ಜ್ಞಾನೋಕ್ತಿ 10:1-32

  • ವಿವೇಕಿ ತನ್ನ ತಂದೆ ಮನಸ್ಸನ್ನ ಸಂತೋಷ ಪಡಿಸ್ತಾನೆ (1)

  • ಶ್ರಮಪಡೋ ಕೈಗಳಿಗೆ ಶ್ರೀಮಂತಿಕೆ (4)

  • ಲಂಗು ಲಗಾಮಿಲ್ಲದೆ ಮಾತಾಡಿದ್ರೆ ಪಾಪ ತಪ್ಪಿದ್ದಲ್ಲ (19)

  • ಯೆಹೋವನ ಆಶೀರ್ವಾದ ಒಬ್ಬನನ್ನ ಶ್ರೀಮಂತ ಮಾಡುತ್ತೆ (22)

  • ಯೆಹೋವನ ಮೇಲೆ ಭಯ ಇದ್ರೆ ಜಾಸ್ತಿ ವರ್ಷ ಬದುಕ್ತಾರೆ (27)

10  ಸೊಲೊಮೋನನ ನಾಣ್ಣುಡಿಗಳು.+ ವಿವೇಕಿ ತನ್ನ ಅಪ್ಪನ ಮನಸ್ಸನ್ನ ಸಂತೋಷ ಪಡಿಸ್ತಾನೆ,+ಆದ್ರೆ ಮೂರ್ಖ ತನ್ನ ಅಮ್ಮ ಕೊರಗೋ ತರ ಮಾಡ್ತಾನೆ.  2  ಕೆಟ್ಟ ಕೆಲಸದಿಂದ ಹಣ ಮಾಡಿದ್ರೆ ಏನು ಉಪಯೋಗ ಇಲ್ಲ,ಆದ್ರೆ ಪ್ರಾಮಾಣಿಕತೆ ಒಬ್ಬನನ್ನ ಸಾವಿಂದ ಕಾಪಾಡುತ್ತೆ.+  3  ಒಳ್ಳೆಯವರು* ಊಟ ಇಲ್ಲದೆ ಸಾಯೋ ಹಾಗೆ ಯೆಹೋವ ಬಿಡಲ್ಲ,+ಆದ್ರೆ ಕೆಟ್ಟವರ ಆಸೆಗಳ ಮೇಲೆ ಆತನು ನೀರು ಸುರಿತಾನೆ.  4  ದುಡಿಯದ ಕೈಗಳಿಗೆ ಬಡತನ,+ಶ್ರಮಪಡೋ ಕೈಗಳಿಗೆ ಸಿರಿತನ.+  5  ಬುದ್ಧಿವಂತ ಮಗ ಸುಗ್ಗಿ ಕಾಲದಲ್ಲಿ ಫಸಲು ಕೂಡಿಸ್ತಾನೆ,ಕೊಯ್ಲಿನ ಕಾಲದಲ್ಲಿ ಗಾಢ ನಿದ್ದೆ ಮಾಡೋ ಮಗ ಅವಮಾನ ಕೊಯ್ತಾನೆ.+  6  ನೀತಿವಂತನ ತಲೆ ಮೇಲೆ ಆಶೀರ್ವಾದ ಇರುತ್ತೆ,+ಕೆಟ್ಟವನ ಮಾತುಗಳಲ್ಲಿ ಹಿಂಸೆ ಅಡಗಿರುತ್ತೆ.  7  ನೀತಿವಂತನನ್ನ ನೆನಪಿಸ್ಕೊಂಡು* ಅವನಿಗೆ ಆಶೀರ್ವಾದ ಕೊಡ್ತಾರೆ,+ಕೆಟ್ಟವನ ಹೆಸ್ರು ಕೊಳೆತು ನಾರುತ್ತೆ.+  8  ವಿವೇಕಿ ಬುದ್ಧಿ ಮಾತನ್ನ* ಕೇಳ್ತಾನೆ,+ಬುದ್ಧಿಯಿಲ್ಲದೆ ಮಾತಾಡುವವನು ನಾಶ ಆಗ್ತಾನೆ.+  9  ಸರಿ ದಾರಿಯಲ್ಲಿ ನಡಿಯುವವನು ಸುರಕ್ಷಿತನಾಗಿ ಇರ್ತಾನೆ,+ಅಡ್ಡ ದಾರಿಯಲ್ಲಿ ನಡಿಯುವವನು ಸಿಕ್ಕಿಹಾಕೊಳ್ತಾನೆ.+ 10  ಮೋಸದಿಂದ ಕಣ್ಣು ಹೊಡಿಯುವವನಿಗೆ ಕಷ್ಟ ಖಂಡಿತ,+ಮೂರ್ಖತನದಿಂದ ಮಾತಾಡುವವನಿಗೆ ನಾಶ ಖಂಡಿತ.+ 11  ನೀತಿವಂತನ ಬಾಯಲ್ಲಿ ಜೀವದ ಬುಗ್ಗೆ ಇದೆ,+ಕೆಟ್ಟವನ ಬಾಯಲ್ಲಿ ಹಿಂಸೆ ಅಡಗಿದೆ.+ 12  ದ್ವೇಷ ಜಗಳ ಎಬ್ಬಿಸುತ್ತೆ,ಪ್ರೀತಿ ಎಲ್ಲ ತಪ್ಪುಗಳನ್ನ ಮುಚ್ಚುತ್ತೆ.+ 13  ವಿವೇಚನೆ ಇರೋ ವ್ಯಕ್ತಿಯ ತುಟಿಗಳಲ್ಲಿ ವಿವೇಕ ಇರುತ್ತೆ,+ಬುದ್ಧಿ ಇಲ್ಲದವನ* ಬೆನ್ನಿಗೆ ಬೆತ್ತದ ಏಟು ಬೀಳುತ್ತೆ.+ 14  ವಿವೇಕಿಗಳು ಜ್ಞಾನವನ್ನ ನಿಧಿ ತರ ಕೂಡಿಸಿ ಇಟ್ಕೊಳ್ತಾರೆ,+ಮೂರ್ಖನ ಬಾಯಿ ನಾಶವನ್ನ ಕೈಬೀಸಿ ಕರೆಯುತ್ತೆ.+ 15  ಶ್ರೀಮಂತನಿಗೆ ಅವನ ಆಸ್ತಿನೇ* ಭದ್ರ ಕೋಟೆ. ಬಡವನಿಗೆ ಅವನ ಬಡತನದಿಂದಾನೇ ನಾಶನ.+ 16  ನೀತಿವಂತನ ಕೆಲಸಗಳು ಜೀವಕ್ಕೆ ನಡಿಸುತ್ತೆ,ಕೆಟ್ಟವನ ಕೆಲಸಗಳು ಪಾಪಕ್ಕೆ ನಡಿಸುತ್ತೆ.+ 17  ಶಿಸ್ತನ್ನ ಸ್ವೀಕರಿಸುವವನು ಬೇರೆಯವ್ರಿಗೂ ಜೀವದ ದಾರಿ ತೋರಿಸ್ತಾನೆ,ತಿದ್ದಿದಾಗ ಕೇಳದೆ ಇರುವವನು ಜನ್ರನ್ನ ತಪ್ಪುದಾರಿಗೆ ಎಳಿತಾನೆ. 18  ದ್ವೇಷವನ್ನ ತನ್ನಲ್ಲೇ ಬಚ್ಚಿಟ್ಕೊಳ್ಳೋನು ಸುಳ್ಳು ಹೇಳ್ತಾನೆ,+ಇನ್ನೊಬ್ರ ಹೆಸ್ರನ್ನ ಹಾಳು ಮಾಡೋಕೆ ಗಾಳಿಸುದ್ದಿ ಹಬ್ಬಿಸುವವನು ಮೂರ್ಖ. 19  ಲಂಗು ಲಗಾಮಿಲ್ಲದೆ ಮಾತಾಡುವವ್ರಿಗೆ ಪಾಪ ತಪ್ಪಿದ್ದಲ್ಲ,+ಮಾತಿನ ಮೇಲೆ ಹತೋಟಿ ಇಟ್ಕೊಳ್ಳುವವರು ವಿವೇಚನೆಯಿಂದ ನಡ್ಕೊಳ್ತಾರೆ.+ 20  ನೀತಿವಂತನ ಮಾತುಗಳು ಶ್ರೇಷ್ಠ ಬೆಳ್ಳಿ,+ಕೆಟ್ಟವನ ಯೋಚ್ನೆ* ಹುಲ್ಲುಕಡ್ಡಿಗೆ ಸಮ. 21  ನೀತಿವಂತನ ಮಾತು ಅನೇಕರನ್ನ ನೋಡ್ಕೊಳ್ಳುತ್ತೆ,*+ಬುದ್ಧಿ ಕಮ್ಮಿ ಇರೋದ್ರಿಂದ ಮೂರ್ಖ ಸಾಯ್ತಾನೆ.+ 22  ಯೆಹೋವನ ಆಶೀರ್ವಾದ ಒಬ್ಬನನ್ನ ಶ್ರೀಮಂತ ಮಾಡುತ್ತೆ,+ಅದ್ರ ಜೊತೆ ಯಾವುದೇ ರೀತಿಯ ನೋವನ್ನ* ದೇವರು ಸೇರಿಸಲ್ಲ. 23  ನಾಚಿಕೆಗೆಟ್ಟ ಕೆಲಸ ಮಾಡೋದಂದ್ರೆ ಮೂರ್ಖನಿಗೆ ಒಂಥರಾ ಖುಷಿ,ಆದ್ರೆ ವಿವೇಚನೆ ಇರುವವನು ವಿವೇಕಕ್ಕಾಗಿ ಹುಡುಕ್ತಾನೆ.+ 24  ಕೆಟ್ಟವನು ಯಾವುದಕ್ಕೆ ಭಯಪಡ್ತಾನೋ ಅದೇ ಅವನ ಮೇಲೆ ಬರುತ್ತೆ,ಆದ್ರೆ ನೀತಿವಂತನ ಆಸೆ ಈಡೇರುತ್ತೆ.+ 25  ಸುಂಟರಗಾಳಿ ಬೀಸಿದಾಗ ಕೆಟ್ಟವನು ಹಾರಿಹೋಗ್ತಾನೆ,+ಆದ್ರೆ ನೀತಿವಂತ ಅಡಿಪಾಯದ ತರ ಗಟ್ಟಿಯಾಗಿ ಇರ್ತಾನೆ.+ 26  ಹಲ್ಲಿಗೆ ಹುಳಿ, ಕಣ್ಣಿಗೆ ಹೊಗೆ ಹೇಗೋಯಜಮಾನನಿಗೆ ಸೋಮಾರಿ ಹಾಗೇ. 27  ಯೆಹೋವನ ಮೇಲೆ ಭಯ ಇದ್ರೆ ಹೆಚ್ಚು ವರ್ಷ ಇರ್ತಾರೆ,+ಕೆಟ್ಟವನ ಆಯಸ್ಸು ಕಮ್ಮಿ ಆಗುತ್ತೆ.+ 28  ನೀತಿವಂತನ ಆಸೆ ಖುಷಿ ತರುತ್ತೆ,+ಕೆಟ್ಟವನ ಆಸೆ ಮಣ್ಣುಪಾಲಾಗುತ್ತೆ.+ 29  ಯೆಹೋವನ ಮಾರ್ಗ ತಪ್ಪು ಮಾಡದವ್ರಿಗೆ ಭದ್ರಕೋಟೆ,+ಆದ್ರೆ ತಪ್ಪು ಮಾಡುವವ್ರಿಗೆ ನಾಶನ.+ 30  ನೀತಿವಂತ ಯಾವತ್ತೂ ಬಿದ್ದು ಹೋಗಲ್ಲ,+ಕೆಟ್ಟವನು ಮುಂದೆ ಯಾವತ್ತೂ ಭೂಮಿ ಮೇಲೆ ಇರಲ್ಲ.+ 31  ನೀತಿವಂತನ ಬಾಯಿಂದ ವಿವೇಕದ ಮಾತುಗಳು ಬರುತ್ತೆ,ಹಠಮಾರಿಯ ಬಾಯಿ ಶಾಶ್ವತವಾಗಿ ಮುಚ್ಚುತ್ತೆ. 32  ನೀತಿವಂತನ ತುಟಿಗಳಿಗೆ ಒಳ್ಳೇ ಮಾತು ಹೇಳೋಕೆ ಗೊತ್ತು,ಕೆಟ್ಟವನ ಬಾಯಿಂದ ಬರೋದೆಲ್ಲ ಕೆಟ್ಟ ಮಾತು.

ಪಾದಟಿಪ್ಪಣಿ

^ ಅಥವಾ “ನೀತಿವಂತರು.”
^ ಅಥವಾ “ನೀತಿವಂತನಿಗೆ ಇರೋ ಒಳ್ಳೇ ಹೆಸ್ರಿಂದಾಗಿ.”
^ ಅಕ್ಷ. “ಆಜ್ಞೆಗಳನ್ನ.”
^ ಅಕ್ಷ. “ಹೃದಯ ಇಲ್ಲದವನ.”
^ ಅಥವಾ “ಅಮೂಲ್ಯ ವಸ್ತುನೇ.”
^ ಅಕ್ಷ. “ಹೃದಯ.”
^ ಅಥವಾ “ಮಾರ್ಗದರ್ಶಿಸುತ್ತೆ.”
^ ಅಥವಾ “ದುಃಖವನ್ನ, ಕಷ್ಟವನ್ನ.”