ಅರಣ್ಯಕಾಂಡ 28:1-31

 • ಬೇರೆ ಬೇರೆ ಅರ್ಪಣೆಗಳ ವಿಧಾನಗಳು (1-31)

  • ಪ್ರತಿದಿನದ ಅರ್ಪಣೆಗಳು (1-8)

  • ಸಬ್ಬತ್‌ ದಿನದಲ್ಲಿ (9, 10)

  • ಪ್ರತಿ ತಿಂಗಳ ಅರ್ಪಣೆಗಳು (11-15)

  • ಪಸ್ಕ ಹಬ್ಬದ ದಿನದಲ್ಲಿ (16-25)

  • ವಾರಗಳ ಹಬ್ಬದ ಸಮಯದಲ್ಲಿ (26-31)

28  ಆಮೇಲೆ ಯೆಹೋವ ಮೋಶೆಗೆ ಹೇಳಿದ್ದು ಏನಂದ್ರೆ  “ನೀನು ಈ ಆಜ್ಞೆಗಳನ್ನ ಇಸ್ರಾಯೇಲ್ಯರಿಗೆ ಹೇಳು: ‘ನೀವು ನನ್ನ ಆಹಾರನ ಅಂದ್ರೆ ನನಗೆ ಅರ್ಪಣೆ ಕೊಡೋದನ್ನ ಮರೀಬಾರದು. ನೀವು ಬೆಂಕಿಯಲ್ಲಿ ಕೊಡೋ ಅರ್ಪಣೆಗಳನ್ನ ನಾನು ಹೇಳೋ ಸಮಯದಲ್ಲೇ ಕೊಡಬೇಕು.+ ಅದ್ರ ಸುವಾಸನೆ ನನಗೆ ಖುಷಿ* ತರುತ್ತೆ.’  ನೀನು ಅವ್ರಿಗೆ ಹೀಗೆ ಹೇಳು: ‘ಬೆಂಕಿಲಿ ಯೆಹೋವನಿಗೆ ಕೊಡಬೇಕಾದ ಅರ್ಪಣೆ ಯಾವುದಂದ್ರೆ, ನೀವು ಪ್ರತಿ ದಿನ ಒಂದು ವರ್ಷದ ಎರಡು ಗಂಡು ಕುರಿಮರಿಗಳನ್ನ ಸರ್ವಾಂಗಹೋಮ ಬಲಿಯಾಗಿ ಕೊಡಬೇಕು.+ ಅದ್ರಲ್ಲಿ ಯಾವ ದೋಷಾನೂ ಇರಬಾರದು.  ಒಂದು ಕುರಿಮರಿನ ಬೆಳಿಗ್ಗೆ, ಇನ್ನೊಂದನ್ನ ಸೂರ್ಯ ಮುಳುಗಿದ ಮೇಲೆ* ಕೊಡಬೇಕು.+  ಪ್ರತಿಯೊಂದು ಕುರಿಮರಿ ಜೊತೆ ಒಂದು ಏಫಾ* ಅಳತೆಯ ಹತ್ತನೇ ಒಂದು ಭಾಗ ನುಣ್ಣಗಿನ ಹಿಟ್ಟಿಗೆ ಕಾಲು ಹಿನ್‌* ಅಳತೆಯ ಶುದ್ಧ ಆಲಿವ್‌ ಎಣ್ಣೆ ಹಾಕಿ ಧಾನ್ಯ ಅರ್ಪಣೆ ಮಾಡಬೇಕು.+  ಸಿನಾಯಿ ಬೆಟ್ಟ ಹತ್ರ ಕೊಟ್ಟಿರೋ ನಿಯಮದ ಪ್ರಕಾರ ನೀವು ಈ ತರ ಪ್ರತಿದಿನ ಸರ್ವಾಂಗಹೋಮ ಬಲಿನ ಕೊಡಬೇಕು.+ ಬೆಂಕಿಲಿ ಕೊಡೋ ಆ ಬಲಿಯ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ.  ಪ್ರತಿಯೊಂದು ಗಂಡು ಕುರಿಮರಿ ಜೊತೆ ಕಾಲು ಹಿನ್‌ ಅಳತೆಯ ಮದ್ಯನ ಪಾನ ಅರ್ಪಣೆಯಾಗಿ ಕೊಡಬೇಕು.+ ಅದನ್ನ ಯೆಹೋವನಿಗಾಗಿ ಯಜ್ಞವೇದಿ ಮೇಲೆ ಸುರಿಬೇಕು.  ಬೆಳಿಗ್ಗೆ ಕುರಿಮರಿನ ಕೊಡೋವಾಗ ಅದ್ರ ಜೊತೆ ಮಾಡೋ ಧಾನ್ಯ ಅರ್ಪಣೆ, ಪಾನ ಅರ್ಪಣೆನ ಸೂರ್ಯ ಮುಳುಗಿದ ಮೇಲೆ* ಕುರಿಮರಿನ ಕೊಡುವಾಗ್ಲೂ ಮಾಡಬೇಕು. ಬೆಂಕಿಲಿ ನೀವು ಕೊಡೋ ಈ ಬಲಿಯ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ.+  ಸಬ್ಬತ್‌ ದಿನ+ ನೀವು ಒಂದು ವರ್ಷದ ಎರಡು ಗಂಡು ಕುರಿಮರಿಗಳನ್ನ ಕೊಡಬೇಕು. ಅದ್ರಲ್ಲಿ ಯಾವ ದೋಷಾನೂ ಇರಬಾರದು. ಅವುಗಳ ಜೊತೆ ಒಂದು ಏಫಾ ಅಳತೆಯ ಹತ್ತರಲ್ಲಿ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟಿಗೆ ಎಣ್ಣೆ ಹಾಕಿ ಧಾನ್ಯ ಅರ್ಪಣೆಯಾಗಿ ಕೊಡಬೇಕು. ಜೊತೆಗೆ ಪಾನ ಅರ್ಪಣೆ ಕೊಡಬೇಕು. 10  ಇದು ಸಬ್ಬತ್‌ ದಿನ ಕೊಡಬೇಕಾದ ಸರ್ವಾಂಗಹೋಮ ಬಲಿ. ಸಬ್ಬತ್‌ ದಿನದಲ್ಲಿ ನೀವು ಪ್ರತಿ ದಿನ ಕೊಡೋ ಸರ್ವಾಂಗಹೋಮ ಬಲಿ, ಪಾನ ಅರ್ಪಣೆ, ಜೊತೆಗೆ ಇದನ್ನೂ ಕೊಡಬೇಕು.+ 11  ಪ್ರತಿ ತಿಂಗಳ ಮೊದಲನೇ ದಿನ ನೀವು ಎರಡು ಹೋರಿಗಳನ್ನ, ಒಂದು ಟಗರನ್ನ, ಯಾವ ದೋಷಾನೂ ಇಲ್ಲದ ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನ ಸರ್ವಾಂಗಹೋಮ ಬಲಿಯಾಗಿ ಯೆಹೋವನಿಗೆ ಕೊಡಬೇಕು.+ 12  ಪ್ರತಿಯೊಂದು ಹೋರಿ ಜೊತೆ ಒಂದು ಏಫಾ ಅಳತೆಯ ಹತ್ತನೇ ಮೂರು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಧಾನ್ಯ ಅರ್ಪಣೆಯಾಗಿ ಕೊಡಬೇಕು.+ ಟಗರಿನ+ ಜೊತೆ ಒಂದು ಏಫಾ ಅಳತೆಯ ಹತ್ತನೇ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಧಾನ್ಯ ಅರ್ಪಣೆಯಾಗಿ ಕೊಡಬೇಕು. 13  ಪ್ರತಿಯೊಂದು ಗಂಡು ಕುರಿಮರಿ ಜೊತೆ ಒಂದು ಏಫಾ ಅಳತೆಯ ಹತ್ತನೇ ಒಂದು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಧಾನ್ಯ ಅರ್ಪಣೆಯಾಗಿ ಕೊಡಬೇಕು. ನೀವು ಬೆಂಕಿಲಿ ಕೊಡೋ ಈ ಸರ್ವಾಂಗಹೋಮ ಬಲಿಯ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ.+ 14  ಹೋರಿ ಜೊತೆ ಅರ್ಧ ಹಿನ್‌ ದ್ರಾಕ್ಷಾಮದ್ಯನ ಪಾನ ಅರ್ಪಣೆಯಾಗಿ ಕೊಡಬೇಕು.+ ಟಗರಿನ ಜೊತೆ ಒಂದು ಹಿನ್‌ ಅಳತೆಯ ಮೂರನೇ ಒಂದು ಭಾಗದಷ್ಟು ದ್ರಾಕ್ಷಾಮದ್ಯವನ್ನ,+ ಗಂಡು ಕುರಿಮರಿಯ ಜೊತೆ ಒಂದು ಹಿನ್‌ನಲ್ಲಿ ಕಾಲು ಭಾಗದಷ್ಟು ದ್ರಾಕ್ಷಾಮದ್ಯವನ್ನ+ ಪಾನ ಅರ್ಪಣೆಯಾಗಿ ಕೊಡಬೇಕು. ವರ್ಷದ ಪ್ರತಿ ತಿಂಗಳಿನ ಮೊದಲನೇ ದಿನ ನೀವು ಈ ಸರ್ವಾಂಗಹೋಮ ಬಲಿಗಳನ್ನ ಕೊಡಬೇಕು. 15  ಪ್ರತಿದಿನ ಸರ್ವಾಂಗಹೋಮ ಬಲಿ ಮತ್ತೆ ಪಾನ ಅರ್ಪಣೆ ಕೊಡೋದ್ರ ಜೊತೆ ಒಂದು ಆಡುಮರಿನ ಪಾಪ ಪರಿಹರಿಸೋ ಬಲಿಯಾಗಿ ಯೆಹೋವನಿಗೆ ಕೊಡಬೇಕು. 16  ಮೊದಲನೇ ತಿಂಗಳಿನ 14ನೇ ದಿನ ನೀವು ಯೆಹೋವನಿಗೆ ಗೌರವ ಕೊಡೋಕೆ ಪಸ್ಕ ಹಬ್ಬ ಆಚರಿಸಬೇಕು.+ 17  ಅದೇ ತಿಂಗಳಿನ 15ನೇ ದಿನ ಒಂದು ಹಬ್ಬ ಆಚರಿಸಬೇಕು. ನೀವು ಆ ಹಬ್ಬದ ಏಳೂ ದಿನ ಹುಳಿ ಇಲ್ಲದ ರೊಟ್ಟಿಗಳನ್ನ ತಿನ್ನಬೇಕು.+ 18  ಆ ಹಬ್ಬದ ಮೊದಲನೇ ದಿನ ಎಲ್ರೂ ದೇವರ ಆರಾಧನೆಗೆ ಸೇರಿಬರಬೇಕು. ಆ ದಿನ ನೀವು ಯಾವುದೇ ಕಷ್ಟದ ಕೆಲಸ ಮಾಡಬಾರದು. 19  ನೀವು ಎರಡು ಹೋರಿಗಳನ್ನ, ಒಂದು ಟಗರನ್ನ, ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನ ಸರ್ವಾಂಗಹೋಮ ಬಲಿಯಾಗಿ ಯೆಹೋವನಿಗೆ ಕೊಡಬೇಕು. ಆ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ 20  ನೀವು ಆ ಪ್ರಾಣಿಗಳ ಜೊತೆ ಧಾನ್ಯ ಅರ್ಪಣೆಗಳನ್ನೂ ಕೊಡಬೇಕು.+ ಒಂದು ಹೋರಿ ಜೊತೆ ಒಂದು ಏಫಾ ಅಳತೆಯ ಹತ್ತನೇ ಮೂರು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, ಟಗರಿನ ಜೊತೆ ಹತ್ತನೇ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, 21  ಏಳು ಗಂಡು ಕುರಿಮರಿಗಳಲ್ಲಿ ಒಂದೊಂದು ಕುರಿ ಜೊತೆನೂ ಹತ್ತನೇ ಒಂದು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಕೊಡಬೇಕು. 22  ಅಷ್ಟೇ ಅಲ್ಲ, ನಿಮಗಾಗಿ ಪ್ರಾಯಶ್ಚಿತ್ತ ಮಾಡೋಕೆ ಒಂದು ಆಡನ್ನ ಪಾಪಪರಿಹಾರಕ ಬಲಿಯಾಗಿ ಕೊಡಬೇಕು. 23  ಪ್ರತಿದಿನ ಬೆಳಗ್ಗೆ ಕೊಡೋ ಸರ್ವಾಂಗಹೋಮ ಬಲಿ ಜೊತೆ ನೀವು ಇದನ್ನೂ ಕೊಡಬೇಕು. 24  ಹಬ್ಬದ ಏಳೂ ದಿನ ನೀವು ಇದೇ ತರ ಬಲಿ ಕೊಡಬೇಕು. ಇದು ನೀವು ಬೆಂಕಿಲಿ ಯೆಹೋವನಿಗೆ ಕೊಡೋ ಅರ್ಪಣೆ. ಇದರ ಸುವಾಸನೆ ಆತನಿಗೆ ಖುಷಿ* ತರುತ್ತೆ. ಪ್ರತಿ ದಿನ ಕೊಡೋ ಸರ್ವಾಂಗಹೋಮ ಬಲಿ, ಪಾನ ಅರ್ಪಣೆ ಜೊತೆ ಇದನ್ನ ಕೊಡಬೇಕು. 25  ಹಬ್ಬದ ಏಳನೇ ದಿನ ನೀವು ದೇವರ ಆರಾಧನೆಗೆ ಸೇರಿಬರಬೇಕು.+ ಆ ದಿನ ನೀವು ಯಾವುದೇ ಕಷ್ಟದ ಕೆಲಸ ಮಾಡಬಾರದು.+ 26  ಮೊದಲ ಫಸಲಿನ ದಿನ+ ಅಂದ್ರೆ ವಾರಗಳ ಹಬ್ಬದ+ ಸಮಯದಲ್ಲಿ ಯೆಹೋವನಿಗೆ ಹೊಸ ಬೆಳೆನ ಕೊಡೋ ದಿನ+ ನೀವು ದೇವರ ಆರಾಧನೆಗೆ ಸೇರಿಬರಬೇಕು. ಆ ದಿನ ನೀವು ಯಾವುದೇ ಕಷ್ಟದ ಕೆಲಸ ಮಾಡಬಾರದು.+ 27  ನೀವು ಎರಡು ಹೋರಿಗಳನ್ನ ಒಂದು ಟಗರನ್ನ ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನ ಸರ್ವಾಂಗಹೋಮ ಬಲಿಯಾಗಿ ಕೊಡಬೇಕು. ಅದ್ರ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ.+ 28  ಆ ಪ್ರಾಣಿಗಳ ಜೊತೆ ಧಾನ್ಯ ಅರ್ಪಣೆಗಳನ್ನೂ ಕೊಡಬೇಕು. ಒಂದು ಹೋರಿ ಜೊತೆ ಒಂದು ಏಫಾ ಅಳತೆಯ ಹತ್ತನೇ ಮೂರು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಟಗರಿನ ಜೊತೆ ಹತ್ತನೇ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟನ್ನ 29  ಏಳು ಗಂಡು ಕುರಿಮರಿಗಳಲ್ಲಿ ಒಂದೊಂದು ಕುರಿ ಜೊತೆನೂ ಹತ್ತನೇ ಒಂದು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಕೊಡಬೇಕು. 30  ಅಷ್ಟೇ ಅಲ್ಲ ನಿಮಗಾಗಿ ಪ್ರಾಯಶ್ಚಿತ್ತ ಮಾಡೋಕೆ ಒಂದು ಆಡುಮರಿನ ಕೊಡಬೇಕು.+ 31  ಪ್ರತಿ ದಿನ ಕೊಡೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆಯ ಜೊತೆ ಇದನ್ನ ಅರ್ಪಿಸಬೇಕು. ನೀವು ಕೊಡೋ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ ಜೊತೆಗೆ ಪಾನ ಅರ್ಪಣೆಗಳನ್ನೂ ಕೊಡಬೇಕು.’”

ಪಾದಟಿಪ್ಪಣಿ

ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಕ್ಷ. “ಎರಡು ಸಂಜೆಗಳ ಮಧ್ಯ.” ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.
ಒಂದು ಹಿನ್‌ ಅಂದ್ರೆ 3.67 ಲೀ. ಪರಿಶಿಷ್ಟ ಬಿ14 ನೋಡಿ.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಕ್ಷ. “ಎರಡು ಸಂಜೆಗಳ ಮಧ್ಯ.” ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”