ಜ್ಞಾನೋಕ್ತಿ 13:1-25
13 ವಿವೇಕಿಯಾದ ಮಗ ಅಪ್ಪ ಕೊಡೋ ಶಿಸ್ತನ್ನ ಸ್ವೀಕರಿಸ್ತಾನೆ,+ಆದ್ರೆ ತಿದ್ದುವಾಗ ಅಹಂಕಾರಿ* ಕಿವಿಗೇ ಹಾಕೊಳ್ಳಲ್ಲ.+
2 ಒಬ್ಬ ವ್ಯಕ್ತಿ ತನ್ನ ಬಾಯಿಂದ ಬರೋ ಮಾತುಗಳಿಂದ ಒಳ್ಳೇದನ್ನ ಅನುಭವಿಸ್ತಾನೆ,+ಆದ್ರೆ ಮೋಸಗಾರರು ಯಾರಿಗೆ ಹಿಂಸೆ ಕೊಡೋದು ಅಂತ ಕಾಯ್ತಾ ಇರ್ತಾರೆ.
3 ನಾಲಿಗೆಗೆ ಕಡಿವಾಣ ಹಾಕುವವನು ಜೀವ ಉಳಿಸ್ಕೊಳ್ತಾನೆ,+ಲಂಗುಲಗಾಮಿಲ್ಲದೆ ಮಾತಾಡೋನು ನಾಶ ಆಗ್ತಾನೆ.+
4 ಸೋಮಾರಿಗೆ ನೂರಾರು ಆಸೆ ಇರುತ್ತೆ, ಆದ್ರೆ ಅವನ ಹತ್ರ ಏನೂ ಇರಲ್ಲ.+
ಕಷ್ಟಪಟ್ಟು ಕೆಲಸ ಮಾಡೋನು ತೃಪ್ತಿಯಿಂದ ಇರ್ತಾನೆ.+
5 ನೀತಿವಂತನಿಗೆ ಸುಳ್ಳು ಇಷ್ಟ ಆಗಲ್ಲ,+ಆದ್ರೆ ಕೆಟ್ಟವನ ಕೆಲಸಗಳು ಅವನಿಗೆ ನಾಚಿಕೆ, ಅವಮಾನ ತರುತ್ತೆ.
6 ತಪ್ಪು ಮಾಡದವನನ್ನ ನೀತಿ ಕಾಪಾಡುತ್ತೆ,+ಆದ್ರೆ ಕೆಟ್ಟತನ ಪಾಪಿಯನ್ನ ನಾಶ ಮಾಡುತ್ತೆ.
7 ಕೆಲವರು ಏನೂ ಇಲ್ಲದಿದ್ರೂ ಶ್ರೀಮಂತರ ತರ ನಟಿಸ್ತಾರೆ,+ಇನ್ನು ಕೆಲವರು ಎಲ್ಲ ಇದ್ರೂ ಬಡವರು ಅಂತ ಹೇಳ್ಕೊಳ್ತಾರೆ.
8 ಶ್ರೀಮಂತ ತನ್ನ ಪ್ರಾಣ ಕಾಪಾಡ್ಕೊಳ್ಳೋಕೆ ತನ್ನ ಆಸ್ತಿಯನ್ನೇ ಕೊಡ್ತಾನೆ,+ಆದ್ರೆ ಬಡವನಿಗೆ ಅಂಥ ಪರಿಸ್ಥಿತಿ ಬರಲ್ಲ.+
9 ನೀತಿವಂತರ ಬೆಳಕು ಚೆನ್ನಾಗಿ ಬೆಳಗುತ್ತೆ,*+ಆದ್ರೆ ಕೆಟ್ಟವನ ದೀಪ ಆರಿಹೋಗುತ್ತೆ.+
10 ಅಹಂಕಾರದಿಂದ ಜಗಳ ಆಗುತ್ತೆ,+ಆದ್ರೆ ಸಲಹೆ ಕೇಳುವವನಿಗೆ* ವಿವೇಕ ಸಿಗುತ್ತೆ.+
11 ದಿನ ಬೆಳಗಾಗುವಷ್ಟರಲ್ಲಿ ಮಾಡಿದ* ಹಣ-ಆಸ್ತಿ ಕರಗಿಹೋಗುತ್ತೆ,+ಕಷ್ಟಪಟ್ಟು ಕೆಲಸಮಾಡಿ ಕೂಡಿಸಿದ* ಸೊತ್ತು ಜಾಸ್ತಿ ಆಗುತ್ತೆ.
12 ಅಂದ್ಕೊಂಡಿದ್ದು ಆಗೋಕೆ* ತಡ ಆದಾಗ ಬೇಜಾರಾಗುತ್ತೆ,+ಕನಸು ನನಸಾದಾಗ ಅದು ಜೀವ ಕೊಡೋ ಮರದ ತರ ಇರುತ್ತೆ.+
13 ಕಲಿಸುವಾಗ ಕಿವಿಗೆ ಹಾಕೊಳ್ಳದೇ ಇದ್ರೆ ಕೆಟ್ಟ ಪರಿಣಾಮ ಅನುಭವಿಸಬೇಕಾಗುತ್ತೆ,+ಆಜ್ಞೆಯನ್ನ ಗೌರವಿಸುವವನಿಗೆ ಬಹುಮಾನ ಸಿಗುತ್ತೆ.+
14 ವಿವೇಕಿಯ ಬುದ್ಧಿವಾದ* ಜೀವದ ಬುಗ್ಗೆ,+ಅದು ಮರಣದ ಉರ್ಲುಗಳಿಂದ ಒಬ್ಬನನ್ನ ಕಾಪಾಡುತ್ತೆ.
15 ತುಂಬ ತಿಳುವಳಿಕೆ* ಇದ್ರೆ ದಯೆ ಸಿಗುತ್ತೆ,ಆದ್ರೆ ಮೋಸಗಾರರ ದಾರಿಯಲ್ಲಿ ಬರೀ ಕಷ್ಟಗಳೇ ಇರುತ್ತೆ.
16 ಬುದ್ಧಿವಂತ ತನಗೆ ಜ್ಞಾನ ಇರೋದನ್ನ ಕೆಲಸದಲ್ಲಿ ತೋರಿಸ್ತಾನೆ,+ಮೂರ್ಖ ತನ್ನ ಮೂರ್ಖತನವನ್ನ ಬಯಲು ಮಾಡ್ತಾನೆ.+
17 ಕೆಟ್ಟ ಸಂದೇಶವಾಹಕ ಸಮಸ್ಯೆಯಲ್ಲಿ ಸಿಕ್ಕಿಹಾಕೊಳ್ತಾನೆ,+ನಂಬಿಗಸ್ತ ಪ್ರತಿನಿಧಿ ಪ್ರಯೋಜನ ಪಡಿತಾನೆ.+
18 ಶಿಸ್ತನ್ನ ಅಸಡ್ಡೆ ಮಾಡುವವನು ಬಡತನ, ಅವಮಾನ ಅನುಭವಿಸ್ತಾನೆ.
ತಿದ್ದುವಾಗ ಕೇಳುವವನು ಗೌರವ ಪಡಿತಾನೆ.+
19 ಆಸೆ ಈಡೇರಿದಾಗ ಖುಷಿ ಆಗುತ್ತೆ,+ಕೆಟ್ಟದನ್ನ ಬಿಡಬೇಕಂದ್ರೆ ಮೂರ್ಖನಿಗೆ ದುಃಖ ಆಗುತ್ತೆ.+
20 ವಿವೇಕಿ ಜೊತೆ ಸಹವಾಸ ಮಾಡುವವನು ವಿವೇಕಿ ಆಗ್ತಾನೆ,+ಮೂರ್ಖನ ಜೊತೆ ಸೇರುವವನು ಹಾಳಾಗಿ ಹೋಗ್ತಾನೆ.+
21 ಕಷ್ಟ ಪಾಪಿಗಳ ಹಿಂದೆನೇ ಸುತ್ತುತ್ತೆ,+ಆದ್ರೆ ಸುಖ-ಸಮೃದ್ಧಿ ನೀತಿವಂತನಿಗೆ ಸಿಗೋ ಬಹುಮಾನ.+
22 ಒಳ್ಳೇ ವ್ಯಕ್ತಿ ತನ್ನ ಆಸ್ತಿಯನ್ನ ಮೊಮ್ಮಕ್ಕಳಿಗೆ ಬಿಟ್ಟು ಹೋಗ್ತಾನೆ,ಆದ್ರೆ ಪಾಪಿಯ ಸಂಪತ್ತು ನೀತಿವಂತನ ಕೈ ಸೇರುತ್ತೆ.+
23 ಬಡವ ಉಳುಮೆ ಮಾಡಿದ ಭೂಮಿ ಸಮೃದ್ಧ ಫಲ ಕೊಡುತ್ತೆ,ಆದ್ರೆ ಅದನ್ನ* ಅನ್ಯಾಯದಿಂದ ಕಿತ್ಕೊಳ್ತಾರೆ.
24 ಏಟು ಕೊಡದ* ಅಪ್ಪ ಮಗನ ಶತ್ರು,+ಶಿಸ್ತು ಕೊಡೋ ಅಪ್ಪ ಮಗನಿಗೆ ಮಿತ್ರ.+
25 ನೀತಿವಂತ ಹೊಟ್ಟೆ ತುಂಬ ತಿಂತಾನೆ,+ಕೆಟ್ಟವನ ಹೊಟ್ಟೆ ಖಾಲಿನೇ ಇರುತ್ತೆ.+

