ಮಾಹಿತಿ ಇರುವಲ್ಲಿ ಹೋಗಲು

ಸತ್ತವರು ಮತ್ತೆ ಬದುಕಿ ಬರುತ್ತಾರಾ?

ಸತ್ತವರು ಮತ್ತೆ ಬದುಕಿ ಬರುತ್ತಾರಾ?

ನೀವೇನು ನೆನಸುತ್ತೀರಿ . . .

  • ಹೌದು?

  • ಇಲ್ಲ?

  • ಬರಬಹುದೇನೋ?

 ಪವಿತ್ರ ಗ್ರಂಥ ಏನು ಹೇಳುತ್ತದೆ?

‘ಪುನರುತ್ಥಾನವಾಗುವುದು.’​—ಅಪೊಸ್ತಲರ ಕಾರ್ಯಗಳು 24:15, ನೂತನ ಲೋಕ ಭಾಷಾಂತರ.

ಇದನ್ನು ನಂಬುವುದಾದರೆ . . .

ಆಪ್ತರು ತೀರಿಕೊಂಡಾಗ ಸಾಂತ್ವನ ಸಿಗುತ್ತದೆ.​—2 ಕೊರಿಂಥ 1:3, 4.

ಸಾವಿನ ಭಯದಿಂದ ಮುಕ್ತವಾಗುತ್ತೇವೆ.​—ಇಬ್ರಿಯ 2:15.

ಸತ್ತವರನ್ನು ಪುನಃ ನೋಡಬಹುದು ಅವರು ಇದೇ ಭೂಮಿಯಲ್ಲಿ ನಮ್ಮೊಂದಿಗೆ ಜೀವಿಸುತ್ತಾರೆ ಅನ್ನೋ ಆಶಾಭಾವ ಮೂಡುತ್ತದೆ.​—ಯೋಹಾನ 5:28, 29.

 ಪವಿತ್ರ ಗ್ರಂಥ ಹೇಳುವುದನ್ನು ನಂಬಬಹುದಾ?

ಕಣ್ಣುಮುಚ್ಚಿ ನಂಬಬಹುದು. ಯಾಕೆ ಅಂತ ಮೂರು ಕಾರಣಗಳನ್ನು ನೋಡೋಣ:

  • ದೇವರೇ ಜೀವದಾತ. ಯೆಹೋವ ದೇವರು “ಎಲ್ಲ ಮನುಷ್ಯರಿಗೆ ಜೀವವನ್ನೂ ಶ್ವಾಸವನ್ನೂ ಸರ್ವವನ್ನೂ ಕೊಡುವಾತ” ಅಂತ ಬೈಬಲ್‌ ಹೇಳುತ್ತದೆ. (ಕೀರ್ತನೆ 36:9; ಅಪೊಸ್ತಲರ ಕಾರ್ಯಗಳು 17:24, 25) ಎಲ್ಲ ಜೀವಿಗಳಿಗೆ ಜೀವ ಕೊಟ್ಟಿರುವ ದೇವರಿಗೆ ಸತ್ತವರನ್ನು ಪುನರುತ್ಥಾನಗೊಳಿಸುವ ಅಂದರೆ ಸತ್ತವರಿಗೆ ಜೀವ ಕೊಡುವ ಶಕ್ತಿ ಇದೆ.

  • ಸತ್ತವರನ್ನು ದೇವರು ಪುನಃ ಬದುಕಿಸಿದ ಉದಾಹರಣೆಗಳಿವೆ. ಮಕ್ಕಳು, ವೃದ್ಧರು, ಪುರುಷರು, ಮಹಿಳೆಯರು ಸೇರಿದಂತೆ ಒಟ್ಟು ಎಂಟು ಜನರು ಜೀವ ಪಡೆದುಕೊಂಡು ಭೂಮಿಯಲ್ಲಿ ಬದುಕಿ ಬಾಳಿದ ಉದಾಹರಣೆಗಳು ಬೈಬಲ್‌ನಲ್ಲಿವೆ. ಅವರಲ್ಲಿ ಹೆಚ್ಚುಕಡಿಮೆ ಎಲ್ಲರೂ ತೀರಿಕೊಂಡು ಸ್ವಲ್ಪವೇ ಸಮಯ ಆಗಿತ್ತು. ಆದರೆ ಒಬ್ಬರು ಮಾತ್ರ ಸತ್ತು ನಾಲ್ಕು ದಿನಗಳಾಗಿದ್ದವು.​—ಯೋಹಾನ 11:39-44.

  • ಸತ್ತವರನ್ನು ಬದುಕಿಸಬೇಕೆಂಬ ತವಕ ದೇವರಿಗೆ ಈಗಲೂ ಇದೆ. ಜನರು ಸಾಯುವುದು ಯೆಹೋವ ದೇವರಿಗೆ ಸ್ವಲ್ಪವೂ ಇಷ್ಟವಿಲ್ಲ. ದೇವರ ಪ್ರಕಾರ ಮರಣ ಅನ್ನೋದು ಶತ್ರು. (1 ಕೊರಿಂಥ 15:26) ಸತ್ತವರನ್ನು ಪುನಃ ಬದುಕಿಸುವ ಮೂಲಕ ಮರಣವೆಂಬ ಶತ್ರುವನ್ನು ನಾಶಮಾಡಬೇಕೆನ್ನುವುದು ದೇವರ ಉದ್ದೇಶ. ತನ್ನ ಸ್ಮರಣೆಯಲ್ಲಿರುವ ಮೃತರಿಗೆ ಜೀವಕೊಟ್ಟು ಇದೇ ಭೂಮಿಯಲ್ಲಿ ಅವರು ಪುನಃ ಬದುಕುವುದನ್ನು ನೋಡಬೇಕೆನ್ನುವುದೇ ದೇವರ ಹಂಬಲ.​—ಯೋಬ 14:14, 15.

 ಯೋಚಿಸಿ

ನಮಗೆ ಯಾಕೆ ವಯಸ್ಸಾಗುತ್ತೆ? ನಾವು ಯಾಕೆ ಸಾಯುತ್ತೇವೆ?

ಉತ್ತರ ಪವಿತ್ರ ಗ್ರಂಥದ ಈ ಭಾಗದಲ್ಲಿದೆ: ಆದಿಕಾಂಡ 3:17-19; ರೋಮನ್ನರಿಗೆ 5:12.