ಕೊಲೊಸ್ಸೆ 4:1-18

4  ಯಜಮಾನರೇ, ಸ್ವರ್ಗದಲ್ಲಿ ನಿಮಗೂ ಒಬ್ಬ ಯಜಮಾನನಿದ್ದಾನೆ ಎಂಬುದನ್ನು ತಿಳಿದವರಾಗಿದ್ದು ನಿಮ್ಮ ದಾಸರಿಗೆ ನೀತಿಯುತವಾದುದನ್ನೂ ನ್ಯಾಯವಾದುದನ್ನೂ ಮಾಡುತ್ತಾ ಇರಿ.  ಪಟ್ಟುಹಿಡಿದು ಪ್ರಾರ್ಥಿಸುತ್ತಾ ಇರಿ; ಅದರಲ್ಲಿ ಎಚ್ಚರವಾಗಿದ್ದು ಕೃತಜ್ಞತಾಸ್ತುತಿ ಸಲ್ಲಿಸಿರಿ.  ಅದೇ ಸಮಯದಲ್ಲಿ ಕ್ರಿಸ್ತನ ಕುರಿತಾದ ಪವಿತ್ರ ರಹಸ್ಯವನ್ನು ಮಾತಾಡುವುದಕ್ಕೆ ದೇವರು ನಮಗೆ ಸಂದೇಶವನ್ನು ಸಾರುವ ಬಾಗಿಲನ್ನು ತೆರೆಯುವಂತೆ ನಮಗೋಸ್ಕರವಾಗಿಯೂ ಪ್ರಾರ್ಥನೆಮಾಡುತ್ತಾ ಇರಿ​—⁠ವಾಸ್ತವದಲ್ಲಿ ಈ ಕಾರಣದಿಂದಲೇ ನಾನು ಸೆರೆಯ ಬೇಡಿಗಳಲ್ಲಿದ್ದೇನೆ.  ಹೀಗೆ ನಾನು ಮಾತಾಡಬೇಕಾದ ರೀತಿಯಲ್ಲಿ ಅದನ್ನು ತಿಳಿಯಪಡಿಸಲು ಸಾಧ್ಯವಾಗುವುದು.  ಸುಸಮಯವನ್ನು ನಿಮಗೋಸ್ಕರ ಖರೀದಿಸಿಕೊಳ್ಳುತ್ತಾ ಹೊರಗಿನವರೊಂದಿಗೆ ವಿವೇಕದಿಂದ ನಡೆದುಕೊಳ್ಳುತ್ತಾ ಇರಿ.  ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿಯೂ ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿಯೂ ಇರಲಿ; ಹೀಗೆ ನೀವು ಪ್ರತಿಯೊಬ್ಬರಿಗೆ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.  ನನ್ನ ಪ್ರಿಯ ಸಹೋದರನೂ ನಂಬಿಗಸ್ತ ಶುಶ್ರೂಷಕನೂ ಕರ್ತನಲ್ಲಿ ಜೊತೆ ದಾಸನೂ ಆಗಿರುವ ತುಖಿಕನು ನನ್ನ ಎಲ್ಲ ವಿಚಾರಗಳ ಕುರಿತು ನಿಮಗೆ ತಿಳಿಸುವನು.  ನಮಗೆ ಸಂಬಂಧಪಟ್ಟ ವಿಷಯಗಳನ್ನು ನೀವು ತಿಳಿದುಕೊಳ್ಳುವ ಮತ್ತು ಅವನು ನಿಮ್ಮ ಹೃದಯಗಳನ್ನು ಸಾಂತ್ವನಗೊಳಿಸುವ ಉದ್ದೇಶದಿಂದಲೇ ನಾನು ಅವನನ್ನು  ನನ್ನ ನಂಬಿಗಸ್ತನೂ ಪ್ರಿಯ ಸಹೋದರನೂ ನಿಮ್ಮ ಊರಿನವನೂ ಆಗಿರುವ ಒನೇಸಿಮನೊಂದಿಗೆ ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. ಅವರು ಇಲ್ಲಿನ ಎಲ್ಲ ಸಂಗತಿಗಳನ್ನು ನಿಮಗೆ ತಿಳಿಸುವರು. 10  ನನ್ನ ಜೊತೆ ಸೆರೆಯಾಳಾಗಿರುವ ಅರಿಸ್ತಾರ್ಕನೂ ಬಾರ್ನಬನ ಸಹೋದರ ಸಂಬಂಧಿಯಾದ ಮಾರ್ಕನೂ ನಿಮಗೆ ತಮ್ಮ ವಂದನೆಯನ್ನು ತಿಳಿಸುತ್ತಾರೆ; (ಅವನು ನಿಮ್ಮ ಬಳಿಗೆ ಬರುವುದಾದರೆ ನೀವು ಅವನನ್ನು ಸೇರಿಸಿಕೊಳ್ಳುವಂತೆ ಅಪ್ಪಣೆಗಳನ್ನು ಹೊಂದಿದ್ದೀರಲ್ಲಾ.) 11  ಮತ್ತು ಯೂಸ್ತನೆಂದು ಕರೆಯಲ್ಪಡುವ ಯೇಸು ಸಹ ನಿಮಗೆ ವಂದನೆಯನ್ನು ತಿಳಿಸುತ್ತಾನೆ; ಇವರು ಸುನ್ನತಿಯಾದವರ ಗುಂಪಿಗೆ ಸೇರಿದವರಾಗಿದ್ದಾರೆ. ಇವರು ಮಾತ್ರವೇ ದೇವರ ರಾಜ್ಯಕ್ಕಾಗಿ ನನ್ನ ಜೊತೆಕೆಲಸಗಾರರಾಗಿದ್ದಾರೆ ಮತ್ತು ಇವರೇ ನನಗೆ ಬಲವರ್ಧಕ ಸಹಾಯವಾಗಿದ್ದಾರೆ. 12  ನಿಮ್ಮ ಊರಿನವನೂ ಕ್ರಿಸ್ತ ಯೇಸುವಿನ ದಾಸನೂ ಆಗಿರುವ ಎಪಫ್ರನು ನಿಮಗೆ ವಂದನೆಯನ್ನು ತಿಳಿಸುತ್ತಾನೆ; ದೇವರ ಸಮಸ್ತ ಚಿತ್ತದಲ್ಲಿ ನೀವು ಕೊನೆಗೆ ಸಂಪೂರ್ಣವಾಗಿಯೂ ದೃಢ ನಿಶ್ಚಿತಾಭಿಪ್ರಾಯದಿಂದಲೂ ನಿಲ್ಲುವಂತಾಗಲು ಅವನು ತನ್ನ ಪ್ರಾರ್ಥನೆಗಳಲ್ಲಿ ಯಾವಾಗಲೂ ನಿಮಗೋಸ್ಕರ ಹೆಣಗಾಡುವವನಾಗಿದ್ದಾನೆ. 13  ಅವನು ನಿಮಗೋಸ್ಕರವೂ ಲವೊದಿಕೀಯದಲ್ಲಿ ಇರುವವರಿಗೋಸ್ಕರವೂ ಹಿರಿಯಾಪೊಲಿಯಲ್ಲಿ ಇರುವವರಿಗೋಸ್ಕರವೂ ಬಹಳವಾಗಿ ಪ್ರಯಾಸಪಡುತ್ತಾನೆ ಎಂದು ನಾನು ಅವನ ಕುರಿತು ಸಾಕ್ಷಿಹೇಳುತ್ತೇನೆ. 14  ಪ್ರಿಯ ವೈದ್ಯನಾದ ಲೂಕನೂ ದೇಮನೂ ನಿಮಗೆ ತಮ್ಮ ವಂದನೆಯನ್ನು ತಿಳಿಸಿದ್ದಾರೆ. 15  ಲವೊದಿಕೀಯದಲ್ಲಿರುವ ಸಹೋದರರಿಗೂ ನುಂಫಳಿಗೂ ಅವಳ ಮನೆಯಲ್ಲಿ ಕೂಡಿಬರುವ ಸಭೆಗೂ ನನ್ನ ವಂದನೆಯನ್ನು ತಿಳಿಸಿರಿ. 16  ಈ ಪತ್ರವು ನಿಮ್ಮಲ್ಲಿ ಓದಲ್ಪಟ್ಟ ಬಳಿಕ ಲವೊದಿಕೀಯ ಸಭೆಯಲ್ಲಿಯೂ ಇದು ಓದಲ್ಪಡುವಂತೆ ಏರ್ಪಡಿಸಿರಿ ಮತ್ತು ಲವೊದಿಕೀಯದಿಂದ ಬರುವ ಪತ್ರವನ್ನು ನೀವೂ ಓದಿರಿ. 17  ಅರ್ಖಿಪ್ಪನಿಗೆ, “ಕರ್ತನಲ್ಲಿ ನೀನು ಅಂಗೀಕರಿಸಿದ ಶುಶ್ರೂಷೆಯನ್ನು ಪೂರೈಸಲು ಎಚ್ಚರವಾಗಿರು” ಎಂದು ಹೇಳಿರಿ. 18  ಇದು ಪೌಲನೆಂಬ ನಾನು ಸ್ವಂತ ಕೈಯಿಂದ ಬರೆದ ವಂದನೆ. ನನ್ನ ಸೆರೆಯ ಬೇಡಿಗಳನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳಿರಿ. ದೇವರ ಅಪಾತ್ರ ದಯೆಯು ನಿಮ್ಮೊಂದಿಗಿರಲಿ.

ಪಾದಟಿಪ್ಪಣಿ