ಅರಣ್ಯಕಾಂಡ 30:1-16

  • ಗಂಡಸ್ರ ಹರಕೆಗಳು (1, 2)

  • ಸ್ತ್ರೀಯರ, ಹೆಣ್ಣು ಮಕ್ಕಳ ಹರಕೆಗಳು (3-16)

30  ಮೋಶೆ ಇಸ್ರಾಯೇಲ್ಯರ ಕುಲಗಳ ಮುಖ್ಯಸ್ಥರಿಗೆ+ ಹೀಗೆ ಹೇಳಿದ: “ಯೆಹೋವನ ಆಜ್ಞೆ ಏನಂದ್ರೆ  ಒಬ್ಬ ಗಂಡಸು ಯೆಹೋವನಿಗೆ ಹರಕೆ ಹೊತ್ರೆ+ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ಮಾತು ಕೊಟ್ರೆ+ ಮಾತಿಗೆ ತಪ್ಪಬಾರದು.+ ಏನೇ ಹರಕೆ ಮಾಡಿದ್ರೂ ತೀರಿಸಬೇಕು.+  ತಂದೆ ಮನೇಲಿ ಇರೋ ಯುವತಿ ಯೆಹೋವನಿಗೆ ಒಂದು ಹರಕೆ ಮಾಡಿದ್ರೆ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ಮಾತು ಕೊಟ್ರೆ  ತಂದೆಗೆ ವಿಷ್ಯ ಗೊತ್ತಾಗಿ ಅದನ್ನ ಬೇಡ ಅಂತ ಹೇಳದಿದ್ರೆ ಅವಳು ತನ್ನ ಹರಕೆ ತೀರಿಸ್ಲೇಬೇಕು. ಏನೇ ಆದ್ರೂ ಕೊಟ್ಟ ಮಾತಿನ ಪ್ರಕಾರ ನಡಿಬೇಕು.  ಆದ್ರೆ ಮಗಳು ಮಾಡ್ಕೊಂಡಿರೋ ಹರಕೆಗಳ ಬಗ್ಗೆ ಅಥವಾ ಆಣೆಗಳ ಬಗ್ಗೆ ತಂದೆ ಕೇಳಿಸ್ಕೊಂಡಾಗ ಬೇಡ ಅಂತ ಹೇಳಿದ್ರೆ ಅವಳು ಕೊಟ್ಟ ಮಾತಿನ ಪ್ರಕಾರ ನಡಿಬೇಕಾಗಿಲ್ಲ. ತಂದೆ ಬೇಡ ಅಂತ ಹೇಳಿದ್ರಿಂದ ಯೆಹೋವ ಅವಳನ್ನ ಕ್ಷಮಿಸ್ತಾನೆ.+  ಯುವತಿ ಹರಕೆ ಹೊತ್ತ ಮೇಲೆ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ದುಡುಕಿ ಮಾತು ಕೊಟ್ಟ ಮೇಲೆ ಮದುವೆ ಆದ್ರೆ,  ಅವಳ ಗಂಡ ಆ ವಿಷ್ಯ ಕೇಳಿಸ್ಕೊಂಡ ದಿನ ಅದನ್ನ ಬೇಡ ಅಂತ ಹೇಳದಿದ್ರೆ ಅವಳು ತನ್ನ ಹರಕೆ ತೀರಿಸ್ಲೇಬೇಕು. ಏನೇ ಆದ್ರೂ ಕೊಟ್ಟ ಮಾತಿನ ಪ್ರಕಾರ ನಡಿಬೇಕು.  ಆದ್ರೆ ಆ ವಿಷ್ಯ ಗಂಡ ಕೇಳಿಸ್ಕೊಂಡ ಮೇಲೆ ಅವನಿಗೆ ಇಷ್ಟ ಆಗದಿದ್ರೆ ಅವನು ಆ ದಿನನೇ ಅವಳ ಹರಕೆಯನ್ನ ದುಡುಕಿ ಕೊಟ್ಟ ಮಾತನ್ನ ರದ್ದು ಮಾಡಬಹುದು.+ ಯೆಹೋವ ಅವಳನ್ನ ಕ್ಷಮಿಸ್ತಾನೆ.  ಆದ್ರೆ ಒಬ್ಬ ವಿಧವೆ ಅಥವಾ ವಿಚ್ಛೇದನ ಆಗಿರೋ ಸ್ತ್ರೀ ಹರಕೆ ಹೊತ್ತ ಮೇಲೆ ಮಾಡ್ತೀನಿ ಅಂತ ಮಾತು ಕೊಟ್ಟಿರೋದನ್ನ ಮಾಡ್ಲೇಬೇಕು. 10  ಮದುವೆ ಆಗಿರೋ ಒಬ್ಬ ಸ್ತ್ರೀ ಹರಕೆ ಹೊತ್ರೆ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ಮಾತು ಕೊಟ್ಟಿದ್ರೆ 11  ಅವಳ ಗಂಡ ಅದನ್ನ ಕೇಳಿಸ್ಕೊಂಡಾಗ ಬೇಡ ಅಂತ ಹೇಳದಿದ್ರೆ ಅವಳು ಮಾಡಿದ ಎಲ್ಲ ಹರಕೆಗಳನ್ನ ತೀರಿಸ್ಲೇಬೇಕು. ಅವಳು ಏನೇ ತ್ಯಾಗ ಮಾಡ್ತೀನಿ ಅಂತ ಹೇಳಿರಲಿ ಅದನ್ನ ಮಾಡ್ಲೇಬೇಕು. 12  ಆದ್ರೆ ಆ ವಿಷ್ಯ ಕೇಳಿಸ್ಕೊಂಡ ದಿನಾನೇ ಗಂಡ ಅವಳ ಹರಕೆ ಅಥವಾ ಕೊಟ್ಟ ಮಾತನ್ನ ಪೂರ್ತಿ ರದ್ದು ಮಾಡಿದ್ರೆ ಅವಳು ಅದನ್ನ ಮಾಡಬೇಕಾಗಿಲ್ಲ.+ ಗಂಡ ರದ್ದು ಮಾಡಿದ್ರಿಂದ ಯೆಹೋವ ಅವಳನ್ನ ಕ್ಷಮಿಸ್ತಾನೆ. 13  ಹೆಂಡತಿ ಹರಕೆ ಹೊತ್ರೆ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ಮಾತು ಕೊಟ್ರೆ ಅದನ್ನ ಅವಳು ಮಾಡಬೇಕಾ, ಬೇಡ್ವಾ ಅಂತ ಗಂಡ ನಿರ್ಧಾರ ಮಾಡಬೇಕು. 14  ಆದ್ರೆ ಆ ವಿಷ್ಯ ಗೊತ್ತಾದ ಮೇಲೆ ಗಂಡ ತುಂಬ ದಿನದ ತನಕ ಏನೂ ಹೇಳದಿದ್ರೆ ಎಲ್ಲ ಹರಕೆಗಳನ್ನ, ತ್ಯಾಗ ಮಾಡ್ತೀನಿ ಅಂತ ಕೊಟ್ಟ ಮಾತನ್ನ ಮಾಡೋಕೆ ಅವನು ಹೆಂಡತಿಗೆ ಒಪ್ಪಿಗೆ ಕೊಟ್ಟಿದ್ದಾನೆ ಅಂತರ್ಥ. ತನ್ನ ಹೆಂಡತಿಯ ಹರಕೆ ಅಥವಾ ಕೊಟ್ಟ ಮಾತಿನ ಬಗ್ಗೆ ಗೊತ್ತಾದ ದಿನಾನೇ ಬೇಡ ಅಂತ ಹೇಳದಿದ್ರೆ ಅದ್ರ ಪ್ರಕಾರ ಮಾಡೋಕೆ ಅವಳಿಗೆ ಒಪ್ಪಿಗೆ ಕೊಟ್ಟಿದ್ದಾನೆ ಅಂತರ್ಥ. 15  ಆದ್ರೆ ಅವನಿಗೆ ಆ ವಿಷ್ಯ ಗೊತ್ತಾದ ದಿನಾನೇ ಏನೂ ಅಡ್ಡಿ ಮಾಡದೆ ಆಮೇಲೆ ಬೇಡ ಅಂತ ಹೇಳಿದ್ರೆ ಅವಳ ತಪ್ಪಿನ ಪರಿಣಾಮಗಳನ್ನ ಗಂಡ ಅನುಭವಿಸಬೇಕು.+ 16  ಮದುವೆ ಆದ ಸ್ತ್ರೀ ಹರಕೆ ಹೊತ್ತಾಗ ಅವಳು, ಅವಳ ಗಂಡ ಏನು ಮಾಡಬೇಕು, ತಂದೆ ಮನೇಲಿ ಇರೋ ಯುವತಿ ಹರಕೆ ಹೊತ್ತಾಗ ಅವಳು, ಅವಳ ತಂದೆ ಏನು ಮಾಡಬೇಕು ಅನ್ನೋದ್ರ ಬಗ್ಗೆ ಈ ನಿಯಮಗಳನ್ನ ಯೆಹೋವ ಮೋಶೆ ಮೂಲಕ ಕೊಟ್ಟನು.”

ಪಾದಟಿಪ್ಪಣಿ