ಗಲಾತ್ಯದವರಿಗೆ ಬರೆದ ಪತ್ರ 5:1-26

  • ಕ್ರೈಸ್ತರಿಗೆ ಸಿಕ್ಕಿರೋ ಸ್ವಾತಂತ್ರ್ಯ (1-15)

  • ಪವಿತ್ರಶಕ್ತಿಯ ಮಾರ್ಗದರ್ಶನದಲ್ಲಿ ನಡಿಯೋದು (16-26)

    • ಪಾಪಪೂರ್ಣ ದೇಹದ ಕೆಲಸಗಳು (19-21)

    • ಪವಿತ್ರಶಕ್ತಿಯ ಗುಣಗಳು (22, 23)

5  ನಾವು ಈ ರೀತಿ ಸ್ವತಂತ್ರವಾಗಿ ಇರಬೇಕಂತಾನೇ ಕ್ರಿಸ್ತ ನಮ್ಮನ್ನ ಬಿಡಿಸಿದನು. ಹಾಗಾಗಿ ನಿಮ್ಮ ಈ ಸ್ವಾತಂತ್ರ್ಯ ಕಳ್ಕೊಬೇಡಿ.+ ಮತ್ತೆ ಗುಲಾಮಗಿರಿಯ ನೊಗಕ್ಕೆ ಹೆಗಲು ಕೊಡಬೇಡಿ.+  ನೋಡಿ! ನಾನು, ಪೌಲ ಹೇಳ್ತಿದ್ದೀನಿ, ನೀವು ಸುನ್ನತಿ ಮಾಡಿಸ್ಕೊಂಡ್ರೆ ಕ್ರಿಸ್ತನಿಂದ ನಿಮಗೆ ಏನೂ ಪ್ರಯೋಜನ ಆಗಲ್ಲ.+  ನಾನು ಮತ್ತೆ ಹೇಳ್ತಿದ್ದೀನಿ, ಸುನ್ನತಿ ಮಾಡಿಸ್ಕೊಳ್ಳೋ ಪ್ರತಿಯೊಬ್ಬನು ನಿಯಮ ಪುಸ್ತಕದಲ್ಲಿ ಇರೋದನ್ನೆಲ್ಲ ಪಾಲಿಸ್ಲೇಬೇಕಾಗುತ್ತೆ.+  ನಿಯಮ ಪುಸ್ತಕದಲ್ಲಿ ಇರೋದನ್ನ ಪಾಲಿಸೋದ್ರಿಂದ ನೀತಿವಂತರಾಗೋಕೆ ಪ್ರಯತ್ನ ಮಾಡ್ತಿರೋ ನೀವು ಕ್ರಿಸ್ತನಿಂದ ದೂರ ಹೋಗಿದ್ದೀರ.+ ನೀವು ಆತನ ಅಪಾರ ಕೃಪೆಯನ್ನ ಬಿಟ್ಟುಹೋಗಿದ್ದೀರ.  ಆದ್ರೆ ನಾವು ದೇವರ ದೃಷ್ಟಿಯಲ್ಲಿ ನೀತಿವಂತರಾಗೋಕೆ ಕಾತುರದಿಂದ ಕಾಯ್ತಾ ಇದ್ದೀವಿ, ಪವಿತ್ರಶಕ್ತಿ ಮತ್ತು ನಮ್ಮ ನಂಬಿಕೆಯಿಂದ ಮಾತ್ರ ಹೀಗೆ ನೀತಿವಂತರಾಗೋಕೆ ಆಗುತ್ತೆ.  ಯಾಕಂದ್ರೆ ಕ್ರಿಸ್ತ ಯೇಸು ಜೊತೆ ಒಂದಾಗಿರುವವ್ರಿಗೆ ಸುನ್ನತಿ ಆದ್ರೂ ಆಗ್ದೆ ಇದ್ರೂ ಅದೇನೂ ಮುಖ್ಯ ಅಲ್ಲ,+ ಆದ್ರೆ ಪ್ರೀತಿಯಿಂದ ಕೆಲಸ ಮಾಡೋ ನಂಬಿಕೆನೇ ಮುಖ್ಯ.  ನೀವು ಸತ್ಯದ ದಾರೀಲಿ ಚೆನ್ನಾಗಿ ಓಡ್ತಿದ್ದೀರ.+ ಹಾಗಿರುವಾಗ ನೀವು ಸತ್ಯಕ್ಕೆ ತಕ್ಕ ಹಾಗೆ ನಡೀದೇ ಇರೋಕೆ ನಿಮ್ಮನ್ನ ಯಾರು ತಡೆದ್ರು?  ಈ ತರ ನಿಮ್ಮ ತಲೆ ಕೆಡಿಸಿದ್ದು ಯಾರು? ನಿಮ್ಮನ್ನ ಕರೆದ ದೇವರಂತೂ ಅಲ್ಲ.  ಸ್ವಲ್ಪ ಹುಳಿ ನಾದಿದ ಹಿಟ್ಟನ್ನೆಲ್ಲ ಹುಳಿಮಾಡುತ್ತೆ.+ 10  ಪ್ರಭು ಜೊತೆ ಒಂದಾಗಿರೋ ನೀವು+ ನನ್ನ ಮಾತನ್ನ ಒಪ್ತೀರ ಅನ್ನೋ ನಂಬಿಕೆ ನನಗಿದೆ. ನಿಮಗೆ ತೊಂದ್ರೆ ಮಾಡ್ತಾ ಇರುವವನು+ ಯಾರೇ ಆಗಿದ್ರೂ ಅವನಿಗೆ ತಕ್ಕ ಶಿಕ್ಷೆ ಸಿಗುತ್ತೆ. 11  ಸಹೋದರರೇ, ಸುನ್ನತಿ ಮಾಡಬೇಕಂತ ನಾನು ಸಾರುತ್ತಿರೋದಾದ್ರೆ ನನಗ್ಯಾಕೆ ಇನ್ನೂ ಹಿಂಸೆ ಕೊಡ್ತಿದ್ದಾರೆ? ನಾನು ಹಾಗೆ ಸಾರುತ್ತಿದ್ರೆ ಹಿಂಸಾ ಕಂಬದ* ಬಗ್ಗೆ ನಾನು ಸಾರಿದ್ದು ಅವ್ರಿಗೆ ಕೋಪ ಬರಿಸ್ತಾ ಇರಲಿಲ್ಲ ಅಲ್ವಾ?+ 12  ಸುನ್ನತಿಯ ಹೆಸ್ರಲ್ಲಿ ನಿಮ್ಮ ತಲೆಯೊಳಗೆ ಗೊಂದಲ ಹುಟ್ಟಿಸೋಕೆ ಪ್ರಯತ್ನಿಸ್ತಾ ಇರುವವರು ಅವ್ರನ್ನೇ ನಪುಂಸಕರಾಗಿ ಮಾಡ್ಕೊಬೇಕು* ಅನ್ನೋದು ನನ್ನ ಅಭಿಪ್ರಾಯ. 13  ಸಹೋದರರೇ, ಸ್ವತಂತ್ರರಾಗಿ ಇರೋಕೆ ನಿಮ್ಮನ್ನ ಕರೆಯಲಾಗಿದೆ ನಿಜ. ಆದ್ರೆ ಈ ಸ್ವಾತಂತ್ರ್ಯವನ್ನ, ದೇಹದ ಆಸೆಗಳನ್ನ ತೀರಿಸ್ಕೊಳ್ಳೋಕೆ ಅವಕಾಶವಾಗಿ ಬಳಸಬೇಡಿ,+ ಬದಲಿಗೆ ಪ್ರೀತಿಯಿಂದ ಒಬ್ರು ಇನ್ನೊಬ್ರ ಸೇವೆಮಾಡಿ.+ 14  ಯಾಕಂದ್ರೆ ನಿಯಮ ಪುಸ್ತಕದ ಎಲ್ಲ ನಿಯಮಗಳು “ನೀನು ನಿನ್ನನ್ನ ಪ್ರೀತಿಸೋ ತರಾನೇ ಬೇರೆಯವ್ರನ್ನೂ ಪ್ರೀತಿಸಬೇಕು” ಅನ್ನೋ ಒಂದೇ ಆಜ್ಞೆಯಿಂದ ನಿಜ ಆಗುತ್ತೆ.*+ 15  ನೀವು ಯಾವಾಗ್ಲೂ ಒಬ್ರನ್ನೊಬ್ರು ಕಚ್ಚಿ ಹರಿದು ನುಂಗುತ್ತಿದ್ರೆ+ ಒಬ್ರಿಂದ ಒಬ್ರು ನಾಶ ಆಗ್ತೀರ, ಹುಷಾರಾಗಿರಿ.+ 16  ನಾನು ಹೇಳೋದು ಏನಂದ್ರೆ, ಪವಿತ್ರಶಕ್ತಿಯ ಮಾರ್ಗದರ್ಶನಕ್ಕೆ ತಕ್ಕ ಹಾಗೆ ನಡಿತಾ ಇರಿ.+ ಆಗ ನೀವು ದೇಹದ ಆಸೆಗಳ ಪ್ರಕಾರ ನಡ್ಕೊಳಲ್ಲ.+ 17  ಯಾಕಂದ್ರೆ ದೇಹ ಅದ್ರ ಆಸೆಗಳಿಂದಾಗಿ ಪವಿತ್ರಶಕ್ತಿಗೆ ವಿರುದ್ಧವಾಗಿದೆ ಮತ್ತು ಪವಿತ್ರಶಕ್ತಿ ದೇಹಕ್ಕೆ ವಿರುದ್ಧವಾಗಿದೆ. ಇವೆರಡು ಒಂದಕ್ಕೊಂದು ವಿರುದ್ಧವಾಗಿವೆ. ಹಾಗಾಗಿ ನೀವೇನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನ ಮಾಡಲ್ಲ.+ 18  ಪವಿತ್ರಶಕ್ತಿ ನಿಮ್ಮನ್ನ ಮಾರ್ಗದರ್ಶಿಸ್ತಿದ್ರೆ ನೀವು ನಿಯಮ ಪುಸ್ತಕದ ಕೈಕೆಳಗಿಲ್ಲ. 19  ಪಾಪದಿಂದ ತುಂಬಿರೋ ದೇಹದ ಕೆಲಸಗಳು ಸ್ಪಷ್ಟವಾಗಿ ಗೊತ್ತಾಗುತ್ತೆ. ಅವು ಯಾವುದಂದ್ರೆ ಲೈಂಗಿಕ ಅನೈತಿಕತೆ,*+ ಅಶುದ್ಧತೆ, ನಾಚಿಕೆಗೆಟ್ಟ ನಡತೆ,*+ 20  ಮೂರ್ತಿಪೂಜೆ, ಮಾಟಮಂತ್ರ,*+ ದ್ವೇಷ, ಜಗಳ, ಹೊಟ್ಟೆಕಿಚ್ಚು, ಕೋಪದಿಂದ ಕೆರಳೋದು, ಕಲಹ, ಒಡಕು, ಪಂಗಡಗಳು, 21  ಅಸೂಯೆ, ಕುಡಿದು ಅಮಲೇರೋದು,+ ಲಂಗುಲಗಾಮಿಲ್ಲದ ಮೋಜು ಇಂಥ ವಿಷ್ಯಗಳೇ.+ ಇವುಗಳನ್ನ ನಡಿಸುವವರು ದೇವರ ಆಳ್ವಿಕೆಯಲ್ಲಿ ಇರಲ್ಲ.*+ ಇದ್ರ ಬಗ್ಗೆ ನಾನು ನಿಮಗೆ ಮೊದಲೇ ಎಚ್ಚರಿಕೆ ಕೊಟ್ಟ ಹಾಗೆ ಈಗ್ಲೂ ಎಚ್ಚರಿಕೆ ಕೊಡ್ತೀನಿ. 22  ಆದ್ರೆ ಪವಿತ್ರಶಕ್ತಿಯಿಂದ ಬರೋ ಗುಣಗಳು ಯಾವುದಂದ್ರೆ ಪ್ರೀತಿ, ಆನಂದ, ಶಾಂತಿ, ತಾಳ್ಮೆ,* ದಯೆ, ಒಳ್ಳೇತನ,+ ನಂಬಿಕೆ, 23  ಸೌಮ್ಯತೆ, ಸ್ವನಿಯಂತ್ರಣ.+ ಇಂಥ ಗುಣಗಳನ್ನ ತಪ್ಪಂತ ಯಾವ ನಿಯಮ ಕೂಡ ಹೇಳಲ್ಲ. 24  ಅಷ್ಟೇ ಅಲ್ಲ, ಕ್ರಿಸ್ತ ಯೇಸುಗೆ ಸೇರಿದವರು ತಮ್ಮ ಪಾಪ ತುಂಬಿರೋ ದೇಹವನ್ನ ಅದ್ರ ಆಸೆ-ಆಕಾಂಕ್ಷೆಗಳ ಜೊತೆ ಮರದ ಕಂಬಕ್ಕೆ ಜಡಿದು ಸಾಯಿಸಿದ್ದಾರೆ.+ 25  ನಾವು ಪವಿತ್ರಶಕ್ತಿಗೆ ತಕ್ಕ ಹಾಗೆ ಜೀವಿಸ್ತಾ ಇದ್ರೆ ಮುಂದಕ್ಕೂ ಪವಿತ್ರಶಕ್ತಿಯ ಮಾರ್ಗದರ್ಶನಕ್ಕೆ ತಕ್ಕ ಹಾಗೆ ಸರಿಯಾಗಿ ನಡಿತಾ ಇರೋಣ.+ 26  ನಾವು ಅಹಂಕಾರಪಡದೆ,+ ಒಬ್ರ ಜೊತೆ ಒಬ್ರು ಪೈಪೋಟಿ ಮಾಡದೆ,+ ಅಸೂಯೆಪಡದೆ ಇರೋಣ.

ಪಾದಟಿಪ್ಪಣಿ

ಅಥವಾ “ಜನನಾಂಗ ಕತ್ತರಿಸ್ಕೊಬೇಕು.” ಹೀಗೆ ಮಾಡಿದ್ರೆ, ಯಾವುದನ್ನ ಪಾಲಿಸಬೇಕು ಅಂತ ಅವರು ಒತ್ತಾಯ ಮಾಡ್ತಿದ್ರೋ ಆ ನಿಯಮ ಪುಸ್ತಕ ಪಾಲಿಸೋಕೆ ಅವ್ರೇ ಯೋಗ್ಯತೆ ಕಳ್ಕೊಳ್ತಿದ್ರು.
ಬಹುಶಃ, “ಒಂದೇ ಆಜ್ಞೆ ಇಡೀ ನಿಯಮ ಪುಸ್ತಕದ ಸಾರವಾಗಿದೆ.”
ಅಥವಾ “ಸತ್ತವ್ರನ್ನ ಮಾತಾಡಿಸ್ತೀವಿ ಅಂತ ಹೇಳ್ಕೊಳ್ಳೋದು, ಡ್ರಗ್ಸ್‌ ಬಳಕೆ.”
ಅಕ್ಷ. “ಸೊತ್ತಾಗಿ ಪಡ್ಕೊಳಲ್ಲ.”
ಅಥವಾ “ದೀರ್ಘ ಸಹನೆ.”