ಅರಣ್ಯಕಾಂಡ 19:1-22

  • ಕೆಂಪು ಹಸು ಮತ್ತು ಶುದ್ಧೀಕರಣದ ನೀರು (1-22)

19  ಮೋಶೆ ಮತ್ತು ಆರೋನನ ಜೊತೆ ಯೆಹೋವ ಮತ್ತೆ ಮಾತಾಡ್ತಾ ಹೇಳಿದ್ದು ಏನಂದ್ರೆ  “ಯೆಹೋವನ ನಿಯಮ ಹೀಗಿದೆ: ‘ದೋಷ ಇಲ್ಲದ,+ ಯಾವತ್ತೂ ನೊಗ ಹೊರದಿದ್ದ ಒಂದು ಕೆಂಪು ಹಸುವನ್ನ ತಂದು ಕೊಡೋಕೆ ಇಸ್ರಾಯೇಲ್ಯರ ಹತ್ರ ಹೇಳಿ.  ನೀವು ಆ ಹಸುನ ಪುರೋಹಿತ ಎಲ್ಲಾಜಾರನಿಗೆ ಕೊಡಬೇಕು. ಅವನು ಅದನ್ನ ಪಾಳೆಯದ ಹೊರಗೆ ತಗೊಂಡು ಹೋಗಬೇಕು. ಅಲ್ಲಿ ಅವನ ಮುಂದೆ ಒಬ್ಬ ಅದನ್ನ ಕಡಿಬೇಕು.  ಆಮೇಲೆ ಪುರೋಹಿತನಾದ ಎಲ್ಲಾಜಾರ ಅದ್ರ ರಕ್ತದಲ್ಲಿ ಸ್ವಲ್ಪ ಬೆರಳಿಂದ ತಗೊಂಡು ದೇವದರ್ಶನ ಡೇರೆಯ ಬಾಗಿಲ ಕಡೆ ಏಳು ಸಲ ಚಿಮಿಕಿಸಬೇಕು.+  ಆಮೇಲೆ ಆ ಹಸುನ ಅವನ ಕಣ್ಣ ಮುಂದೆನೇ ಬೆಂಕಿಯಲ್ಲಿ ಸುಡಬೇಕು. ಹಸುವಿನ ಚರ್ಮ, ಮಾಂಸ, ರಕ್ತ, ಸಗಣಿ ಎಲ್ಲವನ್ನ ಬೆಂಕಿಯಲ್ಲಿ ಸುಟ್ಟುಬಿಡಬೇಕು.+  ಪುರೋಹಿತ ದೇವದಾರು ಮರದ ಕಟ್ಟಿಗೆ, ಹಿಸ್ಸೋಪ್‌* ಗಿಡ,+ ಕಡುಗೆಂಪು ಬಣ್ಣದ ಬಟ್ಟೆ ತಗೊಂಡು ಆ ಬೆಂಕಿಯಲ್ಲಿ ಹಾಕಬೇಕು.  ಆಮೇಲೆ ಪುರೋಹಿತ ತನ್ನ ಬಟ್ಟೆಗಳನ್ನ ಒಗೆದು ಸ್ನಾನ ಮಾಡಿದ ಮೇಲೆ ಪಾಳೆಯದ ಒಳಗೆ ಬರಬಹುದು. ಆದ್ರೆ ಸಂಜೆ ತನಕ ಅಶುದ್ಧ ಆಗಿರ್ತಾನೆ.  ಆ ಹಸುನ ಸುಟ್ಟ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗೆದು ಸ್ನಾನ ಮಾಡಬೇಕು. ಅವನು ಸಂಜೆ ತನಕ ಅಶುದ್ಧ ಆಗಿರ್ತಾನೆ.  ಶುದ್ಧನಾಗಿರೋ ಒಬ್ಬ ವ್ಯಕ್ತಿ ಆ ಹಸುವಿನ ಬೂದಿ+ ಕೂಡಿಸಿ ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳದಲ್ಲಿ ಇಡಬೇಕು. ಶುದ್ಧೀಕರಣದ ನೀರನ್ನ ತಯಾರಿಸೋಕೆ ಇಸ್ರಾಯೇಲ್ಯರು ಆ ಬೂದಿನ ಉಪಯೋಗಿಸಬಹುದು.+ ಇದು ಪಾಪಪರಿಹಾರಕ ಬಲಿ. 10  ಆ ಹಸುವಿನ ಬೂದಿನ ಕೂಡಿಸಿ ತೆಗೆದಿಟ್ಟವನು ತನ್ನ ಬಟ್ಟೆಗಳನ್ನ ಒಗಿಬೇಕು. ಅವನು ಸಂಜೆ ತನಕ ಅಶುದ್ಧ ಆಗಿರ್ತಾನೆ. ಇಸ್ರಾಯೇಲ್ಯರು, ಅವರ ಮಧ್ಯ ಇರೋ ವಿದೇಶಿಯರು ಯಾವಾಗ್ಲೂ ಪಾಲಿಸಬೇಕಾದ ನಿಯಮ+ ಏನಂದ್ರೆ 11  ಹೆಣ ಮುಟ್ಟಿದವನು ಏಳು ದಿನ ಅಶುದ್ಧ ಆಗಿರ್ತಾನೆ.+ 12  ಅಂಥವನು ಮೂರನೇ ದಿನ ಶುದ್ಧೀಕರಣದ ನೀರಿಂದ ತನ್ನನ್ನ ಶುದ್ಧ ಮಾಡ್ಕೊಬೇಕು. ಹೀಗೆ ಮಾಡಿದಾಗ ಏಳನೇ ದಿನ ಶುದ್ಧ ಆಗ್ತಾನೆ. ಅವನು ಮೂರನೇ ದಿನ ತನ್ನನ್ನ ಶುದ್ಧ ಮಾಡ್ಕೊಳ್ಳದಿದ್ರೆ ಏಳನೇ ದಿನನೂ ಅವನು ಶುದ್ಧ ಆಗಲ್ಲ. 13  ಹೆಣ ಮುಟ್ಟಿದ ಮೇಲೆ ತನ್ನನ್ನ ಶುದ್ಧ ಮಾಡ್ಕೊಳ್ಳದ ವ್ಯಕ್ತಿ ಯೆಹೋವನ ಪವಿತ್ರ ಡೇರೆಯನ್ನ ಅಶುದ್ಧ ಮಾಡಿದ್ದಾನೆ.+ ಹಾಗಾಗಿ ಅವನನ್ನ ಸಾಯಿಸಬೇಕು.+ ಶುದ್ಧೀಕರಣದ ನೀರನ್ನ+ ಅವನ ಮೇಲೆ ಚಿಮಿಕಿಸದೇ ಇರೋದ್ರಿಂದ ಅವನು ಅಶುದ್ಧನಾಗಿಯೇ ಇರ್ತಾನೆ. 14  ಡೇರೆ ಒಳಗೆ ಯಾರಾದ್ರೂ ಸತ್ರೆ ಪಾಲಿಸಬೇಕಾದ ನಿಯಮ: ಆ ಸಮಯದಲ್ಲಿ ಡೇರೆಯಲ್ಲಿ ಇದ್ದ, ಡೇರೆಗೆ ಹೋದ ಎಲ್ರೂ ಏಳು ದಿನ ಅಶುದ್ಧ. 15  ಅಷ್ಟೇ ಅಲ್ಲ ಆ ಡೇರೆಯೊಳಗೆ ಮುಚ್ಚಳ ಹಾಕಿ ಕಟ್ಟಿರದ ಎಲ್ಲ ಪಾತ್ರೆಗಳು ಅಶುದ್ಧ.+ 16  ಬಯಲಲ್ಲಿ ಕತ್ತಿಯಿಂದ ಸತ್ತವನನ್ನ ಮುಟ್ಟಿದವನು, ಹೆಣವನ್ನ ಮನುಷ್ಯನ ಮೂಳೆಯನ್ನ, ಸಮಾಧಿಯನ್ನ ಮುಟ್ಟಿದವನು ಏಳು ದಿನ ಅಶುದ್ಧ.+ 17  ಅವರು ಅಂಥವನಿಗಾಗಿ ಪಾಪಪರಿಹಾರಕ ಬಲಿಯ ಹಸುವಿನ ಸ್ವಲ್ಪ ಬೂದಿ ತಗೊಂಡು ಒಂದು ಪಾತ್ರೆಯಲ್ಲಿ ಹಾಕಬೇಕು. ಹರಿಯೋ ನೀರು ತಂದು ಅದ್ರಲ್ಲಿ ಸುರಿಬೇಕು. 18  ಶುದ್ಧನಾಗಿರೋ ಒಬ್ಬ ಬಂದು+ ಹಿಸ್ಸೋಪ್‌ ಗಿಡವನ್ನ+ ಆ ನೀರಲ್ಲಿ ಅದ್ದಿ ಆ ಡೇರೆ ಮೇಲೆ, ಡೇರೆಯಲ್ಲಿದ್ದ ಎಲ್ಲ ಜನ್ರ ಮೇಲೆ ಪಾತ್ರೆಗಳ ಮೇಲೆ ಚಿಮಿಕಿಸಬೇಕು. ಮನುಷ್ಯನ ಮೂಳೆಯನ್ನ, ಹತನಾದವನನ್ನ, ಹೆಣ ಅಥವಾ ಸಮಾಧಿಯನ್ನ ಮುಟ್ಟಿದವನ ಮೇಲೂ ಅದೇ ತರ ಆ ನೀರು ಚಿಮಿಕಿಸಬೇಕು. 19  ಶುದ್ಧನಾಗಿರೋ ವ್ಯಕ್ತಿ ಅಶುದ್ಧನಾಗಿರೋ ವ್ಯಕ್ತಿ ಮೇಲೆ ಮೂರನೇ ದಿನ ಮತ್ತೆ ಏಳನೇ ದಿನ ಆ ನೀರನ್ನ ಚಿಮಿಕಿಸಬೇಕು. ಶುದ್ಧ ವ್ಯಕ್ತಿ ಏಳನೇ ದಿನ ಆ ಅಶುದ್ಧ ವ್ಯಕ್ತಿಯ ಪಾಪವನ್ನ ಶುದ್ಧ ಮಾಡಬೇಕು.+ ಆಮೇಲೆ ಅಶುದ್ಧ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗಿದು ಸ್ನಾನ ಮಾಡಬೇಕು. ಅವನು ಆ ಸಂಜೆ ಶುದ್ಧನಾಗ್ತಾನೆ. 20  ಆದ್ರೆ ಅಶುದ್ಧನಾದ ವ್ಯಕ್ತಿ ತನ್ನನ್ನ ಶುದ್ಧ ಮಾಡ್ಕೊಳ್ಳದಿದ್ರೆ ಯೆಹೋವನ ಆರಾಧನಾ ಸ್ಥಳವನ್ನ ಅಶುದ್ಧ ಮಾಡಿದ್ದಾನೆ. ಹಾಗಾಗಿ ಅವನನ್ನ ಸಾಯಿಸಬೇಕು.+ ಶುದ್ಧೀಕರಣದ ನೀರನ್ನ ಅವನ ಮೇಲೆ ಚಿಮಿಕಿಸದೇ ಇರೋದ್ರಿಂದ ಅವನು ಅಶುದ್ಧನಾಗೇ ಇರ್ತಾನೆ. 21  ಇಸ್ರಾಯೇಲ್‌ ಜನ್ರು ಯಾವಾಗ್ಲೂ ಪಾಲಿಸಬೇಕಾದ ನಿಯಮ ಏನಂದ್ರೆ ಶುದ್ಧೀಕರಣದ ನೀರನ್ನ+ ಚಿಮಿಕಿಸಿದ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗಿಬೇಕು. ಶುದ್ಧೀಕರಣದ ನೀರನ್ನ ಮುಟ್ಟಿದವನು ಸಂಜೆ ತನಕ ಅಶುದ್ಧ. 22  ಅಶುದ್ಧ ಆಗಿರೋನು ಮುಟ್ಟಿದ್ದೆಲ್ಲ ಅಶುದ್ಧ ಆಗುತ್ತೆ. ಅಶುದ್ಧವಾದ ಆ ವಸ್ತುವನ್ನ ಮುಟ್ಟಿದವನು ಸಂಜೆ ತನಕ ಅಶುದ್ಧ.’”+

ಪಾದಟಿಪ್ಪಣಿ