು ಪ್ರಾಣ ಸ್ನೇಹಿತರನ್ನ ದೂರ ಮಾಡ್ತಾನೆ.+ 29  ಕ್ರೂರಿ ಪಕ್ಕದ ಮನೆಯವನನ್ನ ಮರುಳು ಮಾಡಿ,ತಪ್ಪು ದಾರಿಗೆ ನಡಿಸ್ತಾನೆ. 30  ಕೆಟ್ಟ ಯೋಜನೆ ಮಾಡ್ತಾ ಕಣ್ಣು ಹೊಡಿತಾನೆ,ನಗೋ ತರ ನಟಿಸ್ತಾ ಕೆಟ್ಟದು ಮಾಡ್ತಾನೆ. 31  ಸರಿಯಾದ ದಾರಿಯಲ್ಲಿ ನಡಿಯುವವರಿಗೆ,+ತಲೆಯ ನರೆಗೂದಲೇ ಸುಂದರ* ಕಿರೀಟ.+ 32  ತಟ್ಟನೇ ಕೋಪ ಮಾಡ್ಕೊಳ್ಳದೆ ಇರುವವನು+ ಶೂರ ಸೈನಿಕನಿಗಿಂತ ಶಕ್ತಿಶಾಲಿ,ಕೋಪಕ್ಕೆ ಕಡಿವಾಣ ಹಾಕುವವನು ಪಟ್ಟಣವನ್ನ ವಶ ಮಾಡ್ಕೊಳ್ಳೋ ವ್ಯಕ್ತಿಗಿಂತ ಬಲಶಾಲಿ.+ 33  ಜನ್ರು ಯೆಹೋವನಿಗೆ ಪ್ರಶ್ನೆ ಕೇಳ್ತಾರೆ,*+ ಆತನು ಅವ್ರಿಗೆ ಉತ್ತರ ಕೊಡ್ತಾನೆ.+

ಪಾದಟಿಪ್ಪಣಿ

ಅಥವಾ “ಸರಿಯಾದ ಉತ್ತರ.” ಅಕ್ಷ. “ನಾಲಿಗೆಯ ಉತ್ತರ.”
ಅಕ್ಷ. “ಶುದ್ಧವಾಗೇ.”
ಅಕ್ಷ. “ಅಂತರಂಗ.”
ಅಕ್ಷ. “ನಿನ್ನ ಕೆಲಸಗಳನ್ನ ಯೆಹೋವನಿಗೆ ಉರುಳಿಸು.”
ಅಕ್ಷ. “ಶತ್ರುಗಳು ಸಹ ಅವನ ಜೊತೆ ಶಾಂತಿಯಿಂದ ಇರೋ ಹಾಗೆ ಮಾಡ್ತಾನೆ.”
ಅಕ್ಷ. “ಒಳನೋಟ.”
ಅಕ್ಷ. “ಒಳನೋಟ.”
ಅಕ್ಷ. “ಒಳನೋಟ.”
ಅಥವಾ “ಪಿತೂರಿ ಹೂಡುವವನು.”
ಅಥವಾ “ಗೌರವದ.”
ಅಕ್ಷ. “ಜನ್ರು ಮಡಿಲಲ್ಲಿ ಚೀಟು ಹಾಕ್ತಾರೆ.” ಪದವಿವರಣೆಯಲ್ಲಿ “ಚೀಟು” ನೋಡಿ.